Breaking News

ಧಾರವಾಡ

ಎಡಿಜಿಪಿ ಎಂ.ಚಂದ್ರಶೇಖ‌ರ್ ಅವರು ಬಳಸಿದ ಪದಗಳನ್ನು ವಿರೋಧಿಸಿ ಪ್ರತಿಭಟನೆ

ಧಾರವಾಡ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕುರಿತು ಎಡಿಜಿಪಿ ಎಂ.ಚಂದ್ರಶೇಖ‌ರ್ ಅವರು ಬಳಸಿದ ಪದಗಳನ್ನು ವಿರೋಧಿಸಿ ಧಾರವಾಡದಲ್ಲಿ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಧಾರವಾಡ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಜೆಡಿಎಸ್‌ ಕಾರ್ಯಕರ್ತರು, ಎಡಿಜಿಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಒಬ್ಬ ಕೇಂದ್ರ ಸಚಿವರಿಗೆ ಇವರು ಕೆಟ್ಟ ಪದಗಳನ್ನು ಬಳಕೆ ಮಾಡಿ ಮಾತನಾಡುತ್ತಾರೆ. ಇಂತಹ ಅಧಿಕಾರಿ ಮೇಲೆ ಕೇಂದ್ರ ಗೃಹ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು. ಅವರ …

Read More »

ಸಾರ್ವಜನಿಕರ ಅಹವಾಲು ಆಲಿಸಿದ ಎನ್. ಎಚ್. ಕೋನರೆಡ್ಡಿ

ಹುಬ್ಬಳ್ಳಿ: ನಗರದ ಮಿನಿ ವಿಧಾನಸೌಧದ 3ನೇ ಮಹಡಿಯಲ್ಲಿರುವ ಜನಸಂಪರ್ಕ ಕಾರ್ಯಾಲಯದಲ್ಲಿ ನವಲಗುಂದ ಮತ ಕ್ಷೇತ್ರದ ಶಾಸಕ ಎನ್. ಎಚ್. ಕೋನರೆಡ್ಡಿ ಅವರು ಜನತಾ ದರ್ಶನ ನಡೆಸುವ ಮೂಲಕ ಸಾರ್ವಜನಿಕರ ಅಹವಾಲು ಆಲಿಸಿದರು. ನಂತರ ಬಂದಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣವೇ ಅಧಿಕಾರಿಗಳಿಗೆ ಕರೆ ಮಾಡಿ ರೈತರ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ರೈತರು ಹಾಗೂ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Read More »

ಅಪರಾಧಿಗಳಿಗೆ ಹೆಚ್ಚಿನ ಶಿಕ್ಷೆ ಆಗುವಂತೆ ಸಮರ್ಥವಾದ, ಪುರಾವೆ ಸಲ್ಲಿಸಿ:ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ : ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮೇಲೆ ಆಗುವ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನ್ಯಾಯಾಲಯಗಳಲ್ಲಿ ಕಾಲಮಿತಿಯಲ್ಲಿ ಪ್ರಕರಣಗಳು ಇತ್ಯರ್ಥವಾಗುವಂತೆ ಕ್ರಮವಹಿಸಿ, ಅಪರಾಧಿಗಳಿಗೆ ಹೆಚ್ಚಿನ ಶಿಕ್ಷೆ ಆಗುವಂತೆ ಸಮರ್ಥವಾದ ಮತ್ತು ಪುರಾವೆಗಳನ್ನು ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಎಸ್.ಸಿ., ಎಸ್.ಟಿ., ದೌರ್ಜನ್ಯ ತಡೆ ಕಾಯ್ದೆ ಪ್ರಗತಿ ಪರಿಶೀಲನೆ ಮತ್ತು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ …

Read More »

ಜಿಲ್ಲಾಧಿಕಾರಿಯನ್ನು ಸನ್ಮಾನಿಸಿದ ಬೆಲ್ಲದ

ಧಾರವಾಡ:ರಾಜ್ಯ ಸರಕಾರದ ಕಂದಾಯ ಇಲಾಖೆಯಿಂದ ಪ್ರಸಕ್ತ ಸಾಲಿನ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಪುರಸ್ಕೃತರಾದ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು, ಡಿಸಿ ಕಚೇರಿಯಲ್ಲಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ ಅವರು ಗೌರವಿಸಿ, ಸನ್ಮಾನಿಸಿದರು.

Read More »

ಜನರ ಸಮಸ್ಯೆಗಳನ್ನು ಆಲಿಸಿದ ಅರವಿಂದ ಬೆಲ್ಲದ

ಧಾರವಾಡ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳನ್ನು ಭೇಟಿ ಮಾಡಿದ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ತಮಗೆ ಟ್ಯಾಬ್ ವಿತರಣೆ, ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡುವುದು, ಭತ್ಯೆ ನೀಡುವುದು, ಕರ್ತವ್ಯ ನಿರತ ಸಿಬ್ಬಂದಿ ಸಾವಿಗೀಡಾದರೆ 40 ಲಕ್ಷ ಪರಿಹಾರ ನೀಡುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಗ್ರಾಮ ಆಡಳಿತಾಧಿಕಾರಿಗಳು ಕೈಗೆ …

Read More »

ಏಕಾಏಕಿ ಅಂಗಡಿಗೆ ಗುದ್ದಿದ ಕ್ಯಾಂಟರ್ ವಾಹನ

ಧಾರವಾಡ: ಕ್ಯಾಂಟರ್ ವಾಹನವೊಂದು ಏಕಾಏಕಿ ಅಂಗಡಿಗೆ ಗುದ್ದಿದ ಘಟನೆ ಧಾರವಾಡದ ಮೃತ್ಯುಂಜಯ ನಗರದ ಡಿಪೊ ಸರ್ಕಲ್ ಬಳಿ ನಡೆದಿದೆ. ಸವದತ್ತಿ ಕಡೆಯಿಂದ ಇಂದು ಬೆಳಗಿನಜಾವ 3 ಗಂಟೆ ಸುಮಾರಿಗೆ ಬಂದ ಕ್ಯಾಂಟರ್ ಏಕಾಏಕಿ ಅಂಗಡಿಗೆ ಗುದ್ದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.

Read More »

ಲಕ್ಷಾಂತರ ರೂಪಾಯಿ ನಕಲಿ ಸಿಗರೇಟ್‌ ವಶ

ನವಲಗುಂದ: ಪಟ್ಟಣದ ಶೆಟ್ಟರ ಕೆರೆಯ ಹತ್ತಿರ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಐಟಿಸಿ ಕಂಪನಿಯ ನಕಲಿ ಸಿಗರೇಟ್ ವಾಹನವನ್ನು ಇಂದು ಬೆಳಿಗ್ಗೆ ಪೊಲೀಸರು ಹಾಗೂ ಐಟಿಸಿ ಕಂಪನಿಯವರ ದಾಳಿ ಮಾಡಿ ಲಕ್ಷಾಂತರ ರೂಪಾಯಿ ನಕಲಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ಸಿಗರೇಟ್ ಮಾರಾಟಗಾರ ಮಹಮ್ಮದ್ ನೌಶಾದ್‌ ಮೋಹಿದ್ದಿನ್ (24) ಉಡುಪಿಯ ಸಂತೇಕಟ್ಟಿ ಗ್ರಾಮದ ಈತ ಬೆಳಗಾವಿದಿಂದ ಬಿಜಾಪು‌ರ್, ಬಾಗಲಕೋಟೆ ಸೇರಿದಂತೆ ವಿವಿಧ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಾ ಬರುತ್ತಿದ್ದ. …

Read More »

ವೆಂಕಟೇಶ ಬುಳ್ಳಾ ಅತ್ಯುತ್ತಮ ಜಿಲ್ಲಾ ವಿಪತ್ತು ಸಲಹೆಗಾರ ಪ್ರಶಸ್ತಿಯನ್ನು ಸ್ವೀಕಾರ

ಬೆಂಗಳೂರು : ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಂದ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ವಿಪತ್ತು ನಿರ್ವಹಣಾ ಕೋಶದ ಸಲಹೆಗಾರ ವೆಂಕಟೇಶ ಬುಳ್ಳಾ ಅತ್ಯುತ್ತಮ ಜಿಲ್ಲಾ ವಿಪತ್ತು ಸಲಹೆಗಾರ ಪ್ರಶಸ್ತಿಯನ್ನು ಸ್ವೀಕರಿಸಿದರು.

Read More »

ಬೀಜ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೋನರಡ್ಡಿ

ನವಲಗುಂದ: ಪಟ್ಟಣದ ಅಣ್ಣಿಗೇರಿ ರಸ್ತೆಯಲ್ಲಿ ಇರುವ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ರೈತರಿಗೆ ಹಿಂಗಾರು ಬೆಳೆ ಬೆಳೆಯಲು ಕಡಲೆ, ಗೋಧಿ, ಜೋಳ, ಬೀಜ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ, ರೈತ ಭಾಂದವರಿಗೆ ಬೀಜ ವಿತರಿಸುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎನ್.ಹೆಚ್.ಕೋನರೆಡ್ಡಿ ನೆರವೇರಿಸಿ ಚಾಲನೆ ನೀಡಿದರು.ಈ ವೇಳೆ ತಹಶೀಲ್ದಾರ ಸುಧೀರ ಸಾಹುಕಾರ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ ಸೇರಿದಂತೆ ಅನೇಕರು ಇದ್ದರು.

Read More »

ಸರ್ಕಾರದಿಂದ ಜಮೀನು ಖರೀದಿಸಲು ಅನುದಾನ ಬಿಡುಗಡೆಯಾಗಿದೆ: ಕೋನರಡ್ಡಿ

ನವಲಗುಂದ: ಮನೆ ಇಲ್ಲದ ಬಡಜನತೆಗೆ ಸೂರು ಒದಗಿಸುವುದಕ್ಕಾಗಿ ಈಗಾಗಲೇ ನವಲಗುಂದ ನಗರದ ಅಣ್ಣಿಗೇರಿ ರಸ್ತೆಯಲ್ಲಿನ ಆಶ್ರಯ ಕಾಲೋನಿ ನಿರ್ಮಾಣ ಮಾಡಿದ್ದು, ಇನ್ನೂ ಹೆಚ್ಚನ ಜನರಿಗೆ ಸೂರು ಒದಗಿಸುವ ದೃಷ್ಟಿಯಿಂದ ಹೆಚ್ಚಿನ ಜಮೀನಿನ ಅವಶ್ಯಕತೆ ಇದ್ದದ್ದನ್ನು ಮನಗೊಂಡು ಸರ್ಕಾರಕ್ಕೆ ಈಗಾಗಲೇ ಇರುವ ಆಶ್ರಯ ಜಮೀನಿನ ಪಕ್ಕದಲ್ಲಿರುವ 12 ಎಕರೆ 34 ಗುಂಟೆ ಜಮೀನನ್ನು ಖರೀದಿ ಮಾಡಲಾಯಿತು. ಇನ್ನೂ ಜಮೀನು ಖರೀದಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದಿಂದ ಜಮೀನು ಖರೀದಿಸಲು ಅನುದಾನ ಬಿಡುಗಡೆಯಾಗಿದ್ದು, ಇಂದು …

Read More »