Breaking News

Breaking News

ಮನೆ ಮುಂದೆ ನಿಲ್ಲಿಸಿದ ಕಾರ್‌ ಕದ್ದೊಯ್ದ ಕಳ್ಳರು-

ದಾವಣಗೆರೆ: ನಗರದ ಭೂಮಿಕಾ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರನ್ನು ನವೆಂಬರ್ 12ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಕಳ್ಳರು ಕದ್ದೊಯ್ದಿದ್ದಾರೆ. ಎಸ್‌ಎಸ್ ಆಸ್ಪತ್ರೆ ರಸ್ತೆಯ ಆಯುರ್ವೇದ ವೈದ್ಯ ಡಾ. ಜಗದೀಶ್ ಅವರ ಮನೆ ಮುಂದೆ ಘಟನೆ ನಡೆದಿದ್ದು, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಐದು ಕಾರುಗಳು ಕಳ್ಳತನವಾಗಿದ್ದು, ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 ಗ್ರಾಂ ಚಿನ್ನಾಭರಣ ದೋಚಲಾಗಿದೆ. ಮನೆ ಮಾಲೀಕರು ಊರಿಗೆ ತೆರಳಿದ್ದ ವೇಳೆ ಸ್ನೇಹಿತನನ್ನು ಭೇಟಿಯಾಗಲು ಬಂದ ಇಬ್ಬರು ಟ್ರಾನ್ಸ್‌ಜೆಂಡರ್‌ಗಳು ಸುಮಾರು ₹20 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮನೆ ಮಾಲೀಕರ ದೂರಿನ ಮೇರೆಗೆ ಪೊಲೀಸರು ನಜಿಯಾ ಮತ್ತು ಸೈಯದ್ ಮೋಹ್ಸಿನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ …

Read More »

ಹಾಸನಾಂಬ ದೇವಾಲಯದಲ್ಲಿ ಅಕ್ರಮ ಪ್ರವೇಶಕ್ಕೆ ಸಾಥ್: ಕರ್ತವ್ಯ ಲೋಪವೆಸಗಿದ SDA ಅಮಾನತು

ಹಾಸನ: ತನ್ನ ಗುರುತಿನ ಚೀಟಿಯನ್ನು ಅನ್ಯ ವ್ಯಕ್ತಿಗಳಿಗೆ ನೀಡಿ ಹಾಸನಾಂಬ ದೇವಸ್ಥಾನಕ್ಕೆ ಅನಧಿಕೃತ ಪ್ರವೇಶ ಕಲ್ಪಿಸಿದ ಆರೋಪದ ಮೇಲೆ ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಉದಯ್ ನಾಗರಾಜ್ ಅವರನ್ನು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಹಾಸನಾಂಬ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ವೇಳೆ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಅಮಾನತು ಆದೇಶ ಜಾರಿಗೊಳಿಸಲಾಗಿದೆ. ಇತ್ತ ಜಾತ್ರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಸ್‌ಪಿ …

Read More »

ವಿದ್ಯಾರ್ಥಿನಿಯರಿಗೆ ಅಸಭ್ಯ ಮೆಸೇಜ್, ಕಾಮುಕ ಉಪನ್ಯಾಸಕನಿಗೆ ಬಿತ್ತು ಧರ್ಮದೇಟು!

ಮಂಡ್ಯ: ನಾಗಮಂಗಲ–ಮಂಡ್ಯ ರಸ್ತೆಯಲ್ಲಿರುವ ಪದವಿ ಕಾಲೇಜಿನ ಉಪನ್ಯಾಸಕ ಗಂಗೂ, ವಿದ್ಯಾರ್ಥಿನಿಯರ ಮೊಬೈಲ್ ಸಂಖ್ಯೆ ಪಡೆದು ವಾಟ್ಸಾಪ್‌ನಲ್ಲಿ ‘ಐ ಲವ್ ಯು’, ‘ಐ ಲೈಕ್ ಯು’ ಎಂದು ನಿರಂತರ ಸಂದೇಶ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಉಪನ್ಯಾಸಕನ ವರ್ತನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಸ್ಟಾಫ್ ರೂಂಗೆ ನುಗ್ಗಿ ಆತನನ್ನು ತರಾಟೆಗೆ ತೆಗೆದುಕೊಂಡು ಥಳಿಸಿದ್ದಾರೆ. ಈ ವೇಳೆ ಉಪನ್ಯಾಸಕ ವಿದ್ಯಾರ್ಥಿನಿಯರ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದು, ಅವರಿಂದ ತಪ್ಪಿಸಿಕೊಳ್ಳಲು ಬೀರುಗಳ ಸಂದಿಯಲ್ಲಿ ಅಡಗಿಕೊಂಡಿದ್ದಾನೆ …

Read More »

ಟಗರು ಕಾಳಗದ ವೇಳೆ ಜಗಳ: ಚಾಕು ಇರಿತ

ಹೊಳೆಹೊನ್ನೂರು: ಸಮೀಪದ ಆನವೇರಿಯಲ್ಲಿ ಬುಧವಾರ ಟಗರು ಕಾಳಗ ವೀಕ್ಷಿಸಲು ಬಂದಿದ್ದ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು, ಸುನೀಲ್ (22) ಎಂಬ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಸ್ತೆಬದಿ ಕುಳಿತಿದ್ದ ಯುವಕರ ಮೇಲೆ ಮಣ್ಣು ಸಿಡಿದಿದ್ದರಿಂದ ಜಗಳ ಆರಂಭವಾಗಿದೆ. ಬಳಿಕ ಶಿವಮೊಗ್ಗದಿಂದ ಬಂದಿದ್ದ 8-10 ಜನರ ಗುಂಪು ಟೀ ಅಂಗಡಿ ಬಳಿ ಸುನೀಲ್ ಮೇಲೆ ಹಲ್ಲೆ ನಡೆಸಿ ಹೊಟ್ಟೆಗೆ ಚಾಕುವಿನಿಂದ ಇರಿದಿದೆ. ಜಗಳ …

Read More »

ಜಮೀನು ದಾಖಲೆ ಸರಿಪಡಿಸುವ ನೆಪ: ಯುವತಿಯ ಮಾನಭಂಗಕ್ಕೆ ಯತ್ನ: ಕೇಸು

ಪುತ್ತೂರು: ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ನಂಬಿಸಿ ಕಡಬದ ಯುವತಿಯೊಬ್ಬಳನ್ನು ಮನೆಗೆ ಕರೆದುಕೊಂಡು ಹೋಗಿ ಮಾನಭಂಗಕ್ಕೆ ಯತ್ನಿಸಿದ ಆರೋಪದಡಿ ನೆಲ್ಲಿಗುಂಡಿ ನಿವಾಸಿ ಜಯರಾಮ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ.23ರಂದು ಯುವತಿಯನ್ನು ಪುತ್ತೂರಿಗೆ ಕರೆಸಿಕೊಂಡ ಆರೋಪಿ, ಯಾರೂ ಇಲ್ಲದ ಮನೆಗೆ ಕರೆದೊಯ್ದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಯುವತಿ ತಪ್ಪಿಸಿಕೊಂಡು ಬಂದಾಗ, ಘಟನೆ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕವೂ ಆರೋಪಿ …

Read More »

ಮಂಗಳೂರು: ಬಸ್‌ನಿಂದ ಇಳಿದ ತಕ್ಷಣವೇ ಸಿನಿಮಾ ಶೈಲಿಯಲ್ಲಿ ಕಿಡ್ನಾಪ್; ವ್ಯಕ್ತಿಯ ಕೈಯಲ್ಲಿದ್ದ ₹1.15 ಕೋಟಿ ಹಣ ದರೋಡೆ!

ಮಂಗಳೂರು: ದಾವಣಗೆರೆಯಿಂದ ₹1.15 ಕೋಟಿ ನಗದು ಹಣದೊಂದಿಗೆ ಮಂಗಳೂರಿಗೆ ಬಂದಿದ್ದ ಸತ್ಯನಾರಾಯಣ ಎಂಬವರನ್ನು ಕಾರಿನಲ್ಲಿ ಅಪಹರಿಸಿ, ಹಣ ಹಾಗೂ ಎರಡು ಮೊಬೈಲ್‌ಗಳನ್ನು ದರೋಡೆ ಮಾಡಿರುವ ಘಟನೆ ನಡೆದಿದೆ. ಅ.28ರಂದು ಬೆಳಿಗ್ಗೆ ಲಾಲ್‌ಬಾಗ್‌ನ ರಾಮಕೃಷ್ಣ ಹಾಸ್ಟೆಲ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಕಪ್ಪು ಕಾರಿನಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಅವರನ್ನು ಬಲವಂತವಾಗಿ ಅಪಹರಿಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನಗರದಲ್ಲಿ ಸುತ್ತಾಡಿಸಿ, ಹಣವಿದ್ದ ಎರಡು ಬ್ಯಾಗ್‌ಗಳನ್ನು ಕಸಿದುಕೊಂಡಿದ್ದಾರೆ. ಬಳಿಕ ಕಾವೂರು ಬಳಿಯ ನಿರ್ಜನ …

Read More »

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ವಿವಿಧ ಸಾಲದ ಆಯಪ್‌ಗಳಿಂದ ₹2 ಲಕ್ಷ ಸಾಲ ಪಡೆದು, ಬಡ್ಡಿ ಸೇರಿ ₹2.15 ಲಕ್ಷ ಮರುಪಾವತಿಸಿದ್ದರು. ಸಾಲ ತೀರಿಸಿದ ಬಳಿಕವೂ ವಂಚಕರು ಆಕೆಯ ಖಾತೆಗೆ ₹5 ಸಾವಿರ, ₹10 ಸಾವಿರ ಹಾಗೂ ₹30 ಸಾವಿರ ವರ್ಗಾಯಿಸಿ, ಬಡ್ಡಿ ಸಮೇತ ಹಣ …

Read More »

ಮಂಗಳೂರು: ದಾವಣಗೆರೆಯ ವ್ಯಕ್ತಿ ಅಪಹರಿಸಿ ₹1.15 ಕೋಟಿ ದರೋಡೆ, ಎಫ್‌ಐಆರ್ ದಾಖಲು

ಮಂಗಳೂರು: ದಾವಣಗೆರೆಯಿಂದ ₹1.15 ಕೋಟಿ ಹಣದೊಂದಿಗೆ ಮಂಗಳೂರಿಗೆ ಬಂದಿದ್ದ ಸತ್ಯನಾರಾಯಣ ಎಂಬವರನ್ನು ಅಪಹರಿಸಿ, ಹಣ ಹಾಗೂ ಎರಡು ಮೊಬೈಲ್‌ಗಳನ್ನು ದರೋಡೆ ಮಾಡಿರುವ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.28ರಂದು ಬೆಳಿಗ್ಗೆ ಲಾಲ್‌ಬಾಗ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಮುಖಕ್ಕೆ ಮುಸುಕು ಧರಿಸಿದ್ದ ನಾಲ್ವರು ಕಪ್ಪು ಕಾರಿನಲ್ಲಿ ಸತ್ಯನಾರಾಯಣ ಅವರನ್ನು ಅಪಹರಿಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನಗರದಲ್ಲಿ ಸುತ್ತಾಡಿಸಿ, ಅವರ ಬಳಿಯಿದ್ದ ಹಣದ ಬ್ಯಾಗ್‌ಗಳು ಹಾಗೂ ಮೊಬೈಲ್‌ಗಳನ್ನು ಕಸಿದುಕೊಂಡಿದ್ದಾರೆ. …

Read More »

ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ, ಓರ್ವನಿಗೆ ಮೂರು ವರ್ಷ ಶಿಕ್ಷೆ

ಮಂಗಳೂರು: ತಂಗಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ರಾಕೇಶ್ (26) ಎಂಬ ಯುವಕನನ್ನು ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ಓರ್ವನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 2019ರ ಜನವರಿ 2ರಂದು ಸುನೀಲ್ ಕುಮಾರ್ ತನ್ನ ಸ್ನೇಹಿತರಾದ ಪ್ರವೀಣ್, ಪ್ರೀತಮ್ ಹಾಗೂ ರೋಹಿತ್ ಜೊತೆ ಸೇರಿ ರಾಕೇಶ್ ಹತ್ಯೆಗೆ ಸಂಚು ರೂಪಿಸಿದ್ದ. ಬಳಿಕ ತಲವಾರಿನಿಂದ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ …

Read More »