admin
March 14, 2022
Breaking News, ಕರ್ನಾಟಕ
ಗೋಗಿ (ಶಹಾಪುರ): ಮಾರ್ಚ್ 14ರಿಂದ ಚಂದಾಹುಸೇನಿ ದರ್ಗಾ 585ನೇ ಉರುಸ್ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ (ಜಾತ್ರಾ ಮಹೋತ್ಸವ) ಆರಂಭವಾಗಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದರ್ಗಾದ ಪೀಠಾಧಿಪತಿ ಸಯ್ಯದಶಾಹ ಮಹ್ಮದ ಹುಸೇನಿ ಸಜ್ಜಾದನಷಿನ್ ಬುಜರಗ್ ತಿಳಿಸಿದ್ದಾರೆ. ಸೋಮವಾರ ಗಂಧ, ಮಂಗಳವಾರ ದೀಪ ಹಾಗೂ ಬುಧವಾರ ಜಿಯಾರತ್ ನೆರವೇರಲಿದೆ. ಅಲ್ಲದೆ ಉರುಸ್ ಅಂಗವಾಗಿ ಸೋಮವಾರ ಗೋಗಿ ಗ್ರಾಮದಲ್ಲಿ ಮನ್ಸೂರ ಹಾಗೂ ಸ್ಪಂದನ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು …
Read More »
admin
March 14, 2022
Breaking News, ಕರ್ನಾಟಕ
ಮದ್ದೂರು :ಈಗಾಗಲೇ ನನಗೆ ನಾಲ್ಕೈದು ಕ್ಷೇತ್ರಗಳಿಂದ ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಆಹ್ವಾನ ಬಂದಿದೆ.ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ನನ್ನ ಸ್ಪರ್ಧೆ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದರು. ಪಟ್ಟಣದ ಹೊರ ವಲಯದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆದ ತಮ್ಮ ಸಹಪಾಠಿ ಪುಟ್ಟಿನಕೆರೆ ಸತ್ಯನಾರಾಯಣಪುತ್ರಿಯ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು. ಈ ಬಗ್ಗೆ ಇನ್ನೂ ಯಾವುದೇ …
Read More »
admin
March 8, 2022
Breaking News, ಕರ್ನಾಟಕ
ಮದ್ದೂರು: ‘ಮೇಕೆದಾಟು ಯೋಜನೆ ಜಾರಿಗಾಗಿ ಇತ್ತೀಚೆಗೆ ಕೆಲ ಸ್ನೇಹಿತರು ಪಾದಯಾತ್ರೆ ಮಾಡಿದ್ದಾರೆ. ರಾಜ್ಯಕ್ಕೆ, ಬೆಂಗ ಳೂರಿಗೆ ನೀರು ತರುತ್ತೇವೆ ಎಂದು ಹೇಳಿದ್ದಾರೆ. ಅವರಾರೂ ನನ್ನ ಹೆಸರು ಹೇಳದಿರುವುದಕ್ಕೆ ನನಗೆ ಬೇಸರ ವಾಗಿದೆ.ಆದರೆ ಅವರಿಗೆ ನಾನು ನಡೆಸಿದ ನೀರಾವರಿ ಹೋರಾಟದ ಅರಿವಿಲ್ಲ’ ಎಂದು ರಾಜ್ಯಸಭಾ ಸದಸ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಷಾದಿಸಿದರು. ಪಟ್ಟಣದ ತಾಲ್ಲೂಕು ಕ್ರೀಡಾಂಗಣ ದಲ್ಲಿ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ವತಿಯಿಂದ ಸಂಸ್ಥೆಯ ಗೌರವಾಧ್ಯಕ್ಷ ಕೆ.ಟಿ.ಚಂದು ಅವರಿಗೆ ಅಭಿನಂದನಾ ಕಾರ್ಯಕ್ರಮ, ‘ಅಪರೂಪ’ …
Read More »
admin
March 2, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು: ಮಾರ್ಚ್ 3 ಮತ್ತೊಂದು ಇತಿಹಾಸ ಸೃಷ್ಟಿಯಾಗುವ ಸಮಯ. ಈ ಅಮೋಘ ಘಳಿಗೆಗೆ ನೀವು ಸಾಕ್ಷಿಯಾಗಬೇಕು ಎಂದು ಮೇಕೆದಾಟು ಪಾದಯಾತ್ರೆಯಲ್ಲಿ ನಿರತರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯದ ಜನರಿಗೆ ಕರೆ ಕೊಟ್ಟಿದ್ದಾರೆ. ಮೂರನೇ ತಾರೀಕು ಪಾದಯಾತ್ರೆ ಅಂತ್ಯ ಮಾಡಲಿದ್ದೇವೆ. ರಾಜ್ಯದ ಉದ್ದಗಲಕ್ಕೂ ಕಾರ್ಯಕರ್ತರಿಗೆ ಮುಖಂಡರಿಗೆ ಮನವಿ ಮಾಡುತ್ತೇನೆ. ನೀವು ಮೂರನೇ ತಾರೀಖು ಬೆಳಗ್ಗೆ ಪ್ಯಾಲೆಸ್ಗೆ ಬಂದು ಅಲ್ಲಿಂದ ಪ್ಯಾಲೆಸ್ ನಿಂದ ಪಾದಯಾತ್ರೆಗೆ ಹೆಜ್ಜೆ ಹಾಕಬೇಕು. ಇದು ನಿಮಗೆ ಅನುಭವದ …
Read More »
admin
March 2, 2022
Breaking News, ಕರ್ನಾಟಕ
ನಿಪ್ಪಾಣಿ: ತುಮಕೂರು ಬಳಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ಸಾವಿಗೀಡಾದ, ವಾಯುಸೇನೆಯಲ್ಲಿ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ತಾಲ್ಲೂಕಿನ ಬೆನಾಡಿ ಗ್ರಾಮದ ಪ್ರಕಾಶ ರಾಮಚಂದ್ರ ದೇಶಿಂಗೆ (33) ಅವರ ಅಂತ್ಯಸಂಸ್ಕಾರ ವಾಯುಸೇನೆಯಿಂದ ಸಕಲ ಗೌರವಗಳೊಂದಿಗೆ ಮಂಗಳವಾರ ಸ್ವಗ್ರಾಮದಲ್ಲಿ ನಡೆಯಿತು. ಆಕಾಶದತ್ತ ಗುಂಡು ಹಾರಿಸಿ ವಾಯುಸೇನೆಯ ಸಿಬ್ಬಂದಿ ಪ್ರಕಾಶ ಅವರಿಗೆ ಗೌರವ ಸಲ್ಲಿಸಿದರು. ಅವರ ಅಕಾಲಿಕ ನಿಧನದಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಕುಟುಂಬದವರು ದುಃಖದ ಕಡಲಲ್ಲಿ ಮುಳುಗಿದ್ದಾರೆ.
Read More »
admin
February 26, 2022
Breaking News, ಕರ್ನಾಟಕ
ಆಳಂದ: ಶಾಸಕ ಸುಭಾಷ ಆರ್.ಗುತ್ತೇದಾರ್ ಅವರ ಪತ್ನಿ ಸರೋಜಾಬಾಯಿ ಸುಭಾಷ ಗುತ್ತೇದಾರ (65) ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು. ಪುತ್ರರಾದ ಕೆಎಂಎಫ್ ನಿರ್ದೇಶಕ ಸಂತೋಷ ಗುತ್ತೇದಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್ ಹಾಗೂ ಪುತ್ರಿ ಇದ್ದಾರೆ.
Read More »
admin
February 17, 2022
Breaking News, ಕರ್ನಾಟಕ
ಆಲಮಟ್ಟಿ: ಇಲ್ಲಿನ ಹಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ಸು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆ. ಮೃತರನ್ನು ನಿಡಗುಂದಿ ತಾಲ್ಲೂಕಿನ ಅಬ್ಬಿಹಾಳ ಗ್ರಾಮದ ಸುನೀಲ.ಮಲ್ಲಪ್ಪ. ಮಂಕಣಿ(23) ಹಾಗೂ ಯಲ್ಲನಗೌಡ.ಬಸವರಾಜ. ಮಂಕಣಿ(20) ಎಂದು ಗುರುತಿಸಲಾಗಿದೆ. ಯಲಗೂರ ಕ್ರಾಸ್ ನಿಂದ ಆಲಮಟ್ಟಿ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಖಾಸಗಿ ಬಸ್ಸು ಮತ್ತು ಆಲಮಟ್ಟಿಯಿಂದ ಅಬ್ಬಿಹಾಳ ಗ್ರಾಮಕ್ಕೆ ಹೋಗುತ್ತಿದ್ದ ಬೈಕ್ ಗೆ ಬಸ್ಸು ಡಿಕ್ಕಿ ಹೊಡೆದಿರುವದರಿಂದ …
Read More »
admin
February 13, 2022
Breaking News, ಕರ್ನಾಟಕ
ಕೋಲಾರ: ಪಾರ್ಶ್ವಗಾನಹಳ್ಳಿ ಗ್ರಾಮದ ಬಳಿ ಖಾಸಗಿ ಬಸ್ ಮರಕ್ಕೆ ಡಿಕ್ಕಿಯಾಗಿ ಸುಮಾರು 20 ಮಂದಿಗೆ ಗಾಯವಾಗಿದೆ. ಕೋಲಾರ ಹೊರವಲಯದ ಪ್ಲಿಪ್ ಕಾರ್ಟ್ ಕಂಪನಿಗೆ ಸೇರಿದ್ದ ಬಸ್, ಕೆಲಸ ನಿರ್ಮಿತ ತೆರಳುತ್ತಿದ್ದರು. ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
Read More »
admin
February 11, 2022
Breaking News, ಕರ್ನಾಟಕ
ಅಣ್ಣಿಗೇರಿ: ತಾಲೂಕಿನ ಸಾಸ್ವಿಹಳ್ಳಿ ಗ್ರಾಮದಲ್ಲಿ ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ದಿಂದ ಬಂದಂತ ಕ್ಷೇತ್ರ ಶಿಕ್ಷಣ ಆರೋಗ್ಯ ಅಧಿಕಾರಿ ಶೋಭಾ ಹಾಗೂ PHCO ಮೇನಕಪುರದ ಅವರು ಗ್ರಾಮದಲ್ಲಿ ಮಕ್ಕಳ ಶಿಶು ಪ್ರದರ್ಶನ ಕಾರ್ಯಕ್ರಮ ಆಯೋಜನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಉತ್ತಮ ಆರೋಗ್ಯ ಹೊಂದಿರುವ ಶಿಶುಗಳಿಗ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಿ ಮಕ್ಕಳ ಆರೋಗ್ಯ ಯಾವ ರೀತಿಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ಸೂಚನೆಗಳನ್ನು ಪೋಷಕರಿಗೆ ನೀಡಿದರು .ಈ ವೇಳೆ ಆಶಾ …
Read More »
admin
February 10, 2022
Breaking News, ಕರ್ನಾಟಕ
ಬಂಟ್ವಾಳ: ಟಿಕ್ ಟಾಕ್ ಹಾಸ್ಯ ವಿಡಿಯೋಗಳಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅನಂತಾಡಿ ಗ್ರಾಮದ ಮಾಮೇಶ್ವರ ಸಂಕೇಶ ನಿವಾಸಿ ಟಿಕ್ಟಾಕ್ ಕಮಲಜ್ಜಿ ನಿನ್ನೆ ಸಂಜೆ ನಿಧನರಾದರು.ಮೃತರು ಆರು ಗಂಡು, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಬಂಧು-ಬಳಗ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಕಳೆದೊಂದು ವಾರದಿಂದ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರು ಆಸ್ಪತ್ರೆಗೆ ದಾಖಲಾಗಿದ್ದರು. ಟಿಕ್ ಟಾಕ್ ಸ್ಟಾರ್ ಧನರಾಜ್ ಜೊತೆ ಕಮಲಜ್ಜಿ 50ಕ್ಕೂ ಅಧಿಕ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದು, ಇವರ ಕುಟುಂಬ …
Read More »