Breaking News

Breaking News

ಬರೋಬರಿ 120 ಎಕರೆ ಜಮೀನು ಖರೀದಿಸಿದ್ದ “ಸಾಹುಕಾರ್” – ಮತ್ತೊಂದು ದೂರು ದಾಖಲು!

ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಮತ್ತೊಂದು ದೂರು ದಾಖಲಾಗಿದ್ದು, ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಖರೀದಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಮರಿಲಿಂಗಗೌಡ ಮಾಲಿಪಾಟೀಲ್ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ದೂರಿನ ಪ್ರಕಾರ, 2023–24ರ ಅವಧಿಯಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಾಹುಕಾರ್ ಕುಟುಂಬವು ಸುಮಾರು 120 ಎಕರೆ ಕೃಷಿ ಹಾಗೂ ವಾಣಿಜ್ಯ ಭೂಮಿಯನ್ನು ಖರೀದಿಸಿದೆ. ಪತ್ನಿ ವಿಜಯಲಕ್ಷ್ಮೀ ಹೆಸರಿನಲ್ಲೂ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನೋಂದಣಿಯಾಗಿದ್ದು, …

Read More »

ಚಿತ್ರದುರ್ಗ ವಸತಿ ಶಾಲೆಯಲ್ಲಿದ್ದ ಅಪ್ರಾಪ್ತೆಗೆ ಗಂಡು ಮಗು ಜನನ ; ಪ್ರಿಯಕರನ ವಿರುದ್ಧ ಪೋಕ್ಸೊ ಕೇಸ್ ದಾಖಲು

ಚಿತ್ರದುರ್ಗ: ಪ್ರೀತಿಯ ಸಂಬಂಧದಲ್ಲಿದ್ದ 17 ವರ್ಷದ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿ, ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಿಯಕರ ಪರಾರಿಯಾಗಿದ್ದಾನೆ. ಬಾಲಕಿ ವಸತಿ ನಿಲಯದಲ್ಲಿ ವಾಸವಿದ್ದು ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಗರ್ಭಿಣಿಯಾಗಿರುವುದು ತಿಳಿದ ಬಳಿಕ ತಾಯಿ ಆಸ್ಪತ್ರೆಗೆ ದಾಖಲಿಸಿದ್ದು, ಹೆರಿಗೆಯ ನಂತರ ಆಸ್ಪತ್ರೆ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸರಕು ವಾಹನ ಚಾಲಕ ಕರಿಯಣ್ಣ ವಿರುದ್ಧ ಪೋಕ್ಸೊ …

Read More »

ನಾಮಕರಣಕ್ಕೆ ತಡವಾಗಿ ಬಂದ ಪತ್ನಿ: 11 ತಿಂಗಳ ಮಗುವನ್ನೇ ನೆಲಕ್ಕೆ ಎಸೆದ ಪಾಪಿ ಪತಿ!

ಬೆಂಗಳೂರು: ನಾಮಕರಣ ಕಾರ್ಯಕ್ರಮಕ್ಕೆ ಪತ್ನಿ ಮತ್ತು ಆಕೆಯ ಕುಟುಂಬ ತಡವಾಗಿ ಬಂದಿದ್ದಕ್ಕೆ ಕೋಪಗೊಂಡ ತಂದೆಯೊಬ್ಬ, ತನ್ನ 11 ತಿಂಗಳ ಹೆಣ್ಣು ಮಗುವನ್ನು ನೆಲಕ್ಕೆ ಎಸೆದ ಅಮಾನವೀಯ ಘಟನೆ ಬನಶಂಕರಿ ಸೆಕೆಂಡ್ ಸ್ಟೇಜ್‌ನಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಆರೋಪಿ ವಿನಾಯಕ್ ಕಾರ್ಯಕ್ರಮದಲ್ಲೇ ಪತ್ನಿ, ಮಾವ ಹಾಗೂ ಗಲಾಟೆ ತಡೆಯಲು ಬಂದ ಹೋಟೆಲ್ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ಬಳಿಕ ಪತ್ನಿ ರಮ್ಯಾ …

Read More »

ರೌಡಿಶೀಟರ್‌ ಕೊಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

ತುಮಕೂರು ನಗರ ಹೊರವಲಯದ ಬೆಳಗುಂಬ ಬಳಿ ನಡೆದ ಮಾಜಿ ರೌಡಿಶೀಟರ್ ವೀರಣ್ಣ ಅಲಿಯಾಸ್ ಮಲ್ಲ (38) ಕೊಲೆ ಪ್ರಕರಣವನ್ನು ಕ್ಯಾತ್ಸಂದ್ರ ಪೊಲೀಸರು ಭೇದಿಸಿದ್ದು, ಜಿಮ್ ತರಬೇತುದಾರ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಮಲ್ಲನ ಅಕ್ಕನ ಮಗಳೊಂದಿಗೆ ಆರೋಪಿ ಚೇತನ್ ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನಲಾಗಿದ್ದು, ಈ ಸಂಬಂಧಕ್ಕೆ ಮಲ್ಲ ವಿರೋಧ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದ. ಇದೇ ದ್ವೇಷದಿಂದ ಚೇತನ್ ತನ್ನ ಮೂವರು ಸಹಚರರೊಂದಿಗೆ ಸೇರಿ ಸಂಚು ರೂಪಿಸಿ, ಮಲ್ಲ …

Read More »

ಬೆಂಗಳೂರಲ್ಲಿ ಮತ್ತೊಂದು ಮರ್ಡರ್ ; ಪತ್ನಿಯನ್ನು ಕೊಂದು ಶವ ಬೆಡ್ ಶೀಟ್ ನಲ್ಲಿ ಸುತ್ತಿಟ್ಟು ಪತಿ ಪರಾರಿ.!

ರಾಜಧಾನಿ ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಪತ್ನಿಯನ್ನು ಹತ್ಯೆಗೈದು, ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ. ಮೃತಳನ್ನು ರೀಮಾ ಕುಮಾರಿ (20) ಎಂದು ಗುರುತಿಸಲಾಗಿದ್ದು, ಆರೋಪಿ ಪತಿ ಧೀರಜ್ ಕುಮಾರ್ ತಲೆಮರೆಸಿಕೊಂಡಿದ್ದಾನೆ. ಮೂಲತಃ ಬಿಹಾರದವರಾದ ದಂಪತಿ ಉದ್ಯೋಗಕ್ಕಾಗಿ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದು ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ದಂಪತಿ ನಡುವೆ ಜಗಳವಾಗಿದ್ದು, ಇದೇ ವೇಳೆ ಪತ್ನಿಯನ್ನು …

Read More »

ಕೊಪ್ಪಳ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಯುವಕನ ಬಂಧನ

ಯಾದಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಗೆ ಪ್ರೀತಿಸುವುದಾಗಿ ನಂಬಿಸಿ ಹಲವು ತಿಂಗಳು ದೈಹಿಕ ಸಂಪರ್ಕ ಬೆಳೆಸಿದ ಆರೋಪದ ಮೇಲೆ 22 ವರ್ಷದ ಚನ್ನಬಸವ ತುಪ್ಪದನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಗೆ ಎರಡು-ಮೂರು ತಿಂಗಳಿಂದ ಋತುಚಕ್ರವಾಗದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Read More »

ಡಿಕೆಶಿ ಆಪ್ತ ಸಹಾಯಕನೆಂದು ವಂಚಿಸಿದ್ದವನ ಬಂಧನ

ಶಿವಮೊಗ್ಗದಲ್ಲಿ ತಾನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡು ರಿಕ್ರಿಯೇಷನ್ ಕ್ಲಬ್ ಪರವಾನಗಿ ಕೊಡಿಸುವುದಾಗಿ ನಂಬಿಸಿ ರೈತನಿಂದ ₹15 ಲಕ್ಷ ಪಡೆದು ವಂಚನೆ ಮಾಡಿದ ಆರೋಪಿಯನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್ ಎಂದು ಗುರುತಿಸಲಾಗಿದೆ. ರೈತ ಮಂಜುನಾಥ ಹಂಜಿ ಅವರಿಂದ ಫೋನ್‌ಪೇ ಹಾಗೂ ನಗದು ರೂಪದಲ್ಲಿ ಹಂತ ಹಂತವಾಗಿ ₹15 ಲಕ್ಷ ಪಡೆದು, ಪರವಾನಗಿ ನೀಡದೇ ಹಣದೊಂದಿಗೆ ತಲೆಮರೆಸಿಕೊಂಡಿದ್ದ ಎಂದು …

Read More »

ಬೆಂಗಳೂರು ಪಂಚರ್ ಮಾಫಿಯಾ: ರಸ್ತೆಯಲ್ಲಿ ಮೊಳೆ ಹಾಕುವಾಗಲೇ ಸಿಕ್ಕಿಬಿದ್ದ ಕಿಡಿಗೇಡಿಗಳು, CCTVಯಲ್ಲಿ ಲಾಕ್!

ಬೆಂಗಳೂರು ನಗರದ ಜನನಿಬಿಡ ರಸ್ತೆಗಳಲ್ಲಿ ಬೈಕ್ ಮತ್ತು ಕಾರುಗಳು ಪಂಚರ್ ಆಗುವಂತೆ ಉದ್ದೇಶಪೂರ್ವಕವಾಗಿ ಕಬ್ಬಿಣದ ಮೊಳೆಗಳನ್ನು ಚೆಲ್ಲುತ್ತಿದ್ದ ದುಷ್ಕರ್ಮಿಗಳ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಹನಗಳು ಪಂಚರ್ ಆದ ಬಳಿಕ ತಮ್ಮ ಪಂಚರ್ ಅಂಗಡಿಗಳಿಗೆ ಬರುವಂತೆ ಮಾಡಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ. ಜಾಲಹಳ್ಳಿ ಸಂಚಾರ ಪೊಲೀಸರು ಮೆಟಲ್ ಆಬ್ಸರ್ವರ್ ಬಳಸಿ ರಸ್ತೆಯಲ್ಲಿದ್ದ ಕೆಜಿಗಟ್ಟಲೆ ಮೊಳೆಗಳನ್ನು ತೆರವುಗೊಳಿಸಿದ್ದಾರೆ. ಈ ಕೃತ್ಯದಿಂದ ಪ್ರತಿನಿತ್ಯ ಹಲವು ವಾಹನಗಳು ಪಂಚರ್ …

Read More »

ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಡಿಎಚ್‌ಒ ಕಚೇರಿ ಸಿಬ್ಬಂದಿ

ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಕಚೇರಿಯ ಸಿಬ್ಬಂದಿಯೊಬ್ಬರು ರಾಷ್ಟ್ರೀಯ ಗುಣಮಟ್ಟ ಖಾತ್ರಿ ಕಾರ್ಯಕ್ರಮದ ಪ್ರೋತ್ಸಾಹಧನ ಬಿಡುಗಡೆಗೆ ₹20 ಸಾವಿರ ಲಂಚವನ್ನು ಫೋನ್‌ಪೇ ಮೂಲಕ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಆಡಳಿತಾತ್ಮಕ-ಕಮ್-ಪ್ರೋಗ್ರಾಂ ಸಹಾಯಕರಾದ ಶ್ರೀಕಾಂತ್ ಭಾವಿಮಣಿ ಅವರು ₹2,39,750 ಮೊತ್ತದ ನಿಧಿಯ ಕಡತ ಪ್ರಕ್ರಿಯೆ ಪೂರ್ಣಗೊಳಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಪರಮೇಶ್ವರ ಜಮಾದಾರ್ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ …

Read More »

ಮಾದಕವಸ್ತು ತಯಾರಿಕೆ ಜಾಲ: ₹82 ಲಕ್ಷ ವಶ

ಬೆಂಗಳೂರುದಲ್ಲಿ ಅಕ್ರಮವಾಗಿ ಪ್ರಯೋಗಾಲಯ ನಡೆಸಿ ಮಾದಕವಸ್ತು ತಯಾರಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿ ₹82.82 ಲಕ್ಷ ನಗದು ಹಾಗೂ 18,000 ಅಮೆರಿಕನ್ ಡಾಲರ್ ವಶಕ್ಕೆ ಪಡೆದಿದೆ. ಈ ದಾಳಿ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನ ಒಟ್ಟು ಒಂಬತ್ತು ಸ್ಥಳಗಳಲ್ಲಿ ನಡೆದಿದೆ. 2019ರಲ್ಲಿ ಎನ್‌ಸಿಬಿ ನಡೆಸಿದ್ದ ಕಾರ್ಯಾಚರಣೆಯಲ್ಲಿ 25 ಕೆ.ಜಿ ಕೆಟಮೈನ್ ವಶಪಡಿಸಿಕೊಂಡು ಜೆ. ಕಣ್ಣನ್ ಮತ್ತು ಶಿವರಾಜ್ ಅರಸ್ ಅವರನ್ನು ಬಂಧಿಸಿತ್ತು. ಪ್ರಕರಣದ ತನಿಖೆಯಲ್ಲಿ ಹವಾಲಾ …

Read More »