Breaking News

ಸರಣಿ ವಾಹನ ಅಪಘಾತ : ಯುವಕನ ಸಾವು : ಇನ್ನೋರ್ವನಿಗೆ ಗಾಯ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡು ಸಮೀಪ ಸರ್ವಿಸ್‌ ರಸ್ತೆಯಲ್ಲಿ ಸಂಭವಿಸಿದ ಸರಣಿ ವಾಹನ ಅಪಘಾತದಲ್ಲಿ ಯುವಕನೋರ್ವ ಸಾವಿಗೀಡಾಗಿ, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬಳಿಯ ಪಡ್ನಡ್ಕ ಎನೆಕಲ್ಲು ನಿವಾಸಿ ಸುರೇಶ್‌ ರೈ ಅವರ ಪುತ್ರ ನಿರಂಜನ ಕೆ(24) ಸಾವಿಗೀಡಾಗಿದ್ದಾರೆ. ಮಂಗಳೂರು ಶಕ್ತಿನಗರ ನೀತಿ ನಗರದ ಬೆನ್ನಿ ಎಂ.ಜೆ. ಅವರ ಪುತ್ರ ಕೃತಿಕ್‌ ಬೆನ್ನಿ (23) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ಮುಂಜಾನೆ12.40ಕ್ಕೆಪಿಕಪ್‌ ಹಾಗು ಎರಡು ಬೈಕ್‌ಗಳು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಪ್ರವಾಸದಂಗವಾಗಿ ಬಂದು ಐದು ಬೈಕ್‌ಗಳಲ್ಲಿ ಹಿಂತಿರುಗತ್ತಿದ್ದಾಗ ಬೈಕ್‌ಗಳೆರಡು ಪಿಕಪ್‌ಗೆ ಢಿಕ್ಕಿ ಹೊಡೆದಿರುವುದಾಗಿ ಹೇಳಲಾಗುತ್ತಿದೆ. ಇದರಿಂದ ನಿರಂಜನ್‌ ಹಾಗು ಕೃತಿಕ್‌ ಬೆನ್ನಿ ಗಂಭೀರ ಗಾಯಗೊಂಡಿದ್ದರು. ಇವರನ್ನು ಬಂದ್ಯೋಡಿನ ಆಸ್ಪತ್ರೆಗೆ ಸಾಗಿಸಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ತಲುಪಿಸಲಾಗಿತ್ತು. ಇಬ್ಬರಿಗೂ ತುರ್ತು ಚಿಕಿತ್ಸೆನೀಡಿದರೂ ನಿರಂಜನ್‌ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *