Breaking News

ಧಾರವಾಡ

ನಾನು ಯಾವುದೇ ಕಾರಣಕ್ಕೂ ಬಿಜೆಪಿ‌ ಪಕ್ಷ ಬಿಡುವುದಿಲ್ಲ : ಅರವಿಂದ ಬೆಲ್ಲದ ಸ್ಪಷ್ಟನೆ

ಧಾರಾವಾಡ : ಬೆಲ್ಲದ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎನ್ನುವುದು ಶುದ್ದ ಸುಳ್ಳು. ಬೇರೆ ಬೇರೆ ಪತ್ರಿಕೆಗಳಲ್ಲಿ ಆ ಕುರಿತು ಸುದ್ದಿ ಪ್ರಕಟವಾಗಿತ್ತು,ಆದರೆ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಡುವುದಿಲ್ಲ. ಪಕ್ಷದಲ್ಲೆ ಇದ್ದು ಪಕ್ಷ ಬೆಳೆಸುವ ಕೆಲಸ ಮಾಡುತ್ತೇನೆ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದರು. ನಗರದಲ್ಲಿ‌ ಇಂದು ಸುದ್ದಿಗೋಷ್ಟಿ ಏರ್ಪಡಿಸಿ ಮಾತನಾಡಿದ ಅವರು, ಇದುವರೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಕುರಿತು …

Read More »

ಚಾಲಕರ ಸಿಬ್ಬಂದಿ ಕಾಯಂ ನೇಮಕಾತಿ ಆಗ್ರಹಿ ಪ್ರತಿಭಟನೆ

ಧಾರವಾಡ: ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಲ್ಲಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಕಾಯಂ ಸಿಬ್ಬಂದಿ ಎಂದು ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಚಾಲಕರು ಇಂದು ಪ್ರಚಾರ ಸಭಾದ ಎದುರು ಪ್ರತಿಭಟನೆ ನಡೆಸಿದರು. ಕಳೆದ 10 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಚಾಲಕರಾಗಿ ಕೆಲಸ ಮಾಡಲಾಗುತ್ತಿದೆ. ಕಾಯಂ ನೇಮಕಾತಿ ಮಾಡಿಕೊಳ್ಳಬೇಕೆಂದಒತ್ತಾಯಿ ಸಿದ್ದಕ್ಕಾಗಿ ಇಬ್ಬರು ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. 10 ವರ್ಷಗಳಿಂದ ಸೇವೆ ಸಲ್ಲಿಸಿದ್ದಕ್ಕೆ ಸಂಸ್ಥೆಯು ಯಾವುದೇ …

Read More »

8 ವಸತಿ ಗೃಹಗಳಿಗೆ ಬೀಗ ಜಡಿದ ಕಿರಾತಕರು

ಧಾರವಾಡ: ಆಕಾಶವಾಣಿಯ ವಸತಿ ಗೃಹಗಳಿಗೆ ಕಳ್ಳರು ಬೀಗ ಜಡಿದ ಘಟನೆ ಮಧ್ಯರಾತ್ರಿ ನಡೆದಿದೆ. ಆಕಾಶವಾಣಿ ಕ್ವಾರ್ಟರ್ಸನಲ್ಲಿನ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕೃತ್ಯ 8 ಮನೆಗಳಿಗೆ ಬೀಗ ಹಾಕಿದ್ದಾರೆ. ದರೋಡೆ ಮಾಡಲು ಬಂದವರಿಂದ ನಡೆದ ಕೃತ್ಯ ನಡೆದಿದೆ ಎನ್ನುವ ಸಂಶಯ ಪೊಲೀಸರದ್ದಾಗಿದೆ.ಮನೆಯಿಂದ ಇಂದು ಹೊರಗೆ ಬಾರದೆ ಆಕಾಶವಾಣಿ ಸಿಬ್ಬಂದಿ ಪರಿತಪಿಸಿದ ಘಟನೆ ನಡೆಯಿತು. ಒಳಗಿನಿಂದ ಬಾಗಿಲು ತೆರೆಯಲು ಬಾರದಿದ್ದಾಗ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಮನೆಗೆ ಬೀಗ ಹಾಕಿ ಊರಿಗೆ ಹೋಗಿರಬೇಕೆಂದು …

Read More »

1ರೂ. ಶುಲ್ಕ ನಿಗದಿ ಮೇರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ‘ಆನ್‌ಲೈನ್’ ತರಬೇತಿ

ಕಲಘಟಗಿ: ಮಾಜಿ ಸಚಿವ ಸಂತೋಷ್ ಲಾಡ್ ಫೌಂಡೇಷನ್‌ ವತಿಯಿಂದ ಫೆ.2ರಿಂದ ಕೆ.ಎ.ಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ‘ಆನ್‌ಲೈನ್’ ತರಬೇತಿ ನೀಡಲಾಗುತ್ತಿದ್ದು, ಅಭ್ಯರ್ಥಿಗಳಿಗೆ ₹1 ಶುಲ್ಕ ನಿಗದಿ ಪಡಿಸಲಾಗಿದೆ. ಧಾರವಾಡದ ವಿಶ್ವದರ್ಶನ ಕರಿಯರ ಅಕಾಡೆಮಿ ಸಹಕಾರದೊಂದಿಗೆ ಕೆ.ಎ.ಎಸ್, ಪಿ.ಎಸ್.ಐ, ಎಫ್.ಡಿ.ಎ, ಎಸ್.ಡಿ.ಎ, ಪಿ.ಡಿ.ಒ, ಪೊಲೀಸ್, ಟಿ.ಇ.ಟಿ, ಸಿ.ಇ.ಟಿ, ಗ್ರೂಪ್ ಸಿ, ಎಸ್.ಎಸ್.ಇ, ಬ್ಯಾಕಿಂಗ್ ಹಾಗೂ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್ ತರಬೇತಿ ನೀಡಲಾಗುತ್ತದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಇದರ …

Read More »

ಟೇಕ್ವಾಂಡೋ ಸ್ಪರ್ಧೆಯಲ್ಲಿ ಬಂಗಾರ ಪದಕ ವಿಜೇತ : ಧಾರವಾಡ ಕೀರ್ತಿಯನ್ನು ಹೆಚ್ಚಿಸಿದ ಮಿಲನ

ಧಾರವಾಡ:ಜಿಲ್ಲೆಯ ಸಿಂಗನಹಳ್ಳಿ ಗ್ರಾಮದ ಧಾರವಾಡ ಅಂತರರಾಷ್ಟ್ರೀಯ ಶಾಲೆಯ ಎಂಟನೇಯ ತರಗತಿ ವಿದ್ಯಾರ್ಥಿ ಮಿಲನ ಭಟ್ ಕಾಶಿಯಲ್ಲಿ ನಡೆದ ಕಾಶಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಓಪನ್ ಚಾಲೆಂಜ್ ಟೇಕ್ವಾಂಡೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಧಾರವಾಡ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಆತನು ಜಿಲ್ಲಾ ಮಟ್ಟದ ಟೇಕ್ವಾಂಡೋ ಕೆಡಿಟ್ ವಿಭಾಗದಲ್ಲಿ ಬಂಗಾರದ ಪದಕ ಗೆದ್ದು ನಂತರ ತುಮಕೂರಿನಲ್ಲಿ ನಡೆದ 38 ನೇ ರಾಜ್ಯ ಮಟ್ಟದ ಟೇಕ್ವಾಂಡೋ ಕೆಡಿಟ್ ವಿಭಾಗದಲ್ಲಿ ಬಂಗಾರದ ಪದಕ …

Read More »

ಲಾರಿಗೆ ತಗಲಿದ ಕಬ್ಬಿನ ಹೊಲದ ಬೆಂಕಿ ಸುಟ್ಟ ಬಸ್ಮವಾದ ವಾಹನ

ಧಾರವಾಡ: ಕಬ್ಬಿನ ಹೊಲದಲ್ಲಿ ಲಾರಿಗೆ  ಬೆಂಕಿ  ತಗುಲಿ ಲಾರಿ ಧಗಧಗನೆ ಹೊತ್ತಿ ಉರಿದಿರುವ ಘಟನೆ ದ್ಯಾಮಣ್ಣ ಗುಡಿಗಾಳ ಎನ್ನುವವರ ಜಮೀನಿನಲ್ಲಿ ಸಂಭವಿಸಿದ್ದು, ಜಿಲ್ಲೆಯ ಕಲಘಟಗಿ ತಾಲೂಕಿನ ಸೋಮನಕೊಪ್ಪ ಗ್ರಾಮದಲ್ಲಿ ನಡೆದಿದೆ.  ಲಾರಿ ಸ್ಟಾರ್ಟ್ ಮಾಡುವಾಗ ಬೆಂಕಿಯ ಕಿಡಿ ಕೆಳಗೆ ಬಿದ್ದಿದೆ. ಕಿಡಿ ಕಬ್ಬಿನ ಹೊಲಕ್ಕೆ ತಗುಲಿದೆ. ಬಳಿಕ ಬೆಂಕಿ ಲಾರಿಗೂ ತಗುಲಿ ಧಗಧಗನೆ ಉರಿದಿದೆ. ಬೆಂಕಿ ಕ್ಷಣ ಮಾತ್ರದಲ್ಲಿ ಸಂಪೂರ್ಣ ಲಾರಿಗೆ ವ್ಯಾಪಿಸಿ ಸುಟ್ಟು ಕರಕಲಾಗಿದೆ. ಬೆಂಕಿ ಪಕ್ಕದ ಮೂರು …

Read More »

ಮುಗದ ಕೆರೆಯಲ್ಲಿ ಅಳಿಯ, ಮಾವನ ದಾರುಣ ಸಾವು

ಧಾರವಾಡ: ಕೆರೆಯಲ್ಲಿ ಈಜಲೆಂದು ಹೋಗಿ ಈಜು ಬರದೇ ಮುಳುಗುತ್ತಿದ್ದ ಅಳಿಯನನ್ನು ರಕ್ಷಿಸಲು ಹೋಗಿ ಅಳಿಯನ ಸಮೇತ ಮಾವನೂ ದಾರುಣವಾಗಿ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಮುಗದ ಗ್ರಾಮದ ಕೆರೆಯಲ್ಲಿ ನಡೆದಿದೆ. ಅಳಿಯ ಕರೆಪ್ಪ ಎಂಬಾತ ಕೆರೆಯಲ್ಲಿ ಈಜಲು ಹೋಗಿದ್ದ. ಈತನಿಗೆ ಈಜು ಬರದೇ ಮುಳುಗುತ್ತಿದುದನ್ನು ಕಂಡು ಆತನ ರಕ್ಷಣೆಗೆ ಮಾವ ವಿಠ್ಠಲ ಕುರುಬರ ಧಾವಿಸಿದ್ದಾನೆ. ಆದರೆ, ಇಬ್ಬರಿಗೂ ಈಜು ಬರದೇ ಮುಳುಗಿ ಸಾವನ್ನಪ್ಪಿದ್ದಾರೆ. ಮುಗದ ಗ್ರಾಮದಲ್ಲಿ ಬೀರಲಿಂಗೇಶ್ವರ ಮೂರ್ತಿ ಸ್ಥಾಪನೆ …

Read More »

ಸರ್ವೋದಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಸ್ಥಾನ ವಿವಾದ : ಬಸವರಾಜ ಹೊರಟ್ಟಿ ವಿರುದ್ಧ ಕೇಸ್

ಹುಬ್ಬಳ್ಳಿ: ಧಾರವಾಡ ಸರ್ವೋದಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಸ್ಥಾನ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಅಖಿಲ‌ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾವು ಧಾರವಾಡದ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದೆ. ಈ ಮೂಲಕ ಶಿಕ್ಷಣ ಸಂಸ್ಥೆಯ ವಿವಾದ ಪೊಲೀಸ್​ ಮೆಟ್ಟಿಲೇರಿದೆ. ಕಳೆದ ಜ.22 ರಂದು ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಮಾಧ್ಯಮಗೋಷ್ಟಿ ನಡೆಸಿ, ಸಭಾಪತಿ ಬಸವರಾಜ ಹೊರಟ್ಟಿ ಸರ್ವೋದಯ ಟ್ರಸ್ಟ್​ಗೆ …

Read More »

ಹಾಡು ಹಗಲೇ ಮನೆ ಕಳ್ಳತನ : 1.50ಲಕ್ಷ ನಗದು, 4 ತ್ವಲೆ ಚಿನ್ನ ಕದ್ದು ಪರಾರಿಯಾಗ ಖದೀಮರು

ಧಾರವಾಡ : ಮನೆಯಲ್ಲಿ ಯಾರು ಇಲ್ಲದನ್ನು ನೋಡಿಕೊಂಡ ಕಳ್ಳರು, ಹಾಡು ಹಗಲೇ ಮನೆಯೊಂದಕ್ಕೆ ನುಗ್ಗಿ ಮನೆಯಲ್ಲಿದ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಕೊಂಡು ಪರಾರಿಯಾಗಿರು ಘಟನೆ ಧಾರವಾಡದ ಚಾಲುಕ್ಯ ನಗರದಲ್ಲಿ ನಡೆದಿದೆ. ನಗರದ ಶೆಟ್ಟರ್ ಕಾಲನಿಯ ಚಾಲುಕ್ಯ ನಗರದಲ್ಲಿ ಕಳ್ಳರು ವಿನಾಯಕ ಪಾಟೀಲರವರ ಮನೆಯಲ್ಲಿ ಚಾಲಾಕಿ ಕಳ್ಳರು ತಮ್ಮ ಕೈಚಳ ತೋರಿಸಿದ್ದಾರೆ. ಮುಂಜಾನೆಯ ಮನೆಯ ಸದಸ್ಯರೆಲ್ಲರು ಹೊರಗಡೆ ಕಾರ್ಯ ನಿಮಿತ್ಯ ತೆರಳಿದ್ದರು. ಮಧ್ಯಾಹ್ನದ ನಂತರ ಮನೆಗೆ ಮರಳಿದ್ದಾಗ, ಮನೆಯ ಮುಖ್ಯ …

Read More »

ಬಸ್ ಪಲ್ಟಿ : 20 ಜನರಿಗೆ ಗಾಯ

ಧಾರವಾಡ: ಕೆ.ಎಸ್.ಆರ್.ಟಿ.ಸಿ. ಬಸ್ ಪಲ್ಟಿಯಾಗಿ 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ  ಧಾರವಾಡ ಜಿಲ್ಲೆ ನವಲಗುಂದದ ಬೆಣ್ಣೆಹಳ್ಳದ ಬ್ರಿಡ್ಜ್ ಬಳಿ ಬಸ್ ಪಲ್ಟಿಯಾಗಿದೆ. ಸ್ಟೇರಿಂಗ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೊರಟಿದ್ದ KSRTC ಬಸ್ ಅಪಘಾತಕ್ಕೀಡಾಗಿದೆ. ಗಾಯಗೊಂಡ ಪ್ರಯಾಣಿಕರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More »