ಧಾರವಾಡ: ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧನ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ಮುನಿರತ್ನ ಅವರ ಮೇಲೆ ಕಾನೂನು ಕ್ರಮ ಜರುಗಿಸಿದ್ದೇವೆ. ಜನಪ್ರತಿನಿಧಿ ಆಗಿರಲಿ ಯಾರೇ ಆಗಲಿ ಆ ರೀತಿಯ ಪದ ಬಳಕೆ ಮಾಡಬಾರದು. ಅದು ಮುನಿರತ್ನ ಅವರ ಓರಿಜಿನಲ್ ಧ್ವನಿ ಇದೆಯಾ, ನಕಲಿ ಇದೆಯಾ ಎಂಬುದು ಮುಂದೆ ಗೊತ್ತಾಗುತ್ತದೆ. ದೂರಿನ ಆಧಾರದ ಮೇಲೆ ಸದ್ಯ ಮುನಿರತ್ನ ಬಂಧನ ಆಗಿದೆ. ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ಆ ರೀತಿ ಮಾತನಾಡಬಾರದು ಎಂದರು.
ಅವಸರದಲ್ಲಿ ಮುನಿರತ್ನ ಬಂಧನ ಮಾಡಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬೆಳಗ್ಗೆ ಬಂಧನ ಮಾಡಿದರೆ ಬೇಗ ಬಂಧನ ಮಾಡಿದ್ದಾರೆ ಎನ್ನುತ್ತಾರೆ. ಲೇಟ್ ಆದರೆ ಬಂಧನ ಲೇಟ್ ಆಗುತ್ತಿದೆ ಎನ್ನುತ್ತಾರೆ. ಯಾವಾಗ ಬಂಧನ ಮಾಡಬೇಕು ಎಂಬುದನ್ನು ಬಿಜೆಪಿಯವರನ್ನೇ ಕೇಳಬೇಕು. ಸೆಕ್ಷನ್‌ಗಳನ್ನು ತಿದ್ದುಪಡಿ ಮಾಡಿಕೊಡಲು ಅವರಿಗೇ ಹೇಳಬೇಕು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

