Breaking News

Breaking News

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.08ಕ್ಕೆ ಮುಂದೂಡಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ 57ನೇ ಸಿಸಿಹೆಚ್ ಕೋರ್ಟ್ ಇದೀಗ ಮತ್ತೊಮ್ಮೆ ವಿಚಾರಣೆ ಮುಂದೂಡಿದ್ದು, ಅ.08ಕ್ಕೆ ಮುಂದೂಡಿಕೆ ಮಾಡಿದೆ. ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಕೂಡ ಮುಂದೂಡಿಕೆಯಾಗಿದ್ದು, ವಿಚಾರಣೆಯನ್ನು ಕೋರ್ಟ್ ಅ.08ಕ್ಕೆ ಮುಂದೂಡಿದೆ. ಈ ಹಿಂದೆ ಅಕ್ಟೋಬರ್ 04ಕ್ಕೆ ವಿಚಾರಣೆ ನಡೆಸಿದ್ದ 57ನೇ ಸಿಸಿಹೆಚ್ ನ್ಯಾಯಾಲಯ, ದರ್ಶನ್ ಪರ ವಾದ ಮಂಡಿಸುತ್ತಿರುವ ವಕೀಲ …

Read More »

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ

ನವದೆಹಲಿ : ಶನಿವಾರ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಿದ್ದಿದ್ದು, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವ ಸಾಧ್ಯತೆಯಿದೆ. ವಿವಿಧ ಸಮೀಕ್ಷೆಗಳು ಗ್ರಾಂಡ್ ಓಲ್ಡ್ ಪಕ್ಷಕ್ಕೆ 55 ರಿಂದ 62 ಸ್ಥಾನಗಳನ್ನು ಊಹಿಸಿವೆ, ಇದು ಬಹುಮತದ 46 ಕ್ಕಿಂತ ಮುಂದಿದೆ. ಅಂದ್ದಾಗೆ, ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 126ಎ ನಿಬಂಧನೆಗಳ ಅಡಿಯಲ್ಲಿ ಚುನಾವಣಾ ಆಯೋಗ (ಇಸಿ) ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ಮಾಧ್ಯಮಗಳು, ಮತದಾನ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಅಕ್ಟೋಬರ್ …

Read More »

ಅಯೋಧ್ಯೆಯವನ್ನು ಬೆಳೆಗಿತ್ತೀರುವ ದೀಪೋತ್ಸವ

ಅಯೋಧ್ಯೆ: ಅಯೋಧ್ಯೆಯಲ್ಲಿ ಪ್ರತಿ ವರ್ಷ ನಡೆಯುವ ದೀಪೋತ್ಸವ ಆಚರಣೆಯು ಸ್ಥಳೀಯ ಕುಂಬಾರರ ಜೀವನದಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿದೆ. ಒಂದು ಕಾಲದಲ್ಲಿ ಜೀವನ ನಡೆಸಲು ಪರದಾಡುತ್ತಿದ್ದ ಕುಂಬಾರರು ಈಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉಪಕ್ರಮದಿಂದಾಗಿ ಹಬ್ಬದ ಸೀಸನ್‌ನಲ್ಲಿ ತಲಾ ರೂ. 1 ಲಕ್ಷದಷ್ಟು ಗಳಿಸುತ್ತಿದ್ದಾರೆ. ಸಾಂಪ್ರದಾಯಿಕ ಮಣ್ಣಿನ ದೀಪಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ, ಹಿಂದೆ ಹಳ್ಳಿಯಿಂದ ಹೊರಗೆ ಕೆಲಸ ಹುಡುಕುತ್ತಿದ್ದ ಕುಂಬಾರ ಕುಟುಂಬಗಳ ಯುವ ಪೀಳಿಗೆಯು ಈಗ ಕರಕುಶಲತೆಯನ್ನು ಅಳವಡಿಸಿಕೊಳ್ಳುತ್ತಿದ್ದು, ಬೆಳೆಯುತ್ತಿರುವ …

Read More »

ಯುವತಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ:ಯುವಕನಿಗೆ ಕಪಾಳ ಮೋಕ್ಷ

ಮಂಗಳೂರು: ರಾತ್ರಿ ವೇಳೆ ಯುವತಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ ಆರೋಪ ಹಿನ್ನಲೆ ಮಹಿಳೆಯರು ಸೇರಿ ಮುಸ್ಲಿಂ ಯುವಕನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ಮಂಗಳೂರು ನಗರದ ಕೂಳೂರಿನಲ್ಲಿ ನಡೆದಿದೆ. ಕೂಳೂರಿನ ಜನರಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ತಡರಾತ್ರಿ ಯುವತಿಗೆ ಕರೆ ಮಾಡಿ ಅಸಭ್ಯ ವರ್ತಿಸುತ್ತಿದ್ದ ಇದರಿಂದ ಸಿಟ್ಟಿಗೆದ್ದ ಮಹಿಳೆಯರು ಅಂಗಡಿಗೆ ನುಗ್ಗಿ ಯುವಕನನ್ನು ಪ್ರಶ್ನಿಸಿ ಥಳಿಸಿದ್ದಾರೆ. ಇದೀಗ ಮಹಿಳೆಯರ ಹಲ್ಲೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Read More »

ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ರಾಜ್ಯ ಸರ್ಕಾರ ಪ್ರಸ್ತುತ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿದೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ. ಡಾ. ತ್ರಿಲೋಕ್ ಚಂದ್ರ ಕೆ. ವಿ. (ಕೆಎನ್: 2007), ಬಿ. ಬಿ. ಕಾವೇರಿ (ಕೆಎನ್: 2008), ಬಿ. ಬಿ. ಕಾವೇರಿ, ಸುಧೀರ್ ಕುಮಾರ್ ರೆಡ್ಡಿ ಸಿಹೆಚ್, ಐಪಿಎಸ್ (ಕೆಎನ್-2010) ರನ್ನು ವಿವಿಧ ಇಲಾಖೆಗಳಿಗೆ ವರ್ಗಾಯಿಸಲಾಗಿದೆ. ರಾಜ್ಯ ಸರ್ಕಾರ 14 ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ …

Read More »

ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ್ದ ಕ್ಯಾಥೋಲಿಕ್ ಸಭಾ ಅಧ್ಯಕ್ಷರ ಮೇಲೆ ಹಲ್ಲೆ

ಮಂಗಳೂರು : ಉಳಿಯ ಪಾವೂರಿನಲ್ಲಿ ನಡೆಯುತ್ತಿದ್ದೆನ್ನಲಾದ ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ್ದ ಕ್ಯಾಥೋಲಿಕ್ ಸಭಾ ಅಧ್ಯಕ್ಷರಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ನಗರದ ಹೊರವಲಯದ ಅಡ್ಯಾರ್ ಬಳಿ ನಡೆದಿದೆ. ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಆಲ್ವಿನ್ ಜರೋಂ ಡಿಸೋಜ ಪಾಣೇರ್ ಗೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಸದ್ಯ ಆಲ್ವಿನ್ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ನೇತ್ರಾವತಿ ನದಿ ತೀರದ ತುಂಬೆ, ಮಾರಿಪಳ್ಳದಲ್ಲಿ ನಡೆಯುತ್ತಿದ್ದೆನ್ನಲಾದ ಅಕ್ರಮ ಮರಳುಗಾರಿಕೆ …

Read More »

ಕಾರೊಂದು ಡಿವೈಡರ್ ಮೇಲೇರಿ ಕ್ರಾಶ್ ಗಾರ್ಡ್ ಗೆ ಡಿಕ್ಕಿ : 5 ಜನರಿಗೆ ಗಾಯ

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ ಮೇಲೇರಿ ಕ್ರಾಶ್ ಗಾರ್ಡ್ ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಕೀಯಾ ಶೋರೂಂ ಮುಂಭಾಗದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಕಾರಿನಲ್ಲಿ ಮಹಿಳೆಯರು ಸೇರಿ ಐವರು ಪ್ರಯಾಣಿಸುತ್ತಿದ್ದರು. ಕಾರು ಮಣಿಪಾಲದಿಂದ ಪಡುಬಿದ್ರಿ ಕಡೆಗೆ ತೆರಳುತ್ತಿತ್ತು. ಈ ವೇಳೆ ಘಟನೆ ನಡೆದಿದೆ. ಅಪಘಾತದ ಸಂದರ್ಭದಲ್ಲಿ ಈ ರಸ್ತೆ ಮಾರ್ಗದಲ್ಲಿಯೇ ತೆರಳುತ್ತಿದ್ದ ಕಾಪು ಶಾಸಕ …

Read More »

ಶಿಕ್ಷಕಿಯ ಅಶ್ಲೀಲ ವೀಡಿಯೊ ಮೂಲಕ ಬ್ಲಾಕ್ ಮೇಲ್ : ನಾಲ್ವರು ಬಂಧನ

ಆಗ್ರಾ: ಶಾಲಾ ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಬಳಸಿ ಆಕೆಯನ್ನು ಬ್ಲಾಕ್ ಮೇಲ್ ಮಾಡಿದ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಡಿ ನಾಲ್ವರು ವಿದ್ಯಾರ್ಥಿಗಳನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ. ಆಗ್ರಾ ನಿವಾಸಿಯಾಗಿರುವ ಶಿಕ್ಷಕಿ ಮಥುರಾದ ಶಾಲೆಯಲ್ಲಿ ಪಾಠ ಮಾಡುತ್ತಾರೆ. ಅಲ್ಲದೆ ಕಲಿಕೆಯಲ್ಲಿ ಹಿಂದಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಅವರು ಆಗ್ರಾದಲ್ಲಿ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ವಿದ್ಯಾರ್ಥಿಯೊಬ್ಬ ಕಾಲಕ್ರಮೇಣ ಆಕೆಗೆ ಹತ್ತಿರವಾಗಿದ್ದ. ತನ್ನ ಮೊಬೈಲ್ ಫೋನ್ ನಿಂದ ಶಿಕ್ಷಕಿಯ ಅಶ್ಲೀಲ ವೀಡಿಯೊವನ್ನು ಮಾಡಿದ್ದಾನೆ. …

Read More »

ಸಾಫ್ಟವೇರ್ ಇಂಜಿನೀಯರಗೆ ನ್ಯಾಯ ದೊರೆಕಿಸಿದ ಗ್ರಾಹಕರ ಆಯೋಗ

ಧಾರವಾಡ ; ಕುಂದಗೋಳ ತಾಲೂಕಿನ ಇಂಗಳಿಗಿ ಗ್ರಾಮದ ಶರಣಕುಮಾರ ಹರವಿ ಅನ್ನುವ ಅವಿವಾಹಿತ ಸಾಫ್ಟವೇರ್ ಇಂಜಿನೀಯರ ದೈನಂದಿನ ತನ್ನ ಉಪಯೋಗಕ್ಕಾಗಿ ಬೆಂಗಳೂರ ರಾಮನಗರದ ಸ್ಟೋ ಕ್ರಾಫ್ಟ ಸಂಸ್ಥೆಯಿಂದ ಆನ್‍ಲೈನ್ ಮುಖಾಂತರ ರೂ.1,599/- ಕೊಟ್ಟು ಪಿಜನ್ ಫೇವರೆಟ್ ಇಂಡಕ್ಷನ್ ಕುಕ್ ಟಾಪ್ ಖರೀದಿಸಿದ್ದರು. ಅದು ಒಂದು ವರ್ಷ ವಾರಂಟಿ ಹೊಂದಿತ್ತು. ಖರೀದಿಸಿದ ಕೆಲವೇ ತಿಂಗಳುಗಳಲ್ಲಿ ಅದರಲ್ಲಿ ನ್ಯೂನ್ಯತೆಗಳು ಕಂಡುಬಂದು ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಎದುರುದಾರರಿಗೆ ಫೋನ್ ಹಾಗೂ ಮೇಲ್ ಮುಖಾಂತರ …

Read More »

ಅನ್ನ ಹಾಗೂ ಸಾಂಬಾರನ್ನು ಡಿಸಿ ಕಚೇರಿಗೆ ತಂದು ದಿಢೀರ್ ಪ್ರತಿಭಟನೆ

ಧಾರವಾಡ: ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ನೀಡಲಾಗುತ್ತಿರುವ ಊಟ ಸರಿಯಾಗಿಲ್ಲ ಎಂದು ಆರೋಪಿಸಿ ಸಪ್ತಾಪುರ ಪರಿಶಿಷ್ಟ ವರ್ಗದ ಮೆಟ್ರಿಕ್‌ ನಂತರದ ಹಾಸ್ಟೆಲ್‌ನ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ನೀಡಿದ ಅನ್ನ ಹಾಗೂ ಸಾಂಬಾರನ್ನು ಡಿಸಿ ಕಚೇರಿಗೆ ತಂದು ದಿಢೀರ್ ಪ್ರತಿಭಟನೆ ನಡೆಸಿದರು. ಹಾಸ್ಟೆಲ್‌ನ ಅನ್ನದ ಪಾತ್ರೆ, ಸಾಂಬಾರಿನ ಬಕೆಟ್ ಹಿಡಿದು ಬಂದ ವಿದ್ಯಾರ್ಥಿಗಳು, ಅವುಗಳನ್ನು ಡಿಸಿ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು. ಹಾಸ್ಟೆಲ್‌ನಲ್ಲಿ ನೀಡುತ್ತಿರುವ ಊಟ ಕಳಪೆ ಗುಣಮಟ್ಟದ್ದಾಗಿದ್ದು, ಈ ಹಿಂದೆಯೇ ಈ …

Read More »