BigTv News
April 13, 2025
Breaking News, Crime, ಬೆಳಗಾವಿ
ಹಾವೇರಿ ಜಿಲ್ಲೆಯ ಶಿಗ್ಗಾಂವ ಮೂಲದ ವಿದ್ಯಾರ್ಥಿನಿ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಕಾಲೇಜಿನಲ್ಲಿ ಬಿಸಿಎ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು.ಹಾಸ್ಟೆಲಿನ ಐದನೇ ಕೊಠಡಿಯಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದು, ಘಟನೆಗೆ ನಿಖರ ಕಾರಣ ಏನು ಎಂಬುವುದು ಸದ್ಯ ತಿಳಿದುಬಂದಿಲ್ಲ. ಸ್ಥಳಕ್ಕೆ ಮಾಳಮಾರುತಿ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
Read More »
BigTv News
April 12, 2025
Breaking News, Crime, ಕರ್ನಾಟಕ, ಬೆಂಗಳೂರು
ಅಳುತ್ತಿರುವ ಶಬ್ದ ಕೇಳಿದ ಸ್ಥಳೀಯರು ಕಸದ ತೊಟ್ಟಿಯಲ್ಲಿ ನೋಡಿದಾಗ ನವಜಾತ ಶಿಶು ಪತ್ತೆಯಾಗಿದೆ. ಹೆಣ್ಣು ಎಂಬ ಕಾರಣಕ್ಕೆ ಜನಿಸಿದ ದಿನವೇ ಮಗುವನ್ನು ಪೋಷಕರು ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.ಶಿಶುವಿಗೆ ಚಿಕಿತ್ಸೆಯ ಅಗತ್ಯವಿದ್ದು, ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಮೂರು ದಿನಗಳವರೆಗೆ ಚಿಕಿತ್ಸೆ ನೀಡಲಾಗುತ್ತದೆ. ನಂತರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗುವುದು’ ಎಂದು ಸಿಡಿಪಿಒ ಕೃಷ್ಣಮೂರ್ತಿ ತಿಳಿಸಿದರು.ಘಟನೆ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Read More »
BigTv News
April 12, 2025
Breaking News, Crime, ಕರ್ನಾಟಕ
ಮದುವೆಯಾಗಲು ಯಾರೂ ಹೆಣ್ಣು ನೀಡುತ್ತಿಲ್ಲವೆಂದು ಮನನೊಂದ ಮಾಡ್ಲಗೇರಿ ಗ್ರಾಮದ ಇಮಾಮ್ ಸಾಬ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈತ ಪೋಲಿಯೋ ಪೀಡಿತನಾಗಿದ್ದು, ಎಡಗಾಲಿನ ವೈಕಲ್ಯ ಹೊಂದಿದ್ದ. ಪಾಲಕರು ಮದುವೆ ಮಾಡಿಸಲು ಪ್ರಯತ್ನ ನಡೆಸಿದರೂ ಹೆಣ್ಣು ನೀಡಲು ಯಾರೂ ಮುಂದೆ ಬಂದಿಲ್ಲ.ಇದರಿಂದ ಮನನೊಂದು ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾನೆ.
Read More »
BigTv News
April 12, 2025
Breaking News, Crime, ಹುಬ್ಬಳ್ಳಿ-ಧಾರವಾಡ
ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿ ತನ್ನ ಇಬ್ಬರು ಮಕ್ಕಳಿಗೆ ಅನ್ನದಲ್ಲಿ ವಿಷ ಹಾಕಿ ಕೊಟ್ಟಿದ್ದಾಳೆ. ಬಳಿಕ ತಾನೂ ಕೂಡ ವಿಷ ಮಿಶ್ರಿತ ಅನ್ನವನ್ನು ಸೇವಿಸಿದ್ದಾಳೆ. ಏನೂ ಅರಿಯದ ಇಬ್ಬರು ಮಕ್ಕಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ವಿಷ ಸೇವಿಸಿದ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತಾಯಿ ಮಾಲಾಂಬಿ ಅಪಾಯದಿಂದ ಪಾರಾಗಿದ್ದಾರೆ. ಫಯಾಜ್ ಆರೀಫ್ ಎಂಬ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಮೂವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ …
Read More »
BigTv News
April 12, 2025
Breaking News, Crime, ಕಲಬುರಗಿ
ಮದುವೆ ಬಳಿಕ ಪತಿ-ಪತ್ನಿ ನಡುವೆ ಜಗಳ ಶುರುವಾಗಿ ಪತ್ನಿ ಸ್ನೇಹಾ ತವರು ಮನೆ ಸೇರಿದ್ದಳು. ಆನಂದ್ ತನ್ನ ಅಣ್ಣನ ಮದುವೆಯಿದೆ ಹಾಗಾಗಿ ಮನೆಗೆ ಬರುವಂತೆ ಪತ್ನಿಯನ್ನು ಮನೆಗೆ ಕರೆದಿದ್ದಾನೆ. ಇದೇ ವಿಚಾರವಾಗಿ ಭಾವ-ಬಾಮೈದನ ನಡುವೆ ಗಲಾಟೆ ನಡೆದು ಬಾಮೈದ ಟೋನಿ ಹಾಗೂ ಆತನ ಸ್ನೇಹಿತರ ಗ್ಯಾಂಗ್ ಭಾವ ಆನಂದ್ ಗೆ ಚಾಕು ಇರಿದಿದ್ದರು. ಗಂಭೀರವಾಗಿ ಹಲ್ಲೆಗೊಳಗಾದ ಆನಂದ್ ನನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆನಂದ್ …
Read More »
BigTv News
April 12, 2025
Breaking News, Crime, ಕಲಬುರಗಿ, ಬೀದರ್, ಮಂಗಳೂರು
ಕಲಬುರಗಿಯಲ್ಲಿ ನಸುಕಿನ ಜಾವ 3 ಗಂಟೆ ಸುಮಾರಿಗೆ ಹರಿಯಾಣದ ಮೂಲದ ಗ್ಯಾಂಗ್ ಎಟಿಎಂಗೆ ನುಗ್ಗಿದೆ. ಮೊದಲಿಗೆ ಸಿಸಿಕ್ಯಾಮರಾಗೆ ಸ್ಪ್ರೇ ಮಾಡಿದ್ದಾರೆ. ಬಳಿಕ ಲಾಕರ್ ಅನ್ನ ಗ್ಯಾಸ್ ಕಟರ್‌ನಿಂದ ಕಟ್ ಮಾಡಿ ಬರೋಬ್ಬರಿ 18 ಲಕ್ಷ ರೂಪಾಯಿ ದೋಚಿದ್ದಾರೆ.ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆದ್ರೆ, ಬೀದರ್ ಎಂಟಿಎಂ ಹಣ ದರೋಡೆಕೋರರು ಇದುವರೆಗೂ ಪತ್ತೆಯಾಗಿಲ್ಲ. ಇದರ ಬೆನ್ನಲ್ಲೇ ಕಲಬುರಗಿಯಲ್ಲೂ ಸಹ ಎಟಿಎಂ ಕಳ್ಳತನವಾಗಿದೆ. ಎಟಿಎಂ ಹಾಗೂ ಬ್ಯಾಂಕ್ಗಳನ್ನೇ ಟಾರ್ಗೆಟ್ ಮಾಡಿ ಈ ಕೃತ್ಯ ಎಸಗುತ್ತಿರುವುದು …
Read More »
BigTv News
April 12, 2025
Breaking News, Crime, ರಾಮನಗರ
ತಮಿಳುನಾಡು ಮೂಲದ ಶಂಕರ ಎಂಬಾತನನ್ನ ಬಾರ್ ಮುಂದೆ ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಜಮೀನು ವಿಚಾರವಾಗಿ ದಾಯಾದಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು.ಪ್ರಕರಣ ಸಂಬಂಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ 17 ಜನರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ಟಿಟಿ ಕೃಷ್ಣ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 5 ಜನ ಆರೋಪಿಗಳು ಪರಾರಿಯಾಗಿದ್ದು, ಉಳಿದ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ 2ನೇ ಅಪರ ಜಿಲ್ಲಾ …
Read More »
BigTv News
April 12, 2025
Breaking News, Crime, ದೆಹಲಿ
ದೆಹಲಿಯ ಉದ್ಯಮಿಯೊಬ್ಬ ಬಹಳ ಪ್ಲಾನ್ ಮಾಡಿ ತನ್ನ ಹೆಂಡತಿಯನ್ನು ಕೊಂದಿದ್ದ. ಯಾರಿಗೂ ಗೊತ್ತಾಗಬಾರದೆಂದು ಮುನ್ನೆಚ್ಚರಿಕಾ ಕ್ರಮವನ್ನು ಕೂಡ ತೆಗೆದುಕೊಂಡಿದ್ದ.ಆತ ತನ್ನ ಹೆಂಡತಿಯನ್ನು ಕೊಂದಿದ್ದ. ತಮ್ಮ ಮಗಳೆಲ್ಲಿ ಎಂದು ಆಕೆಯ ಪೋಷಕರು ಕೇಳಿದಾಗ ಮಾತು ಮರೆಸುತ್ತಿದ್ದ. ಇದರಿಂದ ಅವರಿಗೆ ಅನುಮಾನ ಮೂಡಿತ್ತು. ಪೊಲೀಸರು ಅವರನ್ನು ಸಂಪರ್ಕಿಸಿ ನಿಮ್ಮ ಮಗಳ ಶವ ಪತ್ತೆಯಾಗಿದೆ ಎಂದು ಹೇಳುವವರೆಗೂ ಆ ಕುಟುಂಬಕ್ಕೆ ತಮ್ಮ ಮಗಳು ಬದುಕಿಲ್ಲವೆಂಬ ವಿಷಯವೇ ಗೊತ್ತಿರಲಿಲ್ಲ.ವಿಚಾರಿಸಿದಾಗ ತಾವು ತಮ್ಮ ಮಗಳೊಂದಿಗೆ ಒಂದು ತಿಂಗಳಿನಿಂದ …
Read More »
BigTv News
April 12, 2025
Breaking News, Crime, ಮಧ್ಯಪ್ರದೇಶ
ಮಗಳ ಪ್ರೇಮ ವಿವಾಹದಿಂದ ನೊಂದ ತಂದೆಯೊಬ್ಬರು ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಮೃತನನ್ನು ರಿಷಿರಾಜ್ ಅಲಿಯಾಸ್ ಸಂಜು ಜೈಸ್ವಾಲ್ ಎಂದು ಗುರುತಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಿಷಿರಾಜ್ ಜೈಸ್ವಾಲ್ ಅವರ ಮಗಳು ಹರ್ಷಿತಾ ಆನಂದ್ ಎಂಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು. ಸ್ವಲ್ಪ ದಿನಗಳ ಹಿಂದೆ ಅವಳು ತನ್ನ ಪ್ರಿಯಕರ ಆನಂದ್ ಜೊತೆ ಓಡಿಹೋದಳು.ಮಾನಸಿಕವಾಗಿ ನೊಂದಿದ್ದ ರಿಷಿರಾಜ್ ನಿನ್ನೆ ರಾತ್ರಿ, ಮನೆಯಲ್ಲಿ ಒಬ್ಬರೇ ಇದ್ದಾಗ, ತಮ್ಮ …
Read More »
BigTv News
April 11, 2025
Breaking News, Crime, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಪೊಲೀಸ್ ಠಾಣೆಯಲ್ಲಿ ದೊಡ್ಡ ಅವಘಡ ತಪ್ಪಿದಂತಾಗಿದೆ. ಆರೋಪಿಗಳನ್ನು ವಿಚಾರಣೆ ಮಾಡುತ್ತಿರುವಾಗಲೇ ಮೇಲ್ಚಾವಣಿಯಿಂದ ಶಿಥಿಲಗೊಂಡಿದ್ದ ಕಾಂಕ್ರೀಟ್ ಕುಸಿದು ಬಿದ್ದಿರುವ ಘಟನೆ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ಯಲ್ಲಿ ನಡೆದಿದೆ. ಸಂಪೂರ್ಣವಾಗಿ ಶಿಥಿಲವಾಗಿರುವ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಕಟ್ಟಡದಲ್ಲಿ ಸಂಭವಿಸಬಹುದಾಗಿದ್ದ ಅಪಘಾತ ತಪ್ಪಿದಂತಾಗಿದೆ. ಇನ್ನೂ ಸಮಾಜವನ್ನು ಕಾಯುವ ಪೊಲೀಸರಿಗಿಲ್ಲ ರಕ್ಷಣೆ ಎಂಬುವಂತಾಗಿದ್ದು, ಗೃಹ ಸಚಿವರೇ ಹೇಗಿವೆ ಪೊಲೀಸ್ ಠಾಣೆ ಗಳು ಒಮ್ಮೆ ನೋಡಿ ಹೇಗೆ ಕರ್ತವ್ಯ ಮಾಡಬೇಕು ಒಮ್ಮೆ ನೋಡಿ …
Read More »