Breaking News

ಕರ್ನಾಟಕ

ಸ್ನೇಹಿತನ ಪತ್ನಿಗೆ ಬಾಳು ಕೊಟ್ಟ ಯುವಕ

ಕೊರೊನಾ ಬಲಿಯಾದ ಸ್ನೇಹಿತನ ಪತ್ನಿಯನ್ನು ವರಿಸುವ ಮೂಲಕ ಆಕೆಗೆ ಬಾಳು ಕೊಟ್ಟು ಆದರ್ಶ ಮೆರೆದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಹನೂರಿನ ಅಂಬಿಕಾ ಕಳೆದ 8 ವರ್ಷಗಳ ಹಿಂದೆ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದ ಚೇತನ್‌ ಕುಮಾರ್‌ ಅವರನ್ನು ಮದುವೆಯಾಗಿದ್ದರು. ಚೇತನ್‌ ಬೆಂಗಳೂರಿನಲ್ಲಿ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸದಲ್ಲಿದ್ದರು. ಆದರೆ ಕೊವಿಡ್‌ 2ನೇ ಅಲೆಯಲ್ಲಿ ಚೇತನ್‌ ಮೃತಪಟ್ಟಿದ್ದ. ಚಾಮರಾಜನಗರ ತಾಲ್ಲೂಕಿನ ನಂಜದೇವನಪುರ ಗ್ರಾಮದ ಲೋಕೇಶ್‌ ಗೆಳೆಯನ ಪತ್ನಿಯನ್ನು ಮದುವೆಯಾದ ಯುವಕ. ಲೋಕೇಶ್‌ …

Read More »

ಫೆ. 8 ರಂದು ಗೋವಾದಲ್ಲಿ ಮಾಜಿ ಸಿಎಂ ಚುನಾವಣೆ ಪ್ರಚಾರ

ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಸಿದ್ದರಾಮಯ್ಯ ಗೋವಾದಲ್ಲಿ ಕಾಂಗ್ರೆಸ್‌ ಪರ ಚುನಾವಣಾ ಪ್ರಚಾರ . ಫೆಬ್ರವರಿ 8, 9ರಂದು ಗೋವಾದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ. ಗೋವಾದಲ್ಲಿ ಕನ್ನಡಿಗರು ಹೆಚ್ಚಿರುವ ಕಡೆ ಸಿದ್ದರಾಮಯ್ಯ ಪ್ರಚಾರಕ್ಕಿಳಿಯಲಿದ್ದಾರೆ. ಫೆಬ್ರವರಿ 7 ರಂದು ಬಳ್ಳಾರಿಯಲ್ಲಿ ಭೀಮಾ ನಾಯ್ಕ್​ ಪುತ್ರಿ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಬಳಿಕ ಗೋವಾದ ವಿಧಾನಸಭಾ ಚುನಾವಣೆಯ ಅಂಗವಾಗಿ ಅಲ್ಲಿಗೆ ಪ್ರಚಾರಕ್ಕೆ ತೆರಳಲಿದ್ದಾರೆ.

Read More »

ಪ್ರೀತಿಸಿ ಮದುವೆಯಾದ ಜೋಡಿ : ಗಂಡನಿಗೆ ಹೆಣವಾಗಿ ಸಿಕ್ಕ ಪತ್ನಿ

ಹಾವೇರಿ: ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ನಡೆದಿದೆ. ಮನುಜಾ (20) ಮೃತ ಗೃಹಿಣಿ. ಕಳೆದ ಐದು ದಿನಗಳ ಹಿಂದೆ ಗಂಡನ ಮನೆಯಿಂದ ಕಾಣೆಯಾಗಿದ್ದ ಮನುಜಾ ಕಾಗಿನೆಲೆಯ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎನ್ನಲಾಗ್ತಿದೆ. ಬ್ಯಾಡಗಿ ತಾಲೂಕಿನ ಕಳಗೊಂಡ ಗ್ರಾಮದವಳಾಗಿದ್ದ ಮನುಜಾ ಆರು ತಿಂಗಳ ಹಿಂದೆ ಅದೇ ಗ್ರಾಮದ ಬಸವರಾಜ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದಳು. ಈ ಮಧ್ಯೆ …

Read More »

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪತ್ರಕರ್ತ ಮಲ್ಲಿಕಾರ್ಜುನ ಪುರದನಗೌಡರ ಆಯ್ಕೆ

ಕಲಘಟಗಿ: ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪತ್ರಕರ್ತ ಮಲ್ಲಿಕಾರ್ಜುನ ಪುರದನಗೌಡರ ಆಯ್ಕೆಯಾಗಿದ್ದಾರೆ. ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಅವರ ಆದೇಶದ ಮೇರೆಗೆ ಆಯ್ಕೆ ಮಾಡಿರುವುದಾಗಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More »

ಶಾಲೆಯಲ್ಲಿ ನಮಾಜ್ :ಶಿಕ್ಷಕಿ ಅಮಾನತು

ಕೋಲಾರ : ಸರ್ಕಾರಿ ಶಾಲೆ ಕೊಠಡಿಯಲ್ಲಿ ನಮಾಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಮುಖ್ಯ ಶಿಕ್ಷಕಿ ಉಮಾದೇವಿ ಅವರನ್ನು ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ವರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಲು ಪಟ್ಟಣದ ಬಳೆ ಚಂಗಪ್ಪ ಸರ್ಕಾರಿ ಶಾಲೆ ಕೊಠಡಿಯಲ್ಲಿ ಜನವರಿ 21 ರಂದು ವಿದ್ಯಾರ್ಥಿಗಳು ನಮಾಜ್ ಮಾಡಿದ್ದರು. ಈ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಶಾಲಾ ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ …

Read More »

ಇಂದಿನಿಂದ ವಿದ್ಯುತ್ ಚಾಲಿತ ರೈಲು ಸಂಚಾರ : ಭಗವಂತ ಖೂಬಾ

ಬೀದರ: ವಿಕಾರಾಬಾದನಿಂದ ಪರಳಿವರೆಗಿನ 262 ಕೋಟಿ ರೂ. ವೆಚ್ಚದ 269 ಕಿ.ಮೀ. ರೈಲ್ವೆ ವಿದ್ಯುತ್ತೀಕರಣ ಕಾಮಗಾರಿ ಪೈಕಿ ವಿಕಾರಾಬಾದ-ಖಾನಾಪೂರ ನಡುವಿನ 105 ಕಿ.ಮೀ. ರೈಲ್ವೆ ಲೈನ್‌ ಕೆಲಸ ಕಾಮಗಾರಿ ಪೂರ್ಣಗೊಂಡಿದ್ದು, ಜ.24ರಿಂದ ಈ ಹಳಿಗಳ ಮೂಲಕ ರೈಲು ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಸಾಯನಿಕ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ವಿದ್ಯುತ್ತೀಕರಣ ಲೈನ್‌ನಲ್ಲಿ ಟ್ರಯಲ್‌ ರನ್‌ ಕೂಡ ಮುಗಿದಿದ್ದು, ನಾಳೆಯಿಂದ ಬೀದರ- ಯಶವಂತಪುರ (16571, ನಾಲ್ಕು ದಿನ) ಮತ್ತು …

Read More »

ಒಂದು ವರ್ಷದೊಳಗೆ ಪೊಲೀಸ್ ಕಚೇರಿ ನಿರ್ಮಾಣ : ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ

ಕುಷ್ಟಗಿ: ‘ಪಟ್ಟಣದಲ್ಲಿ ಹೊಸ ಮಾದರಿಯಲ್ಲಿ ನಿರ್ಮಾಣಗೊಳ್ಳಲಿರುವ ಪೊಲೀಸ್ ಕಚೇರಿ ಕಟ್ಟಡ ಕಾಮಗಾರಿ ಆರಂಭಗೊಂಡ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ’ ಎಂದು ಗಂಗಾವತಿ ಉಪ ವಿಭಾಗದ ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಹೇಳಿದರು. ಇಲ್ಲಿನ ಹೊಸ ಕಟ್ಟಡ ನಿರ್ಮಾಣಗೊ ಳ್ಳಲಿರುವುದರಿಂದ ತಾತ್ಕಾಲಿಕ ಸಿಪಿಐ ಕಚೇರಿ ಉದ್ಘಾಟನೆ ವೇಳೆ ಮಾತನಾಡಿದರು. ‘ಹೊಸ ಕಟ್ಟಡ ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ. ಪೊಲೀಸ್‌ ಠಾಣೆ, ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿ ಹಾಗೂ ಸಭಾಂಗಣಗಳನ್ನು ಒಳಗೊಳ್ಳಲಿದೆ. ಇದರಿಂದ ಎಲ್ಲ ಸಿಬ್ಬಂದಿ ಒಂದೇ ಕಡೆ …

Read More »

ವಿದ್ಯಾರ್ಥಿಗಳಿಗೆ ಅಂಟಿದ ಕೋವಿಡ್ : 5 ದಿನ ಶಾಲೆ ಬಂದ್

ಕುಷ್ಟಗಿ:  ಕುಷ್ಟಗಿ ಪಟ್ಟಣದ ಬಾಲಕರ ಪೌಢಶಾಲೆಯಲ್ಲಿ 8, ಹನುಮಸಾಗರ ಬಾಲಕಿಯರ ಪೌಢಶಾಲೆಯಲ್ಲಿ 6, ಚಳಗೇರಾ ಪ್ರಾಥಮಿಕ ಶಾಲೆಯಲ್ಲಿ 8 ವಿದ್ಯಾರ್ಥಿಗಳಿಗೆ ಕೊರೊನಾ ವಕ್ಕರಿಸಿದ ಹಿನ್ನಲೆ ತಾಲೂಕಿನ ಮೂರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ದೃಢವಾಗಿರುವ ಹಿನ್ನೆಲೆಯಲ್ಲಿ ಸದರಿ ಶಾಲೆಗಳಿಗೆ 5 ದಿನಗಳ ರಜೆ ಘೋಷಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ಮಾತ್ರೆ ನೀಡಿ, ಹೋಮ್‌ ಐಸೋಲೇಷನ್‌ಗೆ ಸಲಹೆ ನೀಡಲಾಗಿದ್ದು, ತಾಲೂಕಿನಲ್ಲಿ ಈ ಮೂರೂ ಶಾಲೆಗಳಿಗೆ ಡಿಡಿಪಿಐ ಆದೇಶದ ಮೇರೆಗೆ 5 ದಿನಗಳ ರಜೆ ಘೋಷಿಸಲಾಗಿದೆ. …

Read More »

ಹೈಕೋರ್ಟ್ ನಿ. ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ವಿಧಿವಶ

ಬೆಂಗಳೂರು: ತಡರಾತ್ರಿ ಹೃದಯಾಘಾತದಿಂದ ಹೈಕೋರ್ಟ್ ನಿ. ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ವಿಧಿವಶರಾಗಿದ್ದಾರೆ. ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನ್ಯಾ. ಮಂಜುನಾಥ್ ನಿಧನರಾಗಿದ್ದು, ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Read More »

ಟ್ವೀಟ್‌ರ ವಾರ್ : ಹೆಚ್ ಡಿಕೆ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಪಕ್ಷವು ಬಿಜೆಪಿಯ ಬಾಲಂಗೋಚಿ, ತುಮಕೂರಿನಿಂದ ಜೆಡಿಎಸ್‌ ಅನ್ನು ಓಡಿಸಿ, ಆ ಪಕ್ಷಕ್ಕೆ ಸಿದ್ದಾಂತವಿಲ್ಲ ಎಂದು ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಟೀಕಾ ಪ್ರಹಾರ ನಡೆಸಿದ್ದರು. ಅದರ ಉತ್ತರವಾಗಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ, ಸೋಲು ಗೆಲುವು ನಿರ್ಧಾರ ಮಾಡುವುದು …

Read More »