Breaking News

Crime

ಒಂದೇ ಒಂದು ಫೋನ್ ಕರೆ, ಖಾತೆಯಿಂದ 1.4 ಕೋಟಿ ರೂ. ಮಾಯ!!

ನಿವೃತ್ತ ಅಧಿಕಾರಿಗೆ ಕರೆ ಮಾಡಿದ ವ್ಯಕ್ತಿ ತನ್ನನ್ನು ಅಲೋಕ್ ಮೆಹ್ತಾ ಎಂದು ಪರಿಚಯಿಸಿಕೊಂಡು ದೆಹಲಿಯ ಇಪಿಎಫ್‌ಒ ಕಚೇರಿಯಲ್ಲಿ ಅಧಿಕಾರಿ ಎಂದು ಹೇಳಿಕೊಂಡ. ಸಂತ್ರಸ್ತೆಯ ಪಿಎಫ್‌’ನಲ್ಲಿ 63 ಲಕ್ಷ ರೂ.ಗಳಿಗೂ ಹೆಚ್ಚು ಹಣ ಸಿಲುಕಿಕೊಂಡಿದೆ, ಆದರೆ ಅದನ್ನು ಬಿಡುಗಡೆ ಮಾಡಲು 7,230 ರೂ.ಗಳ “ಭದ್ರತಾ ಶುಲ್ಕ” ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಅಧಿಕಾರಿ ಮೊತ್ತವನ್ನ ಕಳುಹಿಸಿದಾಗ, ಅವರು ವಾಟ್ಸಾಪ್‌’ನಲ್ಲಿ ಸರ್ಕಾರಿ ಮುದ್ರೆಯೊಂದಿಗೆ ನಕಲಿ ದಾಖಲೆಗಳನ್ನ ಕಳುಹಿಸಿದರು. ದಾಖಲೆಯ ಮೇಲಿನ ಮುದ್ರೆಯು ನಿಜವಾದಂತೆ …

Read More »

ಮಂಡ್ಯ: ಹೋಟೆಲ್‌ನಲ್ಲಿ ನಾಯಿ ಮಾಂಸದ ಆರೋಪ!!

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿರುವ ಮದೀನಾ ಎಂಬ ಚಿಕ್ಕ ಹೋಟೆಲ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಈ ಹೋಟೆಲ್‌ನಲ್ಲಿ ನಾನ್-ವೆಜ್ ಅಡುಗೆಯಲ್ಲಿ ನಾಯಿ ಮಾಂಸವನ್ನು ಬೆರೆಸಿ ಗ್ರಾಹಕರಿಗೆ ಬಡಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಗ್ರಾಹಕರು ತಿಂದ ಬಿರಿಯಾನಿಯಲ್ಲಿ ಮಾಂಸದ ರುಚಿಯಲ್ಲಿ ವ್ಯತ್ಯಾಸ ಕಂಡು ಶಂಕೆ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಜನರು ಆಕ್ರೋಶಗೊಂಡಿದ್ದಾರೆ.ಘಟನೆಯ ಸುದ್ದಿ ತಿಳಿದು ಪಾಂಡವಪುರ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಆರೋಪಿ …

Read More »

4.79 ಕೋಟಿ ರೂ. ದೋಖಾ, ಇಬ್ಬರು ಸೈಬರ್‌ ವಂಚಕರ ಬಂಧನ!!

ಎಂಜಿನಿಯರ್‌ ಮಂಜುನಾಥ್‌ ಎಂಬುವವರು ಆಫ್ರಿಕಾದ ನೈಜೀರಿಯಾದಲ್ಲಿ ಸತತ 31 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ವಾಪಸ್‌‍ ಬೆಂಗಳೂರಿಗೆ ಬಂದು ಪತ್ನಿ ಜೊತೆ ಬಿಟಿಎಂ ಲೇಔಟ್‌ನಲ್ಲಿ ನೆಲೆಸಿದ್ದಾರೆ. ಇವರಿಗೆ ಕಳೆದ ಮಾರ್ಚ್‌ನಲ್ಲಿ ಬ್ಯಾಂಕ್‌ ಪ್ರತಿನಿಧಿ ಸೋಗಿನಲ್ಲಿ ಕರೆ ಮಾಡಿದ ವಂಚಕರು ನಿಮ ಕ್ರೇಡಿಟ್‌ ಕಾರ್ಡ್‌ ಲಿಮಿಟ್‌್ಸ ಓವರ್‌ ಡ್ಯೂ ಆಗಿದೆ ಎಂದು ನಂಬಿಸಿ ಅವರ ಬ್ಯಾಂಕ್‌ನ ವಿವರಗಳನ್ನು ಪಡೆದುಕೊಂಡಿದ್ದಾರೆ.ತದ ನಂತರ ನಿಮ ಖಾತೆಯ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ, …

Read More »

ಮೈಸೂರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಮ್ಮ-ಮಗಳ ಶವ ಪತ್ತೆ!!

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೊತ್ತನಹಳ್ಳಿ ಎಂಬ ಗ್ರಾಮದಲ್ಲಿ ತಾಯಿ ಮಗಳ ಶವ ಪತ್ತೆಯಾಗಿದೆ. ಪತಿ ಜಯರಾಮು ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದ್ದು, ಪತಿ ಜಯರಾಮು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಪತಿ ಜಯರಾಮು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಹಾಗಾಗಿ ಪತ್ನಿ ಮಹಾದೇವಮ್ಮ ಪತಿ ವಿರುದ್ಧ ಹಲವು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. …

Read More »

ಲಕ್ಷ ಲಕ್ಷ ಬೆಲೆ ಬಾಳು ಜಾನುವಾರು ಖದಿಯುತ್ತಿದ್ದ ಆರೋಪಿಗಳು ಅಂದರ್!!

ಮಧ್ಯರಾತ್ರಿ ಸಮಯ ಊರೆಲ್ಲ ಮಲಗಿರುವಾಗಲೆ ರಾಜಾರೋಷವಾಗಿ ಗೂಡ್ಸ್ ವಾಹನದಲ್ಲಿ ಬಂದಿರುವ ಖದೀಮರು ಕ್ಷಣ ಮಾತ್ರದಲ್ಲೆ ಶೆಡ್ ನ ಬೀಗ ಹೊಡೆದು ಲಕ್ಷ ಲಕ್ಷ ಬೆಲೆ ಬಾಳುವ ಹಂದಿ ಮತ್ತು ಕುರಿಗಳನ್ನ ಖದ್ದು ಎಸ್ಕೇಪ್ ಆಗಿದ್ರು. ಅಲ್ಲದೆ ಎಸ್ಕೇಪ್ ಆಗುವ ವೇಳೆ ಗೇಟ್ ನ ಮುಂಬಾದ ಸಿಸಿ ಕ್ಯಾಮರಾ ಮುಂದೆಯೆ ಚಡ್ಡಿ ಅಲ್ಲಾಡಿಸಿ ಚಕಮ್ ನೀಡಿದ್ದು ಇದೀಗ ಈ ರೀತಿ ಕಳ್ಳತನ ಮಾಡಿದ್ದ ಅಂಬರೀಶ್, ಶೇಖಪ್ಪ, ಮತ್ತು ಯಲ್ಲಪ್ಪ ಅನ್ನೂ ಮೂವರು …

Read More »

ಲಿವಿಂಗ್ ಸಂಬಂಧದಲ್ಲಿದ್ದ ಪ್ರಿಯತಮೆಯನ್ನೇ ಕೊಂದು ಸುಟ್ಟು ಹಾಕಿದ ಪ್ರಿಯತಮ!!

ದೇವಿಭಾಯಿ ಹಾಗೂ ಸೋಮುಲು ಲಿವಿಂಗ್ ರಿಲೇಷನ್ ಶಿಪ್ ನಲ್ಲಿ ಇದ್ದರು. ತನ್ನ ಮಗಳ ಮದುವೆ ವಿಚಾರವಾಗಿ ದೇವಿಭಾಯಿ ಸೋಮುಲು ಜೊತೆ ಆಗಾಗ ಜಗಳವಾಡುತ್ತಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಸೋಮುಲು ದೇವಿಭಾಯಿಯನ್ನು ಊರಿಗೆ ಬಿಟ್ತುಬರುತ್ತೇನೆ ಎಂದು ಕಾರಿನಲ್ಲಿ ಕರೆದೊಯ್ದವನು ಆಕೆಯನ್ನು ಹತ್ಯೆ ಮಾಡಿದ್ದಾನೆ.ಬಳಿಕ 10 ಗಂಟೆಗಳ ಕಾಲ ಕಾರಿನಲ್ಲಿಯೇ ಶವ ಇಟ್ಟುಕೊಂಡು ಓಡಾಡಿದ್ದಾನೆ. ಇದಕ್ಕೆ ಇನ್ನೋರ್ವ ಆರೋಪಿ ಕೂಡ ಸಾಥ್ ನೀಡಿದ್ದಾನೆ. ಸಾಕ್ಷ್ಯ ನಾಶಕ್ಕೆ ಲಾಡ್ಲಾಪುರ ನಿರ್ಜನ ಪ್ರದೇಶದಲ್ಲಿ …

Read More »

ಕೋಲಾರ: ಭೀಕರ ರಸ್ತೆ ಅಪಘಾತ 5 ಸಾವು!!

ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.ಕಾರಿನಲ್ಲಿದ್ದ ತಮಿಳರಸನ್, ನಾಗರಾಜು ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ರಾಜಾಸ್ಥಾನ ಮೂಲದ ಅಶೋಕ್ (28) ಮತ್ತು ಮೋಹನ್ ಲಾಲ್(32) ಮೃತಪಟ್ಟವರು. ಇವರು ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಮಾಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

Read More »

ಕಲಬುರ್ಗಿ: ಮಹಿಳೆಯೊಬ್ಬರ ಭೀಕರ ಕೊಲೆ!!

ಹೋಟೆಲ್ ವೊಂದರಲ್ಲಿ ಸಮೋಸ ಮಾಡಲು ತೆರಳುವಾಗ ಯಾರೋ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.ಜಿಲ್ಲೆಯ ಕಲ್ಲಹಂಗರಗಾ ಗ್ರಾಮ ಮೂಲದ ಶಹಾಬಜಾರ್ ಬಡಾವಣೆ ನಿವಾಸಿ ರೂಪಾ (32) ಕೊ*ಲೆಯಾದ ಮಹಿಳೆ.ಅನೈತಿಕ ಸಂಬಂಧದ ಹಿನ್ನಲೆ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಎಸಿಪಿ ಚಂದ್ರಶೇಖರ್ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿದ್ದ ₹50 ಸಾವಿರ ಮೌಲ್ಯದ ಚಿನ್ನದ ಸರ ಕಳವು!!

ಮಡಿಕೇರಿಯ ಸವಿತಾ ಅವರು ಮಡಿಕೇರಿ ಹೋಗುವ ಬಸ್‌ಗೆ ಹತ್ತುತ್ತಿದ್ದು, ಬಸ್ ರಷ್ ಇದ್ದುದ್ದರಿಂದ ಆ ಬಸ್ ಅನ್ನು ಬಿಟ್ಟು ವಾಪಸ್ ಬಂದಿದ್ದರು. ಆ ಸಮಯದಲ್ಲಿ ಬ್ಯಾಗ್‌ನಲ್ಲಿ ಇಟ್ಟಿದ್ದ ₹50 ಸಾವಿರ ಮೌಲ್ಯದ 17 ಗ್ರಾಂ ಚಿನ್ನದ ಸರ ಕಳವಾಗಿದೆ. ಹಾಸನದ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಳವು!!

ಅರಸೀಕೆರೆಯಿಂದ ಗಂಡಸಿಗೆ ತೆರಳುವ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಳವು ಮಾಡಲಾಗಿದೆ.ಬಸ್‌ ಸ್ವಲ್ಪ ಮುಂದೆ ಹೋದಾಗ ಅವರ ಕುತ್ತಿಗೆಯಲ್ಲಿದ್ದ ಸುಮಾರು ₹1.68 ಲಕ್ಷ ಮೌಲ್ಯದ 35 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳವಾಗಿದೆ. ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »