Breaking News

ಹುಬ್ಬಳ್ಳಿ ಸುದ್ದಿ

ಗೋಕುಲ್ ರಸ್ತೆಯಲ್ಲಿರು ಇಂಡಸ್ಟ್ರಿಯಲ್ ನಗರದಲ್ಲಿ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಾಗಿದ್ದು, ಇದರಿಂದ ಕೈಗಾರಿಕೋದ್ಯಮಕ್ಕೆ ದೊಡ್ಡ ಮಟ್ಟದ ನಷ್ಟವಾಗಿದೆ. ಸಧ್ಯ ವಿದ್ಯುತ್ ದರ ಹೆಚ್ಚಳವನ್ನು ಖಂಡಿಸಿ, ಉತ್ತರ ಕರ್ನಾಟಕದ ಸಣ್ಣ ಕೈಗಾರಿಕೆಗಳ ಸಂಘದಿಂದ ನಗರದ ಗೋಕುಲ್ ರಸ್ತೆಯಲ್ಲಿರು ಇಂಡಸ್ಟ್ರಿಯಲ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್ ದರದಿಂದ, ಸಣ್ಣ ಕೈಗಾರಿಕೆಗಳು ಬೆಳೆಯಲು ಸಾಧ್ಯವೇ ಆಗದೆ ಇರೊದರಿಂದ, ಜೊತೆಗೆ ಕೇವಲ ಬೆಲೆ ಏರಿಕೆ ದೊಡ್ಡ ಕಾರ್ಯ ಎನ್ನುವಂತಾಗಿದ್ದು, ಆದ್ದರಿಂದ ಸಣ್ಣ ಕೈಗಾರಿಕೆಗಳು ನೆಲ ಕಚ್ಚುತ್ತಿವೆ. …

Read More »

ಆಧಾರ್ ಕಾರ್ಡ ತಿದ್ದುಪಡಿ ಮಾಡಲು ಮುಗಿಬಿದ್ದ ಸಾರ್ವಜನಿಕರು.

ಹುಬ್ಬಳ್ಳಿ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೇ ತಡ ಜನರು ತಮ್ಮ ದಾಖಲಾತಿಯನ್ನು ಸರಿಪಡಿಸಲು ಓಡಾಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಸಣ್ಣ ಪುಟ್ಟ ತಿದ್ದುಪಡಿ ಇದ್ದರೂ ನಿರ್ಲಕ್ಷ್ಯ ಮಾಡಿದ್ದ, ಜನರು ಈಗ ಆಧಾರ್ ಸೇವಾ ಕೇಂದ್ರದ ಮುಂದೆ. ಜಮಾವಣೆಗೊಂಡಿದ್ದಾರೆ. ಹಾಗಿದ್ದರೇ ಹುಬ್ಬಳ್ಳಿಯಲ್ಲಿ ಹೇಗಿದೆ ಆಧಾರ್ ಸೇವಾ ಕೇಂದ್ರ ಅಂತೀರಾ ತೋರಿಸ್ತೀವಿ ನೋಡಿ ಆಧಾರ್ ಸೇವಾ ಕೇಂದ್ರ ಅಕ್ಷರಶಃ ತುಂಬಿ ತುಳುಕುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಅಲ್ಲೊಬ್ಬರು, ಇಲ್ಲೊಬ್ಬರು ಕಾಣಿಸಿಕೊಳ್ಳುತ್ತಿದ್ದ …

Read More »

ಸಾರ್ವಜನಿಕರ ಅರ್ಜಿಗಳ ಶೀಘ್ರ ವಿಲೇವಾರಿಗೆ ಕ್ರಮವಹಿಸಿ ಸತೀಶ ಚಿಟಗುಪ್ಪಿ

ಹುಬ್ಬಳ್ಳಿ ಎಲ್ಲ ಯೋಜನೆಗಳು ಪ್ರತಿಯೊಬ್ಬರಿಗೂ ಪಾರದರ್ಶಕವಾಗಿ ಸಿಗುವಂತೆ ಮಾಡಬೇಕು. ಫಲಾನುಭವಿಗಳು ಪಡೆದ ಯೋಜನೆಗಳ ಬಗ್ಗೆ ಅವಲೋಕನ ಮಾಡಬೇಕಿದೆ. ಸಾರ್ವಜನಿಕರ ಅರ್ಜಿಗಳನ್ನು ಶೀಘ್ರದಲ್ಲೇ ವಿಲೇವಾರಿಗೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಕರ್ನಾಟಕ ಲೋಕಾಯುಕ್ತದ ಪೊಲೀಸ್ ಅಧೀಕ್ಷಕರಾದ ಸತೀಶ ಚಿಟಗುಪ್ಪಿ ಹೇಳಿದರು. ಇಂದು ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಸಭಾಭವನದಲ್ಲಿ ಕರ್ನಾಟಕ ಲೋಕಾಯುಕ್ತ ಧಾರವಾಡ, ಹುಬ್ಬಳ್ಳಿ ತಾಲೂಕು ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಕುಡಿಯುವ ನೀರಿನಲ್ಲಿ ಯಾವುದೇ …

Read More »

ಮಳೆಯಿಲ್ಲ ! ಬೆಳೆಯು ಇಲ್ಲ ! ಕಂಗಾಲಾದ, ತಾಲ್ಲೂಕಿನ ರೈತರು

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಬಾಯಿ ಬಿಟ್ಟ ಭೂಮಿ ಕಂಗಾಲಾದ ಅನ್ನದಾತ ಮಳೆರಾಯನ ಮುನಿಸುವಂತೆ ಗ್ರಾಮದ ರೈತರು, ಕಂಗಾಲಾಗುವಂತಾಗಿದೆ ಈಗಾಗಲೇ ಅಶ್ವಿನಿ ಬರಣಿ ಪ್ರತೀಕ ರೋಹಿಣಿ ಮಗಶಿರ ಮಳೆಗಳು ಮುಖವನ್ನು ತೋರಿಸಿಲ್ಲ ಹೀಗಾಗಿ ರೈತಾಪಿ ವರ್ಗ ಮುಗಿಲಿನ ಕಡೆ ಮುಖ ಮಾಡಿ ಕುಳಿತಿದ್ದಾರೆ ಮಳೆ ದಾರಿ ನೋಡುತ್ತಾ ಕೈಚಳ್ಳಿ ಕುಳಿತಿರುವ ಗ್ರಾಮಸ್ಥರು ಗ್ರಾಮದ ದೇವರುಗಳ ಮರೆಹೋಗಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಬಿದ್ದ ಅಲ್ಪುಸಲ್ಪು ಮಳೆಗೆ ಭೂಮಿ ಹಸಿಯಾಗಿಲ್ಲ ಇದರಿಂದ ಬಿತ್ತನೆ ಕಾರ್ಯದಲ್ಲಿ …

Read More »

ಮಹಿಳೆಯರಿಗೆ ಉಚಿತ ಬಸ್ ಪಾಸ್ ಖಂಡಿಸಿ ಆಟೋ ಚಾಲಕರಿಂದ ಪ್ರತಿಭಟನೆ…

ಒಂದು ಕಡೆ ಮಹಿಳೆಯರು ಖುಷಿಯಿಂದ ಉಚಿತ ಬಸ್ ಪ್ರಯಾಣ ಮಾಡುತ್ತಿದ್ದರೆ. ಇನ್ನೊಂದಡೆ ಕಾಂಗ್ರೆಸ್ ಸರ್ಕಾರದ ವಿರುದ್ದ ಆಟೋ ಚಾಲಕರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ನಗರದ ನಿಲೀಜನ್ ರಸ್ತೆಯಿಂದ ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಆಟೋ ಚಾಲಕರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕದಿಂದ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ. ಮಹಿಳಾ ಪ್ರಯಾಣಿಕರು ನಮಗೆ ಆಧಾರವಾಗಿದ್ದಾರೆ. ಆದ್ರೆ …

Read More »

ಬಡ ಯುವಕ ಶೈಕ್ಷಣಿಕ ಬದುಕಿಗೆ ಕೆ.ಎಲ್.ರಾಹುಲ್ ಬೆಳಕು

ಹುಬ್ಬಳ್ಳಿ ಕೋಟಿ ಕೋಟಿ ಹಣ ಇದ್ದವರಲ್ಲಿ ದಾನ ಮಾಡುವವರ ಸಂಖ್ಯೆ ಸಾಕಷ್ಟು ವಿರಳ. ಆದರೆ ಇಲ್ಲೊಬ್ಬ ಹೃದಯವಂತ ಆಟಗಾರ ನಿಜಕ್ಕೂ ಕಷ್ಟದ ಬದುಕಿನ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದಾನೆ. ಹುಬ್ಬಳ್ಳಿಯ ಯುವಕರ ಸಹಾಯದಿಂದ ಮಹತ್ವದ ಕಾರ್ಯ ಸಾಧನೆಯಾಗಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ.. ಕೆ.ಎಲ್. ರಾಹುಲ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತ ತಂಡದ ಖ್ಯಾತ ಕ್ರಿಕೆಟ್ ಆಟಗಾರ. ಸಾಕಷ್ಟು ಜನ ಅಭಿಮಾನಿಗಳನ್ನು ಹೊಂದಿರುವ ಕೆ.ಎಲ್‌.ರಾಹುಲ್ …

Read More »

ಕಾಂಗ್ರೆಸ್ ಸರ್ಕಾರ ಜವಾಬ್ದಾರಿ ಇಲ್ಲದ ಸರ್ಕಾರ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಹುಬ್ಬಳ್ಳಿ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್  ಸರ್ಕಾರ ಜವಾಬ್ದಾರಿ ಇಲ್ಲದ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಸಮಾಧಾನ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ತಿಂಗಳು ಹತ್ತಿರ ಬಂದಿದೆ. ರಾಜ್ಯಕ್ಕೆ ನೈಸರ್ಗಿಕ ಆಪತ್ತು ಬರುತ್ತಿವೆ. ಮಾನ್ಸೂನ್ ಮಳೆ ತಡವಾಗಿದ್ದರಿಂದ ಬಿತ್ತನೆ ಕೂಡ ತಡವಾಗಿ ಆಗುತ್ತಿದೆ. ಮಾನ್ಸೂನ್ ಮಳೆ ಸಕಾಲಕ್ಕೆ ಬಾರದಿದ್ದರೆ ರೈತರಿಗೆ ಬಹಳಷ್ಟು ಕಷ್ಟವಾಗುತ್ತದೆ. ಮತ್ತೊಂದು ಕಡೆ ಭೀಕರ ಚಂಡಮಾರುತದ ಸೂಚನೆ ಸಹ ಬರುತ್ತಿವೆ. …

Read More »

ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಂದಾದ ಸಚಿವರು

ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗುವುದು ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಮ್ಮನ ಗುಡ್ಡ, ಬನಶಂಕರಿ ಮತ್ತು ದುರ್ಗಮ್ಮ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಬರುತ್ತಾರೆ. ಇಂತಹ ಜನಸಾಮಾನ್ಯರ ಶ್ರದ್ಧಾ ಕೇಂದ್ರಗಳು ಪ್ರವಾಸಿ ತಾಣಗಳ ರೀತಿಯಲ್ಲೇ ಇವೆ. ಅವುಗಳ ಅಭಿವೃದ್ಧಿಗೆ ಗಮನ ಹರಿಸಲಾಗುವುದು ಎಂದರು.ಈ ಭಾಗದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳ ಬೆಳವಣಿಗೆಗೆ ನಿರೀಕ್ಷ …

Read More »

ಕ್ರೆಡೈ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ 10ರಂದು

ಕ್ರೆಡೈ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ 10ರಂದುಸರ್ಕಾರಕ್ಕೆ ಅತೀ ಹೆಚ್ಚು ಆದಾಯ ಕೊಡುತ್ತಿರುವ ಸಂಸ್ಥೆಗೆ ಪ್ರದೀಪ ರಾಯ್ಕರ ಸಾರಥ್ಯ ಹುಬ್ಬಳ್ಳಿ: ಸರ್ಕಾರಕ್ಕೆ ಆದಾಯ ತಂದು ಕೊಡುವ ಎರಡನೆಯ ಅತೀ ದೊಡ್ಡ ಉದ್ಯಮ ರಿಯಲ್ ಎಸ್ಟೇಟ್. ಈ ಉದ್ಯಮವನ್ನು ಸುಸಂಘಟಿತ ಹಾಗೂ ಕಾನೂನು ಬದ್ಧವಾಗಿ ನಡೆಸಿಕೊಂಡು ಬರುತ್ತಿರುವ ಕ್ರೆಡೈಗೆ ನೂತನ ರಾಜ್ಯಾಧ್ಯಕ್ಷರಾಗಿ ಹುಬ್ಬಳ್ಳಿಯ ಉದ್ಯಮಿ ಪ್ರದೀಪ ರಾಯ್ಕರ್ ಅವರು ಆಯ್ಕೆಯಾಗಿದ್ದು, ಇವರ ಅಧಿಕಾರ ಸ್ವೀಕಾರ ಸಮಾರಂಭ ಹುಬ್ಬಳ್ಳಿಯ ಡೆನ್ನಿಸನ್ಸ್ ಹೋಟೆಲ್‌ನಲ್ಲಿ ಜೂನ್ …

Read More »

ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಮಹಿಳಾ ಮುಖಂಡರ ಅಕ್ರೋಶ

ಹುಬ್ಬಳ್ಳಿ ಬಿಜೆಪಿ ಮಹಿಳಾ ಪದಾಧಿಕಾರಿಗಳಿಂದ ಇಂದು ಪ್ರತಿಭಟನೆ ಮಾಡಲಾಯಿತು ಹುಬ್ಬಳ್ಳಿಯ ಸಿಬಿಟಿ ಬಸ್ ನಿಲ್ದಾಣದ ಬಳಿ ಈ ಪ್ರತಿಭಟನೆ ಮಾಡಲಾಗಿದ್ದು ಈ ಸಮಯದಲ್ಲಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಅಕ್ರೋಶವನ್ನು ವ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಜನರ ಜೇಬಿಜೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಧಿಕ್ಕಾರ ಪ್ರತಿಭಟನೆ. ಈಗಾಗಲೇ ಮಾರುಕಟ್ಟೆಯಲ್ಲಿ ದಿನಸಿ ಸಾಮಾನುಗಳ ಬೆಲೆ ಏರಿಕೆಯಾಗಿದ್ದು, ಸರಕಾರ …

Read More »