Breaking News

ಓಡಿಸ್ಸಾ ರೈಲು ದುರಂತ ಪ್ರಕರಣ ಕರ್ನಾಟಕದವರ ಅದೃಷ್ಟವಿದೆ. ಯಾವುದೇ ರೀತಿಯತೊಂದರೆಯಾಗಿಲ್ಲಾಸಂತೋಷ್ ಲಾಡ್

ಧಾರವಾಡ: ನಮ್ಮ ಕಾಂಗ್ರೆಸ್ ಪಕ್ಷ ಕೊಟ್ಟ ಐದೂ ಗ್ಯಾರಂಟಿಗಳನ್ನು ಜಾರಿಗೆ ತರುವಲ್ಲಿ ಹೆಚ್ಚ ಕಡಿಮೆ ಆಗಬಹುದು. ಆದರೆ, ನೂರಕ್ಕೆ ನೂರರಷ್ಟು ಗ್ಯಾರಂಟಿಗಳನ್ನು ಜಾರಿಗೆ ತರಲು ನಾವು ಪ್ರಯತ್ನಿಸುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಗ್ಯಾರಂಟಿಗಳ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರು ತಾವು ಮಾತನಾಡಿದ ಯೋಜನೆಗಳ ಬಗ್ಗೆ ಕೇಳಿದರೆ ಉತ್ತರ ಕೊಡೋದಿಲ್ಲ. ಪ್ರಧಾನಿಗಳು ದೊಡ್ಡದಾಗಿ ಪ್ರತಿಯೊಬ್ಬರ ಅಕೌಂಟೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ಬಿಜೆಪಿಯವರು ಆ ಬಗ್ಗೆ ಕೇಳಬೇಕಲ್ಲವೇ? ನಾವು ಘೋಷಣೆ ಮಾಡಿದ ಯೋಜನೆಗಳನ್ನು ಜಾರಿಗೆ ತರುತ್ತೇವೆ. 15 ಲಕ್ಷ ಹಾಕುತ್ತೇವೆ ಎಂದಿದ್ದರ ಬಗ್ಗೆ ಸಂಸದರು ಹಾಗೂ ಮಾಜಿ ಸಿಎಂ ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡಿ ಎಂದು ಮಾಧ್ಯಮದವರ ಮೇಲೆ ಲಾಡ್ ಗರಂ ಆದರು.

ಉಚಿತ ವಿದ್ಯುತ್ ಸಂಬಂಧಿಸಿದ ಷರತ್ತು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರು ಅರ್ಹತೆ ಪಡೆಯುತ್ತಾರೋ ಅಂತವರಿಗೆ 12 ತಿಂಗಳ ಆವರೇಜ್ ನೋಡಿ ವಿದ್ಯುತ್ ಕೊಡುತ್ತೇವೆ. ಆ ಮನೆಯಲ್ಲಿ ನೀವೇ ಬಾಡಿಗೆ ಇರಬಹುದು ಅಥವಾ ಬಾಡಿಗೆ ಕೊಟ್ಟಿರಬಹುದು 12 ತಿಂಗಳ ವಿದ್ಯುತ್ ಖರ್ಚು ಮಾಡಿದ ಆವರೇಜ್ ಮೇಲೆ ಶೇ.10 ರಷ್ಟು ವಿದ್ಯುತ್ ಕೊಡುತ್ತೇವೆ. ಇಂತಹ ದೊಡ್ಡ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ಅಗತ್ಯ ಎಂದರು.

ಕೇಂದ್ರ ಸರ್ಕಾರ 2 ಸಾವಿರ ಮುಖಬೆಲೆಯ
ನೋಟು ಯಾಕೆ ಬ್ಯಾನ್ ಮಾಡಿತು? ಲಕ್ಷಾಂತರ
ಜನರಿಗೆ ಇದರಿಂದ ತೊಂದರೆಯಾಗಿದೆ. ಇದಕ್ಕೆ
ಉತ್ತರ ಕೊಡಬೇಕಲ್ಲ. ರೈತರ ಆದಾಯ ದುಪ್ಪಟ್ಟು
ಮಾಡುತ್ತೇವೆ ಎಂದಿದ್ದರು. ಇದರ ಬಗ್ಗೆ ಬಿಜೆಪಿಯವರು
ಉತ್ತರ ಕೊಡಲಿ ಎಂದರು.

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *