Breaking News

ಧಾರವಾಡ

ಕುತೂಹಲ ಮೂಡಿಸಿದ ಬಿಜೆಪಿ ಭಿನ್ನಮತ…?

ಧಾರವಾಡ: ಗ್ರಾಮೀಣ ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದ್ದು, ಹಾಲಿ ಶಾಸಕ ಬಿಜೆಪಿಯ ಅಮೃತ ದೇಸಾಯಿ ವಿರುದ್ಧ ಒಂದಾಗಿದ್ದಾರೆ ಬಿಜೆಪಿ ಟಿಕೇಟ್ ಆಕಾಂಕ್ಷಿಗಳು. ಮಾಜಿ ಶಾಸಕಿ ಸೀಮಾ ಮಸೂತಿ ಮನೆಯಲ್ಲಿ ಗುಪ್ತ ಸಭೆ ನಡೆದಿದ್ದು, ಸಭೆಯಲ್ಲಿ ನಾಲ್ವರು ಬಿಜೆಪಿ ಟಿಕೇಟ ಆಕಾಂಕ್ಷಿಗಳು ತಮ್ಮ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಸೀಮಾ ಮಸೂತಿಯವರಿಗೆ ಟಿಕೇಟ ನೀಡಲು ಪಕ್ಷದ ವರಿಷ್ಟರಿಗೆ ಒತ್ತಡ ಹೆರಲು ತೀರ್ಮಾನಿಸಿದ್ದಾರೆ. ಕಳೆದ ಸಾರಿ, ಅಮೃತ ದೇಸಾಯಿ ಗೆಲುವಿಗೆ ಕಾರಣರಾಗಿದ್ದ ನಾಲ್ವರು …

Read More »

ಕಾಂಗ್ರೆಸ್ ಪಕ್ಷಕ್ಕೆ ಅಜಿ೯ಸಲ್ಲಿಸಿದವರಿಗೆ ಟಿಕೇಟ್ ಕೊಡಿ- ಇಲ್ಲವೆ ಬಂಡಾಯದ ಭಾವುಟ ಹಾರಿಸುತ್ತೇವೆ

ಧಾರವಾಡ: ಹುಬ್ಬಳ್ಳಿ -ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ಈಗಾಗಲೇ 10 ಜನ ನಿಷ್ಠಾವಂತ ಕಾಂಗ್ರೆಸ್ ಗರು ಅಜಿ೯ಸಲ್ಲಿಸಿದ್ದೆವೆ ನಮ್ಮಲ್ಲಿ ಯಾರಿಗಾದರೂ ಟಿಕೇಟ್ ಕೊಡಲಿ ಆದರೆ ನಮ್ಮನ್ನು ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್ ಕೊಟ್ಟಿದ್ದೆ ಆದರೆ ನಾವು ಬಂಡಾಯದ ಭಾವುಟ ಹಾರಿಸಿ ನಮ್ಮಲ್ಲಿಯ 10 ಜನ ಆಕಾಂಕ್ಷೆಗಳಲ್ಲಿ ಒಬ್ಬರನ್ನು ಚುನಾವಣಾ ಕಣಕ್ಕೆ ಇಳಿಸಿ ಕಾಂಗ್ರೆಸ್ ಗೆ ತಕ್ಕಪಾಠ ಕಲಿಸುತ್ತೆವೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರರಾದ ಹಾಗೂ ಅಭ್ಯಥಿ೯ ಆಕಾಂಕ್ಷಿಯಾದ …

Read More »

ಪ್ರಾಚಾರ್ಯ ಹುದ್ದೆಗೇರಲು ನಕಲಿ ಅಂಕಪಟ್ಟಿ

ಧಾರವಾಡ : ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ವಸತಿ ಶಾಲೆಗೆ ಡಾ.ಯಲ್ಲಪ್ಪಗೌಡ ಪಿ.ಕಲ್ಲನಗೌಡರ ಎಂಬುವವರು ನಕಲಿ ಬಿ.ಇಡಿ ಅಂಕಪಟ್ಟಿ ನೀಡಿ ಪ್ರಾಂಶುಪಾಲ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಈ ಸಂಬಂಧ ಧಾರವಾಡದ ಉಪನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ವಾರ್ಡನ್ ಹುದ್ದೆಯಲ್ಲಿದ್ದ ಡಾ.ಯಲ್ಲಪ್ಪಗೌಡ ಕಲ್ಲನಗೌಡರ, ಉತ್ತರ ಪ್ರದೇಶದ ಬಿ.ಇಡಿ ಅಂಕಪಟ್ಟಿಯನ್ನು ನಕಲಿ ಮಾಡಿಸಿದ್ದ ಎನ್ನಲಾಗಿದೆ. 2001ರಲ್ಲೇ ಉತ್ತರ ಪ್ರದೇಶದ ಡಿಪಾರ್ಟ್‌ಮೆಂಟ್ ಆಫ್ ಓಪನ್ ಡಿಸ್ಟನ್ಸ್ ಎಜ್ಯುಕೇಶನ್ …

Read More »

ಚುನಾವಣಾ ಅಕ್ರಮ ತಡೆಯಲು ತೀವ್ರ ನಿಗಾ : ಸಮಗ್ರ ಮಾಹಿತಿ ನೀಡಿದ ಚುನಾವಣಾ ಅಧಿಕಾರಿ ಭರತ್.ಎಸ್.

ಧಾರವಾಡ : ಕರ್ನಾಟಕ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ-74 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 266 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಮತದಾರ ಸ್ನೇಹಿ ಮತಗಟ್ಟೆ ಮಾಡಲು ಕ್ರಮ ವಹಿಸಲಾಗಿದೆ. 80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಭಾರತ ಚುನಾವಣಾ ಆಯೋಗ ಕಲ್ಪಿಸಿದ್ದು, ತೀರಾ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ 80 ವರ್ಷ ಮೇಲ್ಪಟ್ಟ ಮತದಾರರು ತಮ್ಮ ಹೆಸರು ಇರುವ ಮತಗಟ್ಟೆಗೆ ಬಂದು ಮತ ಹಾಕುವ ಮೂಲಕ …

Read More »

ನಾಪತ್ತೆ ಆಗಿದ್ದ ಬಾಲಕ ಇಂದು ಮುಳ್ಳಕಂಠಿಯಲ್ಲಿ ಶವವಾಗಿ ಪತ್ತೆ

ಹುಬ್ಬಳ್ಳಿ: ಬಾಲಕನೋರ್ವ ರಜೆಕ್ಕೆಂದು ತನ್ನ ಅಜ್ಜಿಯ ಮನೆಗೆಬಂದು, ನಿನ್ನೆ ಸಂಜೆ ಕಾಣೆಯಾಗಿ ಇಂದು ತನ್ನ ಮನೆಯ ಕೂಗಳತೆಯ ಮುಳ್ಳು ಕಂಠಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಹುಬ್ಬಳಿಯಲ್ಲಿ ನಡೆದಿದೆ. ಮಿಲತ್ ನಗರದ‌ ದೊಡ್ಡಮನಿ ಮೈದಾನದಲ್ಲಿ ಘಟನೆ ನಡೆದಿದ್ದು, ಶವವಾಗಿ ಪತ್ತೆಯಾಗಿರುವ ಬಾಲಕನ್ನು ಏಂಟು ವರ್ಷದ ನದೀಂ ಎಂದು ಗುರುತಿಸಲಾಗಿದೆ. ಹಣದಾಸೆ ತೋರಿಸಿ ದುಷ್ಕರ್ಮಿಗಳು ಬಾಲಕನ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಮೃತ ನದೀಂ ಭೈರಿದೇವರಕೊಪ್ಪದ ನಿವಾಸಿಯಾಗಿದ್ದು, ಬೇಸಿಗೆ …

Read More »

ಲೋಕೋಪಯೋಗಿ ಚರಂಡಿಗಳ ಕಾಮಗಾರಿ ಕಳಪೆ ಎಂದು ಜನರಿಂದ ಆರೋಪ

ಕುಂದಗೋಳ : ಲೋಕೋಪಯೋಗಿ ಇಲಾಖೆ ಕುಂದಗೋಳ ಪಟ್ಟಣದ ಅಭಿವೃದ್ಧಿಗಾಗಿ ನಿರ್ಮಿಸುತ್ತಿರುವ ಕಾಮಗಾರಿಯೊಂದು ಸದ್ಯ ಸ್ಥಳೀಯ ಜನರಿಗೆ ಬೇಸರ ತಂದಿದ್ದು, ಜನ ಕಾಮಗಾರಿ ಕಳಪೆ ಆಗಿದೆ ಎಂದು ಆರೋಪ ಮಾಡ್ತಾ ಇದ್ದಾರೆ. ಕುಂದಗೋಳ ಪಟ್ಟಣದ ಮಾರ್ಕೇಟ್ ರಸ್ತೆಯ ಅಕ್ಕಪಕ್ಕದ ಚರಂಡಿಗಳು ವಾಸದ ಮನೆಗಳಿಗಿಂತ ಎತ್ತರವಾಗಿವೆ, ಇದಲ್ಲದೆ ರಸ್ತೆ ಎತ್ತರಕ್ಕೆ ತಕ್ಕಂತೆ ಚರಂಡಿ ನಿರ್ಮಿಸದೇ ಕಿರಿದಾಗಿ ಚರಂಡಿ ನಿರ್ಮಿಸಿರುವುದರಿಂದ ನಮ್ಮ ಮನೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗುವ ಭೀತಿ ಇದೆ ಎನ್ನುತ್ತಿದ್ದಾರೆ ಸ್ಥಳೀಯ ನಿವಾಸಿಗಳು. …

Read More »

ಡಿಕೆ ಶಿವಕುಮಾರ್, ಸಿದ್ದರಾಮಯ್ಯ ತಿರುಕನ ಕನಸು ಕಾಣ್ತೀದ್ದಾರೆ-ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕಾಂಗ್ರೆಸ್ ನವರು ಅಧಿಕಾರಕ್ಕೆ ಬರಲ್ಲ ಎಂದು ನಾನು ಸ್ಪಷ್ಟವಾಗಿ ಹೇಳ್ತೀನಿ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ತಿರುಕನ ಕನಸು ಕಾಣ್ತೀದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಬಗ್ಗೆ ನೀರಿಕ್ಷೆ ಇತ್ತು. ಇವತ್ತು ಚುನಾವಣೆ ಘೋಷಣೆಯಾಗಿದೆ. ಮೋದಿ ಹಾಗೂ ಅಮಿತ್ ಶಾ ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ. ಬಿಜೆಪಿ ಚುನಾವಣೆಗೆ ಅಣಿಯಾಗಿದೆ. ರಾಜ್ಯದಲ್ಲಿ ಬಿಜೆಪಿ ಪೂರಕ ವಾತಾವರಣ ಇದೆ. ಜರನಿಂದ ಒಳ್ಳೆಯ …

Read More »

ರಾಹುಲ್ ಗಾಂಧಿಯವರನ್ನು ಸಂಸತ್ತು ಸ್ಥಾನದಿಂದ ಅನಹ೯ಗೊಳಿಸಿರುವದನ್ನು ಖಂಡಿಸಿ ಪ್ರತಿಭಟನೆ

ಧಾರವಾಡ:ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ತು ಸ್ಥಾನದಿಂದ ಅನಹ೯ಗೊಳಿಸಿರುವದನ್ನು ಖಂಡಿಸಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಘಟಕ ಹಾಗೂ ವಿವಿಧ ಘಟಕಗಳಿಂದ ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಶಿವಲೀಲಾ.ವಿನಯ್ ಕುಲಕರ್ಣಿ,ಅರವಿಂದ ಎಗನಗೌಡರ ಈಶ್ವರ ಶಿವಳ್ಳಿ,ನಂದೀಶ ನಾಯ್ಕರ,ಮೆಹಬೂಬ ಮುಲ್ಲಾ,ಆನಂದ ಸಿಂಗವಾಥ,ಅಶೂಕ ದೂಡಮನಿ,ಮೈಲಾರಿ ಪಾಟೀಲ,ಚನ್ನಬಸಪ್ಪ ಮಟ್ಟಿ ಉಪಸ್ಥಿತರಿದ್ದರು.

Read More »

ಪತ್ರಕರ್ತನನ್ನು ಬಂಧಿಸಿದ ಪೊಲೀಸರು: ಪತ್ರಕರ್ತರ ಸಂಘದಿಂದ ಪ್ರತಿಭಟನೆ

ಹುಬ್ಬಳ್ಳಿ: ಹಿರಿಯ ಪತ್ರಕರ್ತ ಮೆಹಬೂಬ್ ಮುನವಳ್ಳಿ ಅವರನ್ನು ವಿಚಾರಣೆ ನೆಪದಲ್ಲಿ ದಾವಣಗೆರೆ ಜಿಲ್ಲಾ ಪೋಲಿಸರು ಕರೆದೊಯ್ದು ಬಂಧನ ಮಾಡಿರುವುದನ್ನು ಖಂಡಿಸಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮೌನಪ್ರತಿಭಟನೆ ನಡೆಸಿದರು. ಇಲ್ಲಿನ ಲ್ಯಾಮಿಂಗ್ಟನ್ ರಸ್ತೆಯ ಪತ್ರಕರ್ತರ ಭವನದಿಂದ ನೂರಾರು ಪತ್ರಕರ್ತರು ತಹಶಿಲ್ದಾರರ ಕಚೇರಿವರೆಗೆ ಮೌನ ಮೆರವಣಿಗೆ ಹೋಗಿ ರಾಜ್ಯದ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಣಿ ಸದಸ್ಯ ಸಂಗಮೇಶ ಮೆಣಸಿನಕಾಯಿ ಮಾತನಾಡಿ, ರಾಜ್ಯದಲ್ಲಿ …

Read More »

ಕಲ್ಲು ತೂರಿದವರು ನಿಜವಾದ ಮೀಸಲಾತಿ ಬಗ್ಗೆ ಕಳಕಳಿ ಇದ್ದವರಲ್ಲ-ಶಾಸಕ ಅರವಿಂದ ಬೆಲ್ಲದ್

ಹುಬ್ಬಳ್ಳಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆಯ ಮೇಲಿನ ಕಲ್ಲು ತೂರಾಟ ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ್ ತಿಳಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಬಂಜಾರ ಸಮೂದಾಯದ ಪ್ರತಿಭಟನೆ ವೇಳೆಯಲ್ಲಿ ಮನೆಯ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಕಲ್ಲು ತೂರಿದವರು ನಿಜವಾದ ಮೀಸಲಾತಿ ಬಗ್ಗೆ ಕಳಕಳಿ ಇದ್ದವರಲ್ಲ. ಒಳಮೀಸಲಾತಿ ಕೊರಚ, ಭೋವಿ – ವಡ್ಡರು ಶೇ.03 ರಷ್ಟು ಮೀಸಲಾತಿ ಕೇಳಿದ್ದರು. ಆದರೆ …

Read More »