Breaking News

ಧಾರವಾಡ

ಇಂದು ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನಾ ಸಮಾರಂಭ

ಧಾರವಾಡ: ನಗರದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿ ವತಿಯಿಂದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನಾ ಸಮಾರಂಭವನ್ನು ಇಂದು  ಬೆಳಿಗ್ಗೆ 10.30 ಕ್ಕೆ ನಗರದ ಜೆಎಸ್ಎಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಮುರುಘಾಮಠದ ಮಲ್ಲಿಕಾರ್ಜುನ ಸಾನಿಧ್ಯವಹಿಸಲಿದ್ದಾರೆ.ಖ್ಯಾತ ಸ್ವಾಮೀಜಿ ಸಂಸ್ಕೃತ ವಿದ್ವಾಂಸ ವೆಂಕಟ ನರಸಿಂಹ ಜೋಶಿಯವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.ಜೆಎಸ್ಎಸ್ ಕಾರ್ಯದರ್ಶಿ ಹಾಗೂ ಎಸ್‌ಡಿಎಂ ಸಂಸ್ಥೆಯ ಉಪಾಧ್ಯಕ್ಷ ಡಾ.ನ.ವಜ್ರಕುಮಾರ ಅಧ್ಯಕ್ಷತೆ ವಹಿಸುವರು . ಜೆಎಸ್ಎಸ್ ವಿತ್ತಾಧಿಕಾರಿ ಡಾ.ಅಜಿತ ಪ್ರಸಾದ ಉಪಸ್ಥಿತರಿರುವರು ಎಂದು …

Read More »

ಜಗಜೀವನ ರಾಮ್ ಗೆ ನಮನ ಸಲ್ಲಿಸಿದ ಅರವಿಂದ್ ಬೆಲ್ಲದ್

ಧಾರವಾಡ : ಕೋಡಿಹಳ್ಳಿ ಶ್ರೀ ಆದಿಜಾಂಭವ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಷಡಕ್ಷರಮುನಿ ದೇಶೀಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದೊಂದಿಗೆ ಆಯೋಜಿಸಿದ ಡಾ.ಬಾಬು ಜಗಜೀವನ ರಾಮ್ ಅವರ 115 ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಭಾಗಿಯಾಗಿ ಬಾಬೂಜೀ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು . ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತರಾದ ಶ್ರೀ ಸುಭಾಷ್ ಜಿ . ವಾಲಿ , …

Read More »

ಕಲಬುರ್ಗಿ ಹತ್ಯೆ ಆರೋಪಿಗಳು ಮತ್ತೆ ಕೋರ್ಟ್‌ಗೆ ಹಾಜರು: ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ

ಧಾರವಾಡ: ಧಾರವಾಡದ ಹಿರಿಯ ಸಂಶೋಧಕರಾಗಿದ್ದ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಆರೋಪಿಗಳನ್ನು ಪೊಲೀಸರು ಬಿಗಿ ಬಂದೋಬಸ್ತ್ ಮಧ್ಯೆ ಧಾರವಾಡದ ನಾಲ್ಕನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇಂದು ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಅಮೋಲ್ ಕಾಳೆ, ಪ್ರವೀಣ ಚತುರ್, ಗಣೇಶ ಮಿಸ್ಕಿನ್, ಅಮಿತ್ ಬುದ್ಧಿ, ವಾಸುದೆವ ಸೂರ್ಯವಂಶಿ ಹಾಗೂ ಶರತ್ ಕಲಾಸ್ಕರ್ ಎಂಬ ಆರು ಜನ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತಂದಿದ್ದಾರೆ. ಈ ಆರೂ ಜನ ಆರೋಪಿಗಳು ಇಂದು ನ್ಯಾಯಾಲಯಕ್ಕೆ ಬಿಳಿ ಬಣ್ಣದ ಬಟ್ಟೆ …

Read More »

ಏ. 12 ರಂದು ಕೆಡಿಪಿ ಸಭೆ

ಧಾರವಾಡ : ಏಪ್ರೀಲ್ 12 ರಂದು ಮಧ್ಯಾಹ್ನ 3 ಘಂಟೆಗೆ ಧಾರವಾಡ ತಾಲೂಕು ಪಂಚಾಯತ ಸಭಾಭವನದಲ್ಲಿ2021-22ನೇ ಸಾಲಿನ ಮಾರ್ಚ -2022 ರ ಅಂತ್ಯದ ವರೆಗೆ ಧಾರವಾಡ ತಾಲೂಕಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ( ಕೆಡಿಪಿ ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಶಾಸಕ ಅಮೃತ ಅಯ್ಯಪ್ಪ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ  ಜರುಗಲಿದೆ. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಬಿ.ಜಗಲಾಸಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Read More »

ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಕ್ಕೆ : ಗುರಿಕಾರ ಬೆಂಬಲ

ಧಾರವಾಡ: ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಬೇಕು ಎಂದು ಆಗ್ರಹಿಸ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಸದಸ್ಯರು ನಡೆಸುತ್ತಿರುವ ಧರಣಿಗೆ ಕರ್ನಾಟಕ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿಂದೆಯೇ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾಡಬೇಕಿತ್ತು. ವಿಳಂಬ ಆಗಿದೆ. ಈಗಲೂ ಕಾಲ ಮಿಂಚಿಲ್ಲ. ಧಾರವಾಡದ ಜನತೆಯ ಅಳಲನ್ನು ಆಲಿಸಿ ಕೂಡಲೇ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಂಜೂರು ಮಾಡಬೇಕು …

Read More »

ಧಾರವಾಡದಲ್ಲಿ ಜನತಾ ಪಕ್ಷದ ಸ್ಥಾಪನಾ ದಿನ ಆಚರಣೆ

ಧಾರವಾಡ : ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನದ ನಿಮಿತ್ತ , ಧಾರವಾಡದ ಭಾರತೀಯ ಜನತಾ ಪಕ್ಷದ ಕಚೇರಿ ಬಳಿಯ ವಿವೇಕಾನಂದ ಸರ್ಕಲ್‌’ನಲ್ಲಿ ಶ್ರೀ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಶಾಸಕ ಅರವಿಂದ್ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು . ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸಂಜಯ್ ಕಪಟಕರ್ , ಮಂಡಲ ಅಧ್ಯಕ್ಷರಾದ ಬಸವರಾಜ ಗರಗ ಸೇರಿದಂತೆ ಪಕ್ಷದ ಪ್ರಮುಖರು , ಮುಖಂಡರು ಹಾಗೂ ವಿವಿಧ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು .

Read More »

ಮಸೀದಿ ಮೈಕ್ ನಿಷೇಧಿಸಕ್ಕೆ ತಹಶೀಲ್ದಾರರು ಡೋಂಟ್ ಕೇರ್ : ಮುತಾಲಿಕ್ ಆರೋಪ

ಧಾರವಾಡ :ಮಸೀದಿ ಮೇಲೆ ಹಾಕಲಾಗಿರುವ ಮೈಕ್ ನಿಷೇಧಿಸಬೇಕು ಇಲ್ಲವೇ ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು ಎಂದು ಕಳೆದ 6 ತಿಂಗಳ ಹಿಂದೆ ಶ್ರೀರಾಮ ಸೇನೆ ಸಂಘಟನೆಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು . ಆದರೆ , ತಹಶೀಲ್ದಾರರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆರೋಪಿಸಿದರು. ನಗರದಲ್ಲಿ ಮಾತನಾಡಿರುವ ಅವರು , ಮಸೀದಿಗಳಿಂದ ಬರುತ್ತಿರುವ ಶಬ್ದವನ್ನು ತಡೆಗಟ್ಟುವ ಸಂಬಂಧ ಶಬ್ದ ಮಾಲಿನ್ಯ ತಡೆಗಟ್ಟುವ ಇಲಾಖೆಗೆ ಮನವಿ …

Read More »

ಜವಾಹರ ನವೋದಯ ವಿದ್ಯಾಲಯದ ಪ್ರವೇಶಕ್ಕಾಗಿ ಏ. 9 ರಂದು ಪರೀಕ್ಷೆ

ಧಾರವಾಡ : ವಿದ್ಯಾಕಾಶಿಯ ಜಿಲ್ಲೆಯ ಜವಾಹರ ನವೋದಯ ವಿದ್ಯಾಲಯದ 22-23 ನೇ ಸಾಲಿನ 9 ನೇ ತರಗತಿಯ ಪ್ರವೇಶಕ್ಕಾಗಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು nvsadmissionclassnine . in / nvs / home w ಡೌನ್‌ಲೋಡ್ ಮಾಡಿಕೊಂಡು ಏಪ್ರಿಲ್ 9 ರಂದು ಬೆಳಿಗ್ಗೆ 9-30 ಗಂಟೆಗೆ ಧಾರವಾಡದ , ಕ್ಯಾರಕೊಪ್ಪ ರಸ್ತೆಯಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ಪರೀಕ್ಷೆಗೆ ಹಾಜರಾಗಬಹುದು . ಹೆಚ್ಚಿನ ಮಾಹಿತಿಗಾಗಿ ದೂರವಾಣಿ 9164559704 …

Read More »

ಧಾರವಾಡಲ್ಲಿ ಐಪಿಎಲ್ ಬೆಟಿಂಗ್ ಹಾವಳಿ : 3 ಆರೋಪಿಗಳು ಬಂಧನ

ಧಾರವಾಡ : ನಗರದ ಕೆಲಗೇರಿ ಬಳಿಯ ಆಂಜನೇಯ ನಗರದಲ್ಲಿ ಮೊಬೈಲ್‌ನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಗಳನ್ನ ಸಿಸಿಬಿ ಇನ್ಸಪೆಕ್ಟರ್ ಎಚ್.ಎಂ. ಪಾಟೀಲ ಮತ್ತು ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ . ಆಂಜನೇಯ ನಗರದ ಬಸವರಾಜ ಧರಿಯಪ್ಪ ಬಳ್ಳೋಳ್ಳಿ ಮತ್ತು ಕಾರ್ತಿಕ ಪರಶುರಾಮ ಗೊಡ್ಡೆಮ್ಮಿ ಎಂಬುವವರು ಬೆಂಟಿಗ್ ಆಡುತ್ತೀದ್ದ ಆರೋಪಿಗಳು ಆಗದ್ದಾರೆ. ದಾಳಿ ಸಂದರ್ಭದಲ್ಲಿ ಬಸವರಾಜ ವಾಲೀಕಾರ ಮತ್ತು ರವಿ ವಾಲೀಕಾರ ಎಂಬುವರು ಪರಾರಿಯಾಗಿದ್ದಾರೆ. ಬಂಧಿತರಿಂದ 2020 ರೂಪಾಯಿ ನಗದು ಮತ್ತು 2 …

Read More »

ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಧರಣಿ ಸತ್ಯಾಗ್ರಹ ನಾಳೆಯಿಂದ

ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಇದೇ ದಿ. 5 ರಂದಿ ಎರಡು ವಾರಗಳ ಕಾಲ ಹೋರಾಟ ವೇದಿಕೆ ಧರಣಿ ಸತ್ಯಾಗ್ರಹ ಕೈಗೊಳ್ಳಲಿದೆ. ಸಮಯ ಪ್ರತಿ ದಿನ ಮುಂಜಾನೆ 10:00 ಗಂಟೆಯಿಂದ ಸಾಯಂಕಾಲ 6: ಗಂಟೆವರೆಗೆ. ಮಹಾನಗರ ಪಾಲಿಕೆ, ಧಾರವಾಡ ಕಚೇರಿ ಹತ್ತಿರ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಸಂಚಾಲಕರಾದ ಮನೋಜ ಪಾಟೀಲ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಧರಣಿ ಸತ್ಯಾಗ್ರಹ ನಡೆಸುವುದಕ್ಕೆ ನಗರದ …

Read More »