Shaikh BigTv
September 7, 2024
Breaking News, ಧಾರವಾಡ
ಧಾರವಾಡ : ಇಂದಿನ ಶೈಕ್ಷಣಿಕ ಪ್ರಗತಿ, ಗುಣಮಟ್ಟವನ್ನು ಪರಿಶೀಲಿಸಿದಾಗ, ಇಡೀ ಶಿಕ್ಷಕ ಸಮೂಹ ತಮ್ಮ ಆದರ್ಶತನ ಮತ್ತು ಕಾಯಕ ವೃತ್ತಿ ಮೌಲ್ಯಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಘಟ್ಟದಲ್ಲಿದೆ. ರಾಜಕಾರಣಿಗಳ ಹಿಂಬಾಲಕರಾಗದೇ, ಅನಗತ್ಯ ತುಷ್ಟೀಕರಣ, ಓಲೈಕೆಗಳನ್ನು ಮಾಡದೇ, ಪೂಜ್ಯನೀಯ ಗುರು ಸ್ಥಾನದಲ್ಲಿರುವ ಶಿಕ್ಷಕರು ಬಸವಣ್ಣ, ಅಂಬೇಡ್ಕರ, ರಾಧಾಕೃಷ್ಣನ್ ಅವರು ಹೇಳಿದ ನೀತಿ ಮಾರ್ಗದಲ್ಲಿ ನಡೆದು ಶೈಕ್ಷಣಿಕ ಬದಲಾವಣೆ, ಆತ್ಮ ಸಂಸ್ಕಾರ ನೀಡುವ ಶಿಕ್ಷಣ ನೀಡುವಂತೆ ಆಗಬೇಕೆಂದು ಕಾರ್ಮಿಕ ಇಲಾಖೆ ಹಾಗೂ …
Read More »
Shaikh BigTv
September 6, 2024
Breaking News, ಧಾರವಾಡ
ಧಾರವಾಡ: ತರಕಾರಿ ಮಾರುಕಟ್ಟೆಯಲ್ಲಿ ಕಾಳು-ಕಡಿ, ಮಸಾಲೆ ಹಣ್ಣು ತರಕಾರಿ ವ್ಯಾಪಾರಸ್ಥರ ಕುಂದು ಕೊರತೆಗಳನ್ನು ಪಾಲಿಕೆ ಆಯುಕ್ತರೊಂದಿಗೆ ಮೇಯರ್ ರಾಮಣ್ಣ ಬಡಿಗೇರ ಅವರು ಆಲಿಸಿ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಮಹಾಪೌರರು ದುರ್ಗಮ್ಮ ಬಿಜವಾಡ, ವಿರೋಧ ಪಕ್ಷದ ನಾಯಕರು ರಾಜಶೇಖರ್. ಕಮತಿ ಪಾಲಿಕೆ ಸದಸ್ಯರುಗಳು, ಪಾಲಿಕೆ ಅಧಿಕಾರಿ ಸಿಬ್ಬಂದಿಗಳು, ತರಕಾರಿ ಮಾರುಕಟ್ಟೆಯ ವ್ಯಾಪಾರಸ್ಥರು ಇದ್ದರು.
Read More »
BigTv News
September 6, 2024
Breaking News, ಧಾರವಾಡ
ಧಾರವಾಡ : ಧಾರವಾಡದಲ್ಲಿ ಕಾಡಿನಿಂದ ನಾಡಿಗೆ ಆಗಾಗ ಕಾಡು ಪ್ರಾಣಿಗಳು ಬಂದು ಜನರಲ್ಲಿ ಆತಂಕ ಮೂಡಿಸುತ್ತವೆ ಇದೀಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ಚಿರತೆ ಒಂದು ಓಡಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಹಜವಾಗಿ ಜನರಲ್ಲಿ ಆತಂಕ ಮೂಡಿಸಿದೆ. ಹೌದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ ಬಳಿಯ ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆಯು, ನಂತರ ಪತ್ರಿಕೋದ್ಯಮ ವಿಭಾಗಕ್ಕೆ ಹೋಗುವ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. …
Read More »
Shaikh BigTv
September 6, 2024
Breaking News, ಧಾರವಾಡ
ಧಾರವಾಡ: ಈ ಗಣೇಶನ ಹಬ್ಬಕ್ಕೆ ಧಾರವಾಡದಲ್ಲಿ ಪಟಾಕಿ ವ್ಯಾಪಾರ ಜೋರಾಗಿಯೇ ನಡೆದಿದೆ. ಪ್ರತಿವರ್ಷ ಧಾರವಾಡದ ಕಡಪಾ ಮೈದಾನದಲ್ಲಿ ಪಟಾಕಿ ವ್ಯಾಪಾರಸ್ಥರು ಪಟಾಕಿ ತಂದು ಮಾರಾಟ ಮಾಡುತ್ತಾರೆ. ಪ್ರಸಕ್ತ ವರ್ಷ ಕೂಡ ಸುಮಾರು ಆರೇಳು ಅಂಗಡಿಗಳನ್ನು ತೆರೆಯಲಾಗಿದ್ದು, ಜನ ಪಟಾಕಿ ಖರೀದಿಗೆ ಮುಗಿಬಿದ್ದಿದ್ದಾರೆ. ಗೋವಾ ಪಟಾಕಿ, ಚಟಪಟ ಪಟಾಕಿ, ಕುಡಿಕೆ, ಚಕ್ರ, ಆಟಂಬಾಂಬ್ ಸೇರಿದಂತೆ ಇತ್ಯಾದಿ ಪಟಾಕಿಗಳ ವ್ಯಾಪಾರ ಜೋರಾಗಿ ನಡೆದಿದೆ. ಗಣೇಶನ ಹಬ್ಬದ ಸಂಭ್ರಮ ಜಿಲ್ಲೆಯಾದ್ಯಂತ ಕಳೆಗಟ್ಟಿದೆ.
Read More »
Shaikh BigTv
September 6, 2024
Breaking News, ಧಾರವಾಡ
ಧಾರವಾಡ : ಸರಕಾರ ಅನುಷ್ಠಾನ ಮಾಡಿರುವ 5 ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಸಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಆಯೋಜಿಸಲಾದ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಾಂಸ್ಥಿಕ ಕಾರ್ಯ ವಿಧಾನಗಳು ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಮಾತನಾಡಿದರು. ಹಳ್ಳಿಗಳಿಗೆ ಸರಿಯಾದ ಬಸ್ …
Read More »
Shaikh BigTv
September 5, 2024
Breaking News, ಧಾರವಾಡ
ನವಲಗುಂದ: ತಾಲೂಕಿನ ಬೆಳಹಾರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ 2024-25ನೇ ಸಾಲಿನ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ ಜರುಗಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಗಾಯತ್ರಿ ಪಾಟೀಲ ನೋಡಲ್ ಅಧಿಕಾರಿಗಳಾಗಿ ಭಾಗವಹಿಸಿದ್ದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಯ್ಯ ಮಠಪತಿ, ಉಪಾಧ್ಯಕ್ಷರಾದ ಯಲ್ಲವ್ವ ದ್ಯಾವನೂರ, ಸದಸ್ಯರಾದ ರುದ್ರಪ್ಪ ಬೆಳಗಲಿ, ಭೀಮರೆಡ್ಡಿ ನೀಲಗುಂದ, ದ್ರಾಕ್ಷಾಯಿಣಿ ಚಲವಾದಿ, ಚೆನ್ನಮ್ಮ ಬೀರಣ್ಣವರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುಸಿದ್ದಪ್ಪ ಮಡಿವಾಳರ, ಪಂಚಾಯಿತಿ ಸಿಬ್ಬಂದಿ, ಬೆಳಹಾರ, ಚಿಲಕವಾಡ ಗ್ರಾಮಸ್ಥರು ಭಾಗವಹಿಸಿದ್ದರು.
Read More »
Shaikh BigTv
September 5, 2024
Breaking News, ಧಾರವಾಡ
ಧಾರವಾಡ: ವಿಘ್ನನಿವಾರಕನಾದ ಗಣೇಶ ಎಲ್ಲರ ಮನೆ, ಮನಗಳಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದಾನೆ. ಈಗಾಗಲೇ ಗಣೇಶನ ಮೂರ್ತಿಗಳನ್ನು ಸಿದ್ಧಪಡಿಸಲಾಗಿದ್ದು, ಗಣೇಶನ ಮೂರ್ತಿ ತಯಾರಕರು ತಾವು ಸಿದ್ಧಪಡಿಸಿದ ಗಣೇಶನ ಮೂರ್ತಿಗಳಿಗೆ ಅಂತಿಮ ಹಂತದ ಬಣ್ಣ ಬಳಿಯುವ ಕೆಲಸದಲ್ಲಿ ತೊಡಗಿದ್ದಾರೆ. ಪ್ರಸಕ್ತ ವರ್ಷ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಧಾರವಾಡ ಜಿಲ್ಲಾಡಳಿತ ಒತ್ತು ನೀಡಿದೆ. ಪಿಓಪಿ ಗಣೇಶನ ಮೂರ್ತಿಗಳನ್ನು ಮಾರಾಟ ಮಾಡದಂತೆ ನಿಷೇಧ ಹೇರಲಾಗಿದ್ದು, ಅಂತಹ ಮೂರ್ತಿ ಮಾರಾಟಗಾರರ ಮೇಲೆ ಕ್ರಮ ಸಹ ಕೈಗೊಳ್ಳಲಾಗುತ್ತಿದೆ. ಅನೇಕ …
Read More »
Shaikh BigTv
September 5, 2024
Breaking News, ಧಾರವಾಡ
ಧಾರವಾಡ : ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕರ್ನಾಟಕ ಚೆನ್ನಮ್ಮ ಶೌರ್ಯ ಪ್ರಶಸ್ತಿಗಾಗಿ ಹೊಯ್ಸಳ ಬಾಲಕ ಮತ್ತು ಬಾಲಕಿಯರ ಸಂಘ-ಸಂಸ್ಥೆಗಳು, ಸಂಘ-ಸಂಸ್ಥೆಗಳು ಅರ್ಜಿ ಆಹ್ವಾನಿಸಿದೆ. ಸಂಘ ಮತ್ತು ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿ: ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ತಲಾ ರೂ. 25,000 ನಗದು ಬಹುಮಾನ ಮತ್ತು ಪ್ರಶಸ್ತಿ ಕಾರ್ಡ್‌ಗಳು ಮತ್ತು ಸಂಸ್ಥೆಗಳಿಗೆ ತಲಾ ರೂ …
Read More »
Shaikh BigTv
September 5, 2024
Breaking News, ಧಾರವಾಡ
ಧಾರವಾಡ : ಕೃಷಿ ಭಾಗ್ಯ ಯೋಜನೆಯಡಿ ಕ್ಷೇತ್ರ ನಿರ್ಮಾಣ, ಕೃಷಿ ಹೊಂಡ, ಪಾಲಿಥಿನ್ ಹೊದಿಕೆ, ಡೀಸೆಲ್, ಪೆಟ್ರೋಲ್ ಪಂಪ್ ಸೆಟ್ (ಗರಿಷ್ಠ 10 ಎಚ್‌ಪಿ), ಲಘು ನೀರಾವರಿ ಮತ್ತು ತಂತಿ ಬೇಲಿ ಘಟಕಗಳನ್ನು ಅಳವಡಿಸಲು ಬಯಸುವ ಅರ್ಹ ರೈತರಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2024-25 ರಲ್ಲಿ ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಸೆಪ್ಟೆಂಬರ್ 25, 2024 ರೊಳಗೆ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ …
Read More »
Shaikh BigTv
September 5, 2024
Breaking News, ಧಾರವಾಡ
ನವಲಗುಂದ: ಗಣೇಶ ಚತುರ್ಥಿ ಅಂಗವಾಗಿ ಪಟ್ಟಣದ ಶಂಕರ ಕಾಲೇಜು ಮೈದಾನದಲ್ಲಿ ಹಾಕಲಾದ ಪಟಾಕಿ ಅಂಗಡಿಗಳಿಗೆ ಇಂದು ತಹಶೀಲ್ದಾರ ಸುಧೀರ ಸಾಹುಕಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರಕಾರ ಹಸಿರು ಪಟಾಕಿ ಮಾರಾಟ ಮಾಡಲು ಪರವಾನಿಗೆ ನೀಡಿದ್ದು, ತಾಲೂಕು ಆಡಳಿತದಿಂದ ಪಟಾಕಿಗಳ ಪರಿಶೀಲನೆ ನಡೆಯಿತು. ಸುಮಾರು 6ಅಂಗಡಿಗಳು ವ್ಯಾಪಾರ ನಡೆಸುತ್ತಿದ್ದು, ಅವುಗಳ ಬಗ್ಗೆ ಸ್ವತಃ ತಹಶೀಲ್ದಾರ ಮೊಬೈಲ್ ಮೂಲಕ ಪರಿಶೀಲನೆ ಮಾಡುವುದಲ್ಲದೆ ವ್ಯಾಪಾರಸ್ಥರಿಗೆ ಆದೇಶದ ಅನ್ವಯ ನಿಯಮಗಳನ್ನು ಪಾಲಿಸುವಂತೆ ಹೇಳಿದರು. ಈ …
Read More »