Breaking News

Crime

ಟಾಟಾ ಏಸ್ ಬೈಕ್ ಡಿಕ್ಕಿ : ಇಬ್ಬರ ಸಾವು

ಟಾಟಾ ಏಸ್ ಹಾಗೂ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಜಡೆಗೇನೆ ಹಳ್ಳಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ತಮಿಳುನಾಡಿನ ಮೊಹಮ್ಮದ್ದೀನ್ ಹಾಗೂ ರಾಜ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಶುರು ಮಾಡಿದ್ದಾರೆ.

Read More »

ಪುಟ್ಟ ಮಕ್ಕಳನ್ನು ರಕ್ಷಿಸಲು ಸರ್ಪದೊಂದಿಗೆ ಹೋರಾಡಿ ಪ್ರಾಣ ಬಿಟ್ಟ ಶ್ವಾನ

ಹಾಸನ ತಾಲೂಕು ಕಟಾಯ ಗ್ರಾಮದಲ್ಲಿ ಸಾಕು ನಾಯಿ ಒಂದು ಕಾಳಿಂಗ ಸರ್ಪದೊಂದಿಗೆ ಹೋರಾಡಿ ತನ್ನ ಮಾಲೀಕನ ಮಕ್ಕಳ ಜೀವವನ್ನು ಕಾಪಾಡಿದೆ ಕೊನೆಗೆ ತನ್ನ ಪ್ರಾಣವನ್ನು ಕಳೆದುಕೊಂಡಿದೆ. ಸಮನ್ ಎಂಬುವರು ಸಾಕಿದ್ದ ಬಿಟ್ಬುಲ್ ನಾಯಿ ಒಂದು ಕಾಳಿಂಗ ಸರ್ಪದೊಂದಿಗೆ ಕಾಳಗ ನಡೆಸಿ ಪ್ರಾಣ ಬಿಟ್ಟಿದೆ ಹಾವಿನೊಂದಿಗೆ 15 ನಿಮಿಷಕ್ಕೂ ಹೆಚ್ಚು ಕಾಳಗ ನಡೆಸಿ ಅದನ್ನು ಕೊಂದು ಮತ್ತೆ ತಾನು ಪ್ರಾಣ ಬಿಟ್ಟಿದೆ. ಈ ವಿಷಯ ಕೇಳಿ ಕುಟುಂಬದವರು ಕಣ್ಣೀರಿಟ್ಟಿದ್ದಾರೆ.

Read More »

ಖೋಟಾ ನೋಟು ಹಾಗೂ ಹಣ ಎಣಿಕೆ ಮಾಡುವ ಯಂತ್ರ ಕಳ್ಳಸಗಣಿಕೆ ಮಾಡುತ್ತಿರುವವರ ಬಂಧನ.

ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಆನೆ ತಲೆ ದಿಂಬದ ಬಳಿ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದಾಗ, ಪೊಲೀಸರ ವಾಹನ ಕಂಡು ಕಾರಿನ ಚಾಲಕ ಕಾರು ನಿಲ್ಲಿಸಿ ಪರಾರಿಯಾಗಿದ್ದಾನೆ. ಅನುಮಾನಗೊಂಡ ಪೊಲೀಸರು ಕಾರು ಸುತ್ತುವರಿದು ಕಾರಿನಲ್ಲಿದ್ದ ಶೇಖರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಣ ಡಬ್ಲಿಂಗ್ ಮಾಡಲು ತಮಿಳುನಾಡಿನ ಕಡೆಗೆ ಹೋಗುತ್ತಿದ್ದ ವಂಚಕರು ಪೊಲೀಸರು ಕೈಗೆ ಸಿಕ್ಕಿ ಬಿದಿದ್ದಾರೆ. ನಾಪತ್ತೆಯಾಗಿರುವ ಚಾಮರಾಜನಗರ ತಾಲ್ಲೂಕಿನ ಸಂತೆಮರಳ್ಳಿ ಗ್ರಾಮದ ಮಾದೇಶ್, ಸುಖೇಶ್ ಎಂಬುವವರನ್ನು ಬಂಧಿಸಲು …

Read More »

ಹುಬ್ಬಳ್ಳಿ : ರೈಲ್ವೆ ಹಳಿಯಲ್ಲಿ ಬಿದ್ದ ಕುಸುಗಲ್ ಗ್ರಾಮದ ವೃದ್ಧೆ

ಕುಸುಗಲ್ ನಿಲ್ದಾಣದ ಹತ್ತಿರ ರೈಲ್ವೆ ಹಳಿಯಲ್ಲಿ ಬಿದ್ದಿದ್ದ ವೃದ್ದೆಯನು ರೈಲ್ವೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಹಾಗೂ ರೈಲ್ವೆ ಆಸ್ಪತ್ರೆಗೆ ರವಾನಿಸಿದ್ದಾರೆ ಗಾಯಗೊಂಡ ವೃದ್ಧೆ ಹುಲಿಯಮ್ಮ ಬರದ್ವಾಡ ಎಂಬುವರಾಗಿದ್ದು. ಕುಸುಗಲ್ ಗ್ರಾಮದವರಾಗಿದ್ದಾರೆ. ಈ ವೃದ್ದೆ ಹುಬ್ಬಳ್ಳಿ ಮಾರ್ಗವಾಗಿ ಗದಗ್ ಕಡೆ ಹೊಂಟಿದ್ದ ಪ್ಯಾಸೆಂಜರ್ ರೈಲಿನಿಂದ ಕೆಳಗೆ ಇಳಿಯಲು ಹೋಗಿ ಬಿದ್ದು ಗಾಯಗೊಂಡಿದ್ದಾರೆ.

Read More »

ದಿಶಾ ಸಾಲಿಯಾನ್ ಸಾವು ಪ್ರಕರಣ :

ಸುಶಾಂತ್ ಸಿಂಗ್ ರಜಪೂತ್ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವು ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ದಿಶಾ ಸಾವಿನ ತನಿಖೆಯನ್ನು ಪುನ್ನಂ ಆರಂಭಿಸಲು ದಿಶಾ ಅವರ ತಂದೆ ಸತೀಶ್ ಸಾಲಿಯಾನ್ ಬಾಂಬೆ ಹೈಕೋರ್ಟಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ವಿರುದ್ಧ ಎಫ್ ಐ ಆರ್ ದಾಖಲಿಸಲು ಅವರು ಮನವಿ ಮಾಡಿದ್ದಾರೆ ಪಿಟಿಐ ವರದಿ ಪ್ರಕಾರ ದಿಶಾ ಸಾಲಿಯಾನ್ ತಂದೆ ಸತೀಶ್ ಗಂಭೀರ ಆರೋಪ ಮಾಡಿದ್ದು. ಅವರ …

Read More »

ನಾಪತ್ತೆಯಾಗಿ 5 ದಿನಗಳ ಬಳಿಕ ಚಾವ್ಲಾ ಕಾಲುವೆಯಲ್ಲಿ ಯುವತಿಯ ಶವ ಪತ್ತೆ!

ಐದು ದಿನಗಳ ಬಳಿಕ ದೆಹಲಿಯ ಚಾವ್ಲಾ ಕಾಲುವೆಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಯುವತಿಯನ್ನು ಹಿಸುಕಿ ಕೊಂದು ಆಕೆಯ ದೇಹಕ್ಕೆ ದೊಡ್ಡ ಕಲ್ಲು ಕಟ್ಟಿ ಆಕೆಯ ಸ್ನೇಹಿತನೇ ಎಸೆದಿರುವ ವಿಚಾರ ಬೆಳಕಿಗೆ ಬಂದಿದೆ. ಈಶಾನ್ಯ ದೆಹಲಿಯ ಸೀಮಾಪುರಿಯ ಸುಂದರ್ ನಗರಿ ನಿವಾಸಿ ಕೋಮಲ್ ಅವರನ್ನು ಸ್ನೇಹಿತ ಆಸಿಫ್ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆಸಿಫ್ ನನ್ನು ಬಂಧಿಸಲಾಗಿದ್ದು, ಅಪರಾಧಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಲೆಯಲ್ಲಿ ಬೇರೆ ಯಾರಾದರೂ …

Read More »

ನಾಪತ್ತೆಯಾಗಿದ್ದ 10ನೇ ತರಗತಿ ವಿದ್ಯಾರ್ಥಿಯ ಶವ ಪತ್ತೆ

ಭದ್ರಾ ನದಿಯಲ್ಲಿ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಯನ್ನು ಬಾಳೆಹೊಳೆ ಮೂಲದ ಶ್ರೇಯಸ್ ಎಂದು ಗುರುತಿಸಲಾಗಿದೆ. ಮಾರ್ಚ್ 16 ರಂದು ಯುವಕ ನಾಪತ್ತೆಯಾಗಿದ್ದು. ವಿದ್ಯಾರ್ಥಿ ಶ್ರೇಯಸ್ ಮೃತ ದೇಹ ಇದಿಗ್ ಭದ್ರಾ ನದಿಯಲ್ಲಿ ಪತ್ತೆಯಾಗಿದೆ. ವೃತ್ತ ವಿದ್ಯಾರ್ಥಿ ಹಾಸನ್ ಜಿಲ್ಲೆ ಬೇಲೂರು ಮೊಲದನವನಾಗಿದ್ದು ಕಳಸದಲ್ಲಿ ತನ ಚಿಕ್ಕಮ್ಮನ ಮನೆಯಲ್ಲಿದ್ದು ವ್ಯಾಸಂಗ ಮಾಡುತ್ತಿದ್ದ. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read More »

ಮಂಡ್ಯದವರು ಛತ್ರಿಗಳು ಎಂದ ಡಿಕೆಶಿ ವಿರುದ್ಧ ಸಿಡಿದೆದ್ದ ಮಂಡ್ಯದ ಜನ

ಮಂಡ್ಯದವರು ಛತ್ರಿಗಳು ಎಂಬ ಡಿ ಸಿ ಎಂ ಡಿ ಕೆ ಶಿವಕುಮಾರ್ ಅವರ ಹೇಳಿಕೆಗೆ ಜಿಲ್ಲಾದಂತ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಡಿಕೆಶಿ ನೀಡಿರುವ ಹೇಳಿಕೆ ವಿರುದ್ಧ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಟೀಕೆ ಮಾಡಲಾಗುತ್ತಿದೆ . ಜಿಲ್ಲೆ ಜನರಿಗೆ ಡಿಕೆಶಿ ಅವಮಾನ ಮಾಡಿದ್ದಾರೆ. ಮಂಡ್ಯ ಜನರ ಭಿಕ್ಷೆಯಿಂದ ಕಾಂಗ್ರೆಸ್ಗೆ ಅಧಿಕಾರ ಸಿಕ್ಕಿದೆ. ಇವಳರಲ್ಲಿ ಐದು ಕ್ಷೇತ್ರಗಳು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ ಮಂಡ್ಯದವರ ಸಿಎಂ ಆಗಿದ್ದಾಗ ಅವರ ಕಾಲಿಗೆ ಬಿದ್ದು ಬೆಳೆದವರು …

Read More »

ಕಂಬಕ್ಕೆ ಬೈಕ್ ಡಿಕ್ಕಿ : ಹಸುನಿಗಿದ ಇಬ್ಬರ ಸಹೋದರರು

ರಸ್ತೆ ಬದಿಯ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಹೋದರರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಘಟನೆ ಬೆಂಗಳೂರಿನ ಅಣೆ ಪಾಳ್ಯ ಬಸ್ ನಿಲ್ದಾಣದ ಬಳಿ ನಡೆದಿದೆ. ಘಟನೆ ಇಂದು ಬೆಳಿಗ್ಗೆ 5 ಗಂಟೆ ಜಾವಾ ನಡೆದಿದೆ. ಅತಿ ವೇಗವಾಗಿ ಓಡಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಮೃತ ಸಹೋದರರನ್ನು ನೀಲಸಂಧಿ ನಿವಾಸಿಗಳು ಎಂದು ಗುರುತಿಸಲಾಗಿದೆ. ಇಬ್ಬರು ಹೆಲ್ಮೆಟ್ ಹಾಕದ ಕಾರಣ ಸ್ಥಳದಲ್ಲಿ ಸಾವನಪ್ಪಿದ್ದಾರೆ. ಸ್ಥಳಕ್ಕೆ ಪೋಲಿಸರ ಆಗಮಿಸಿ ಪರಿಶೀಲನೆ …

Read More »

ಚಾಕುವಿನಿಂದ ಬರೆ ಹಾಕಿ ಗುದದ್ವಾರಕ್ಕೆ ಖಾರದಪುಡಿ ಹಾಕಿ ಕ್ರೌರ್ಯ.!

ಕನಕಪುರ ನಗರದ ಮಹಾರಾಜರಕಟ್ಟೆಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಜ್ಯೋತಿ ಬಾಯಿ ಮತ್ತು ರಮೇಶ್ ದಂಪತಿಯ ಪುತ್ರ ದೀಕ್ಷಿತ್ ಎಂಬ ಮಗುವಿನ ಕೈ ಮೇಲೆ ಕಾದ ಚಾಕುವಿನಿಂದ ಬರೆ ಹಾಕಿದ್ದಲ್ಲದೆ ಗುದದ್ವಾರಕ್ಕೆ ಖಾರದಪುಡಿ ಹಾಕಿದ್ದಾಳೆ.ತಮ್ಮ ಮನೆಯಲ್ಲಿನ ಒತ್ತಡದಿಂದ ಮಗುವಿಗೆ ಈ ರೀತಿ ಮಾಡಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಅಂಗನವಾಡಿ ಸಹಾಯಕಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Read More »