Breaking News

Crime

ಆನೇಕಲ್ :ಸ್ಫೋಟಕ್ಕೆ ಕಾಂಕ್ರೆಟ್ ರಸ್ತೆ ಛಿದ್ರ ಛಿದ್ರ, ಬೆಂಕಿ ಕಂಡು ಬೆಚ್ಚಿಬಿದ್ದಿದ್ದ ಸ್ಥಳೀಯರು!!

ನಿಗೂಢ ಸ್ಫೋಟಕ್ಕೆ ಕಾಂಕ್ರೆಟ್ ರಸ್ತೆ ಛಿದ್ರ ಛಿದ್ರ ವಾಗಿರುವ ಘಟನೆ ಆನೇಕಲ್ ತಾಲೂಕಿನ ಚಂದಾಪುರ ಸಮೀಪ ದ ಬನಹಳ್ಳಿಯಲ್ಲಿ ನಡೆದಿದೆ. ಸ್ಪೋಟದ ಜೊತೆಗೆ ಬೆಂಕಿ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದು, ಸ್ಪೋಟದ ತೀವ್ರತೆಗೆ ಸಿಮೆಂಟ್ ಕಾಂಕ್ರೀಟ್ ರಸ್ತೆ ಛಿದ್ರ ಛಿದ್ರವಾಗಿದೆ.ಮನೆಯ ಹೊರಗಡೆ ಕುಳಿತ್ತಿದ್ದರು ಆತಂಕದಿಂದ ಮನೆಗಳ ಒಳಗೆ ಓಡಿ ಹೋಗಿದ್ದಾರೆ. ಸ್ಫೋಟಕ್ಕೂ ಕೆಲ ಕ್ಷಣದ ಮೊದಲು ವಾಟರ್ ಟ್ಯಾಂಕರ್ ಒಂದು ಆ ರಸ್ತೆಯಲ್ಲಿ ಹಾದು ಹೋಗಿತ್ತು. ಟ್ಯಾಂಕರ್ ಮುಂದಕ್ಕೆ ಸಾಗುತ್ತಿದ್ದಂತೆಯೇ ಭಾರಿ …

Read More »

ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿ, ಭಾರೀ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆ!!

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕೋಡಿಹಳ್ಳಿ ಸಮೀಪ ರಸ್ತೆ ತಿರುವಿನಲ್ಲಿಯೇ ಟ್ಯಾಂಕರ್ ಪಲ್ಟಿಯಾಗಿ ಅಡ್ಡಲಾಗಿ ಬಿದ್ದಿದೆ.ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು, ತರೀಕೆರೆ ಉಪ ವಿಭಾಗಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಗ್ಯಾಸ್ ಸೋರಿಕೆಯನ್ನು ತಡೆಗಟ್ಟಲು ಸಿಬ್ಬಂದಿ ಹರಸಾಹಸ ನಡೆಸಿದ್ದಾರೆ. ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಟ್ಯಾಂಕರ್ ಪಲ್ಟಿಯಾಗಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

Read More »

ಶ್ರೀನಗರ :ಭಯೋತ್ಪಾದಕರ ಜೊತೆ ನಂಟು ಹೊಂದಿದ ಇಬ್ಬರು ಅರೆಸ್ಟ್, ಪಿಸ್ತುಲ್ ಸೇರಿದಂತೆ ಸ್ಪೋಟಕ ವಸ್ತುಗಳು ವಶ!

ಜಮ್ಮು ಕಾಶ್ಮೀರದ ಬುದ್ಗಾಂ ಜಿಲ್ಲೆಯಲ್ಲಿ ಭಯೋತ್ಪಾದಕರ ಜೊತೆ ನಂಟು ಹೊಂದಿದ್ದ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರ ಬಳಿ ಇದ್ದ 1 ಪಿಸ್ತೂರ್, 1 ಗ್ರೇನೆಡ್ ಹಾಗು ಅಪಾರ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಇನ್ನು ಜಮ್ಮು ಕಾಶ್ಮೀರದ ಪಹಲ್ಗಾಂ ನಲ್ಲಿ ಕಳೆದ ಏಪ್ರಿಲ್ 22ರಂದು ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಕನ್ನಡಿಗರು ಸೇರಿ 26 ಜನ ಅಮಾಯಕರು ಬಲಿಯಾಗಿದ್ದರು. ಇದೀಗ ಘಟನೆ ನಡೆದ ಸ್ಥಳದಲ್ಲಿ ಬುಲೆಟ್ …

Read More »

ಬೆಂಗಳೂರು : ರೌಡಿ ಸೇರಿ ನಾಲ್ವರ ಬಂಧನ : 90 ಲಕ್ಷ ರೂ.ಬೆಲೆಯ ಗಾಂಜಾ ಜಪ್ತಿ!!

ಪೊಲೀಸರು ರೌಡಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂ ಸಿ 90 ಲಕ್ಷ ರೂ. ಬೆಲೆಯ ಗಾಂಜಾ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್‌.ಎಸ್‌.ಆರ್‌ ಲೇಔಟ್‌ ಪೊಲೀಸ್‌ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ಬಂ ಸಿ 60 ಲಕ್ಷ ರೂ.ವೌಲ್ಯದ ಗಾಂಜಾ,ಗೂಡ್‌್ಸ ವಾಹನ ವಶಪಡಿಸಿಕೊಂಡರೆ, ಗೋವಿಂದರಾಜನಗರ ಠಾಣೆ ಪೊಲೀಸರು ರೌಡಿಯನ್ನು ಬಂ ಸಿ 25 ಲಕ್ಷ ವೌಲ್ಯದ ಗಾಂಜಾ ಜಪ್ತಿಪಡಿಸಿಕೊಂಡಿದ್ದು,ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂ ಸಿ 4.20 ಲಕ್ಷ ರೂ.ವೌಲ್ಯದ ಗಾಂಜಾ,ಮೊಬೈಲ್‌ ಹಾಗೂ …

Read More »

ಬೆಂಗಳೂರು: ಚಿಕ್ಕಪ್ಪನ ಲಾಕರ್‌ನಿಂದ ಚಿನ್ನ ಕಳವು; ಆರೋಪಿಯ ಬಂಧನ!!

ತಾಯಿಯ ಸಹೋದರಿಯ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿ, 258 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿ ಪ್ರಥಮ್ ಎಂಬಾತನನ್ನು ಬಂಧಿಸಿದ್ದು, 24.51 ಲಕ್ಷ ಮೌಲ್ಯದ ಆಭರಣ ವಶಪಡಿಸಿಕೊಳ್ಳಲಾಗಿದೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಗಿರಿನಗರ ಪೊಲೀಸರು, ಮನೆಗೆಲಸದವರನ್ನು ವಿಚಾರಿಸಿದರು. ನಂತರ ಪ್ರಥಮ್, ಮನೆಗೆ ಬಂದು ಹೋಗಿರುವ ವಿಷಯ ಗೊತ್ತಾಯಿತು. ಚೆನ್ನೈನಲ್ಲಿದ್ದ ಪ್ರಥಮ್‌ನ ಬ್ಯಾಂಕ್ ವಹಿವಾಟಿನ ಮಾಹಿತಿ ಕಲೆಹಾಕಿದಾಗ ಹಣ ವರ್ಗಾವಣೆ ಆಗಿರುವುದು ಗೊತ್ತಾಯಿತು. ಆರೋಪಿಯನ್ನು ವಶಕ್ಕೆ ಪಡೆದು …

Read More »

ಲಕ್ಷ್ಮೇಶ್ವರ :ಮಹಿಳೆ ಕೊಲೆ ಮಾಡಿದ ಆರೋಪಿಗಳ ಬಂಧನ!!

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಬಯಲು ಬಸವಣ್ಣ ದೇವರ ದೇವಸ್ಥಾನದ ಬಳಿ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಎಸೆದಿದ್ದ ಆರೋಪಿಗಳನ್ನು ಲಕ್ಷೇಶ್ವರದ ಪೊಲೀಸರು ಪತ್ತೆ ಹಚ್ಚಿ, ಘಟನೆಯಲ್ಲಿ ಆರೋಪಿಗಳು ಬಳಸಿದ್ದ ಕಾರು ಹಾಗೂ ಬೈಕ್‌ನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿಗಳ ಪತ್ತೆ ಕಾರ್ಯಕ್ಕಿಳಿದ ಪೊಲೀಸರು ಸುನೀಲ್ ಅಶೋಕ ಮಲ್ಲಾರಿ. ಸಿದ್ದಪ್ಪ ನಾಗಪ್ಪ ಕುಬಸದ, ನಟರಾಜ ಈರಪ್ಪ ನಿರಲಗಿ ಹಾಗೂ ರಮೇಶ ಉರ್ಫ್ ಮುತ್ತುರಾಜ ದೇವಪ್ಪ ತಳವಾರ ಎಂಬುವವರನ್ನು ಬಂಧಿಸಿದ್ದಾರೆ. ಅತಿ ಕಡಿಮೆ …

Read More »

ಕುನ್ನಳ್ಳಿ: ಹುಲಿ ದಾಳಿಗೆ ಹಸು ಬಲಿ, ಕಳೆಬರ ಪತ್ತೆ!!

ಕುನ್ನಹಳ್ಳಿ ಗ್ರಾಮದ ಕೃಷಿಕ ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್. ಶಿವಾನಂದ ಅವರ ಭತ್ತದ ಗದ್ದೆಯಲ್ಲಿ ಸೋಮವಾರ ಹಸುವಿನ ಕಳೇಬರ ಪತ್ತೆಯಾಗಿತ್ತು.ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದೆ.ಸ್ಥಳದಲ್ಲಿ ಅರಣ್ಯ ಇಲಾಖೆ ವತಿಯಿಂದ ಕ್ಯಾಮೆರಾ ಅಳವಡಿಸಲಾಗಿದ್ದು, ಹುಲಿಯ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಲು ಪ್ರಯತ್ನಿಸಲಾಗುತ್ತಿದೆ. ಮೂಡಿಗೆರೆ ಆರ್ ಎಫ್‌ಒ ಕಾವ್ಯಾ, ಸಹಾಯಕ ಆರ್‌ಎಫ್‌ಒ ಅಶ್ವತ್ಥ್‌, ಬೀಟ್ ಫಾರೆಸ್ಟ್ ಸುಮಂತ್, ಶಿವಶಂಕರ್, ಗ್ರಾಮದ ಮುಖಂಡ ರವಿ ಕುನ್ನಹಳ್ಳಿ ಮತ್ತಿತರರು ಇದ್ದರು.ಅರಣ್ಯ …

Read More »

ಕಾಸರಗೋಡು :ಲಾರಿ ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸವಾರ ಸಾವು!!

ಲಾರಿ ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ ತೂಮಿನಾಡು ಎಂಬಲ್ಲಿ ನಡೆದಿದೆ.ಇವರು ಉಪ್ಪಳದಿಂದ ಕೆ.ಸಿ ರೋಡ್ ನ ಪೇಪರ್ ಮಿಲ್ ಗೆ ಕೆಲಸಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಅಪಘಾತದ ತೀವ್ರತೆಗೆ ಕಲ್ಲೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ಚಿತ್ರದುರ್ಗ: ಕೆರೆಯಲ್ಲಿ ಕುರಿ ತೊಳೆಯಲು ತೆರಳಿದ್ದ ದಂಪತಿಗಳು ನೀರುಪಾಲು!!

ಕೆರೆಯಲ್ಲಿ ಕುರಿ ತೊಳೆಯಲು ತೆರಳಿದ್ದ ದಂಪತಿಗಳು ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ದುರ್ಗ ತಾಲೂಕಿನ ಕಾನೆಹಳ್ಳದಲ್ಲಿ ನಡೆದಿದೆ.ಅತ್ತಿಮಗೆ ಗ್ರಾಮದ ತಿಮ್ಮಯ್ಯ (35) ಮತ್ತು ಪುಟ್ಟಮ್ಮ (32) ನೀರು ಪಾಲಾಗಿದ್ದಾರೆ. ಪತ್ನಿ ಪುಟ್ಟಮ್ಮಳ ಶವ ಪತ್ತೆಯಾಗಿದ್ದು, ಪತಿ ತಿಮ್ಮಯ್ಯ ಶವಕ್ಕಾಗಿ ಇದೀಗ ಅಗ್ನಿಶಾಮಕ ದಳ ಸಿಬ್ಬಂದಿಗಳು ಹುಡುಕಾಟ ನಡೆಸುತ್ತಿದ್ದಾರೆ.ಘಟನೆ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ತುಮಕೂರು :ಮನೆಮುಂದೆ ಆಟವಾಡ್ತಿದ್ದ ಮಗು ಕರೆಂಟ್ ವೈರ್ ತುಳಿದು ಸಾವು..!

ತುಮಕೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಮನೆ ಮುಂದಿನ ವಿದುತ್‌ ತಂತಿ ಸ್ಪರ್ಶಿಸಿ 5 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋರಘಟ್ಟದಲ್ಲಿ ಮನೆ ಮುಂದಿನ ತಂತಿ ಬೇಲಿ ವಿದ್ಯುತ್‌ ತಂತಿ ಬಿದ್ದಿತ್ತು. ಬಾಲಕ ತಂತಿ ಬೇಲಿ ಮುಟ್ಟಿದ್ದು, ಈ ವೇಳೆ ಕರೆಂಟ್ ಶಾಕ್ ನಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಘಟನೆಗೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದ್ದು, ದಂಡಿಶಿವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Read More »