ಕುಂದಾಪುರ: ಇತ್ತೀಚಿಗೆ ಜನ ಸಂದಣಿ ಇರುವ ಜಾಗದಲ್ಲೇ ಹಾವು ಕಂಡು ಬರುವುದು ಜಾಸ್ತಿಯಾಗುತ್ತಿದೆ. ಬೇಸಿಗೆಯ ಧಗೆಗೆ ನೀರು ಅರಸಿ ಹಾವುಗಳು ಬಿಲದಿಂದ, ಹುತ್ತದಿಂದ ಹೊರಬರುತ್ತವೆ. ಹೀಗಾಗಿ ಜನರಿರುವ ಪ್ರದೇಶದಲ್ಲಿ ಹಾವುಗಳ ಒಡಾಟ, ಅವುಗಳ ರಕ್ಷಣೆ ಕಾರ್ಯಗಳು ಹೆಚ್ಚಾಗುತ್ತಿದೆ. ಹಾವುಗಳನ್ನು ಕಂಡರೆ ಯಾರಿಗೆ ಭಯ ಇಲ್ಲ ಹೇಳಿ..? ಹಾವುಗಳೆಂದರೆ ಅಲ್ಲಿಂದ ಕಾಲ್ಕಿತ್ತು ಓಡುವವರೇ ಹೆಚ್ಚು. ಉರಗ ತಜ್ಞರು ಎಷ್ಟು ಜಾಗೃತಿ ಮೂಡಿಸಿದರೂ ಕೂಡ ಕೆಲವರು ಕಂಡ ಕಂಡಲ್ಲಿ ಹಾವುಗಳನ್ನು ಹೊಡೆದು ಕೊಲ್ಲುತ್ತಾರೆ. ಆದರೆ ಇಲ್ಲೊಬ್ಬ ಬಾಲಕ ಹಾವಿನ ಕುತ್ತಿಗೆಗೆ ಕೈ ಹಾಕಿ ಬೃಹತ್ ಗಾತ್ರದ ಹಾವನ್ನು ಹಿಡಿದಿದ್ದಾನೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಲಿಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಲಕ ಹೆಬ್ಬಾವು ಹಿಡಿದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಸಾಲಿಗ್ರಾಮ ಪರಿಸರದಲ್ಲಿ ಬೃಹತ್ ಹೆಬ್ಬಾವೊಂದು ಕಂಡು ಬಂದಿತ್ತು. ಈ ಬಗ್ಗೆ ಸ್ಥಳೀಯರು ಉರಗ ತಜ್ಞ ಸುಧೀಂದ್ರ ಐತಾಳ್ ಅವರಿಗೆ ಮಾಹಿತಿ ನೀಡದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





