admin
February 21, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಹಳೇಬಸ್ ನಿಲ್ದಾಣದ ಮುಂಭಾಗದಲ್ಲಿ ರಾತ್ರೋ ರಾತ್ರಿ ಆಟೋ ರಿಕ್ಷಾ ನಿಲ್ದಾಣಗಳನ್ನು ತೆರವು ಮಾಡಿರುವುದನ್ನು ಖಂಡಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘ ನಗರದಲ್ಲಿಂದು ಪ್ರತಿಭಟನೆ ನಡೆಸಿತು. ಇಲ್ಲಿನ ಚೆನ್ನಮ್ಮ ವೃತ್ತದಿಂದ ಹು-ಧಾ ಮಹಾನಗರ ಪಾಲಿಕೆಯವರೆಗೆ ಪ್ರತಿಭಟನಾ ರ್ಯಾಲಿ ಬಂದರು. ಈ ವೇಳೆ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಈಗಾಗಲೇ ಹತ್ತಾರು ಬಾರಿ ಸ್ಮಾರ್ಟ್ ಸಿಟಿ ಅಡಿಯಲ್ಲಿ 155 ಹೊಸ ಆಟೋ ನಿಲ್ದಾಣವನ್ನು ಮಾಡಿಕೊಡಬೇಕೆಂದು ಮನವಿಕೊಟ್ಟರೂ ಈವರೆಗೆ …
Read More »
admin
February 21, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ರೈತ ವಿರೋಧಿ ಕೃಷಿ ಕಾಯಿದೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಮಾ.1 ರಿಂದ 15 ರವರೆಗೆ ಬಸವ ಕಲ್ಯಾಣದಿಂದ ಬೆಂಗಳೂರುವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಪರಿವರ್ತನ ಸಮೂದಾಯದ ಸಂಚಾಲಕ ಎಸ್.ಆರ್.ಹಿರೇಮಠ ತಿಳಿಸಿದರು. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುದಿಲ್ಲ ಎಂದು ಪ್ರಧಾನಿಯವರು ಘೋಷಿಸಿದ್ದಾರೆ ಆದರೂ ಕೂಡಾ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮಾತ್ರ ಈ ಕಾಯಿದೆಗಳನ್ನು ರದ್ದುಗೊಳಸಿಲು ಹಿಂದೆಟ್ಡು …
Read More »
admin
February 21, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಅಡುಗೆ ಅನಿಲದ ಪೈಪ್ ಲೈನ್‌ನಲ್ಲಿ ಸೋರಿಕೆ ಉಂಟಾದ ಪರಿಣಾಮ ಏಕಾಏಕಿ ಬೆಂಕಿ ಕಾಣಿಕೊಂಡು ಅಗ್ನಿಯ ರೌದ್ರ ನರ್ತನ ತಾಳಿದ ಘಟನೆ ಹುಬ್ಬಳ್ಳಿಯ ತೆಂಗಿನಕಾಯಿ ಲೇಔಟ್‌ನಲ್ಲಿ ನಡೆದಿದೆ. ಗ್ಯಾಸ್ ಲಿಕೇಜ್ ಆಗಿರುವ ಪರಿಣಾಮ ಜನರ ಆತಂಕಗೊಂಡು ಮನೆಯಿಂದ ಹೊರ ಬಂದಿದ್ದಾರೆ. ಇನ್ನೂ ಜನರು ಹೊರ ಬರುತ್ತಿದ್ದಂತೆಯೇ ಬೆಂಕಿ ಹತ್ತಿಕೊಂಡು ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮನೆ ಮನೆಗೆ ಸಂಪರ್ಕ ಕಲ್ಪಿಸುವ ಅಡುಗೆ ಅನಿಲದ ಪೈಪ್ ಲೈನ್ ಇದಾಗಿದೆ. …
Read More »
admin
February 21, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಪಕ್ಕದ ಮನೆಯವರು ಎಎಸ್ಐವೊಬ್ಬರಿಗೆ ಇಟ್ಟಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹಳೇ ಹುಬ್ಬಳ್ಳಿಯ ಸಹದೇವನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುರಾಣಿಕಮಠ ಎಂಬ ಎಎಸ್ಐ ಅವರ ಮೇಲೆ ಹಲ್ಲೆ ನಡೆದಿದ್ದು, ತಲೆಯೊಡೆದು ತೀವ್ರ ರಕ್ತಸ್ರಾವವಾಗಿದೆ. ಸಹದೇವನಗರದಲ್ಲಿನ ಪುರಾಣಿಕಮಠ ಅವರ ಮನೆಯ ಪಕ್ಕದಲ್ಲಿರುವ ಭರತೇಶ ಎಂಬಾತನೇ ಇಟ್ಟಿಗೆಯಿಂದ ಹೊಡೆದಿದ್ದು, ಎಎಸ್ಐ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ …
Read More »
admin
February 19, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ದೆಹಲಿಯ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ತೆಗೆದು ಕೇಸರಿ ಬಾವುಟ ಹಾರಿಸುವುದಾಗಿ ಸಚಿವ ಈಶ್ವರಪ್ಪ ನೀಡಿರುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದ ಘಟನೆ ನಡೆಯಿತು. ನಗರದಲ್ಲಿಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ನಗರ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರುಗಳು ದೇಶಪಾಂಡೆ ನಗರದ ಬಿಜೆಪಿ ಕಚೇರಿಯತ್ತ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದರು. ಈ …
Read More »
admin
February 19, 2022
Breaking News, ಹುಬ್ಬಳ್ಳಿ
ಧಾರವಾಡ: ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಜಾತ್ರೆ ಎನಿಸಿಕೊಂಡಿರುವ ಗರಗ ಮಡಿವಾಳೇಶ್ವರ ಜಾತ್ರೆ ಇಂದು (ಶನಿವಾರ) ನಡೆಯಲಿದ್ದು, ಅದಕ್ಕಾಗಿ ಬಿಗಿ ಪೊಲೀಸ್ ಭದ್ರತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ತಿಳಿಸಿದ್ದಾರೆ. ಹತ್ತು ಜನ ಪೊಲೀಸ್ ಅಧಿಕಾರಿಗಳು ಸೇರಿದಂತೆ ದೊಡ್ಡಮಟ್ಟದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಗರಗ ಜಾತ್ರೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ವಿಡಿಯೋಗ್ರಫಿ ಕೂಡ ಮಾಡಲಾಗುತ್ತದೆ. ಗಲಾಟೆ, ದಾಂಧಲೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು …
Read More »
admin
February 19, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ಆರ್.ಎಂ ಲೋಹಿಯಾನಗರದಲ್ಲಿ ನಡೆದಿರುವ ಸ್ಪೋರ್ಟ್ಸ್ ಕ್ಲಬ್ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಕೆಲಸ ಮಾಡುತ್ತಿದ್ದ ಓರ್ವ ಕಾರ್ಮಿಕ ಕಟ್ಟಡ ಮೇಲಿಂದ ಕೆಳಗೆ ಬಿದ್ದು ಮೃತನಾಗಿರುವ ಪ್ರಕರಣ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಂಜುನಾಥ ರಾಮಣ್ಣನವರ (24) ಮೃತರಾದವರು. ಕಟ್ಟಡ ಕಟ್ಟಲು ಸುಸಜ್ಜಿತವಾಗಿ ಕಾರ್ಮಿಕರಿಗೆ ಅನುಕೂಲ ಮಾಡದಿರುವುದರಿಂದ ಪಕ್ಕಿರಪ್ಪ ಬಂಡಿವಾಡ, ಮ್ಯಾನೇಜರ್ ಭೂಪತಿ ಮತ್ತು ಮೋಹನ ಎಂಬುವವರ ನಿರ್ಲಕ್ಷ್ಯದಿಂದ ಮೃತರಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Read More »
admin
February 19, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ಗಂಗೂಬಾಯಿ ಹಾನಗಲ್ ಸಂಗೀತ ಶಾಲೆಯ ಹತ್ತಿರವಿರುವ ಸರ್ವೇ ನಂ 79 ನೇ ಲೇಔಟ್ ನಲ್ಲಿ ಇಟ್ಟಿದ್ದ ಒಟ್ಟು 66,500 ಸಾವಿರ ಮೌಲ್ಯದ ವಸ್ತುಗಳನ್ನು ಕಳ್ಳತ ಮಾಡಿರುವ ಪ್ರಕರಣ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ರಾಹುಲ್ ಪಾಟೀಲ ಎಂಬುವವರ ಜಾಗದಲ್ಲಿ ಮನೆ ಕಟ್ಟಲು ಇಟ್ಟಿದ್ದ 30 ಸಾವಿರ ಮೌಲ್ಯದ 40 ಪ್ಲೈವುಡ್ ಶೀಟ್ ಗಳು, 20 ಸಾವಿರ ಮೌಲ್ಯದ ಸೆಂಟ್ರಿಂಗ್ ಶೀಟ್ ಗಳು, 16,500 ರೂ. ಮೌಲ್ಯದ …
Read More »
admin
February 19, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ಗಂಗೂಬಾಯಿ ಹಾನಗಲ್ ಸಂಗೀತ ಶಾಲೆಯ ಹತ್ತಿರವಿರುವ ಸರ್ವೇ ನಂ 79 ನೇ ಲೇಔಟ್ ನಲ್ಲಿ ಇಟ್ಟಿದ್ದ ಒಟ್ಟು 66,500 ಸಾವಿರ ಮೌಲ್ಯದ ವಸ್ತುಗಳನ್ನು ಕಳ್ಳತ ಮಾಡಿರುವ ಪ್ರಕರಣ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ರಾಹುಲ್ ಪಾಟೀಲ ಎಂಬುವವರ ಜಾಗದಲ್ಲಿ ಮನೆ ಕಟ್ಟಲು ಇಟ್ಟಿದ್ದ 30 ಸಾವಿರ ಮೌಲ್ಯದ 40 ಪ್ಲೈವುಡ್ ಶೀಟ್ ಗಳು, 20 ಸಾವಿರ ಮೌಲ್ಯದ ಸೆಂಟ್ರಿಂಗ್ ಶೀಟ್ ಗಳು, 16,500 ರೂ. ಮೌಲ್ಯದ …
Read More »
admin
February 17, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಓಲ್ಡ್ ಮಾಂಕ್ ಚಲನಚಿತ್ರವು ಇದೇ ದಿನಾಂಕ ೨೫ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಟ ಹಾಗೂ ನಿರ್ದೇಶಕ ಎಂ.ಜಿ. ಶ್ರೀನಿವಾಸ ಹೇಳಿದರು. ನಗರದ ಬಿವಿಬಿ ಕಾಲೇಜಿನಲ್ಲಿ ಚಿತ್ರದ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ಚಿತ್ರದಲ್ಲಿ ಒಟ್ಟು ೪ ಹಾಡುಗಳು ಇದ್ದು, ಈಗಾಗಲೇ ಗಿಚ್ಚ ಗಿಲಿಗಿಲಿ ಹಾಡು ಜನಪ್ರೀಯಗೊಂಡಿದ್ದು,, ಉತ್ತರ ಕರ್ನಾಟಕದ ಜಾನಪದ ಶೈಲಿಯ ಹಾಡು ಇದಾಗಿದ್ದು ಯುವಕರ ಹಾಟ್ ಫೇವರೆಟ್ ಆಗಿದೆ. ಓಲ್ಡ್ ಮಾಂಕ್ …
Read More »