Breaking News

ಅಪರಾಧ

ರಮೇಶ್ ಜಾರಕಿಹೊಳಿಯನ್ನು ಅರೆಸ್ಟ್ ಮಾಡದಂತೆ ಹೈಕೋರ್ಟ್ ಸೂಚನೆ‌

ಮಾರ್ಚ್‌ 15: ಅಪೆಕ್ಸ್ ಬ್ಯಾಂಕ್​ಗೆ ಸಾಲ ಪಾವತಿಸದೆ ಸಹಕಾರಿ ಬ್ಯಾಂಕ್ ಗೆ ವಂಚನೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಿಐಡಿ ತನಿಖೆಗೆ ಸಹಕರಿಸುವಂತೆ ಹೈಕೋರ್ಟ್ ಸೂಚಿಸಿದೆ.ಲೋಕಸಭಾ ಚುನಾವಣೆಯ ತಯಾರಿ ಒಂದು ಕಡೆಯಾದ್ರೆ, ಇತ್ತ ತಮ್ಮ ತಮ್ಮ ವಿರುದ್ಧ ದಾಖಲಾಗಿರುವ ಸಹಕಾರಿ ಬ್ಯಾಂಕ್​ಗೆ ವಂಚನೆ ಪ್ರಕರಣವನ್ನು ರದ್ದುಕೋರಿ ಮಾಜಿ ಸಚಿವ ಹಾಗೂ ಗೋಕಾಕ್‌ ಸಾಹುಕಾರ್‌ ರಮೇಶ್ ಜಾರಕಿಹೊಳಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದ್ದು, ಈ ವೇಳೆ ಸರ್ಕಾರದ …

Read More »

ಬೆಂಗಳೂರಿನ ಕೆಫೆ ಸ್ಫೋಟ ಪ್ರಕರಣ: ಶಂಕಿತ ಆರೋಪಿಗಾಗಿ ಅವಳಿನಗರದಲ್ಲಿ ಹುಡುಕಾಟ..!

ಹುಬ್ಬಳ್ಳಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತ ಆರೋಪಿಗಾಗಿ ರಾಷ್ಟ್ರೀಯ ತನಿಖಾ ದಳದ (ಐಎನ್‌ಐ) ಸಿಬ್ಬಂದಿ ಹುಬ್ಬಳ್ಳಿ-ಧಾರವಾಡದಲ್ಲೂ ಶೋಧ ಕಾರ್ಯ ಕೈಗೊಂಡಿದೆ.ಶಂಕಿತ ಆರೋಪಿ ಬಳ್ಳಾರಿ, ಕಲಬುರಗಿ, ಹೊಸಪೇಟೆ ಸುತ್ತಾಡಿದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಐಎನ್‌ಐ ಸಿಬ್ಬಂದಿ ಅಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು ಶಂಕಿತ ಓಡಾಡಿದ ಸ್ಥಳಗಳನ್ನು ಗುರುತಿಸಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ, ಬಾಂಬ್‌ ಇಟ್ಟ ಆರೋಪಿ ಪತ್ತೆಯಾಗದ ಕಾರಣ ಐಎನ್‌ಐ ರಾಜ್ಯದಾದ್ಯಂತ ಸಿಸಿಟಿವಿ ಕ್ಯಾಮೆರಾ ಪರಿಶೀಲನೆಗೆ ಸೂಚಿಸಿದೆ …

Read More »

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ: ದೆಹಲಿಯಲ್ಲಿ ಬಿಗಿ ಭದ್ರತೆ..

ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿ ಸಂಬಂಧ ಅಧಿಸೂಚನೆ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಹಲವು ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈಶಾನ್ಯ ದೆಹಲಿಯ ಶಾಹೀನ್ ಬಾಗ್, ಜಾಮಿಯಾ ನಗರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿ ಗಸ್ತು ತಿರುಗುವ ಮೂಲಕ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆಗೆ (ಸಿಎಎ) ಸಂಸತ್ತು 2019ರ ಡಿಸೆಂಬರ್‌ 11ರಂದು ಅಂಗೀಕಾರ ನೀಡಿತ್ತು. ಅದಕ್ಕೆ ರಾಷ್ಟ್ರಪತಿಯವರು ಮಾರನೆಯ ದಿನವೇ ಅಂಕಿತ ಹಾಕಿದ್ದರು. …

Read More »

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ರನ್ ಕಾರ್ಯಕ್ರಮ: ಚಾಲನೆ ನೀಡಿದ ಸಿಎಂ..

ಬೆಂಗಳೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಪೊಲೀಸ್ ರನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೃಹ ಸಚಿವ ಡಾ.ಜಿ. ಪರಮೇಶ್ವರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ ಗೋವಿಂದರಾಜು ಹಾಗೂ ನಸೀರ್ ಅಹ್ಮದ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Read More »

ವರದಕ್ಷಿಣೆ ಕಾಯ್ದೆ ಬಗ್ಗೆ ನಿಮಗೆಷ್ಟು ಗೊತ್ತು…? 15,000 ವರೆಗೆ ದಂಡ ಮತ್ತು 5 ವರ್ಷಗಳವರೆಗೆ ಜೈಲು…

ವರದಕ್ಷಿಣೆ ಕಾನೂನಿನ ಅರ್ಥವನ್ನು ಮೊದಲು ವರದಕ್ಷಿಣೆ ನಿಷೇಧ ಕಾಯಿದೆ 1961 ರ ಅಡಿಯಲ್ಲಿ ಪರಿಚಯಿಸಲಾಯಿತು. ವರದಕ್ಷಿಣೆ ಕಿರುಕುಳ ಹಾಗೂ ವರದಕ್ಷಿಣೆ ಪದ್ಧತಿಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಕಾನೂನುನನ್ನು ಪರಿಚಯಿಸಲಾಗಿದೆ. ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ನೀಡುವುದು ಸೆಕ್ಷನ್‌ 3 ರ ಅಡಿಯಲ್ಲಿ ಅಪರಾಧವಾಗಿದೆ. ಇದಕ್ಕೆ 15,000 ವರೆಗೆ ದಂಡ ಮತ್ತು 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು.

Read More »

Rameshwara cafeಯಲ್ಲಿ ಸ್ಪೋಟಕ್ಕೂ ಮುನ್ನ ಖತರ್ನಾಕ್ ಐಡಿಯಾ ಮಾಡಿದ್ದ ಆರೋಪಿ!ಸುಳಿವು ಸಿಗದಂತೆ ಭಾರೀ ತಯಾರಿ ನಡೆಸಿದ್ದ ಬಾಂಬರ್..

ಬೆಂಗಳೂರು ಕಳೆದ ವಾರ ಬೆಂಗಳೂರು ಬ್ರೂಕ್ಫೀಲ್ಡ್ ಪ್ರದೇಶದಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದೆಯಾದರೂ ಐಈಡಿ ಬಾಂಬನ್ನು ಟೈಮರ್ ಮೂಲಕ ಸಿಡಿಸಿದ ಶಂಕಿತನ ಸುಳಿವು ತನಿಖಾ ಏಜೆನ್ಸಿಗಳಿಗೆ ಇದುವರೆಗೆ ಸಿಕ್ಕಿಲ್ಲ. ಎನ್‌ಐಎ ಅಧಿಕಾರಿಗಳು ಅವನನ್ನು ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿದ್ದು, ತುಮಕೂರು ಮತ್ತು ಬಳ್ಳಾರಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಅವರಿಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಶಂಕಿತನು ಬಾಂಬ್ ಸ್ಫೋಟಿಸಿದ ಬಳಿಕ ಬೆಂಗಳೂರುನಿಂದ ತುಮಕೂರುಗೆ ಹೋಗಿದ್ದಾನೆ ಮತ್ತು …

Read More »
Featured Video Play Icon

ಮಿಸ್ ಮಾಡದೇ ನೋಡಿ, ಮರ್ಯಾದೆ ತೆಗೆಯತ್ತಿದೆ ನಾಚಿಕೆಗೇಡಿನ ದಂಧೆ..!

ವೇಶಾವಾಟಿಕೆಯ ಕರಾಳ ದಂಧೆ ಬಯಲಿಗೆ: ಬಿಗ್ ಟಿವಿಯ ಸ್ಪೋಟಕ ಮಾಹಿತಿ ಹುಬ್ಬಳ್ಳಿ: ಪ್ರೀಯ ವೀಕ್ಷಕರೇ ಆಗಲೇ ಹೇಳಿದ ಹಾಗೆಯೇ ಈಗ ನಿಮ್ಮ ಬಿಗ್ ಟಿವಿ ಎಕ್ಸಕ್ಲೂಸಿವ್ ಮಾಹಿತಿಯನ್ನು ಬಯಲಿಗೆ ತರುತ್ತಿದೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ದಂಧೆಯ ಪಿನ್ ಟು ಪಿನ್ ಕಹಾನಿ ಇಲ್ಲಿದೆ.. ಅವಳಿ ನಗರದ ಈ ವರ್ಷದ ಅತೀ ದೊಡ್ಡ ಸ್ಟಿಂಗ್ ಆಪರೇಷನ್ ಈ ಸುದ್ದಿ ನೋಡಿದ್ರೆ ಯಾರೇ ಆಗ್ಲಿ ಹಿಡಿ ಶಾಪ ಹಾಕೋದು ಗ್ಯಾರಂಟಿ ಮರ್ಯಾದಸ್ತ ಕುಟುಂಬ ಇಂತಹ …

Read More »

ಅವಳಿ ನಗರದ ಈ ವರ್ಷದ ಅತೀ ದೊಡ್ಡ ಸ್ಟಿಂಗ್ ಆಪರೇಷನ್… Don’t miss 5.30

ಬಿಗ್ ಎಕ್ಸಪೋಸ್… ಅವಳಿ ನಗರದ ಈ ವರ್ಷದ ಅತೀ ದೊಡ್ಡ ಸ್ಟಿಂಗ್ ಆಪರೇಷನ್… ತಲೆಹಿಡುಕ ಕಿರಾತಕರ ಕರಾಳ ಮುಖ ನಿಮ್ಮ ಮುಂದೆ ಅನಾವರಣ ನಿಮ್ಮ ಬಿಗ್ ಟಿವಿ ನ್ಯೂಸ್ ಕನ್ನಡದಲ್ಲಿ..Don’t miss Exclusive on Big tv news

Read More »

ರಾಮೇಶ್ವರಂ ಕೆಫೆ ‘ಬಾಂಬ್ ಬ್ಲಾಸ್ಟ್ ಪ್ರಕರಣ’ SIT ತನಿಖೆಗೆ ; ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ..

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಇಂದು ಎಸ್ ಐ ಟಿಗೆ ನೀಡುವ ಸಾಧ್ಯತೆಯಿದ್ದು, ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಇಂದು ಮಧ್ಯಾಹ್ನ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಉನ್ನತ ಮಟ್ಟದ ಸಭೆ ನಡೆಸಲಿದ್ದು, ಸಭೆ ಬಳಿಕ ಪ್ರಕರಣವನ್ನು ಎಸ್ ಐಟಿಗೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಗಾಯಗೊಂಡವರು ನಗರದ ಬ್ರೂಕ್ ಫೀಲ್ಡ್ ಆಸ್ಪತ್ರೆಗೆ ದಾಖಲಾಗಿದ್ದು, …

Read More »

Rameshwaram Café: ಹೇಗಾಯ್ತು ಸ್ಫೋಟ..? ಭಯಾನಕ ಸಿಸಿಟಿವಿ ದೃಶ್ಯ ನೋಡಿ..

ಬೆಂಗಳೂರು: ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ (Rameshwaram Café) ನಡೆದ ಸ್ಫೋಟದ್ದು ಎನ್ನಲಾದ ಸಿಸಿಟಿವಿ ದೃಶ್ಯವೊಂದು (CCTV Footage) ನ್ಯೂಸ್ 18ಗೆ ಲಭ್ಯವಾಗಿದೆ. ಸಿಸಿಟಿವಿ ದೃಶ್ಯದ ಪ್ರಕಾರ ಘಟನೆ ನಿಖರವಾಗಿ ಮಧ್ಯಾಹ್ನ 12.55ಕ್ಕೆ ನಡೆದಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಖ್ಯಮಂತ್ರಿಗಳು ಸಹ ಸುಧಾರಿತ ಸ್ಫೋಟಕ ಬ್ಲಾಸ್ಟ್ ಆಗಿರೋದನ್ನು ಖಚಿತಪಡಿಸಿದ್ದಾರೆ. ಸ್ಫೋಟದಿಂದ ಇಡೀ ರಾಮೇಶ್ವರಂ ಕೆಫೆಯಲ್ಲಿ ಧೂಳು ಆವರಿಸಿಕೊಂಡಿದೆ. ಸ್ಪೋಟದಲ್ಲಿ ಒಟ್ಟು ಒಂಬತ್ತು ಜನರು ಗಾಯಗೊಂಡಿದ್ದು ಚಿಕಿತ್ಸೆ …

Read More »