Breaking News

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: ಮುಂದಿನ ವರ್ಷ ದೇಶದಲ್ಲಿ ಜನಗಣತಿ ಆರಂಭ

ನವದೆಹಲಿ: ಕಳೆದ ಕೆಲ ವರ್ಷಗಳಿಂದ ಸಾವಿರಾರು ಮಂದಿ ದೇಶಾದ್ಯಂತ ಜನಗಣತಿ ಯಾವಾಗ ನಡೆಯುತ್ತೆ ಅನ್ನೋದನ್ನು ಕಾಯುತ್ತಿದ್ದಾರೆ. 2011ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಕೊನೆಯದಾಗಿ ಜನಗಣತಿ ಮಾಡಿತ್ತು. ಇದೀಗ ಕೇಂದ್ರದ ಎನ್‌ಡಿಎ ಸರ್ಕಾರ ಜನಗಣತಿ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಕೇಂದ್ರ ಸರ್ಕಾರ ನಡೆಸುವ ಜನಗಣತಿಗೆ ಸಂಬಂಧಿಸಿದಂತೆ ಇದೀಗ ಪ್ರಮುಖ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಮುಂದಿನ ವರ್ಷದಿಂದ ದೇಶದಲ್ಲಿ ಜನಗಣತಿ ಆರಂಭವಾಗಬಹುದು ಎಂದು ಮೂಲಗಳು ತಿಳಿಸಿದ್ದು, ಜನಗಣತಿಯು ಮುಂದಿನ ವರ್ಷ 2025 ರಿಂದ 2026 ರವರೆಗೆ ನಡೆಯಲಿದೆ ಎನ್ನಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು. ಇದೀಗ ಮುಂದಿನ ವರ್ಷ ಜನಗಣತಿ ನಡೆಯಲಿದೆ.
ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಇನ್ನುಮುಂದೆ ಜನಗಣತಿಯ ಕಾಲ ಚಕ್ರವೂ ಬದಲಾಗಲಿದೆ. ಇಲ್ಲಿಯವರೆಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ದಶಕದ ಆರಂಭದಲ್ಲಿ ಜನಗಣತಿ ನಡೆಸಲಾಗುತ್ತಿತ್ತು. ಉದಾಹರಣೆಗೆ, ಜನಗಣತಿಯು 1991, 2001, 2011 ಇತ್ಯಾದಿಗಳಲ್ಲಿ ಪ್ರಾರಂಭವಾಗುತ್ತಿತ್ತು. ಆದರೆ, ಇನ್ನು ಮುಂದೆ 2025ರ ನಂತರ ಮುಂದಿನ ಜನಗಣತಿ 2035, 2045, 2055ರಲ್ಲಿ ಈ ರೀತಿ ನಡೆಯಲಿದೆ ಎಂದು ಮೂಲಗಳು ಹೇಳಿದೆ.
ಜನಗಣತಿ ಮುಗಿದ ನಂತರ ಲೋಕಸಭಾ ಕ್ಷೇತ್ರಗಳ ಡಿಲಿಮಿಟೇಷನ್ ಆರಂಭವಾಗಲಿದೆ. 2028ರ ವೇಳೆಗೆ ಡಿಲಿಮಿಟೇಶನ್ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಹಲವು ವಿರೋಧ ಪಕ್ಷಗಳಿಂದ ಜಾತಿಗಣತಿ ನಡೆಸುವ ಬಗ್ಗೆ ಬೇಡಿಕೆಯೂ ಸಹ ಕೇಳಿ ಬಂದಿದೆ. ಆದರೆ ಜಾತಿ ಗಣತಿ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ತಿಳಿದು ಬಂದಿದೆ.
ಜನಗಣತಿಯಲ್ಲಿ ಸಾಮಾನ್ಯವಾಗಿ ಧರ್ಮ ಮತ್ತು ವರ್ಗವನ್ನು ಕೇಳಲಾಗುತ್ತದೆ. ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡ ಹೀಗೆ ಜನಸಂಖ್ಯೆಯನ್ನು ಎಣಿಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಜನರು ಯಾವ ಪಂಗಡದ ಅನುಯಾಯಿಗಳು ಎಂಬುದನ್ನೂ ಕೇಳಬಹುದು ಎಂದು ಹೇಳಲಾಗುತ್ತಿದೆ. ಉದಾಹರಣೆಗೆ, ಕರ್ನಾಟಕದಲ್ಲಿ, ಸಾಮಾನ್ಯ ವರ್ಗಕ್ಕೆ ಸೇರಿದ ಲಿಂಗಾಯತರು ತಮ್ಮನ್ನು ಪ್ರತ್ಯೇಕ ಪಂಥವೆಂದು ಪರಿಗಣಿಸುತ್ತಾರೆ. ಇದು ಕೂಡ ಪರಿಗಣನೆಗೆ ಒಳಪಡುವ ಸಾಧ್ಯತೆ ಇದೆ.
ಹಾಗೆಯೇ, ಪರಿಶಿಷ್ಟ ಜಾತಿಗಳಲ್ಲಿ ವಾಲ್ಮೀಕಿ, ರವಿದಾಸಿ ಮೊದಲಾದ ವಿವಿಧ ಪಂಗಡಗಳಿವೆ. ಅಂದರೆ ಧರ್ಮ, ವರ್ಗ ಹಾಗೂ ಪಂಗಡದ ಆಧಾರದ ಮೇಲೆ ಜನಗಣತಿ ಬೇಡಿಕೆಯನ್ನು ಸರ್ಕಾರ ಪರಿಗಣಿಸುತ್ತಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *