ಹುಬ್ಬಳ್ಳಿ: ಹಳೇಬಸ್ ನಿಲ್ದಾಣದ ಮುಂಭಾಗದಲ್ಲಿ ರಾತ್ರೋ ರಾತ್ರಿ ಆಟೋ ರಿಕ್ಷಾ ನಿಲ್ದಾಣಗಳನ್ನು ತೆರವು ಮಾಡಿರುವುದನ್ನು ಖಂಡಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘ ನಗರದಲ್ಲಿಂದು ಪ್ರತಿಭಟನೆ ನಡೆಸಿತು.
ಇಲ್ಲಿನ ಚೆನ್ನಮ್ಮ ವೃತ್ತದಿಂದ ಹು-ಧಾ ಮಹಾನಗರ ಪಾಲಿಕೆಯವರೆಗೆ ಪ್ರತಿಭಟನಾ ರ್ಯಾಲಿ ಬಂದರು. ಈ ವೇಳೆ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಈಗಾಗಲೇ ಹತ್ತಾರು ಬಾರಿ ಸ್ಮಾರ್ಟ್ ಸಿಟಿ ಅಡಿಯಲ್ಲಿ 155 ಹೊಸ ಆಟೋ ನಿಲ್ದಾಣವನ್ನು ಮಾಡಿಕೊಡಬೇಕೆಂದು ಮನವಿಕೊಟ್ಟರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಕೂಡಲೇ ಆಟೋ ನಿಲ್ದಾಣವನ್ನು ಹೊಸ ಇಲ್ಲವೇ ನವೀಕರಣ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಇದೇ ವೇಳೆ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಮುರಳಿ ಇಂಗಳಹಳ್ಳಿ, ಗುರು ಬೆಟಗೇರಿ, ಜಾಫರ್ ಕೆರೂರ, ಮಹಾವೀರ ಜಿಲಾನಾ, ಕಲ್ಲಪ್ಪ ಅಣ್ಣಿಗೇರಿ, ದಾವೂದ ಅಲಿ ಶೇಖ, ರಫೀಕ್ ಕುಂದಗೋಳ, ದಾವಲಸಾಬ ಕುರಟ್ಟಿ, ಬಾಬರ್ ಜಮಖಾನೆ ಸೇರಿದಂತೆ ಮುಂತಾದವರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

