Breaking News

Breaking News

ಕುಂದಾಪುರ ರಿಚರ್ಡ್‌ ಹತ್ಯೆ ಪ್ರಕರಣ : ಆರೋಪಿ ಡೆರಿಕ್‌ ಕ್ರಾಸ್ತಾ ಭಟ್ಕಳದಲ್ಲಿ ಬಂಧನ

ಕುಂದಾಪುರದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಆರೋಪಿ ಡೆರಿಕ್‌ ಕ್ರಾಸ್ತಾನನ್ನು ಉಡುಪಿ ಜಿಲ್ಲಾ ಪೊಲೀಸರು ಭಟ್ಕಳದಲ್ಲಿ ಬಂಧಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಗುರುವಾರ ತಡರಾತ್ರಿ ಹಣಕಾಸು ಹಾಗೂ ಇತರ ವ್ಯವಹಾರಗಳ ವಿಚಾರವಾಗಿ ಉಂಟಾದ ಮನಸ್ತಾಪದ ಹಿನ್ನೆಲೆಯಲ್ಲಿ ಡೆರಿಕ್‌, ಐವನ್‌ ರಿಚರ್ಡ್‌ ಮಸ್ಕರೇನಸ್‌ ಅವರನ್ನು ಕುಂದಾಪುರದ ಚರ್ಚ್‌ ರಸ್ತೆಗೆ ಕರೆಸಿಕೊಂಡಿದ್ದಾನೆ. ಬಳಿಕ ಕಾರಿನಿಂದ ಇಳಿದ ಐವನ್‌ ಮೇಲೆ ಬಂದೂಕಿನಿಂದ …

Read More »

ಪತ್ನಿಯನ್ನು ಕೊಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ

ಹಾಸನ ಜಿಲ್ಲೆಯ ಕೆಸಗೋಡು ಗ್ರಾಮದಲ್ಲಿ ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಗಗನ (38) ಮತ್ತು ರಘು (41) ಎಂದು ಗುರುತಿಸಲಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಚಿಕ್ಕಮಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದರು. ಶುಕ್ರವಾರ ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಘು ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಸಂಬಂಧಿಕರಿಗೆ ವಿಡಿಯೊ ಕರೆ ಮಾಡಿ ಕೃತ್ಯದ ಬಗ್ಗೆ ತಿಳಿಸಿದ ಆತ, ಮೃತದೇಹವನ್ನು ಯಗಚಿ ನಾಲೆಗೆ …

Read More »

32 ಕೋಟಿ ರೂ. ಹಿಂತಿರುಗಿಸಲು ಆಗಲ್ಲ! ಸಾಲ ಕೊಟ್ಟವನ ಹತ್ಯೆಗೆ ಮಾಸ್ಟರ್​ಮೈಂಡ್ ರೂಪಿಸಿದ್ದ ಸಂಚು ಕಡೆಗೂ ಠುಸ್​

32 ಕೋಟಿ ರೂ. ಸಾಲ ತೀರಿಸುವುದನ್ನು ತಪ್ಪಿಸಿಕೊಳ್ಳಲು ಉದ್ಯಮಿಯ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿ, ಮಾಸ್ಟರ್‌ಮೈಂಡ್ ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ. ವಸಾಯಿ ಮೂಲದ ಉದ್ಯಮಿ ಮೋಹನ್ ಸಿಂಗ್ ಪರ್ಮಾರ್ ಅವರನ್ನು ಗುರಿಯಾಗಿಸಿ ಈ ಸಂಚು ರೂಪಿಸಲಾಗಿತ್ತು. ಪ್ರಮುಖ ಆರೋಪಿ ಸಾಗರ್ ಗಿರೀಶ್ ಭಾನುಶಾಲಿ ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿ ಸಾಲದ ಸುಳಿಯಲ್ಲಿ ಸಿಲುಕಿದ್ದ. ಸಾಲದಿಂದ ತಪ್ಪಿಸಿಕೊಳ್ಳುವುದರ ಜೊತೆಗೆ ಕಂಪನಿಯ ಸಂಪೂರ್ಣ ನಿಯಂತ್ರಣ ಪಡೆಯುವ ಉದ್ದೇಶದಿಂದ …

Read More »

ಪರಪ್ಪನ ಅಗ್ರಹಾರ ಜೈಲಿನಿಂದ ಮಾಜಿ ಸಚಿವ ‘ವಿನಯ್ ಕುಲಕರ್ಣಿ’ ಬಿಡುಗಡೆ

ಬೆಂಗಳೂರು: ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದರು. ಜೈಲಿನ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಹೊರಬಂದ ವಿನಯ್ ಕುಲಕರ್ಣಿ ಯಾವುದೇ ಮಾಧ್ಯಮ ಪ್ರತಿಕ್ರಿಯೆ ನೀಡದೆ ತೆರಳಿದರು. ಜೈಲಿನ ಹೊರಗೆ ಸೇರಿದ್ದ ಬೆಂಬಲಿಗರು ಅವರಿಗೆ ಹೂಮಾಲೆ ಹಾಕಿ ಸ್ವಾಗತಿಸಿ ಅಭಿನಂದಿಸಿದರು. …

Read More »

ಮೇಲ್ಸೇತುವೆ ಮೇಲೆ ಜನುಮ ದಿನ ಆಚರಣೆ: ಗುತ್ತಿಗೆದಾರನ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಮೇಲ್ಸೇತುವೆ ಮೇಲೆ ಕಾರು ನಿಲ್ಲಿಸಿಕೊಂಡು ಪಟಾಕಿ ಸಿಡಿಸಿ ಜನುಮ ದಿನ ಆಚರಿಸಿಕೊಂಡ ಗುತ್ತಿಗೆದಾರನ ವಿರುದ್ಧ ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುತ್ತಿಗೆದಾರ ರಾಘವೇಂದ್ರ ಎಂಬುವರು ವೆಸ್ಟ್‌ ಆಫ್ ಕಾರ್ಡ್ ರಸ್ತೆಯ ಶಿವನಹಳ್ಳಿ ಮೇಲ್ಸೇತುವೆ ಮೇಲೆ ಜುಲೈ 15ರಂದು ಕಾರು ನಿಲ್ಲಿಸಿಕೊಂಡು ಪಟಾಕಿ ಸಿಡಿಸಿ, ಜನುಮ ದಿನ ಆಚರಿಸಿಕೊಂಡ ವಿಡಿಯೊವನ್ನು ತಮ್ಮ ಇನ್‌ಸ್ಟ್ರಾಗ್ರಾಮ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ವಿಡಿಯೊ ಸಮೇತ ಎಕ್ಸ್‌ನಲ್ಲಿ ಪೋಸ್ಟ್‌ …

Read More »

ವರದಕ್ಷಿಣೆ ಕಿರುಕುಳದಿಂದ ಮನನೊಂದು ಪತ್ನಿ ಆತ್ಮಹತ್ಯೆ: ಪತಿ ಬಂಧನ

ಬೆಂಗಳೂರು: ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪರಪ್ಪನ ಅಗ್ರಹಾರ ಪೊಲೀಸರು ಮಹಿಳೆಯ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ರಾಯಸಂದ್ರದಲ್ಲಿ 20 ವರ್ಷದ ಸಾನಿಕ ಗೌಡ ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗಳ ಸಾವಿಗೆ ಪತಿಯೇ ಕಾರಣ ಎಂದು ಆರೋಪಿಸಿರುವ ಸಾನಿಕ ಅವರ ತಂದೆ, ವರದಕ್ಷಿಣೆ ಕಿರುಕುಳ ಮತ್ತು ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಕಾರಣ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರು ನೀಡಿದ್ದರು. …

Read More »

ಅತ್ಯಾಚಾರ ಪ್ರಕರಣ- ಪೋಕ್ಸೋ ಕಾಯ್ದೆಯಡಿ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೊ ಪ್ರಕರಣದಲ್ಲಿ 20 ವರ್ಷದ ಯುವಕನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (FTSC-2) 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಆರೋಪಿಯನ್ನು ಕುಂಜತ್ತಬೈಲ್‌ನ ಸೋನು ಮ್ಯಾಕ್ಲೀನ್ ನೊರೊನ್ಹಾ ಎಂದು ಗುರುತಿಸಲಾಗಿದೆ. ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿ ಪ್ರೀತಿಯ ಹೆಸರಿನಲ್ಲಿ ಬಾಲಕಿಯನ್ನು ನಂಬಿಸಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಆಕೆಯ ಖಾಸಗಿ …

Read More »

ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ, ಬೆದರಿಕೆ ಕೇಸಲ್ಲಿ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಂಗಳೂರಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಹೆಸರಿನಲ್ಲಿ ನಂಬಿಸಿ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಕುಂಜತ್ತಬೈಲ್ ನಿವಾಸಿ ಸೋನು ಮ್ಯಾಕ್ಲಿನ್ ನೊರೊನ್ಹ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಹಾಗೂ ಕುಟುಂಬಸ್ಥರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪ ಸಾಬೀತಾಗಿದೆ. ಪ್ರಕರಣದ …

Read More »

ಡ್ರಗ್ಸ್ ಸಾಗಾಣಿಕೆಗೆ ಹೊಸ ತಂತ್ರ – ಮುಟ್ಟಿನ ಕಪ್‌ಗಳಲ್ಲಿ ಎಂಡಿಎಂಎ ಕಳ್ಳಸಾಗಣೆ: ಬೆಂಗಳೂರಿನಿಂದ ಕೇರಳಕ್ಕೆ ‘ಡ್ರಗ್ಸ್’ ತರುತ್ತಿದ್ದ ಲಿವ್-ಇನ್ ಪಾರ್ಟ್ನರ್ ಅರೆಸ್ಟ್

ಬೆಂಗಳೂರುದಿಂದ ಎಂಡಿಎಂಎ ಡ್ರಗ್ಸ್ ಅನ್ನು ಮುಟ್ಟಿನ ಕಪ್ ಹಾಗೂ ಒಳ ಉಡುಪುಗಳಲ್ಲಿ ಮರೆಮಾಚಿ ಕೇರಳಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಲಿವ್-ಇನ್ ದಂಪತಿಯನ್ನು ಎರ್ನಾಕುಲಂ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳಿಂದ 94.032 ಗ್ರಾಂ ಎಂಡಿಎಂಎ, ₹17,770 ನಗದು ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮೊಹಮ್ಮದ್ ಶಫಿ ಮತ್ತು ಸರಿತಾ ಡ್ರಗ್ಸ್‌ಗೆ ಅಜಿನೊಮೊಟೊ ಬೆರೆಸಿ ಎರ್ನಾಕುಲಂ ಹಾಗೂ ಆಲಪ್ಪುಳದ ನೈಟ್‌ಕ್ಲಬ್‌ಗಳು ಮತ್ತು ಪಾರ್ಟಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ತಪಾಸಣೆಯಿಂದ ತಪ್ಪಿಸಿಕೊಳ್ಳಲು …

Read More »

ಹೆಂಡ್ತಿ ಮೇಲೆ ಅನುಮಾನ, ಉರುಳಿಸಿದ ಇಬ್ಬರ ಹೆಣ! 5 ವರ್ಷದ ಸಂಸಾರ, ಎರಡೇ ಏಟಿಗೆ ಖತಂ!

ಬಳ್ಳಾರಿ ಜಿಲ್ಲೆಯ ಅಂದ್ರಾಳು ಪ್ರದೇಶದಲ್ಲಿ ಪತ್ನಿಯ ಮೇಲೆ ಅನುಮಾನಗೊಂಡ ಪತಿಯೊಬ್ಬ, ಮಲಗಿದ್ದ ಪತ್ನಿ ರಾಜೇಶ್ವರಿ ಹಾಗೂ ಏಳು ತಿಂಗಳ ಮಗುವನ್ನು ಸುತ್ತಿಗೆಯಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿ ಹೊನ್ನೂರಸ್ವಾಮಿ ಮತ್ತು ರಾಜೇಶ್ವರಿ ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ಕೆಲ ದಿನಗಳಿಂದ ಪತ್ನಿಯ ನಡತೆಯ ಬಗ್ಗೆ ಅನುಮಾನಪಟ್ಟು ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಆರೋಪಿ ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. …

Read More »