Breaking News

Breaking News

ಶಿಡ್ಲಘಟ್ಟಿ ಜನತೆಯಲ್ಲಿ ಕ್ಷಮೆಯಾಚಿಸಿದ ಮಾಜಿ ಸಿಎಂ

ಶಿಡ್ಲಘಟ್ಟ : ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೋಲಾರ ಜಿಲ್ಲೆಯ ಮುಳಬಾಗಿಲು ನಿಂದ ಆರಂಭವಾಗಿರುವ ಪಂಚರತ್ನ ಯಾತ್ರೆಯು ನಿನ್ನೆಯ ದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿಗೆ ಪ್ರವೇಶ ಮಾಡಿತ್ತು. ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ವೈ ಹುಣಸೇನಹಳ್ಳಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದ ಪಂಚರತ್ನ ಯಾತ್ರೆಗೆ ಜೆಡಿಎಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಚಿಂತಾಮಣಿ ತಾಲೂಕಿನ ಪವಿತ್ರ ಯಾತ್ರಾಸ್ಥಳ ಕೈವಾರದಲ್ಲಿ ಪಂಚರತ್ನ ಯಾತ್ರೆಯನ್ನು ಆರಂಭಿಸಿ …

Read More »

ರಾಜ್ಯದಲ್ಲಿ ಮುಂದಿನ 2 ದಿನಗಳ ಕಾಲ ಸಾಧಾರಣ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ 2 ದಿನಗಳ ಕಾಲ ಸಾಧಾರಣ ಮಳೆ ಮುಂದುವರಿಯಲಿದ್ದು, ಉಷ್ಣಾಂಶ ಇನ್ನಷ್ಟು ಇಳಿಕೆಯಾಗಲಿದೆ. ನ.26ರ ವರೆಗೆ ರಾಜ್ಯದ ದಕ್ಷಿಣ ಒಳನಾಡು, ಕರಾವಳಿಯಲ್ಲಿ ಸಾಧಾರಣದಿಂದ ಹಗುರ ಮಳೆಯಾದರೆ, ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ.ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಂಜಿನಿಂದ ಕೂಡಿದ ಹನಿ ಮಳೆಯಾದರೆ, ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಈ ಮಾದರಿಯ ಚಳಿ-ಗಾಳಿ …

Read More »

ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು : ವೈದ್ಯರು ಹೇಳಿದ್ದು ಇಷ್ಟೇ!

ಚೆನ್ನೈ: ಭಾರತೀಯ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅವರ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಕಮಲ್‌ ಅಭಿಮಾನಿಗಳು ಚಿಂತಿತರಾಗಿದ್ದಾರೆ. ಜ್ವರದ ಜೊತೆಗೆ ಉಸಿರಾಟದಲ್ಲಿ ಸ್ವಲ್ಪ ತೊಂದರೆಯೂ ಇತ್ತು ಎಂದು ಹೇಳಲಾಗಿದೆ. ಸದ್ಯ ಅವರು ಚೆನ್ನೈನ ಪೊರೂರು ರಾಮಚಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ನಿನ್ನೆ ಹೈದರಾಬಾದ್ ಗೆ ಹೋಗಿದ್ದ ಕಮಲ್ ಹಾಸನ್ ಅವರು ತಮ್ಮ ಗುರು ಕಲಾತಪಸ್ವಿ ಕೆ ವಿಶ್ವನಾಥ್ ಜೊತೆಗಿದ್ದರು. ತದನಂತರ ನಿನ್ನೆ ರಾತ್ರಿಯೇ …

Read More »

ರಾಜ್ಯದ ಐದು ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲು ಡಿಕೆಶಿ ಆದೇಶ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ರಾಜ್ಯದ ಐದು ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲು ಆದೇಶ ನೀಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಹಾಗೂ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಮತ್ತು ಬಲವರ್ಧನೆ ಮಾಡುವ ಉದ್ದೇಶದಿಂದ ಜಿಲ್ಲಾವಾರು ಅಧ್ಯಕ್ಷರ ನೇಮಕ ಹಾಗೂ ಬದಲಾವಣೆ ಕಾರ್ಯದಲ್ಲಿ ಡಿಕೆ ಶಿವಕುಮಾರ್ ನಿರತರಾಗಿದ್ದಾರೆ. ಇದರ ಭಾಗವಾಗಿಯೇ ಐದು ಜಿಲ್ಲೆಗಳಲ್ಲಿ ನೂತನ ನೇಮಕ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ನಗರಕ್ಕೆ ಹೊಂದಿಕೊಂಡಂತೆ ಇರುವ ಅಕ್ಕಪಕ್ಕದ ಜಿಲ್ಲೆಗಳಲ್ಲಿ …

Read More »

ಸುರೇಶ ಗೌಡ ಕೊಲೆಗೆ ಸಂಚು ಆರೋಪ : ಶಾಸಕ ಗೌರಿಶಂಕರ್ ಸೇರಿ 3 ವಿರುದ್ಧ ದೂರು ದಾಖಲು

ತುಮಕೂರು: ಮಾಜಿ ಶಾಸಕ ಸುರೇಶ ಗೌಡ ಕೊಲೆಗೆ ಸಂಚು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಗೌರಿಶಂಕರ್ ಸೇರಿ ಮೂವರ ವಿರುದ್ಧ ದೂರು ದಾಖಲಿಸಲಾಗಿದೆ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್, ಬೊಮ್ಮನಹಳ್ಳಿ ಬಾಬು ಅಲಿಯಾಸ್ ಅಟ್ಡಿಕಾ ಬಾಬು, ಗೌರಿಶಂಕರ್ ಬೆಂಬಲಿಗ ಹಿರೇಹಳ್ಳಿ ಮಹೇಶ್ ಅವರ ವಿರುದ್ಧ ದೂರು ದಾಖಲಾಗಿದೆ.‌ ಸುರೇಶ್ ಗೌಡ ಮತ್ತು ಗೌರಿಶಂಕರ್ ಅವರ ನಡುವೆ ಇದೇ ವಿಚಾರವಾಗಿ ಆರೋಪ …

Read More »

ಗಡಿ ವಿವಾದ ಕುರಿತು ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ :ಸಿಎಂ

ಬೆಂಗಳೂರು: ಗಡಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೇಳಿಕೆ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ. ಗೃಹ ಸಚಿವ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಹೇಳಿರುವುದನ್ನು ಗಮನಿಸಿದ್ದೇನೆ. ಈ ಬಗ್ಗೆ …

Read More »

ಶಾಸಕ ಅಮೃತ ದೇಸಾಯಿ ಉಳವಿಗೆ ಪಾದಯಾತ್ರೆ ಆರಂಭ

ಧಾರವಾಡ ; ಶಾಸಕ ಅಮೃತ ದೇಸಾಯಿ ಅವರ ಗರಗ ಮಡಿವಾಳೇಶ ಮಠದಿಂದ ಉಳವಿ ಚನ್ನಬಸ ವೇಶ್ವರ ಮಠದವರೆಗಿನ ಮತ್ತೊಂದು ಪಾದ ಯಾತ್ರೆ ಆರಂಭಗೊಂಡಿತು .6 ನೇ ವರ್ಷದ ಈ ಒಂದು ಪಾದಯಾತ್ರೆ ಧಾರವಾಡದ ಗರಗ ಮಡಿವಾಳೇಶ್ವರ ಮಠದಿಂದ ಇಂದು ಆರಂಭಗೊಂಡಿತು. ಮಠದ ಮುಂದೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಮಠಾಧೀಶರ ಪಾದಪೂಜೆ ಪೂಜೆ ಪುನಸ್ಕಾರ ಸೇರಿದಂತೆ ಹಲವು ವಿಧಿ ವಿಧಾನಗಳ ನಂತರ ಸ್ವಾಮೀಜಿಗಳ ಆಶೀರ್ವಾದ ವನ್ನು ಪಡೆದುಕೊಂಡ ಶಾಸಕ …

Read More »

ಜ್ಞಾನ ಜ್ಯೋತಿ ಬೆಳಗಿಸು ಸದ್ಗುರು ಸಿದ್ಧಾರೂಢ-ಬೆಳಕಾಗಲಿ ಎಲ್ಲರ ಮನೆ, ಮನ

ಹುಬ್ಬಳ್ಳಿ: ಹೀಗೆ ದೀಪಗಳ ಬೆಳಕಿನಲ್ಲಿ ಪ್ರಜ್ವಲಿಸುವ ದೇಗುಲ. ಎಲ್ಲೆಡೆಯೂ ಓಂ ನಮಃ ಶಿವಾಯ ಓಂಕಾರ ನಾದ. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯ ಸಿದ್ಧಾರೂಢರ ಮಠ. ಉತ್ತರ ಕರ್ನಾಟಕದ ಆರಾಧ್ಯದೈವ ಎಂದೇ ಖ್ಯಾತಿ ಪಡೆದ ಸಿದ್ಧಾರೂಢರ ಮಠದಲ್ಲಿ ಕಾರ್ತಿಕ ಅಮಾವಾಸ್ಯೆ ಅಂಗವಾಗಿ ಲಕ್ಷ ದೀಪೋತ್ಸವ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಅಂಧಕಾರವನ್ನು ದೂರ ಮಾಡು ಜ್ಞಾನದ ದೀಪವನ್ನು ಬದುಕಿನಲ್ಲಿ ಬೆಳಗಿಸು ಎಂದು ಲಕ್ಷಾಂತರ ಭಕ್ತರು ದೀಪ ಹಚ್ಚುವ ಮೂಲಕ ಭಕ್ತಿ ಸಮರ್ಪಣೆ ಮಾಡಿದ್ದಾರೆ. …

Read More »

ಸಿದ್ದರಾಮಯ್ಯನವರ ಸ್ಥಿತಿ ಅಂಡು ಸುಟ್ಟ ಬೆಕ್ಕಿನಂತಾಗಿದೆ, ಯತ್ನಾಳ ವ್ಯಂಗ್ಯ

ಧಾರವಾಡ: ರಾಜ್ಯದಲ್ಲಿ 160 ಸಾಮಾನ್ಯ ವಿಧಾನಸಭಾ ಕ್ಷೇತ್ರಗಳಿವೆ. ಸಿದ್ದರಾಮಯ್ಯನವರಿಗೆ ಒಂದೂ ಕ್ಷೇತ್ರ ಸಿಗದಂತಾಗಿದೆ. ಇದರಿಂದ ಅವರ ಸ್ಥಿತಿ ಅಂಡು ಸುಟ್ಟ ಬೆಕ್ಕಿನಂತಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ ಮಾಡಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಕ್ಷೇತ್ರಕ್ಕಾಗಿ ಓಡಾಡುತ್ತಿದ್ದಾರೆ. ಒಮ್ಮೆ ಕೋಲಾರಕ್ಕೆ ಹೋಗುತ್ತಾರೆ, ಒಮ್ಮೆ ಚಾಮರಾಜನಗರಕ್ಕೆ ಹೋಗುತ್ತಾರೆ. ಸಿದ್ದರಾಮಯ್ಯ ಒಬ್ಬ ಸ್ವಯಂ ಘೋಷಿತ ಸಿಎಂ ಎಂದರು. ಸಿದ್ದರಾಮಯ್ಯ ಹಾಗೂ ಡಿಕೆಶಿ ಚುನಾವಣೆಗೆ ಸ್ಪರ್ಧಿಸಬಾರದು ಎಂಬ ಸಂತೋಷ್ ಲಾಡ್ …

Read More »

ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದ ಸಂಜಯಕುಮಾರ

ಧಾರವಾಡ: UNICEF for every child ಹಾಗೂ ಯು-ರಿಪೋರ್ಟ ಇಂಡಿಯಾ ಇವರುಗಳು ಅಕ್ಟೋಬರ್‌ನಲ್ಲಿ ನಡೆಸಿದ “ಗ್ರೀನ್ಸ್ ಜಾಬ್ ಸೀರೀಸ್ 2.0” ರ ರಸಪ್ರಶ್ನೆಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸ್ವಯಂ ಸೇವಕ ಕು. ಸಂಜಯಕುಮಾರ ಯ ಬಿರಾದಾರ ಅವರು ಭಾಗವಹಿಸಿ “ಭಾರತದಲ್ಲಿ ಟಾಪ್ ಸ್ಕೋರರ್‌ಗಳಲ್ಲಿ ಒಬ್ಬರಾಗುವ ಮೂಲಕ ಯು-ರಿಪೋರ್ಟರ್ ಇಂಡಿಯಾ ದೆಹಲಿಯಿಂದ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ಈ ಸಂದರ್ಭದಲ್ಲಿ ಸಂಜಯಕುಮಾರ ಅವರನ್ನು …

Read More »