ಹುಬ್ಬಳ್ಳಿ : ರಾಷ್ಟ್ರೀಯ ಬಸವದಳ ಮತ್ತು ಧಾರವಾಡದ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧೀಶರಾದ ಶ್ರೀ ಜಗದ್ಗುರು ಮಾತೆ ಜ್ಞಾನೇಶ್ವರಿಯವರ ನೇತೃತ್ವದಲ್ಲಿ ಇದೇ ದಿ. ೧೫ ಹಾಗೂ ೧೬ ರಂದು ಶರಣೋತ್ಸವ ಕಾರ್ಯಕ್ರಮವು ಧಾರವಾಡ ಉಳವಿ ರಸ್ತೆಯ ಅಕ್ಕಮಹಾದೇವಿ ಅನುಭಾವ ಪೀಠದಲ್ಲಿ ಜರುಗಲಿದೆ ಎಂದು ಅಲ್ಲಮಗಿರಿಯ ಬಸವಕುಮಾರ ಸ್ವಾಮಿಗಳು ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,, ೨೦೧೦ ರಿಂದ ನಿರಂತರವಾಗಿ ಶರಣೋತ್ಸವ ಕಾರ್ಯಕ್ರಮ ಜರಗುತ್ತಿದ್ದು, ಅಂದು ಅಕ್ಕಮಹಾದೇವಿ ಪೀಠದ ಪೀಠಾರೋಹಣ, ಸಾಮೂಹಿಕ ಪ್ರಾರ್ಥನೆ, ಪ್ರವಚನ, ವಚನ ಗಾಯನ, ವಚನ ನೃತ್ಯ ಮುಂತಾದ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲಾ ಶರಣ, ಶರಣೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.
ಅಂದಿನ ಕಾರ್ಯಕ್ರಮಕ್ಕೆ ಶರಣೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಅರವಿಂದ್ ಬೆಲ್ಲದ್, ಕೂಡಲಸಂಗಮ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿ, ಧಾರವಾಡದ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧ್ಯಕ್ಷೆ ಶ್ರೀ ಜಗದ್ಗುರು ಮಾತೆ ಜ್ಞಾನೇಶ್ವರಿ, ಕುಂಬಳಗೋಡ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರು ಹಾಗೂ ಶರಣೋತ್ಸವ ಸಮಿತಿಯ ಪ್ರಧಾನ ಸಂಘಟಕರಾದ ಚನ್ನಬಸವ ಚನ್ನಬಸವಾನಂದ ಸ್ವಾಮೀಜಿ,, ಕಲಬುರ್ಗಿ ಬಸವ ಮಂಟಪದ ಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿ, ಬೀದರನ ಬಸವ ಮಂಟಪದ ಸದ್ಗುರು ಮಾತೆ ಸತ್ಯಾದೇವಿ, ಬೆಳಗಾವಿ ಗುರು ಮಂಟಪದ ಸದ್ಗುರು ಶ್ರೀ ಬಸವಪ್ರಕಾಶ ಸ್ವಾಮಿಜಿ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಧಾರವಾಡದ ಅಕ್ಕಮಹಾದೇವಿ ಪೀಠಧ ಜ್ಞಾನೇಶ್ವರಿ ಮಾತಾಜೀ, ಚಿತ್ರದುರ್ಗದ ದಾನೇಶ್ವರಿ ಮಾತಾಜೀ ಸೇರಿದಂತೆ ಉಪಸ್ಥಿತರಿದ್ದರು..
bigtvnews | Hubli Dharwad News | Kannada News | Karnataka News Hubli News | News In Hubli | Local news

