Breaking News

Breaking News

ಪಿಂಚಣಿ ಪಡೆಯುವ ನಿವೃತ್ತ ಸರ್ಕಾರಿ ನೌಕರರಿಗೆ ಸಿಹಿಸುದ್ದಿ

ನವದೆಹಲಿ: ಪಿಂಚಣಿ ಪಡೆಯುವ ನಿವೃತ್ತ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು ಇನ್ನು ಮುಂದೆ ಭಾರತದ ಯಾವುದೇ ಬ್ಯಾಂಕ್ ಖಾತೆಗಳಿಂದ ಪಿಂಚಣಿ ಪಡೆಯಬಹುದು. ಈ ಯೋಜನೆಯಿಂದಾಗಿ ಸುಮಾರು 78 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದ್ದು, ಇದರಿಂದಾಗಿ ಅವರು ತಮ್ಮ ಖಾತೆ ಇರುವ ನಗರದ ಬ್ಯಾಂಕ್‌ಗಳನ್ನು ಹುಡುಕಿಕೊಂಡು ಹೋಗುವುದು ಸಹ ತಪ್ಪಲಿದೆ. ನಿವೃತ್ತಿ ನಂತರ ಮೊದಲ ಬಾರಿಗೆ ಪಿಂಚಣಿ ಬಿಡುಗಡೆಯಾದ ಬಳಿಕ ನಿವೃತ್ತ ಉದ್ಯೋಗಿಗಳು ಬ್ಯಾಂಕ್‌ಗೆ ಭೇಟಿ ನೀಡಿ ಪಿಂಚಣಿ ಸಂಬಂಧಿತ …

Read More »

ಕುಡಿದ ಅಮಲಿನಲ್ಲಿ ಶಿಕ್ಷಕರ ದಿನದಂದೆ ಬಾಲಕಿಯ ತಲೆ ಕೂದಲು ಕತ್ತರಿಸಿದ ಶಿಕ್ಷಕ

ಭೋಪಾಲ್: ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ಶಿಕ್ಷಕರ ದಿನದಂದು ಕುಡಿದ ಅಮಲಿನಲ್ಲಿ ಬಾಲಕಿಯ ತಲೆ ಕೂದಲನ್ನು ಕತ್ತರಿಸಿದ್ದು, ಆತನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಿಕ್ಷಕನನ್ನು ವೀರ್ ಸಿಂಗ್ ಮೇಧಾ ಎಂದು ಗುರುತಿಸಲಾಗಿದ್ದು, ರತ್ಲಾಮ್ ಜಿಲ್ಲೆಯ ಸೇಮಲ್ಖೇಡಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅಳುತ್ತಿರುವ ಬಾಲಕಿಯ ತಲೆ ಕೂದಲನ್ನು ಕತ್ತರಿಯಿಂದ ಕತ್ತರಿಸುತ್ತಿರುವ ದೃಶ್ಯಗಳು ವಿಡಿಯೊದಲ್ಲಿದೆ. ಬಾಲಕಿಯ ಅಳಲನ್ನು ಕೇಳಿ ಸ್ಥಳೀಯರು ಶಾಲೆಗೆ ಧಾವಿಸಿದ್ದಾರೆ …

Read More »

ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆ

ರಾಯಚೂರು : ಹಳ್ಳ ದಾಟುತ್ತಿದ್ದ ವೇಳೆ ಮಳೆಯ ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತ ದೇಹ ಪತ್ತೆಯಾಗಿದೆ. ಮೃತ ಯುವಕ ರಾಯಚೂರು ತಾಲೂಕಿನ ಫತ್ತೆಪುರ ಗ್ರಾಮದ ಎಚ್ ಡಿ ಎಫ್ ಸಿ ಬ್ಯಾಂಕ್ ಸಿಬ್ಬಂದಿ ಬಸವರಾಜು (33) ಎಂದು ತಿಳಿದುಬಂದಿದೆ. ಕಳೆದ ಸೆಪ್ಟೆಂಬರ್ 3ರಂದು ರಾತ್ರಿ ಹಳ್ಳ ದಾಟುತ್ತಿದ್ದಾಗ ಬಸವರಾಜು ಕೊಚ್ಚಿ ಹೋಗಿದ್ದ. ರಾಯಚೂರು ತಾಲೂಕಿನ ಫತ್ತೆಪುರ ಗ್ರಾಮದಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿ ಇದೀಗ ಬಸವರಾಜುವಿನ ಮೃತ …

Read More »

ಜಿಲ್ಲಾಡಳಿತದ ವತಿಯಿಂದ ಸೆ.14 ಮತ್ತು 15 ರಂದು ಗಗನಚುಕ್ಕಿ ಜಲಪಾತೋತ್ಸವ

ಮಂಡ್ಯ: ಜಿಲ್ಲಾಡಳಿತದ ವತಿಯಿಂದ ಮಳವಳ್ಳಿ ತಾಲ್ಲೂಕಿನಲ್ಲಿ ಗಗನಚುಕ್ಕಿ ಜಲಪಾತೋತ್ಸವವನ್ನು ಸೆಪ್ಟೆಂಬರ್ 14 ಹಾಗೂ 15 ರಂದು ಆಯೋಜಿಸಲಾಗಿದೆ ಎಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ‌.ನರೇಂದ್ರಸ್ವಾಮಿ ಅವರು ತಿಳಿಸಿದರು. ಶಿವನಸಮುದ್ರದ ಲಕ್ಷದ್ವೀಪ ಹೋಟೆಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸೆಪ್ಟೆಂಬರ್ 14 ರಂದು ಮಾನ್ಯ ಮುಖ್ಯಮಂತ್ರಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದು, ಇದರೊಂದಿಗೆ ಲೇಜರ್ ಹಾಗೂ ಲೈಟಿಂಗ್ ಗಗಳನ್ನು ಸಹ ಉದ್ಘಾಟಿಸುವರು ಎಂದರು. ಗಗನಚುಕ್ಕಿಯನ್ನು ಪ್ರಸಿದ್ಧ ಪ್ರವಾಸಿತಾಣವಾಗಿಸಲು ಹಾಗೂ ಹೆಚ್ಚಿನ ಯುವಜನರನ್ನು …

Read More »

ಎಲೆಕ್ಟ್ರಿಕ್ ವಾಹನ ತಯಾರಿಕೆಗೆ ಸಬ್ಸಿಡಿ ನೀಡುವ ಅಗತ್ಯವಿಲ್ಲ: ನಿತಿನ್ ಗಡ್ಕರಿ

ನವದೆಹಲಿ : ಗ್ರಾಹಕರು ಈಗ ಎಲೆಕ್ಟ್ರಿಕ್ ವಾಹನಗಳು ಅಥವಾ ಸಿಎನ್ ಜಿ ವಾಹನಗಳನ್ನ ಸ್ವಂತವಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಎಲೆಕ್ಟ್ರಿಕ್ ವಾಹನ ತಯಾರಕರಿಗೆ ಸಬ್ಸಿಡಿ ನೀಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಬಿಎನ್‌ಇಎಫ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, ಆರಂಭದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನ ತಯಾರಿಸುವ ವೆಚ್ಚಗಳು ಹೆಚ್ಚಾಗಿದ್ದವು. ಆದ್ರೆ, ಬೇಡಿಕೆ ಹೆಚ್ಚಾದಂತೆ, ಉತ್ಪಾದನಾ ವೆಚ್ಚಗಳು ಕುಸಿದಿವೆ, ಇದರಿಂದಾಗಿ ಹೆಚ್ಚಿನ ಸಬ್ಸಿಡಿಗಳು ಅನಗತ್ಯವಾಗಿವೆ ಎಂದು ಹೇಳಿದರು. ಗ್ರಾಹಕರು ಈಗ ಎಲೆಕ್ಟ್ರಿಕ್ …

Read More »

ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಪ್ರಕರಣ ಕೇಳಿ ಬಂದರೆ ಮುಲಾಜಿಲ್ಲದೆ ಕ್ರಮ: ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್​ ಪ್ರಕರಣಗಳು ಕಂಡು ಬಂದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಸದ್ದು ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಆ ರೀತಿ ಏನಾದರೂ ಆಗಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಮಹಿಳೆಯರ ರಕ್ಷಣೆಯೇ ನಮಗೆ ಮುಖ್ಯ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆ ವಿಚಾರದ ಬಗ್ಗೆ …

Read More »

ಹೊಯ್ಸಳ, ಕೆಳದಿ ಚೆನ್ನಮ್ಮ ಮತ್ತು ಸಂಘದಿಂದ ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಧಾರವಾಡ : ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕರ್ನಾಟಕ ಚೆನ್ನಮ್ಮ ಶೌರ್ಯ ಪ್ರಶಸ್ತಿಗಾಗಿ ಹೊಯ್ಸಳ ಬಾಲಕ ಮತ್ತು ಬಾಲಕಿಯರ ಸಂಘ-ಸಂಸ್ಥೆಗಳು, ಸಂಘ-ಸಂಸ್ಥೆಗಳು ಅರ್ಜಿ ಆಹ್ವಾನಿಸಿದೆ. ಸಂಘ ಮತ್ತು ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿ: ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ತಲಾ ರೂ. 25,000 ನಗದು ಬಹುಮಾನ ಮತ್ತು ಪ್ರಶಸ್ತಿ ಕಾರ್ಡ್‌ಗಳು ಮತ್ತು ಸಂಸ್ಥೆಗಳಿಗೆ ತಲಾ ರೂ …

Read More »

ಕೃಷಿ ಇಲಾಖೆ ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಆಹ್ವಾನ

ಧಾರವಾಡ : ಕೃಷಿ ಭಾಗ್ಯ ಯೋಜನೆಯಡಿ ಕ್ಷೇತ್ರ ನಿರ್ಮಾಣ, ಕೃಷಿ ಹೊಂಡ, ಪಾಲಿಥಿನ್ ಹೊದಿಕೆ, ಡೀಸೆಲ್, ಪೆಟ್ರೋಲ್ ಪಂಪ್ ಸೆಟ್ (ಗರಿಷ್ಠ 10 ಎಚ್‌ಪಿ), ಲಘು ನೀರಾವರಿ ಮತ್ತು ತಂತಿ ಬೇಲಿ ಘಟಕಗಳನ್ನು ಅಳವಡಿಸಲು ಬಯಸುವ ಅರ್ಹ ರೈತರಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2024-25 ರಲ್ಲಿ ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಸೆಪ್ಟೆಂಬರ್ 25, 2024 ರೊಳಗೆ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ …

Read More »

ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣ: 60 ಸಾವಿರ ಶಿಶುಗಳ ರಕ್ಷಣೆ

ನವದೆಹಲಿ: ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ದೇಶದಾದ್ಯಂತ ಶೌಚಾಲಯಗಳನ್ನು ನಿರ್ಮಿಸಿದ್ದರ ಫಲವಾಗಿ ಪ್ರತಿವರ್ಷ ಸುಮಾರು 60 ಸಾವಿರದಿಂದ 70 ಸಾವಿರ ಶಿಶು ಮರಣ ತಪ್ಪಿದೆ ಎಂದು ವರದಿಯೊಂದು ಹೇಳಿದೆ. ಯುಎಸ್‌ ಮೂಲದ ಇಂಟರ್‌ನ್ಯಾಷನಲ್‌ ಫುಡ್‌ ಪಾಲಿಸಿ ರೀಸರ್ಚ್‌ ಸಂಸ್ಥೆಯ ಸಂಶೋಧಕರ ತಂಡ, ಭಾರತದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ 600 ಜಿಲ್ಲೆಗಳ 20 ವರ್ಷದ ಅಂಕಿ ಅಂಶಗಳನ್ನು ವಿಶ್ಲೇಷಿಸಿದೆ. ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ …

Read More »

ಪಟಾಕಿ ಅಂಗಡಿಗಳ ಪರಿಶೀಲನೆ

ನವಲಗುಂದ: ಗಣೇಶ ಚತುರ್ಥಿ ಅಂಗವಾಗಿ ಪಟ್ಟಣದ ಶಂಕರ ಕಾಲೇಜು ಮೈದಾನದಲ್ಲಿ ಹಾಕಲಾದ ಪಟಾಕಿ ಅಂಗಡಿಗಳಿಗೆ ಇಂದು ತಹಶೀಲ್ದಾರ ಸುಧೀರ ಸಾಹುಕಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರಕಾರ ಹಸಿರು ಪಟಾಕಿ ಮಾರಾಟ ಮಾಡಲು ಪರವಾನಿಗೆ ನೀಡಿದ್ದು, ತಾಲೂಕು ಆಡಳಿತದಿಂದ ಪಟಾಕಿಗಳ ಪರಿಶೀಲನೆ ನಡೆಯಿತು. ಸುಮಾರು 6ಅಂಗಡಿಗಳು ವ್ಯಾಪಾರ ನಡೆಸುತ್ತಿದ್ದು, ಅವುಗಳ ಬಗ್ಗೆ ಸ್ವತಃ ತಹಶೀಲ್ದಾರ ಮೊಬೈಲ್ ಮೂಲಕ ಪರಿಶೀಲನೆ ಮಾಡುವುದಲ್ಲದೆ ವ್ಯಾಪಾರಸ್ಥರಿಗೆ ಆದೇಶದ ಅನ್ವಯ ನಿಯಮಗಳನ್ನು ಪಾಲಿಸುವಂತೆ ಹೇಳಿದರು. ಈ …

Read More »