Breaking News

ಪಟಾಕಿ ಅಂಗಡಿಗಳ ಪರಿಶೀಲನೆ

ನವಲಗುಂದ: ಗಣೇಶ ಚತುರ್ಥಿ ಅಂಗವಾಗಿ ಪಟ್ಟಣದ ಶಂಕರ ಕಾಲೇಜು ಮೈದಾನದಲ್ಲಿ ಹಾಕಲಾದ ಪಟಾಕಿ ಅಂಗಡಿಗಳಿಗೆ ಇಂದು ತಹಶೀಲ್ದಾರ ಸುಧೀರ ಸಾಹುಕಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರಕಾರ ಹಸಿರು ಪಟಾಕಿ ಮಾರಾಟ ಮಾಡಲು ಪರವಾನಿಗೆ ನೀಡಿದ್ದು, ತಾಲೂಕು ಆಡಳಿತದಿಂದ ಪಟಾಕಿಗಳ ಪರಿಶೀಲನೆ ನಡೆಯಿತು. ಸುಮಾರು 6ಅಂಗಡಿಗಳು ವ್ಯಾಪಾರ ನಡೆಸುತ್ತಿದ್ದು, ಅವುಗಳ ಬಗ್ಗೆ ಸ್ವತಃ ತಹಶೀಲ್ದಾರ ಮೊಬೈಲ್ ಮೂಲಕ ಪರಿಶೀಲನೆ ಮಾಡುವುದಲ್ಲದೆ ವ್ಯಾಪಾರಸ್ಥರಿಗೆ ಆದೇಶದ ಅನ್ವಯ ನಿಯಮಗಳನ್ನು ಪಾಲಿಸುವಂತೆ ಹೇಳಿದರು.

ಈ ವೇಳೆ ಸಿಪಿಐ ರವಿ ಕಪತ್ತನವರ, ಅಗ್ನಿ ಶಾಮಕ ದಳದ ಸಿಬ್ಬಂದಿ ಚಂದ್ರಶೇಖರ ಭಂಡಾರಿ, ಗ್ರಾಮ ಲೆಕ್ಕಾಧಿಕಾರಿ ಮುತ್ತು ಚಿಕ್ಕನರಗುಂದ ಸೇರಿದಂತೆ ಅಧಿಕಾರಿಗಳು ಇದ್ದರು.

Share News

About Shaikh BigTv

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *