ಮಂಡ್ಯ: ಇತಿಹಾಸ ಸೃಷ್ಟಿ ಮಾಡಿದ ಮಂಡ್ಯ ಜನತೆಗೆ ಇಂದು ಸಂಸದೆ ಸುಮಲತಾ ದನ್ಯವಾದ
ತಿಳಿಸಿದರು. ಮಂಡ್ಯಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್
ಅವರು ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದನಂತರಚುನಾವಣೆಯ ಗೆಲುವು ಮಂಡ್ಯದ ಜನರು ಅಂಬರೀಶ್ ಮೇಲೆ ಇಟ್ಟಿರುವ ಅಭಿಮಾನದ
ಗೆಲುವು ಎಂದಿದ್ದಾರೆ. ಪತಿ ಅಂಬಿ
ನೆನೆದು ಭಾವೋದ್ವೇಗದಿಂದ ಮಾತನಾಡಿದ ಅವರು, ಮೊದಲ ಬಾರಿಗೆ ನಿಮ್ಮ ಮುಂದೆ ಬಂದ ವೇಳೆ ನಾನು ಯಾರು ಪ್ರಶ್ನೆ ಇತ್ತು.
ಆದರೆ ಈಗ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಎಂಬ ಗುರುತು ನೀಡಿದ್ದೀರಿ. ನನ್ನ ಪರ ದುಡಿದ ಎಲ್ಲಾ
ಕಾರ್ಯಕರ್ತರಿಗೂ ನಾನು ಋಣಿ ಎಂದರು. ಪಕ್ಷ ಬಿಟ್ಟು ಬಂದ ಕಾಂಗ್ರೆಸ್ ನಾಯಕರು, ರೈತರ ಪರ ನಿಲ್ಲುವ ರಾಜ್ಯ ರೈತ ಸಂಘ ನಾಯಕರು ಹಾಗೂ ಮಂಡ್ಯದಲ್ಲಿ
ಅಭ್ಯರ್ಥಿ ಹಾಕದೆ ಬೆಂಬಲಿಸಿದ ಬಿಜೆಪಿ ಪಕ್ಷದ ಗೆಲುವು
ಆಗಿದೆ. ದೇಶಕ್ಕೆ ಮಾದರಿಯಾಗಿ ಸ್ವಾಭಿಮಾನದ ಗೆಲುವು ನೀಡಿ, ಕರ್ನಾಟಕದ ಲೋಕಸಭಾ ಇತಿಹಾಸದಲ್ಲಿ 52 ವರ್ಷಗಳ ಬಳಿಕ ಗೆದ್ದ ಸ್ವಾತಂತ್ರ್ಯ ಅಭ್ಯರ್ಥಿ ಎಂದು ಇತಿಹಾಸ ರಚನೆ
ಮಾಡಿದ್ದೀರಿ ಎಂದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





