Breaking News

Breaking News

ಅಕ್ರಮ ನಾಡ ಬಂದೂಕು ಸಾಗಣೆ: ನಾಲ್ವರು ಪೊಲೀಸರ ವಶಕ್ಕೆ!

ಗುಂಡ್ಲುಪೇಟೆ: ಅಕ್ರಮವಾಗಿ ನಾಡ ಬಂದೂಕುಗಳನ್ನು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, 3 ಬಂದೂಕು, 18 ಕಾರ್ಟ್ರಿಜ್‌ ಗುಂಡುಗಳು, ಎರಡು ಚಾಕುಗಳು ಹಾಗೂ ಒಂದು ಕಾರನ್ನು ತೆರಕಣಾಂಬಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಜು.17ರ ಶುಕ್ರವಾರ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಗೂರು ಗ್ರಾಮದ ಕುಮಾರಪ್ಪ, ಸುನೀಲ್, ದಿನೇಶ್ ಮತ್ತು ಕಾಂತ ಬಂಧಿತ ಆರೋಪಿಗಳು. ಇವರು ಕಾಡು ಪ್ರಾಣಿಗಳ ಬೇಟೆಗೆ ಅಕ್ರಮವಾಗಿ ನಾಡ ಬಂದೂಕುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ …

Read More »

ಸಂಪ್‌ ವಿಚಾರಕ್ಕೆ ಗಲಾಟೆ : ಮರ್ಮಾಂಗಕ್ಕೆ ಒದ್ದು ಪ್ಲಂಬರ್‌ ಕೊಲೆ

ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯ ನೀರಿನ ಸಂಪ್‌ ನಿರ್ಮಾಣದ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಆಂಧ್ರಪ್ರದೇಶ ಮೂಲದ 38 ವರ್ಷದ ರವಿ ಎಂಬ ಪ್ಲಂಬರ್‌ ಹಾಗೂ ಗಾರೆ ಕೆಲಸಗಾರ ಹಲ್ಲೆಯಿಂದ ಮೃತಪಟ್ಟಿದ್ದಾರೆ. ನಿರ್ಮಾಣ ಹಂತದ ಮನೆಯ ಸಂಪ್‌ಗೆ ಹಾಳಾದ ಮುಚ್ಚುಳ ಅಳವಡಿಸಿರುವ ವಿಚಾರವಾಗಿ ಮನೆ ಮಾಲೀಕ ದೇವರಾಜ್‌ ಮತ್ತು ಗಾರೆ ಮೇಸಿ ಮಂಜುನಾಥ್ ನಡುವೆ ವಾಗ್ವಾದ ನಡೆದಿದೆ. ಬಳಿಕ ದೇವರಾಜ್‌ ತನ್ನವರೊಂದಿಗೆ ಮಂಜುನಾಥ್ ಮನೆಗೆ …

Read More »

ಲಂಚ ಪಡೆಯುವಾಗಲೇ ರೇಡ್​​: ಕಲಬುರಗಿ, ಚಿತ್ರದುರ್ಗದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು

ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಬಿಗಿ ಕಾರ್ಯಾಚರಣೆ ನಡೆಸಿದ್ದು, ಕಲಬುರಗಿ ಜಿಲ್ಲಾ ನ್ಯಾಯಾಲಯದ ಎಪಿಪಿ ಸಂತೋಷ್ ಕುಮಾರ್ ಲೋಖಂಡೆ 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಅವರನ್ನು ಬಂಧಿಸಲಾಗಿದೆ. ಇನ್ನೊಂದೆಡೆ, ಪ್ರವಾಸೋದ್ಯಮ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಹಿರಿಯೂರು ಬಳಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 48 ಲಕ್ಷ …

Read More »

ಪ್ರೀತಿಸಿ ಮದುವೆಯಾಗಿದ್ರೂ ಮತ್ತೊಬ್ಬನೊಂದಿಗೆ ಚಾಟಿಂಗ್ ಮಾಡ್ತಿದ್ದ ಅಪ್ರಾಪ್ತೆಗೆ ಗುಂಡು ಹಾರಿಸಿ ಕೊಲೆ: ಶವ ಹೂತಿಟ್ಟಿದ್ದ ಅಪ್ರಾಪ್ತ ಪತಿ ಸೇರಿ ಮೂವರು ಅರೆಸ್ಟ್

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಅಪ್ರಾಪ್ತೆಯನ್ನು ಅಪ್ರಾಪ್ತ ಕೊಲೆ ಮಾಡಿದ್ದಾನೆ. ನಾಡ ಬಂದೂಕಿನಿಂದ ಗುಂಡು ಹಾರಿಸಿ ಆರೋಪಿ ಹತ್ಯೆ ಮಾಡಿದ್ದಾನೆ. ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ಸ್ಟಾಗ್ರಾಮ್ ಮೂಲಕ ಅಪ್ರಾಪ್ತನಿಗೆ ಅಪ್ರಾಪ್ತೆಯ ಪರಿಚಯವಾಗಿತ್ತು. ಮೂರು ತಿಂಗಳ ಹಿಂದೆಯಷ್ಟೇ ಇಬ್ಬರೂ ಮದುವೆಯಾಗಿದ್ದರು. ಕೋಡಿಹಳ್ಳಿ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ವಾಸವಾಗಿದ್ದರು. ಮದುವೆಯ ನಂತರ ಮತ್ತೊಬ್ಬನ ಜೊತೆಗೆ ಅಪ್ರಾಪ್ತೆ ಚಾಟಿಂಗ್ ಮಾಡುತ್ತಿದ್ದಳು. ವಿವಾಹಿತ ಅಪ್ರಾಪ್ತೆ ಬೇರೆಯವನ …

Read More »

ಬಂಟ್ವಾಳ ಘಟನೆ ಮಾಸುವ ಮುನ್ನ ಮತ್ತೊಬ್ಬ 16ರ ಹುಡಗಿ ಬಲಿ; ಪ್ರೇಯಸಿ ಕೊಂದು ತೋಟದಲ್ಲಿ ಹೂತುಹಾಕಿದ ಪ್ರೇಮಿ!

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೆಂಪಲನಾಥ ಗ್ರಾಮದಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ನಾಡಬಂದೂಕಿನಿಂದ ಗುಂಡಿಕ್ಕಿ ಕೊಲೆ ಮಾಡಿ, ಶವವನ್ನು ತೋಟದಲ್ಲಿ ಹೂತುಹಾಕಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಸಾತನೂರು ಹೋಬಳಿಯ ಕುರುಬಳ್ಳಿ ಗ್ರಾಮದ ಪ್ರಾರ್ಥನಾ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಪ್ರಾರ್ಥನಾ ಮತ್ತು ಸುರೇಶ್ ನಡುವೆ ಪ್ರೀತಿಯಿದ್ದು, ಬಾಲಕಿ ಮತ್ತೊಬ್ಬ ಯುವಕನಿಗೆ ಮೊಬೈಲ್‌ನಲ್ಲಿ ಸಂದೇಶ ಕಳುಹಿಸುತ್ತಿದ್ದಾಳೆ ಎಂಬ ಅನುಮಾನದಿಂದ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಆಕ್ರೋಶಗೊಂಡ ಸುರೇಶ್ …

Read More »

2 ವರ್ಷದ ಕಂದಮ್ಮನನ್ನೇ ಕೊಂದನಾ ತಾಯಿಯ ಪ್ರಿಯಕರ? ಮದುವೆಯಾಗದೇ ಒಟ್ಟಿಗೆ ಇದ್ದ ಈ ಜೋಡಿ ಮೇಲೆ ಡೌಟ್​!

ಬೆಂಗಳೂರು ನಗರದ ಬಾಣಸವಾಡಿಯಲ್ಲಿ 2 ವರ್ಷದ ಕಾರ್ಲೆಟ್ ಡೈಸಿ ಎಂಬ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ ಎಂದು ತಂದೆ ಹೇಳಿದ್ದರೂ, ಮಗುವಿನ ದೇಹದ ಮೇಲಿನ ಗಾಯದ ಗುರುತುಗಳಿಂದ ಪ್ರಕರಣ ಅನುಮಾನಕ್ಕೆ ಕಾರಣವಾಗಿದೆ. ಮಗುವಿನ ತಾಯಿ ರೋಸ್ಲಿನ್, ತನ್ನ ಪ್ರಿಯಕರ ಜೇಸನ್ ಆಂಥೋನಿ ಮಗುವನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ, ದಂಪತಿಯ ಸ್ನೇಹಿತೆಯೊಬ್ಬರು ಕೂಡ ಮಗುವಿಗೆ ತಾಯಿ ಹೊಡೆಯುತ್ತಿದ್ದುದನ್ನು ನೋಡಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಮೃತದೇಹವನ್ನು …

Read More »

ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಎರಡನೇ ಬಾರಿಗೆ ಗರ್ಭಿಣಿಯಾದ 15 ವರ್ಷದ ಬಾಲೆ

ಹುಬ್ಬಳ್ಳಿಯ ಉಣಕಲ್ ಪ್ರದೇಶದಲ್ಲಿ 15 ವರ್ಷ 6 ತಿಂಗಳ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎನ್ನಲಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈಗಾಗಲೇ ಒಮ್ಮೆ ಮಗುವಿಗೆ ಜನ್ಮ ನೀಡಿದ್ದ ಬಾಲಕಿ ಇದೀಗ ಎರಡನೇ ಬಾರಿಗೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿ ಮತ್ತೆ ಗರ್ಭಿಣಿಯಾಗಿರುವ ವಿಚಾರವನ್ನು ಮುಚ್ಚಿಟ್ಟ ಆರೋಪದಡಿ ಪೋಷಕರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. …

Read More »

ಬೆಚ್ಚಿಬಿದ್ದ ಬಳ್ಳಾರಿ: ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತನ ಬರ್ಬರ ಕೊಲೆ

ಪ್ರೀತಿಸಿ ಮದುವೆ ಆಗಿದ್ದ ನವವಿವಾಹಿತನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ನಗರದ ಬಟ್ಟಿ ಏರಿಯಾದಲ್ಲಿ ನಿನ್ನೆ (ಜುಲೈ 16) ರಾತ್ರಿ ನಡೆದಿದೆ. ನಬಿ ರಸೂಲ್​​​ ಮೃತ ವ್ಯಕ್ತಿಯಾಗಿದ್ದು, ದುರ್ದೈವ ಅಂದರೆ ಮದುವೆಯ ರಿಸೆಪ್ಷನ್ ಕಾರ್ಯಕ್ರಮ ಮುಗಿದ ಕೆಲವೇ ಹೊತ್ತಿನಲ್ಲಿ ಇವರ ಉಸಿರು ನಿಂತಿದೆ. ರಾತ್ರಿ 11 ಗಂಟೆಗೆ ಮನೆಯಿಂದ ಹೊರಹೋಗಿದ್ದ ರಸೂಲ್​​​​ ಶವವಾಗಿ ಪತ್ತೆಯಾಗಿದ್ದಾರೆ. ನಬಿ ರಸೂಲ್​​​​​ ವಿಚ್ಛೇದಿತ ಮಹಿಳೆಯೋರ್ವಳನ್ನು ಪ್ರೀತಿಸುತ್ತಿದ್ದು, 15 ದಿನಗಳ ಹಿಂದೆ ಆಕೆಯನ್ನು ಕರೆದೊಯ್ದಿದ್ದರು. …

Read More »

ನುಗ್ಗಾನಟ್ಟಿಯಲ್ಲಿ ಕೌಟುಂಬಿಕ ಕಲಹ: ಜೋಡಿ ಕೊಲೆ… ಬೆಚ್ಚಿಬಿದ್ದ ಗ್ರಾಮಸ್ಥರು

ಬೈಲಹೊಂಗಲ: ತಾಲೂಕಿನ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ನುಗ್ಗಾನಟ್ಟಿ ಗ್ರಾಮದಲ್ಲಿ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಕೊಲೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ನುಗ್ಗಾನಟ್ಟಿ ಗ್ರಾಮದ ಬಸಪ್ಪ ಫಕ್ಕೀರಪ್ಪ ರಾಯಣ್ಣವರ (35) ಹಾಗೂ ಲಗಮಪ್ಪ ಫಕ್ಕೀರಪ್ಪ ರಾಯಣ್ಣವರ (34) ಕೊಲೆಯಾದವರು. ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರ ಸಂಬಂಧಿಕರ ನಡುವೆ ನಡೆದ ಜಗಳದಲ್ಲಿ ಮಹಾದೇವಪ್ಪ, ಲಗಮಪ್ಪ, ಶಿವಲಿಂಗಪ್ಪ, ಶಿವಪ್ಪ, ಫಕ್ಕೀರಪ್ಪ ಹಾಗೂ ಅಣ್ಣವ್ವ ಎಂಬವರು ಸೇರಿಕೊಂಡು ಇಬ್ಬರನ್ನು ಕೊಲೆ ಮಾಡಿದ್ದಾರೆ …

Read More »

ರಾಜ್ಯದಲ್ಲಿ ಬೃಹತ್ ನಕಲಿ ನೋಟಿನ ಜಾಲ ಪತ್ತೆ: 7 ಮಂದಿ ಅರೆಸ್ಟ್

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಡೆಂಜದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ 500 ರೂ. ನೋಟು ಮುದ್ರಣ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿ 7 ಮಂದಿಯನ್ನು ಬಂಧಿಸಿದ್ದಾರೆ. ದಾಳಿಯಲ್ಲಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಪ್ರಿಂಟರ್, ಕಂಪ್ಯೂಟರ್, ಕಾಗದ ಕತ್ತರಿಸುವ ಯಂತ್ರ ಸೇರಿದಂತೆ ಹಲವು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ವಿಶೇಷ ಕಾಗದ ಬಳಸಿ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ತಯಾರಿಸುತ್ತಿದ್ದರು. ದಾಳಿಯ ವೇಳೆ ಮುದ್ರಿಸಿದ ನೋಟುಗಳು, ನೋಟುಗಳ ಶೀಟ್‌ಗಳು, ನಕಲಿ ಸೀಲ್ …

Read More »