admin
April 12, 2022
Breaking News, ಧಾರವಾಡ
ಧಾರವಾಡ: ನುಗ್ಗಿಕೇರಿಯಲ್ಲಿ ಮುಸ್ಲಿಂ ವ್ಯಾಪಾರಿ ಅಂಗಡಿ ಧ್ವಂಸಗೊಳಿಸಿದ ಆರೋಪಿಗಳನ್ನು ಶಿಕ್ಷೆಗೊಳಪಡಿಸುವಂತೆ ಆಗ್ರಹಿಸಿ ಜಾತ್ಯತೀತ ಜನತಾದಳ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಜಿಲ್ಲಾ ಅಧ್ಯಕ್ಷರಾದ ಬಿ.ಬಿ.ಗಂಗಾಧರಮಠ , ಗುರುರಾಜ ಹುಣಶಿಮರದ , ಮುಖಂಡ ರಾದದೇವರಾಜ ಕಂಬಳಿ , ಶಾಂತವೀರಬೆಟಗೇರಿ , ಗಂಗಾಧರ ಪೆರೂರ , ಸಾಧಿಕ ಹಕೀಮ್ , ಪರ್ವೆಜ್ ಕಟ್ಟಿಮನಿ , ಇಮತಿಹಾಜ್ ತಡಕೋಡ ಇದ್ದರು .
Read More »
admin
April 12, 2022
Breaking News, ಧಾರವಾಡ
ಧಾರವಾಡ : ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಹಣ್ಣಿನ ವ್ಯಾಪಾರಿ ನಬೀಸಾಬ ಕಿಲ್ಲೇದಾರಗೆ ಅಂಜುಮನ್ ಸಂಸ್ಥೆಯಿಂದ ಆರ್ಥಿಕ ನೆರವು ನೀಡಲಾಯಿತು. ಸಮಾಜದ ಮುಖಂಡ ಮೊಹಮ್ಮದ ಇಸ್ಮಾಯಿಲ್ ತಮಟಗಾರ , ಅಂಜುಮನ್ ಅಧ್ಯಕ್ಷ ಇಟ್ಬಾಲ್ ಜಮಾದಾರ , ಕಾರ್ಯದರ್ಶಿ ನಜೀರಹುಸೇನ ಮನಿಯಾರ ಇನ್ನಿತರರು ಉಪಸ್ಥಿತರಿದ್ದರು .
Read More »
admin
April 11, 2022
Breaking News, ಧಾರವಾಡ
ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಧಾರವಾಡದಲ್ಲಿ ಹಮ್ಮಿಕೊಂಡಿದ್ದ ರೈಸಿಂಗ್ ಸ್ಟಾರ್ಸ್ ಆರ್ಟ್ & ಕಲ್ಬರಲ್ ಅಕಾಡೆಮಿ ಇದರ ನೂತನ ಸಾಂಸ್ಕೃತಿಕ ಭವನ ಹಾಗೂ ರಾಜ್ಯಮಟ್ಟದ ಸಾಂಸ್ಕೃತಿಕ ಕಲಾ ಮೇಳವನ್ನು ಶಾಸಕ ಪ್ರಸಾದ್ ಅಬ್ಬಯ್ಯ ಉದ್ಘಾಟಿಸಿ , ಜನಪದ ಸಾಹಿತ್ಯ ಬೆಳೆದು ಬಂದ ಬಗೆ ಹಾಗೂ ಪ್ರಸ್ತುತ ಕಲೆ ಹಾಗೂ ಕಲಾವಿದರಿಗೆ ದೊರೆಯುತ್ತಿರುವ ಸ್ಥಾನಮಾನ , ಗೌರವದ ಬಗ್ಗೆ ಪ್ರಸ್ತಾಪಿಸಿ ಅಕಾಡೆಮಿಯ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯವಾದ …
Read More »
admin
April 11, 2022
Breaking News, ಧಾರವಾಡ
ಧಾರವಾಡ : ತಾಲೂಕಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ( ಕೆಡಿಪಿ ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಶಾಸಕ ಅಮೃತ ಅಯ್ಯಪ್ಪ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 12 ರಂದು ಮಧ್ಯಾಹ್ನ 3 ಘಂಟೆಗೆ ಧಾರವಾಡ ತಾಲೂಕು ಪಂಚಾಯತ ಸಭಾಭವನದಲ್ಲಿ ಜರುಗಲಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಬಿ.ಜಗಲಾಸಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
Read More »
admin
April 11, 2022
Breaking News, ಧಾರವಾಡ
ಧಾರವಾಡ: ಶನಿವಾರ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡುತ್ತಿದ್ದ ನಬೀಸಾಬ್ ಗೌಸುಸಾಬ್ ಕಿಲ್ಲೇದಾರ, ಮೆಹಬೂಬ್‌ಸಾಬ್ ಮುಜಾವರ್, ಶರೀಫ್ ತಡಕೋಡ ಇವರ ಅಂಗಡಿಗಳನ್ನು 8ರಿಂದ 10 ಜನರಿದ್ದ ಗುಂಪು ದ್ವಂಸಗೊಳಿಸಿತ್ತು. ಮುಸ್ಲಿಮರಿಗೆ ಸೇರಿದ ಅಂಗಡಿಗಳ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮೈಲಾರಪ್ಪ ಗುಡ್ಡಪ್ಪನವರ (27), ಮಹಾನಿಂಗ ಐಗಳಿ (26), ಚಿದಾನಂದ ಕಲಾಲ (25), ಕುಮಾರ ಕಟ್ಟಿಮನಿ (26) ಎಂಬುವವರನ್ನು ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ವಶಕ್ಕೆ …
Read More »
admin
April 10, 2022
Breaking News, ಧಾರವಾಡ
ಧಾರವಾಡ : ಭಾರಿ ವಾಹನಗಳಿಗೆ ನಿಷೇಧವಿದ್ದರೂ , ಅದನ್ನು ವಿರೋಧಿಸಿ ಸಂಚಾರ ಮಾಡಿದ ಪರಿಣಾಮ , ಮಿನಿ ಟೆಂಪೋ ಒಂದು ಕಿಲ್ಲಾದ ಕಮಾನ್ ಮುಂದೆ ಇರುವ ದೊಡ್ಡದಾದ ಕಬ್ಬಿಣದ ಪೋಲ್ ಗೆ ಸಿಕ್ಕಿಹಾಕಿಕೊಂಡ ಘಟನೆ ರವಿವಾರ ನಸುಕಿನ ಜಾವ ನಡೆದಿದೆ ಇದನ್ನೆಲ್ಲಾ ಧಿಕ್ಕರಿಸಿದ ಪ್ರಮೋದ ರೋಡಲೈನ್ಸ ಎನ್ನುವ ಮಿನಿ ಟೆಂಪೊ ಸಂಚಾರ ಮಾಡಲು ಹೋಗಿ ಈ ರೀತಿ ಸಿಲುಕಿ ಹಾಕಿಕೊಂಡಿತ್ತು . ಧಾರವಾಡ ಶಿವಾಜಿ ವೃತ್ತದಲ್ಲಿ ಇರುವ ಕಿಲ್ಲಾದ ಕಮಾನ್ …
Read More »
admin
April 9, 2022
Breaking News, ಧಾರವಾಡ
ಧಾರವಾಡ: ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಿಂದ ಪುಡಕಲಕಟ್ಟಿ ಮಾರ್ಗವಾಗಿ ಧಾರವಾಡಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆ ಬಸ್ ಪಲ್ಟಿಯಾಗಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಕರಡಿಗುಡ್ಡ ಗ್ರಾಮದ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಪುಡಕಲಕಟ್ಟಿ ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 35-40 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು . ಬಸ್ ಕರಡಿಗುಡ್ಡ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ . ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ …
Read More »
admin
April 9, 2022
Breaking News, ಧಾರವಾಡ
ಹುಬ್ಬಳ್ಳಿ : ರಾಷ್ಟ್ರೀಯ ಬಸವದಳ ಮತ್ತು ಧಾರವಾಡದ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧೀಶರಾದ ಶ್ರೀ ಜಗದ್ಗುರು ಮಾತೆ ಜ್ಞಾನೇಶ್ವರಿಯವರ ನೇತೃತ್ವದಲ್ಲಿ ಇದೇ ದಿ. ೧೫ ಹಾಗೂ ೧೬ ರಂದು ಶರಣೋತ್ಸವ ಕಾರ್ಯಕ್ರಮವು ಧಾರವಾಡ ಉಳವಿ ರಸ್ತೆಯ ಅಕ್ಕಮಹಾದೇವಿ ಅನುಭಾವ ಪೀಠದಲ್ಲಿ ಜರುಗಲಿದೆ ಎಂದು ಅಲ್ಲಮಗಿರಿಯ ಬಸವಕುಮಾರ ಸ್ವಾಮಿಗಳು ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,, ೨೦೧೦ ರಿಂದ ನಿರಂತರವಾಗಿ ಶರಣೋತ್ಸವ ಕಾರ್ಯಕ್ರಮ ಜರಗುತ್ತಿದ್ದು, ಅಂದು ಅಕ್ಕಮಹಾದೇವಿ ಪೀಠದ ಪೀಠಾರೋಹಣ, …
Read More »
admin
April 9, 2022
Breaking News, ಧಾರವಾಡ
ಧಾರವಾಡ:ಜೀವನಾಂಶಗಳ ಬೆಲೆಯೇರಿಕೆಯನ್ನು ಖಂಡಿಸಿ ಜಯನಗರದ ವೃತ್ತ ದ ಹತ್ತಿರ ಕಾಂಗ್ರೆಸ್ ಪಕ್ಷದ ರಾಣಿ ಚೆನ್ನಮ್ಮ ಬ್ಲಾಕ್ ವತಿಯಿಂದ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು. ಬೀದಿಯಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು, ಸ್ಕೂಟರಗಳು, ಬೈಕುಗಳು ಕಾರುಗಳನ್ನು ಇಟ್ಟು ಅವುಗಳಿಗೆ ಹೂವಿನ ಹಾರ ಹಾಕಿ ಶೃದ್ಧಾಂಜಲಿ ಸಲ್ಲಿಸುವ ಮುಖಾಂತರಕೇಂದ್ರದ ಬೆಲೆಯೇರಿಕೆಯನ್ನು ಖಂಡಿಸಿ ಬ್ಲಾಕ್ ಅಧ್ಯಕ್ಷರಾದ ನಾಗರಾಜ ಗೌರಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರುಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಅಧ್ಯಕ್ಷರಾದ ನಾಗರಾಜ ಗೌರಿ ಪಂಚರಾಜ್ಯಗಳ ಚುನಾವಣೆ ವೇಳೆಯಲ್ಲಿ …
Read More »
admin
April 9, 2022
Breaking News, ಧಾರವಾಡ
ಧಾರವಾಡ : ನಗರದ ಸತ್ತೂರು ಕೈಗಾರಿಕಾ ಪ್ರದೇಶದ ಹಾಗೂ ಸುತ್ತಮುತ್ತಲಿನ ಜಾಗದಲ್ಲಿ ಅನಧಿಕೃತ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ ಮಹಾನಗರ ಪಾಲಿಕೆ ಸಿಬ್ಬಂದಿ ನಡೆಸಿದ್ದಾರೆ. ಬೆಳಂ ಬೆಳಿಗ್ಗೆ ಕಾರ್ಯಾಚರಣೆಗೆ ಇಳಿದ ಮಹಾನಗರ ಪಾಲಿಕೆ ಸಿಬ್ಬಂದಿ ಪುಟ್ ಬಾತ್ ಅತಿಕ್ರಮಣ ಮಾಡಿಕೊಂಡ ಡಬ್ಬಾ ಅಂಗಡಿ ಮುಂಗಟ್ಟುಗಳ ತೆರವು ಮಾಡಿದ್ದಾರೆ .
Read More »