Breaking News

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ “420” ಕೇಸ್ ಇದೆ: ಅರವಿಂದ ಬೆಲ್ಲದ

ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ “420” ಕೇಸ್ ಇದೆ. ಅವರು ತಮ್ಮ ಮೇಲಿರುವ ಹಗರಣಗಳ ಸರಮಾಲೆಯನ್ನು ಮರೆಯಿಸಿ ರಾಜ್ಯದ ಜನರ ಗಮನವನ್ನು ಬೇರೆಡೆ ಸೆಳೆಯಲು ವಕ್ಷ ಜಿಹಾದ್‌ನ್ನು ಮುನ್ನೆಲೆ ತಂದಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರ ಕೇವಲ ಮುಸ್ಲಿಂರನ್ನು ಓಲೈಕೆ ಮಾಡುವುದಕ್ಕೋಸ್ಕರ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಹಿಂದೂಗಳು ಕಾಂಗ್ರೆಸ್‌ಗೆ ಮತವನ್ನೇ ಹಾಕಿಲ್ಲವೇ? ಎಂದು ಬೆಲ್ಲದ ಪ್ರಶ್ನಿಸಿದರು.

ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣವನ್ನು ಬೇರೆಡೆ ಸೆಳೆಯುವುದಕ್ಕೋಸ್ಕರ ಈ ವಕ್ಷ ಆಸ್ತಿಯನ್ನು ಈಗ ಮುನ್ನೆಲೆಗೆ ತಂದಿದ್ದಾರೆ. ಗೆಜೆಟ್‌ ನೋಟಿಫಿಕೇಶನ್ ಹೊರಡಿಸಿಯೇ ರೈತರ ಪಹಣಿಯಲ್ಲಿ ದಾಖಲಾದ ವಕ್ಷ ಆಸ್ತಿ ಎಂಬ ಶಬ್ದವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು. ಇದು ಹೀಗೇ ಮುಂದುವರೆದಿದ್ದೇ ಆದಲ್ಲಿ ದೊಡ್ಡಮಟ್ಟದ ನಷ್ಟವನ್ನು ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದು ಬೆಲ್ಲದ ಎಚ್ಚರಿಸಿದರು.

Share News

About Shaikh BigTv

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *