Breaking News

ಕುಂದಾಪುರ

ಬೈಂದುರು : ಕಾಲೇಜಿಗೆ ಹೋದ ವಿದ್ಯಾರ್ಥಿ ನಾಪತ್ತೆ

ಅಭಿನಂದನ್‌ ಬೈಂದೂರಿನ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೋಗಿದ್ದು, ಏತನ್ಮಧ್ಯೆ ಎರಡು ಬಾರಿ ಮನೆಗೆ ಫೋನ್‌ ಮಾಡಿದ್ದು, ನಂತರ ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.ನಂತರ ತಂದೆ ಮಹಾಬಲೇಶ್ವರ ಅವರು ನಿಟ್ಟೆ ಕಾಲೇಜಿಗೆ ಹೋಗಿ ಮಗನ ಕುರಿತು ವಿಚಾರಿಸಿದಾಗ, ಕಾಲೇಜಿಗೆ ರಜೆ ಹಾಕಿ ತೆರಳಿರುವುದಾಗಿ ತಿಳಿಸಿದ್ದರು. ಆತನ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಮಗ ಕಾಣೆಯಾಗಿರುವುದಾಗಿ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Read More »

ಬಾಲಕ ಹಾವಿನ ಕುತ್ತಿಗೆಗೆ ಕೈ ಹಾಕಿ ಬೃಹತ್‌ ಗಾತ್ರದ ಹಾವನ್ನು ಹಿಡಿದಿದ್ದಾನೆ….

ಕುಂದಾಪುರ: ಇತ್ತೀಚಿಗೆ ಜನ ಸಂದಣಿ ಇರುವ ಜಾಗದಲ್ಲೇ ಹಾವು ಕಂಡು ಬರುವುದು ಜಾಸ್ತಿಯಾಗುತ್ತಿದೆ. ಬೇಸಿಗೆಯ ಧಗೆಗೆ ನೀರು ಅರಸಿ ಹಾವುಗಳು ಬಿಲದಿಂದ, ಹುತ್ತದಿಂದ ಹೊರಬರುತ್ತವೆ. ಹೀಗಾಗಿ ಜನರಿರುವ ಪ್ರದೇಶದಲ್ಲಿ ಹಾವುಗಳ ಒಡಾಟ, ಅವುಗಳ ರಕ್ಷಣೆ ಕಾರ್ಯಗಳು ಹೆಚ್ಚಾಗುತ್ತಿದೆ. ಹಾವುಗಳನ್ನು ಕಂಡರೆ ಯಾರಿಗೆ ಭಯ ಇಲ್ಲ ಹೇಳಿ..? ಹಾವುಗಳೆಂದರೆ ಅಲ್ಲಿಂದ ಕಾಲ್ಕಿತ್ತು ಓಡುವವರೇ ಹೆಚ್ಚು. ಉರಗ ತಜ್ಞರು ಎಷ್ಟು ಜಾಗೃತಿ ಮೂಡಿಸಿದರೂ ಕೂಡ ಕೆಲವರು ಕಂಡ ಕಂಡಲ್ಲಿ ಹಾವುಗಳನ್ನು ಹೊಡೆದು ಕೊಲ್ಲುತ್ತಾರೆ. …

Read More »