Breaking News

ಹುಬ್ಬಳ್ಳಿ ಸುದ್ದಿ

ಪರಿಶಿಷ್ಟ ಜನಾಂಗದಿಂದ ಸಿಎಂ ಬೊಮ್ಮಾಯಿಗೆ ಅಭಿನಂದನಾ ಸಮಾವೇಶ

ಹುಬ್ಬಳ್ಳಿ: ನಾಳೆ ಕರ್ನಾಟಕದ ಇತಿಹಾಸದಲ್ಲಿ ಒಂದು ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ, ಒಳಮೀಸಲಾತಿಯನ್ನು ಬಸವರಾಜ ಬೊಮ್ಮಾಯಿ ಅನುಷ್ಠಾನಕ್ಕೆ ತಂದಿದ್ದಾರೆ.‌ ಇದು ಐತಿಹಾಸಿಕ ನಿರ್ಧಾರ. ನಾಳೆ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ದಲಿತ ಸಮುದಾಯವನ್ನು ವೋಟ್ ಬ್ಯಾಂಕ್ ಮಾಡಿಕೊಂಡಿತ್ತು. ಐದು ವರ್ಷಕ್ಕೊಮ್ಮೆ ಅವರನ್ನ ಬಾವಿಯಿಂದ ಹೊರಗೆ ತಗೆದು ವೋಟ್ ಹಾಕಿಸಿಕೊಂಡು ಮತ್ತೆ ಬಾವಿಯೊಳಗೆ ತಳುತ್ತಿದ್ದರೆಂದು ಸಚಿವ ಸಿಸಿ ಪಾಟೀಲ್ ಹೇಳಿದರು. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಸಮಾಜಕ್ಕೆ ನ್ಯಾಯ …

Read More »

ಚುನಾವಣಾ ನಿಯಮಗಳ ಬಗ್ಗೆ ಮಾಹಿತಿ ನೀಡಿದ ಚುನಾವಣಾ ಅಧಿಕಾರಿ ಡಾ.ಗೋಪಾಲಕೃಷ್ಣ

ಹುಬ್ಬಳ್ಳಿ: ಈಗಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಏಪ್ರಿಲ್ 13 ರಂದು ನಾಮ ಪತ್ರ ಸಲ್ಲಿಕೆ ದಿನ ಆರಂಭ, ಏಪ್ರಿಲ್ 20 ಕೊನೆಯ ದಿನಾಂಕವಾಗಿದೆ. ನಾಮ ಪತ್ರ ಪರಿಶೀಲನೆ ಏಪ್ರಿಲ್ 21 ಕ್ಕೆ. ನಾಮ ಪತ್ರ ಹಿಂಪಡೆಯುವ ಕೊನೆಯ ದಿನಾಂಕ ಏಪ್ರಿಲ್ 24. ಇವುಗಳು ಚುನಾವಣೆಯ ನಿಯಮಗಳು ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಚುನಾವಣಾ ಅಧಿಕಾರಿ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಹೇಳಿದರು. ನಗರದಲ್ಲಿ ಮಾಧ್ಯಮದವರ ಜೊತೆ …

Read More »

ಮನೆಯೊಂದರ ಗೇಟ್ ಬಿದ್ದು 7 ಬಾಲಕನ ಸಾವು

ಹುಬ್ಬಳ್ಳಿ: ಪ್ರಗತಿ ಹಂತದಲ್ಲಿದ್ದ ಮನೆಯೊಂದರ ಗೇಟ್ ಬಿದ್ದು ಬಾಲಕನೋರ್ವ ಸಾವನ್ನಪ್ಪಿದ ಘಟನೆ ನಗರದ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಮಂಟೂರ ರಸ್ತೆಯ ಗಣೇಶ್ ಕಾಲೋನಿಯಲ್ಲಿ ಘಟನೆ ನಡರದಿದ್ದು, ೭ ವರ್ಷದ ಬಾಲಕ ಎಂದು ತಿಳಿದು ಬಂದಿದ್ದು, ಹೆಸರು ಹಾಗೂ ಮಾಹಿತಿ ತಿಳಿದು ಬಂದಿಲ್ಲ. ಪ್ರಗತಿಹಂತದಲ್ಲಿದ್ದ ಮನೆಯೊಂದರ ಬಳಿಯಲ್ಲಿ ಬಾಲಕ ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು, ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಬಾಲಕ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

Read More »

ಉಚಿತವಾದ ಹಾಸ್ಪೈಸ್ ಪ್ಯಾಲಿಯೆಟಿಸ್ ಕೇಂದ್ರ ಪ್ರಾರಂಭ

ಹುಬ್ಬಳ್ಳಿ: ಮಜೇಥಿಯಾ ಫೌಂಡೇಶನ್ ಹಾಗೂ ಕೆಸಿಟಿಆರ್’ಐ ಸಹಯೋಗದೊಂದಿಗೆ ಇಲ್ಲಿನ ನವನಗರದ ಕ್ಯಾನ್ಸರ್ ಆಸ್ಪತ್ರೆ ಆವರಣದಲ್ಲಿ ಉಚಿತವಾದ ಹಾಸ್ಪೈಸ್ – ಪ್ಯಾಲಿಯೆಟಿಸ್ ಕೇಂದ್ರ ಪ್ರಾರಂಭಿಸಲಾಗಿದ್ದು, ಇದರಲ್ಲಿನ ರಮಿಲಾ ಪ್ರಶಾಂತಿ ಮಂದಿರ ಉದ್ಘಾಟನೆ ಸಮಾರಂಭವನ್ನು ಏ.6 ರಂದು ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಹಾಸ್ಪೈಸ್ ಕೇಂದ್ರದ ವ್ಯವಸ್ಥಾಪಕ ಸಮಿತಿಯ ಟ್ರಸ್ಟಿಗಳಾದ ಡಾ.ಕೆ.ರಮೇಶ ಬಾಬು ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಉದ್ಘಾಟನೆ ಕಾರ್ಯಕ್ರಮಕ್ಕೆ ಕೊಪ್ಪಳದ ಸಂಸ್ಥಾನ ಗವಿಮಠದ ಅಭಿನವ ಗವಿಸಿದ್ದೇಶ್ವರ …

Read More »

ಕಾಂಗ್ರೆಸ್ ಶಾಸಕಿ ವಿರುದ್ಧ ಹ… ಅಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಮುಖಂಡ…

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಚುನಾವಣಾ ಕಾವು ರಂಗೇರುತ್ತಿದೆ. ಹಾಲಿ ಶಾಸಕಿಯ ವಿರುದ್ಧ ಕಾಂಗ್ರೆಸ್ ಪಾಳೆಯದಲ್ಲಿಯೇ ಟಿಕೆಟ್ ವಿಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಆಕಾಂಕ್ಷಿಯೊಬ್ಬರು ಸುದ್ಧಿಗೋಷ್ಟಿಯಲ್ಲಿಯೇ ಅಸಂವಿಧಾನಿಕ ಭಾಷೆ ಬಳಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿಂದು ಶಿವಾನಂದ ಬೆಂತೂರ ನೇತೃತ್ವದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಸಿ.ಜೆ. ಪಾಟೀಲ ಎಂಬುವಂತ ಟಿಕೆಟ್ ಆಕಾಂಕ್ಷಿ, ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿಯವರ ವಿರುದ್ಧವೇ ಅಸಂವಿಧಾನಿಕ ಭಾಷೆ ಬಳಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. …

Read More »

ಬಾಲಕನ ಮರ್ಡರ್ ಸ್ಟೋರಿ ಬಿಚ್ಚಿಟ್ಟ ಡಿಸಿಪಿ

ಹುಬ್ಬಳ್ಳಿ: ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಾಲಕನ ಕೊಲೆ ಪ್ರಕರಣದ ತನಿಖೆ ನಡೆಸಿದ್ದು, ಆರೋಪಿ ರವಿ ವೆಂಕಟೇಶ ಬಳ್ಳಾರಿ ಎಂಬುವವನನ್ನು ವಶಕ್ಕೆ ಪಡೆದಿದ್ದೇವೆ. ಆ ಬಾಲಕ ಆರೋಪಿಗೆ ಮಾಮಾ, ಮಾಮಾ ಎಂದುಕೊಂಡಿದ್ದ ಅಂತಹ ಬಾಲಕನನ್ನೇ ಆರೋಪಿ ಕೊಲೆ ಮಾಡಿದ್ದಾನೆ ಎಂದು ಡಿಸಿಪಿ ರಾಜೀವ.ಎಂ ಹೇಳಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಾಲಕನ ಶವ …

Read More »

ಕೆಎಲ್ ಇ ಘಟಿಕೋತ್ಸವ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿ ಪದಕ

ಹುಬ್ಬಳ್ಳಿ: ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದ ಘಟಕೋತ್ಸವ ಸಮಾರಂಭಕ್ಕೆ ವಿವಿಯ ಕುಲಪತಿ, ಅಧ್ಯಕ್ಷ ಪ್ರಭಾಕರ ಕೋರೆ, ಉಪಕುಲಪತಿ ಡಾ.ಅಶೋಕ‌ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಿದರು. ಸಂಸ್ಥೆಯ ಪ್ರಭಾಕರ ಕೋರೆ ಒಳಾಂಗಣ ಕ್ರೀಡಾಂಗಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಘಟಿಕೋತ್ಸವದಲ್ಲಿ 1619 ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ವಿತರಿಸಲಾಯಿತು. ಇನ್ನು ಮೊದಲ ಹಾಗೂ ಎರಡನೇ ರ‌್ಯಾಂಕ್ ಪಡೆದ 35 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಈ ವೇಳೆ ಚಿನ್ನ ಹಾಗೂ ಬೆಳ್ಳಿ ಪದಕ …

Read More »

ಮಿಲ್ಲತ್ತ ನಗರದಲ್ಲಿ ನಡೆದ ಬಾಲಕನ ಕೊಲೆಯ ಆರೋಪಿಯ ಬಂಧನ

ಹುಬ್ಬಳ್ಳಿ : ಮಿಲ್ಲತ್ತ ನಗರದಲ್ಲಿ ನಡೆದ ಬಾಲಕನ ಕೊಲೆಯ ಆರೋಪಿಯನ್ನು ಬಂದನ ಮಾಡುವಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಭೇದಿಸುವಲ್ಲಿ ಕಡೆಗೂ ಯಶಸ್ವಿಯಾಗಿದ್ದಾರೆ . ಹುಬ್ಬಳ್ಳಿ ಸೆಟ್ಲಮೆಂಟ್ ನ ನಿವಾಸಿ ರವಿ ವೆಂಕಟೇಶ ಬಳ್ಳಾರಿ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ , ಕಳೆದ ಗುರುವಾರ ಸಂಜೆ 5 ಗಂಟೆಗೆ ಮಿಲ್ಲತ್ತ ನಗರದ ಬಳಿ ಇರುವ ಆಟದ ಮೈದಾನದ ಬಳಿಯಲ್ಲಿ ಆಡುತ್ತಿದ್ದ ಬಾಲಕ ನದೀಮ್ ಆರೋಪಿ ರವಿಯನ್ನು 5 ರೂಪಾಯಿ ಕೊಡು …

Read More »

ನಾಪತ್ತೆ ಆಗಿದ್ದ ಬಾಲಕ ಇಂದು ಮುಳ್ಳಕಂಠಿಯಲ್ಲಿ ಶವವಾಗಿ ಪತ್ತೆ

ಹುಬ್ಬಳ್ಳಿ: ಬಾಲಕನೋರ್ವ ರಜೆಕ್ಕೆಂದು ತನ್ನ ಅಜ್ಜಿಯ ಮನೆಗೆಬಂದು, ನಿನ್ನೆ ಸಂಜೆ ಕಾಣೆಯಾಗಿ ಇಂದು ತನ್ನ ಮನೆಯ ಕೂಗಳತೆಯ ಮುಳ್ಳು ಕಂಠಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಹುಬ್ಬಳಿಯಲ್ಲಿ ನಡೆದಿದೆ. ಮಿಲತ್ ನಗರದ‌ ದೊಡ್ಡಮನಿ ಮೈದಾನದಲ್ಲಿ ಘಟನೆ ನಡೆದಿದ್ದು, ಶವವಾಗಿ ಪತ್ತೆಯಾಗಿರುವ ಬಾಲಕನ್ನು ಏಂಟು ವರ್ಷದ ನದೀಂ ಎಂದು ಗುರುತಿಸಲಾಗಿದೆ. ಹಣದಾಸೆ ತೋರಿಸಿ ದುಷ್ಕರ್ಮಿಗಳು ಬಾಲಕನ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಮೃತ ನದೀಂ ಭೈರಿದೇವರಕೊಪ್ಪದ ನಿವಾಸಿಯಾಗಿದ್ದು, ಬೇಸಿಗೆ …

Read More »

ಡಿಕೆ ಶಿವಕುಮಾರ್, ಸಿದ್ದರಾಮಯ್ಯ ತಿರುಕನ ಕನಸು ಕಾಣ್ತೀದ್ದಾರೆ-ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕಾಂಗ್ರೆಸ್ ನವರು ಅಧಿಕಾರಕ್ಕೆ ಬರಲ್ಲ ಎಂದು ನಾನು ಸ್ಪಷ್ಟವಾಗಿ ಹೇಳ್ತೀನಿ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ತಿರುಕನ ಕನಸು ಕಾಣ್ತೀದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಬಗ್ಗೆ ನೀರಿಕ್ಷೆ ಇತ್ತು. ಇವತ್ತು ಚುನಾವಣೆ ಘೋಷಣೆಯಾಗಿದೆ. ಮೋದಿ ಹಾಗೂ ಅಮಿತ್ ಶಾ ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ. ಬಿಜೆಪಿ ಚುನಾವಣೆಗೆ ಅಣಿಯಾಗಿದೆ. ರಾಜ್ಯದಲ್ಲಿ ಬಿಜೆಪಿ ಪೂರಕ ವಾತಾವರಣ ಇದೆ. ಜರನಿಂದ ಒಳ್ಳೆಯ …

Read More »