Breaking News

Breaking News


50 ಸಾವಿರ ಎಕರೆ ಲ್ಯಾಂಡ್ ಬ್ಯಾಂಕ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಭ್ಯವಿದೆ : ಸಿಎಂ

ಬೆಂಗಳೂರು : ಉತ್ತಮ ಮೂಲಸೌಕರ್ಯವುಳ್ಳ 50 ಸಾವಿರ ಎಕರೆ ಲ್ಯಾಂಡ್ ಬ್ಯಾಂಕ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಭ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಇನ್ವೆಸ್ಟ್ ಕರ್ನಾಟಕ 2022 ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಹುಬ್ಬಳ್ಳಿ ಧಾರವಾಡ, ಮಂಗಳೂರು, ಕಲಬುರ್ಗಿ, ಬಳ್ಳಾರಿ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಲ್ಯಾಂಡ್ ಬ್ಯಾಂಕ್ ಲಭ್ಯವಿದೆ. ಶಿವಮೊಗ್ಗ ಬಿಜಾಪುರ ವಿಮಾನ ನಿಲ್ದಾಣ ಶೀಘ್ರ ಆರಂಭವಾಗುತ್ತಿದ್ದು, ಕಾರವಾರದಲ್ಲಿ ವಿಮಾನ ನಿಲ್ದಾಣವಾಗಲಿದೆ. …

Read More »

ರೇಣುಕಾಚಾರ್ಯ ಅವರ ಸಹೋದರನ ಪುತ್ರನಿಗೆ ಕಿವಿಮಾತು ಹೇಳಿದ ಗುರೂಜಿ

ಚಿಕ್ಕಮಗಳೂರು : ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಗುರುವಾರದಂದು ಶವವಾಗಿ ಪತ್ತೆಯಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ತುಂಗಾ ಕಾಲುವೆಗೆ ಬಿದ್ದಿದ್ದು, ಸಾವಿನ ಕಾರಣ ಇನ್ನೂ ನಿಗೂಢವಾಗಿದೆ. ಇದರ ಮಧ್ಯೆ ಅಕ್ಟೋಬರ್ 30ರಂದು ಚಂದ್ರಶೇಖರ್, ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಅವರ ಆಶ್ರಮಕ್ಕೆ ರಾತ್ರಿ 9:00 ಗಂಟೆ ಸುಮಾರಿಗೆ ತೆರಳಿದ್ದರು ಎನ್ನಲಾಗಿದ್ದು, ಆಶ್ರಮದ ಮೂಲಗಳು ಸಹ …

Read More »

ಸ್ವತಂತ್ರ ಭಾರತದ ಮೊದಲ ಮತದಾರ ಇನ್ನಿಲ್ಲ

ಹಿಮಾಚಲ ಪ್ರದೇಶ : ಸ್ವತಂತ್ರ ಭಾರತದ ಮೊದಲ ಮತದಾರ ಎಂಬ ಹೆಗ್ಗಳಿಕೆ ಹೊಂದಿದ್ದ ಹಿಮಾಚಲ ಪ್ರದೇಶದ ನಿವಾಸಿ 106 ವರ್ಷದ ಶ್ಯಾಮ್ ಸರಣ್ ನೇಗಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಮಹತ್ವದ ಸಂಗತಿ ಎಂದರೆ ಮುಂಬರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿಯೇ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಿ ಅವರು ಇಹಲೋಕ ತ್ಯಜಿಸಿದ್ದಾರೆ. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ನವೆಂಬರ್ 2 ರಂದು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ …

Read More »


ಕೆಎಸ್‌ಆರ್ ಟಿಸಿ ಬಸ್ ಪಲ್ಟಿ : 13 ಮಂದಿ ಪ್ರಯಾಣಿಕರಿಗೆ ಗಾಯಾ

ಚಾಮರಾಜನಗರ: ಹೊರವಲಯದ ನಂಜನಗೂಡು ರಸ್ತೆಯಲ್ಲಿ ಕೆಎಸ್‌ಆರ್ ಟಿಸಿ ಬಸ್ ಪಲ್ಟಿಯಾಗಿರುವ ಘಟನೆ ತಡರಾತ್ರಿ ನಡೆದಿದೆ. ಮೈಸೂರಿಂದ ಕೊಯಮತ್ತೂರಿಗೆ ತೆರಳುತ್ತಿದ್ದ ಬಸ್ ನಿನ್ನೆ ಮಧ್ಯರಾತ್ರಿ‌ 2 ಗಂಟೆ ಸುಮಾರಿಗೆ ಹೊರವಲಯದಲ್ಲಿರುವ ಸಣ್ಣ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಹಾಗೂ ಕಂಡಕ್ಟರ್ ಸೇರಿದಂತೆ 13 ಮಂದಿ ಪ್ರಯಾಣಿಕರು ಗಾಯಾಕೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಚಾಮರಾಜನಗರ ಪಟ್ಟಣ ಠಾಣೆಯ ಕ್ಷಿಪ್ರ ಕಾರ್ಯ(QRT) …

Read More »

ಟಿಪ್ಪರ್ , ಆಟೊ ನಡುವೆ ಭೀಕರ ಅಪಘಾತ : 7 ಜನ ಸಾವು

ಬೀದರ್​ : ಸರ್ಕಾರಿ ಶಾಲೆ ಹತ್ತಿರ ನಿನ್ನೆ ಟಿಪ್ಪರ್ ಮತ್ತು ಆಟೊ ನಡುವೆ ಭೀಕರ ಅಪಘಾತ ಆಟೊದಲ್ಲಿದ್ದ ಏಳು ಮಹಿಳೆಯರು ಮೃತಪಟ್ಟ ಘಟನೆ ಬೀದರ್​ನಲ್ಲಿ ನಡೆದಿದೆ. ಮೃತಪಟ್ಟ ದುರ್ದೈವಿ ಚಿಟಗುಪ್ಪ ತಾಲ್ಲೂಕಿನ ಉಡುಬನಳ್ಳಿ ಗ್ರಾಮದ ಪ್ರಭಾವತಿ ದೇವೇಂದ್ರ (36), ಯಾದಮ್ಮ ಅಷ್ಮಿತ (40), ಗುಂಡಮ್ಮಾ ನರಸಿಂಗ (60), ಜಗಮ್ಮಾ ಪ್ರಭು (34), ರುಕ್ಮಿಣಿಬಾಯಿ ಅಮೃತ (60), ಈಶ್ವರಮ್ಮ ಬಕ್ಕಪ್ಪ (55) ಪಾರ್ವತಿ ಮಾರುತಿ (42) ಮೃತರು. ಎಲ್ಲರೂ ಕೃಷಿ ಕಾರ್ಮಿಕರಾಗಿದ್ದು, …

Read More »

ಹಾವೇರಿ ತಹಶೀಲ್ದಾರ್ ಗಿರೀಶ್ ಸ್ವಾದಿ ಕಾಣೆ : ದೂರು ದಾಖಲು

ಹಾವೇರಿ: ತಹಶೀಲ್ದಾರ್ ಗಿರೀಶ್ ಸ್ವಾದಿ ಅವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಿರೀಶ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಅ. 31 ರಂದು ರಾತ್ರಿ 9:30ಕ್ಕೆ ಗಿರೀಶ್ ಪತ್ನಿ ಭಾಗ್ಯಶ್ರೀ ಅವರಿಗೆ ಕೊನೆಯ ಬಾರಿ ಕರೆ ಮಾಡಿದ್ದಾರೆ. ಪರಿಚಯಸ್ಥರಾದ ಬೆಳಗಾವಿಯ ಜಹೂರ ಅಂಗಡಿ ಅವರ ಮೊಬೈಲ್ ನಿಂದ ಕರೆ ಮಾಡಿದ್ದ ಗಿರೀಶ್ ರಾತ್ರಿ ಮನೆಗೆ ಬರುವುದಿಲ್ಲ. ನ. …

Read More »

ಶಾಸಕ ಸಹೋದರನ ಪುತ್ರ ಸಾವು ಪ್ರಕರಣ : ಕೊಲೆ ಮಾಡಿರುವ ಅನುಮಾನಗಳು ದಟ್ಟ

ಬೆಂಗಳೂರು :  ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಸಂಘಟನೆಯೊಂದು ವ್ಯವಸ್ಥಿತ ಸಂಚು ರೂಪಿಸಿ ಕೊಲೆ ಮಾಡಿರುವ ಅನುಮಾನಗಳು ದಟ್ಟವಾಗಿವೆ. ಅಕ್ಟೋಬರ್ 30ರಿಂದ ನಾಪತ್ತೆಯಾಗಿದ್ದ ಚಂದ್ರಶೇಖರ್ ಅವರ ಕಾರು ನಿನ್ನೆ ಹೊನ್ನಾಳ್ಳಿಯ ನ್ಯಾಮತಿ ಮಧ್ಯೆ ಸೊರಟುರು ಬಳಿ ತುಂಗಾ ಮೇಲ್ದಂಡೆಯ ಕಾಲುವೆಯಲ್ಲಿ ಪತ್ತೆಯಾಗಿದೆ.ಕ್ರೈನ್ ಬಳಸಿ ಕಾರನ್ನು ಮೇಲೆತ್ತಿದ್ದಾಗ ಹಿಂಬದಿ ಸೀಟಿನಲ್ಲಿ ಚಂದ್ರಶೇಖರ್ ಅವರ ಶವ ಪತ್ತೆಯಾಗಿದೆ. ಸುಮಾರು 20 ಅಡಿ ನಾಲೆಯಲ್ಲಿ …

Read More »

ಅಂಗಡಿಗೆ ಕನ್ನ ಹಾಕಿದ್ದ ಖದೀಮರ ಬಂಧನ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿನ ಅಂಗಡಿಯಲ್ಲಿ ಇಟ್ಟಿದ್ದ 6 ಲಕ್ಷ ರೂಪಾಯಿ ಕಳವು ಮಾಡಿದ್ದ ಆರೋಪಿಯನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 4.21 ಲಕ್ಷ ರೂಪಾಯಿ ನಗದು, ಮೊಟಾರ್ ಸೈಕಲ್, ಮೊಬೈಲ್ ಹಾಗೂ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಹಣ ಕಳವು ಮಾಡಿ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಕೇಶ್ವಾಪುರ ಠಾಣೆ ಪೊಲೀಸರು ಇನ್ಸ್‌ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತಂಡ …

Read More »

ಗಂಧದಗುಡಿ ಚಿತ್ರ ವಿಕ್ಷೀಸಿದ ಮಾಜಿ ಸಿಎಂಶಿವ

ಶಿವಮೊಗ್ಗ: ಸದಾ ರಾಜಕೀಯ ಜಜಾಂಟದಲ್ಲಿರುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಬಿಡುವು ಮಾಡಿಕೊಂಡು ಇಲ್ಲಿನ ಸಿಟಿ ಸೆಂಟ್ರಲ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಪವರ್‌ಸ್ಟಾರ್ ಪುನೀತ್‌ ರಾಜ್​ಕುಮಾರ್ ಅವರ ಸಾಕ್ಷ್ಯಚಿತ್ರ ‘ಗಂಧದಗುಡಿ’ ವೀಕ್ಷಿಸಿದರು. ಪುತ್ರ ಬಿ.ವೈ.ರಾಘವೇಂದ್ರ ಮತ್ತು ಸೊಸೆ ತೇಜಸ್ವಿನಿ ರಾಘವೇಂದ್ರ ಅವರೊಂದಿಗೆ ಯಡಿಯೂರಪ್ಪ ಸಿನಿಮಾ ವೀಕ್ಷಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಎಸ್.ಎಸ್.ಜ್ಯೋತಿಪ್ರಕಾಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಮತ್ತಿತರರು ಸಾಥ್ ನೀಡಿದರು. ಯಡಿಯೂಪ್ಪ ಅವರು ಮಾಲ್‌ಗೆ ಆಗಮಿಸುತ್ತಿದ್ದಂತೆ …

Read More »

ಫೇಸ್‌ಬುಕ್ ಇಂಡಿಯಾ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ

ಮುಂಬೈ: ಫೇಸ್‌ಬುಕ್ ಇಂಡಿಯಾ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದಾರೆ ಎಂದು ಮೆಟಾ ಇಂಡಿಯಾ ಪ್ರಕಟಿಸಿದೆ. ವರದಿಗಳ ಪ್ರಕಾರ, ಮೋಹನ್ ಪ್ರತಿಸ್ಪರ್ಧಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಸ್ನ್ಯಾಪ್‌ಗೆ ಸೇರಲಿದ್ದಾರೆ. ಕಂಪನಿಯ ಪ್ರಕಾರ, ಉತ್ತಮ ಅವಕಾಶದ ನಿರೀಕ್ಷೆಯಲ್ಲಿದ್ದ ಅಜಿತ್ ಮೋಹನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದೆ. ಮೋಹನ್ ನಾಲ್ಕು ವರ್ಷಗಳ ಕಾಲ ಸ್ಟಾರ್ ಇಂಡಿಯಾದ ವೀಡಿಯೊ ಸ್ಟ್ರೀಮಿಂಗ್ ಸೇವೆ ಹಾಟ್‌ಸ್ಟಾರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. …

Read More »