ಧಾರವಾಡ: ಕ್ಯಾಂಟರ್ ವಾಹನವೊಂದು ಏಕಾಏಕಿ ಅಂಗಡಿಗೆ ಗುದ್ದಿದ ಘಟನೆ ಧಾರವಾಡದ ಮೃತ್ಯುಂಜಯ ನಗರದ ಡಿಪೊ ಸರ್ಕಲ್ ಬಳಿ ನಡೆದಿದೆ.
ಸವದತ್ತಿ ಕಡೆಯಿಂದ ಇಂದು ಬೆಳಗಿನಜಾವ 3 ಗಂಟೆ ಸುಮಾರಿಗೆ ಬಂದ ಕ್ಯಾಂಟರ್ ಏಕಾಏಕಿ ಅಂಗಡಿಗೆ ಗುದ್ದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

