Breaking News

ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದ ಸಂಜಯಕುಮಾರ

ಧಾರವಾಡ: UNICEF for every child ಹಾಗೂ ಯು-ರಿಪೋರ್ಟ ಇಂಡಿಯಾ ಇವರುಗಳು ಅಕ್ಟೋಬರ್‌ನಲ್ಲಿ ನಡೆಸಿದ “ಗ್ರೀನ್ಸ್ ಜಾಬ್ ಸೀರೀಸ್ 2.0” ರ ರಸಪ್ರಶ್ನೆಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸ್ವಯಂ ಸೇವಕ ಕು. ಸಂಜಯಕುಮಾರ ಯ ಬಿರಾದಾರ ಅವರು ಭಾಗವಹಿಸಿ “ಭಾರತದಲ್ಲಿ ಟಾಪ್ ಸ್ಕೋರರ್‌ಗಳಲ್ಲಿ ಒಬ್ಬರಾಗುವ ಮೂಲಕ ಯು-ರಿಪೋರ್ಟರ್ ಇಂಡಿಯಾ ದೆಹಲಿಯಿಂದ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಈ ಮೂಲಕ ಕರ್ನಾಟಕಕ್ಕೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ಈ ಸಂದರ್ಭದಲ್ಲಿ ಸಂಜಯಕುಮಾರ ಅವರನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಬಿ ಗುಡಸಿ, ಶ್ರೀ ಯಶಪಾಲ್ ಕ್ಷೀರಸಾಗರ್, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಸಂಗಪ್ಪ ಚಲವಾದಿ, ಧಾರವಾಡ ಜಿಲ್ಲಾ ನೆಹರು ಯುವ ಕೇಂದ್ರ ಇಲಾಖೆಯ ಅಧಿಕಾರಿಗಳಾದ ಶ್ರೀ ಗೌತಮರೆಡ್ಡಿ ಹಾಗೂ ಸ್ನೇಹಿತರು, ಹಿತೈಷಿಗಳು ಅಭಿನಂದಿಸಿದ್ದಾರೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *