Breaking News

ಹುಬ್ಬಳ್ಳಿ

ಪ್ರಿಯಕರನೊಂದಿಗೆ ಬಂದಿದ್ದ ಯುವತಿಗೆ ಪಾಲಕರಿಂದ ಹಿಗ್ಗಾಮುಗ್ಗಾ ಥಳಿತ

ಹುಬ್ಬಳ್ಳಿ: ಪ್ರಿಯಕರನೊಂದಿಗೆ ಬಂದಿದ್ದ ಯುವತಿ ನಿಂತಿರೋದನ್ನ ನೋಡಿ, ಜಗಳ ತಗೆದ ಯುವತಿಯ ತಾಯಿ, ಮತ್ತು ತಾಯಿಯ ಸಹೋದರ ಇಬ್ಬರೂ ಪ್ರೇಮಿಗಳಿಗೆ ಥಳಿಸಿರುವ ಘಟನೆ ಹುಬ್ಬಳ್ಳಿ ಲ್ಯಾಮಿಂಗ್‌ಟನ್‌ ರಸ್ತೆ, ಕಾರ್ಪೊರೇಷನ್‌ ಬಸ್ ನಿಲ್ದಾಣದ ಪಕ್ಕದಲ್ಲಿ ನಡೆದಿದೆ. ಮನೆಗೆ ಬಾ ಮಾತಾಡೋಣ ಎಂದು ಕರೆದಿದ್ದಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದು ಯುವತಿಯ ತಾಯಿಯ ಸಹೋದರ ಇಬ್ಬರಿಗೂ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಈ ಘಟನೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ …

Read More »

ಪೊಲೀಸ್ ಬಾಲಕಿಯರ ಮೇಲೆ ಅನುಚಿತ ವರ್ತನೆ:ಟೆಂಗಿನಕಾಯಿ ಭೇಟಿ

ಹುಬ್ಬಳ್ಳಿ: ಕೇಶ್ವಾಪುರದ ಶಬರಿ ನಗರ ಬಡಾವಣೆಯಲ್ಲಿ ಪೊಲೀಸ್ ಹೆಡ್ ಕಾನ್ಸೆಬಲ್ ಒಬ್ಬರು ಬಾಲಕಿಯರ ಮೇಲೆ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿಂದು ಸ್ಥಳಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿ ನೀಡಿ, ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇನ್ನೂ ಇದೆ ವೇಳೆಯಲ್ಲಿ ಬಾಲಕಿಯ ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

Read More »

ಫುಟ್ಬಾತ್ ನಲ್ಲಿ ವ್ಯಾಪಾರ ವಹಿವಾಟ: ಡಿಸಿಪಿ ರವೀಶ್ ಭೇಟಿ ನೀಡಿ ಎಚ್ಚರಿಕೆ

ಹುಬ್ಬಳ್ಳಿ : ನೀಲಿಜನ್‌ ರಸ್ತೆಯಲ್ಲಿನ ಹಾರ್ಡ್ ವೇರ್ ಶಾಪ್,ಟ್ರಾನ್ಫೋರ್ಟ್ ಶಾಪ್ ಗಳು ಸೇರಿದಂತೆ ವಿವಿಧ ವಾಣಿಜ್ಯ ಚಟುವಟಿಕೆ ನಡೆಸುವ ಅಂಗಡಿಕಾರರು ಸಾರ್ವಜನಿಕರಿಗೆ ಓಡಾಡಲು ಇರುವ ಫುಟ್ಬಾತ್ ಗಳನ್ನು ಆಕ್ರಮಸಿಕೊಂಡು, ಆ ಜಾಗದಲ್ಲಿ ತಮ್ಮ ಸಾಮಗ್ರಿಗಳನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಹೀಗಾಗಿ ಇಲ್ಲಿ ಓಡಾಡುವ ಪಾದಾಚಾರಿಗಳಿಗೆ ತೀರಾ ತೊಂದರೆ ಆಗುತ್ತಿದ್ದು, ಡಿಸಿಪಿ ರವೀಶ್ ಭೇಟಿ ನೀಡಿದರು. ಈ ನಿಟ್ಟಿನಲ್ಲಿ ಪಾದಚಾರಿಗಳ ಸಮಸ್ಯೆ ಕಂಡ ಅಪರಾಧ ಹಾಗೂ ಸಂಚಾರಿ ವಿಭಾಗದ ಡಿಸಿಪಿ …

Read More »

ದಿವ್ಯಪ್ರಭು ನೇತೃತ್ವದಲ್ಲಿಂದು ಏರೋಡೋಮ್ ಕಾರ್ಯಾಗಾರ ಹಾಗೂ ಸಭೆ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಹಾಗೂ ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ಗುಣಮಟ್ಟದ ವಿಮಾನ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣ ಸಾಕಷ್ಟು ಶ್ರಮವಹಿಸುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ವಿಶೇಷ ಸಭೆಯ ಮೂಲಕ ಮತ್ತಷ್ಟು ಕಾರ್ಯಪ್ರವೃತ್ತವಾಗಿದೆ.ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಎದುರಿಸುತ್ತಿರುವ ಪರಿಸರದ ಸವಾಲುಗಳ ಜಿಲ್ಲಾಧಿಕಾರಿ ದಿವ್ಯಪ್ರಭು ನೇತೃತ್ವದಲ್ಲಿಂದು ಏರೋಡೋಮ್ ಕಾರ್ಯಾಗಾರ ಹಾಗೂ ಸಭೆಯನ್ನು ನಡೆಸಲಾಗಿದೆ. ವಿಮಾನ ನಿಲ್ದಾಣದಲ್ಲಿನ ಪರಿಸರ ಸವಾಲುಗಳನ್ನು ಸಕ್ರಿಯವಾಗಿ ಎದುರಿಸುವ ಹಾಗೂ ಪ್ರಮುಖ ವಿಷಯಗಳ …

Read More »

ಹೊಸದಾಗಿ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡುವ ಬಗ್ಗೆ ಚಿಂತನೆ: ಸಚಿವ ಆರ್.ಬಿ.ತಿಮ್ಮಾಪುರ

ಹುಬ್ಬಳ್ಳಿ: ಹೊಸದಾಗಿ ಮದ್ಯದಂಗಡಿಗಳಿಗೆ ಲೈಸನ್ಸ್ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಅಬಕಾರಿ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಮಾಡಿಲ್ಲ. ಸಹಜವಾಗಿ ಅಧಿಕಾರಿಗಳಿಗೆ ಬಡ್ತಿ ನೀಡಿದ್ದೇವೆ ಎಂದರು.

Read More »

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಹೈ ವೋಲ್ವೇಜ್ ಮೀಟಿಂಗ್

ಹುಬ್ಬಳ್ಳಿ: ರಾಜ್ಯದಲ್ಲಿ ಮೂರು ಉಪಚುಣಾವಣೆ ಹಿನ್ನೆಲೆ, ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣದಲ್ಲಿ ಸಿಎಂ ನೋಟಿಸ್‌ ಜಾರಿ ಮಾಡಿದ ವಿಚಾರವಾಗಿ, ಹುಬ್ಬಳ್ಳಿಯ ಖಾಸಗಿ ಹೊಟೇಲ್‌ನಲ್ಲಿ ಮಂತ್ರಿ ಮಂಡಳ ಮತ್ತು ಶಾಸಕರು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಹೈ ವೋಲ್ವೇಜ್ ಮೀಟಿಂಗ್ ನಡೆಸಿದ್ದಾರೆ. ಈ ಗುಪ್ತ ಸಭೆಯಲ್ಲಿ ಸಚಿವರಾದ ಕೆ.ಜೆ ಜಾರ್ಜ್, ಎಚ್‌.ಕೆ ಪಾಟೀಲ್‌, ಸತೀಶ್‌ ಜಾರಕಿಹೂಳಿ, ಆರ್.ಬಿ ತಿಮ್ಮಾಪು, ಶಾಸಕ ಪ್ರಸಾದ್‌ ಅಬ್ಬಯ್ಯ ಹಾಗೂ ಅಧಿಕಾರಿಗಳು ಸೇರಿದಂತೆ ಹಲವಾರು …

Read More »

ಸಿದ್ದರಾಮಯ್ಯನವರ ನಾಯಕತ್ವ ಮತ್ತು ಶಕ್ತಿ ಕುಂದಿಸಲು ಬಿಜೆಪಿಗರು ಪ್ರಯತ್ನಿಸುತ್ತಿದ್ದಾರೆ: ಆರ್.ಬಿ.ತಿಮ್ಮಾಪುರ

ಹುಬ್ಬಳ್ಳಿ: ಸಿದ್ದರಾಮಯ್ಯನವರ ನಾಯಕತ್ವ ಮತ್ತು ಶಕ್ತಿ ಕುಂದಿಸಲು ಬಿಜೆಪಿಗರು ಪ್ರಯತ್ನಿಸುತ್ತಿದ್ದಾರೆ. ಇದು ಯಾವುದೇ ಕಾರಣಕ್ಕೂ ನಡೆಯುವುದಿಲ್ಲವೆಂದು ಹುಬ್ಬಳ್ಳಿಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು. ಉಪ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭೇಟಿಗೆ ಬಂದಿದ್ದೇನೆ. ಶಿಗ್ಗಾಂವ್ ಕ್ಷೇತ್ರದಲ್ಲಿ ಗೆಲುವು ನಮ್ಮದೇ. ಲೋಕಾಯಕ್ತ ಸಿದ್ದರಾಮಯ್ಯನವರಿಗೆ ನೋಟಿಸ್‌ ನೀಡಿದೆ. ಕೇಂದ್ರದ ನಾಯಕರು ಸಿದ್ದರಾಮಯ್ಯನವರ ಶಕ್ತಿ ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ಇದ್ಯಾವುದು ಸಿದ್ದರಾಮಯ್ಯನವರ ಮುಂದೆ ನಡೆಯಲ್ಲ. ಉಪ ಚುನಾವಣೆ ಹಿನ್ನೆಲೆಯಲ್ಲಿ ನಾವು ಈಗ ಸಭೆ ನಡೆಸುತ್ತಿದ್ದೇವೆ ಎಂದರು.

Read More »

ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಲು ಮುಡಾ ಹಗರಣವನ್ನು ಬಿಜೆಪಿಯವರು ತಂದಿದ್ದಾರೆ: ಕೆ.ಎಂ.ರಾಮಚಂದ್ರಪ್ಪ

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದಲೇ ಮುಡಾ ಹಗರಣದ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಅಹಿಂದ್ ಶೋಷಿತ ಸಮುದಾಯ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಕಿಡಿಕಾರಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ನೀಡಿದ ನೋಟಿಸ್‌ ಹಿನ್ನೆಲೆಯಲ್ಲಿ ಶೋಷಿತ ಸಮೂದಾಯದ ಮುಖಂಡರೊಂದಿಗೆ ಸಭೆ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಬಿಜೆಪಿಯವರು ಟಾರ್ಗೆಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಲು ಮುಡಾ ಹಗರಣವನ್ನು ಬಿಜೆಪಿಯವರು …

Read More »

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ “420” ಕೇಸ್ ಇದೆ: ಅರವಿಂದ ಬೆಲ್ಲದ

ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ “420” ಕೇಸ್ ಇದೆ. ಅವರು ತಮ್ಮ ಮೇಲಿರುವ ಹಗರಣಗಳ ಸರಮಾಲೆಯನ್ನು ಮರೆಯಿಸಿ ರಾಜ್ಯದ ಜನರ ಗಮನವನ್ನು ಬೇರೆಡೆ ಸೆಳೆಯಲು ವಕ್ಷ ಜಿಹಾದ್‌ನ್ನು ಮುನ್ನೆಲೆ ತಂದಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರ ಕೇವಲ ಮುಸ್ಲಿಂರನ್ನು ಓಲೈಕೆ ಮಾಡುವುದಕ್ಕೋಸ್ಕರ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಹಿಂದೂಗಳು ಕಾಂಗ್ರೆಸ್‌ಗೆ ಮತವನ್ನೇ ಹಾಕಿಲ್ಲವೇ? ಎಂದು ಬೆಲ್ಲದ ಪ್ರಶ್ನಿಸಿದರು. …

Read More »

ಬಿಜೆಪಿಯವರು ರಾಜಕೀಯ ದುರುದ್ದೇಶಕ್ಕಾಗಿ ಉಲ್ಟಾ ಹೊಡೆದಿದ್ದಾರೆ : ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ: ವಕ್ಸ್‌ ಆಸ್ತಿಯನ್ನು ಇಂಚಿಂಚು ಜಾಗವನ್ನು ಪರಭಾವೆಯಾಗಿ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇದೀಗ ಯಾಕೆ ಯೂಟರ್ನ್ ಹೊಡೆದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟ‌ರ್, ಬಸವರಾಜ ಬೊಮ್ಮಾಯಿ, ಸದಾನಂದಗೌಡ ಅವರ ಅವಧಿಯಲ್ಲಿ ರೈತರಿಗೆ 216 ನೋಟಿಸ್‌ಗಳನ್ನು ಜಾರಿ ಮಾಡಿದ್ದರು. ಈ ಬಗ್ಗೆ ಅವರು ಯಾಕೆ …

Read More »