ಬೆಂಗಳೂರು ನಗರದ ಜನನಿಬಿಡ ರಸ್ತೆಗಳಲ್ಲಿ ಬೈಕ್ ಮತ್ತು ಕಾರುಗಳು ಪಂಚರ್ ಆಗುವಂತೆ ಉದ್ದೇಶಪೂರ್ವಕವಾಗಿ ಕಬ್ಬಿಣದ ಮೊಳೆಗಳನ್ನು ಚೆಲ್ಲುತ್ತಿದ್ದ ದುಷ್ಕರ್ಮಿಗಳ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಹನಗಳು ಪಂಚರ್ ಆದ ಬಳಿಕ ತಮ್ಮ ಪಂಚರ್ ಅಂಗಡಿಗಳಿಗೆ ಬರುವಂತೆ ಮಾಡಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ. ಜಾಲಹಳ್ಳಿ ಸಂಚಾರ ಪೊಲೀಸರು ಮೆಟಲ್ ಆಬ್ಸರ್ವರ್ ಬಳಸಿ ರಸ್ತೆಯಲ್ಲಿದ್ದ ಕೆಜಿಗಟ್ಟಲೆ ಮೊಳೆಗಳನ್ನು ತೆರವುಗೊಳಿಸಿದ್ದಾರೆ. ಈ ಕೃತ್ಯದಿಂದ ಪ್ರತಿನಿತ್ಯ ಹಲವು ವಾಹನಗಳು ಪಂಚರ್ ಆಗಿ ಸಂಚಾರ ದಟ್ಟಣೆ ಹಾಗೂ ಅಪಘಾತದ ಅಪಾಯ ಹೆಚ್ಚಾಗುತ್ತಿತ್ತು. ಸಿಸಿಟಿವಿ ಮತ್ತು ಎಎನ್‌ಪಿಆರ್ ದೃಶ್ಯಾವಳಿಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಅನುಮಾನಾಸ್ಪದ ಚಟುವಟಿಕೆ ಕಂಡರೆ BTP ASTraM ಆಪ್ ಅಥವಾ 112ಕ್ಕೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

