admin
February 11, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ವಿವಿಧ ಇಲಾಖೆಗಳ ಬೇಡಿಕೆಗೆ ಅನುಗುಣವಾಗಿ ವಾಹನಗಳನ್ನು ನೀಡಲಾಗುವುದು. ಇಲಾಖೆಗಳು ತಮಗೆ ಬೇಡಿಕೆಯಿದ್ದರೆ ಪ್ರಸ್ತಾವನೆಯನ್ನು ಸಲ್ಲಿಸಿದ ತರುವಾಯ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು. ಹುಬ್ಬಳ್ಳಿಯ ಮಿನಿವಿಧಾನಸೌಧ ಆವರಣದಲ್ಲಿ ಇಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ನೀಡಿರುವ ಬೊಲೆರೋ ವಾಹನಗಳಿಗೆ ಚಾಲನೆ ನೀಡಿ ಅವರು …
Read More »
admin
February 9, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ಹೊರವಲಯದ ಬೈಪಾಸ್ ನಲ್ಲಿ ಚಲಿಸುತ್ತಿದ್ದ ಲಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದ್ದು, ಚಾಲಕ ಕುಳಿತ ಜಾಗದಲ್ಲಿಯೇ ಸಾವಿಗೀಡಾಗಿದ್ದಾನೆ. ಆಂದ್ರಪ್ರದೇಶ ಮೂಲದ ಲಾರಿಯೂ ಕಟ್ಟಿಗೆಯನ್ನ ಹೇರಿಕೊಂಡು ದಾಂಡೇಲಿಯತ್ತ ಹೋಗುವ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದು, ಯಾವ ಸಮಯದಲ್ಲಿ ಅಪಘಾತ ಸಂಭವಿಸಿದೆ ಎಂಬ ಕುರಿತು ಮಾಹಿತಿ ಲಭ್ಯವಾಗಬೇಕಿದೆ. ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಈಗ ಪರಿಶೀಲನೆಗೆ ಮುಂದಾಗಿದ್ದಾರೆ. ಚಾಲಕನ ಶವ …
Read More »
admin
February 9, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಹಳೆಯ ಮನೆ ತೆರವು ಕಾರ್ಯಾಚರಣೆ ವೇಳೆ ಗೋಡೆ ಕುಸಿದು ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಘಂಟಿಕೇರಿಯ ಪಗಡಿ ಗಲ್ಲಿಯಲ್ಲಿ ಸಂಭವಿಸಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಶಿವಪ್ಪ ಮುಂದಿನಮನಿ (60) ಮೃತಪಟ್ಟ ಕಾರ್ಮಿಕ, ಗುತ್ತಿಗೆದಾರ ಗಣೇಶರಾವ್ ಶಿಂಧೆ ಎಂಬುವರು ರಾಜು ಹುನಗುಂದ ಎಂಬುವರ ಹಳೆಯ ಮನೆ ಗೋಡೆ ತೆರವು ಮಾಡಿಸುತ್ತಿದ್ದರು. ಈ ವೇಳೆ ಗೋಡೆ ಶಿವಪ್ಪನ ಮೈಮೇಲೆ ಕುಸಿದು ಬಿದ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ಶಿವಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. …
Read More »
admin
February 6, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಇಲ್ಲಿಯ ಉಣಕಲ್ ನ ಬಾಲಮಂದಿರ ಕೇಂದ್ರದಿಂದ ರಿಜ್ವಾನ್ ಮಸ್ತಾನಖಾನ(೧೩) ಬಾಲಕ ತಪ್ಪಿಸಿಕೊಂಡು ಹೋಗಿದ್ದಾನೆ. ಈ ಬಾಲಕ ಮೂಲತಃ ಬೆಂಗಳೂರಿನ ಓಸ್ವಾಲ್ ನಗರದ ಎಂ.ಎಂ.ಎಸ್ ಪಾಳ್ಯ ವೃತ್ತ ಸಮೀಪದ ನಿವಾಸಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿದ್ಯಾನಗರದ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
Read More »
admin
February 5, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಸ್ವ ಉದ್ಯೋಗ ಕೈಗೊಳ್ಳುವ ದಿಶೆಯಿಂದ ಸಾಲ ಯೋಜನೆಯನ್ನು ಕೆನರಾ ಬ್ಯಾಂಕಿನ ಒಪ್ಪಂದ ಮೂಲಕ ಕೈಗೊಂಡಿದ್ದು ,ಸ್ವ – ಉದ್ಯೋಗ ಮಾಡುವ ಯುವಕ ಯುವತಿಯರಿಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಬ್ರಾಹ್ಮಣ ಯುವಕ ಯುವತಿಯರಿಗೆ ಆರ್ಥಿಕ ಸಬಲೀಕರಣ ಹೊಂದಲು ಶೇ.20 ಸಬ್ಸಿಡಿಯೊಂದಿಗೆ 1 ಲಕ್ಷ ರೂಪಾಯಿ ಸಾಲವನ್ನು ಕೊಡಲು ಹೊಸ ಯೋಜನೆ ಮಾಡಲಾಗಿದೆ ಎಂದು ವಿಶ್ವ ವಿಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಚಿದಂಬರ ಕುಲಕರ್ಣಿ ಹೇಳಿದರು. ನಗರದಲ್ಲಿಂದು …
Read More »
admin
February 4, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಹೊಸ ವರ್ಷದ 2022 ಬಜೆಟ್ ಮಂಡಿಸಿದ್ದಾರೆ.ಆದರೆ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ನಲ್ಲಿ ನೈಋತ್ಯ ರೈಲ್ವೆ ವಲಯಕ್ಕೆ 6,900 ಕೋಟಿ ರೂ. ಅನುದಾನ ಲಭಿಸಿದೆ. ಕರ್ನಾಟಕದ ಪಾಲಿಗೇ 6 ಸಾವಿರ ಕೋಟಿ ರೂ. ದೊರಕಿದೆ. ನೈಋತ್ಯ ರೈಲ್ವೆಗೆ ಈವರೆಗೆ ದೊರೆತ ಅತಿ ಹೆಚ್ಚಿನ ಅನುದಾನ ಇದಾಗಿದೆ. ಇದರಲ್ಲಿ ಕರ್ನಾಟಕ ಸರ್ಕಾರ ಜೋಡಿಸಿಕೊಡಬೇಕಿರುವ 780 ಕೋಟಿ ರೂ. ಸೇರಿದೆ. 2020-21ನೇ ಸಾಲಿನ ಬಜೆಟ್ನಲ್ಲಿ ನೈಋತ್ಯ …
Read More »
admin
February 3, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಇತ್ತೀಚೆಗೆ ಹುಮನಾಬಾದ್ ತಹಶೀಲ್ದಾರ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಕುರ್ಚಿಗಳನ್ನು ಧ್ವಂಸಗೊಳಿಸಿ, ಕರ್ತವ್ಯ ನಿರತ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮೇಲೆ ಹಲ್ಲೆ ನಡೆಸಿದ್ದರು. ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರ ಮೇಲೆ ಗೂಂಡಾ ಕಾಯ್ದೆ ಅಡಿಯಲ್ಲಿ ಕಠಿಣಕ್ರಮ ಕೈಗೊಳ್ಳಬೇಕು ಎಂದು ವೀರಶೈವ ಲಿಂಗಾಯತ ಸಮಾಜ ಒತ್ತಾಯಿಸಿದೆ. ಹುಬ್ಬಳ್ಳಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ವೀರಶೈವ ಲಿಂಗಾಯತ ಸಮಾಜದ ಪದಾಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು …
Read More »
admin
February 2, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟರೆ ಧ್ವಜಾರೋಹಣ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ರಾಯಚೂರಿನ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಹಾಗೂ ರಾಜ್ಯದ ಸಕಲ ನ್ಯಾಯಾಲಯಗಳಲ್ಲಿ ಡಾ. ಬಿ.ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸಬೇಕೆಂದು ಆಗ್ರಹಿಸಿ ನಗರದ ತಹಶಿಲ್ದಾರ ಕಚೇರಿ ಬಳಿ ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳ ವತಿಯಿಂದ ತಹಶಿಲ್ದಾರರ ಮುಖಾಂತರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಯಿತು. ನಗರದ ಮುಖ್ಯ ಅಂಚೆ ಕಛೇರಿ …
Read More »
admin
February 1, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ಬ್ರಾಡ್‌ವೇನಲ್ಲಿರುವ ಮಹಾನಗರ ಪಾಲಿಕೆ ಕಾಂಪ್ಲೆಕ್ಸ್‌ನ ಕಟ್ಟಡ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ, ಇಂದು ಪಾಲಿಕೆ ಪಾಲಿಕೆ ಅಧಿಕಾರಿಗಳು ಪೊಲೀಸ್ ಬಿಗಿ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆ ನಡೆಸಿದರು. ಶಿಥಿಲಗೊಂಡಿರುವ ಕಟ್ಟಡದಲ್ಲಿ ಮಳಿಗೆಗಳನ್ನು ತೆರವುಗೊಳಿಸಲು ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೂ ಬಾಡಿಗೆದಾರರು ಕಟ್ಟಡ ತೊರೆಯಲು ಮುಂದಾಗದ ಕಾರಣ, ಇಂದು ಮುಂಜಾನೆಯಿಂದಲೇ ಪಾಲಿಕೆ ಸಿಬ್ಬಂದಿ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆ ನಡೆಸಿದರು. ಕಟ್ಟಡದಲ್ಲಿರುವ ಅಂಗಡಿಕಾರರಿಗೆ ತಮ್ಮ ವಸ್ತುಗಳನ್ನು ಹೊರತೆಗೆಯಲು 30 ನಿಮಿಷ …
Read More »
admin
January 31, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಶ್ರೀ ಶರಣ ಮಡಿವಾಳಪ್ಪ ಹೂಲಿ ಚಾರಿಟೇಬಲ್ ಟ್ರಸ್ಟ್ ಹುಬ್ಬಳ್ಳಿ ಹಾಗೂ ಹೂಲಿ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ದಿ.ಶ್ರೀ ಹುಚ್ಚೇಶ್ವರ ಮೇದಿ ಅವರ ಪರಿಕ್ಷಿತ ಹೂಲಿ ಮಡಿವಾಳಪ್ಪನವರ ಚರಿತ್ರೆ ಮತ್ತು ವೀರಣ್ಣ ಹೂಲಿ ಅವರ ಹೂದೊಟದ ಬೆಳದಿಂಗಳು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಫೆ.2 ರಂದು ಸಂಜೆ 4 ಗಂಟೆಗೆ ಮೂರುಸಾವಿರಮಠ ಸಂಘದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ವೀರಣ್ಣ ಹೂಲಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ …
Read More »