Breaking News

ಶಾಸಕ ಅಮೃತ ದೇಸಾಯಿ ಉಳವಿಗೆ ಪಾದಯಾತ್ರೆ ಆರಂಭ

  ಧಾರವಾಡ  ;  ಶಾಸಕ ಅಮೃತ ದೇಸಾಯಿ ಅವರ ಗರಗ ಮಡಿವಾಳೇಶ ಮಠದಿಂದ ಉಳವಿ ಚನ್ನಬಸ ವೇಶ್ವರ ಮಠದವರೆಗಿನ ಮತ್ತೊಂದು ಪಾದ ಯಾತ್ರೆ ಆರಂಭಗೊಂಡಿತು .6 ನೇ ವರ್ಷದ ಈ ಒಂದು ಪಾದಯಾತ್ರೆ ಧಾರವಾಡದ ಗರಗ ಮಡಿವಾಳೇಶ್ವರ ಮಠದಿಂದ ಇಂದು ಆರಂಭಗೊಂಡಿತು.

  ಮಠದ ಮುಂದೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಮಠಾಧೀಶರ ಪಾದಪೂಜೆ ಪೂಜೆ ಪುನಸ್ಕಾರ ಸೇರಿದಂತೆ ಹಲವು ವಿಧಿ ವಿಧಾನಗಳ ನಂತರ ಸ್ವಾಮೀಜಿಗಳ ಆಶೀರ್ವಾದ ವನ್ನು ಪಡೆದುಕೊಂಡ ಶಾಸಕ ಅಮೃತ ದೇಸಾಯಿ ಮತ್ತು ಪ್ರೀಯಾ ಅಮೃತ ದೇಸಾಯಿ ಅವರು ತಮ್ಮ 6 ನೇ ವರ್ಷದ ಪಾದಯಾತ್ರೆಯನ್ನು ಆರಂಭ ಮಾಡಿದರು.

 ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಮಠಾಧೀಶರು ಈ  6 ನೇ ವರ್ಷದ ಪಾದಯಾತ್ರೆಗೆ ಚಾಲನೆಯನ್ನು ನೀಡಿದರು.ಇಂದಿನಿಂದ ನಿರಂತರವಾಗಿ 6 ದಿನಗಳ ಕಾಲ ಈ ಒಂದು ಪಾದಯಾತ್ರೆ ನಿರಂತರ ವಾಗಿ ಉಳವಿ ವರೆಗೆ ಸಾಗಲಿದ್ದು ನವಂಬರ್ 28 ಕ್ಕೆ ಮುಕ್ತಾಯವಾಗಲಿದ್ದು ಶಾಸಕರೊಂದಿಗೆ ಅವರ ಪತ್ನಿ ಅಪಾರ ಬೆಂಬಲಿಗಳು ಕಾರ್ಯಕ ರ್ತರು ಅಭಿಮಾನಿಗಳು ಆಪ್ತರು ಸೇರಿದಂತೆ ಹಲವರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.
Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *