Breaking News

Breaking News

ಕಾಂಗ್ರೆಸ್‌ನವರಿಗೆ 80 ಕ್ಷೇತ್ರದಲ್ಲಿ ಅಭ್ಯರ್ಥಿಗಳಿಲ್ಲ : ಸಿ.ಎಂ.ಇಬ್ರಾಹಿಂ ವ್ಯಂಗ್ಯ

ಬೆಂಗಳೂರು : ಕಾಂಗ್ರೆಸ್‌ನವರಿಗೆ 80 ಕ್ಷೇತ್ರದಲ್ಲಿ ಅಭ್ಯರ್ಥಿಗಳಿಲ್ಲ. ನಾನು ಅಲ್ಲಿಯೇ ಇದ್ದವನು, ಹಳೆ ಹೆಂಡಂದಿರ ಬಗ್ಗೆ ನಮಗೆ ಗೊತ್ತಿಲ್ಲವೇ? ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ನಾವು ಹನುಮಂತನಂತೆ ಹೊತ್ತುಕೊಂಡು ಹೋಗುತ್ತಿದ್ದೆವು. ಈಗ ಹೊತ್ತುಕೊಂಡು ಹೋಗುವವರು ಯಾರಿಲ್ಲ. ಪಾಪ ಅವರನ್ನು ಓಡಿಸಿಬಿಟ್ಟರು. ಅವರಿಗೆ ಸ್ಟೆಂಟ್‌ ಹಾಕಿದ್ದಾರೆ. ಇರುವ ಆರೋಗ್ಯ ಎಲ್ಲಿ ಹಾಳಾಗುತ್ತೋ ಎಂದು ನನಗೆ ಗಾಬರಿಯಾಗಿತ್ತು. ಸದ್ಯ ವೇಣುಗೋಪಾಲ ಬಂದು ಹಿಡಿದುಕೊಂಡರು. ಸಿದ್ದರಾಮಯ್ಯ ಅವರ …

Read More »

ಹವಮಾನ ಇಲಾಖೆಯಿಂದ ಮಹತ್ವದ ಸೂಚನೆ

ನವದೆಹಲಿ: ಪ್ರಸ್ತುತ ದೇಶದ ಹಲವೆಡೆ ಅಕಾಲಿಕ ಮಳೆ ಅನಾಹುತವನ್ನು ಸೃಷ್ಟಿಸಿದೆ. ತೀವ್ರ ಮಳೆಯಿಂದಾಗಿ ಕರ್ನಾಟಕ, ದೆಹಲಿ, ಯುಪಿ, ಉತ್ತರಾಖಂಡ ಮತ್ತು ಬಿಹಾರದ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ ಮೂರ್ನಾಲ್ಕು ದಿನ ಮಳೆ ಇದೇ ರೀತಿ ಮುಂದುವರಿಯಲಿದೆ ಎಂದು ಬಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ಅಪ್‌ಡೇಟ್‌ನಲ್ಲಿ ದೆಹಲಿಯಲ್ಲಿ 13 ನೇ ತಾರೀಖಿನವರೆಗೆ ಅಧಿಕ ಮಳೆಯಾಗಬಹುದು ಎಂದು ಅದು ಹೇಳಿದೆ. ಈ ಸಮಯದಲ್ಲಿ ತಾಪಮಾನ …

Read More »

108 ಆಯಂಬುಲೆನ್ಸ್ ಸೇವೆ ಸ್ಥಗಿತ : ರೋಗಿಗಳು ಪರದಾಟ

ಬೆಂಗಳೂರು : ಕೆಲ ದಿನಗಳ ಹಿಂದೆ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ 108 ಆಯಂಬುಲೆನ್ಸ್ ಸೇವೆ ಇದೀಗ ಸಿಬ್ಬಂದಿ ಕೊರೆಯಿಂದಾಗಿ ಮತ್ತೆ ಸ್ಥಗಿತಗೊಂಡಿದೆ. ರೋಗಿಗಳು ಪರದಾಡುವಂತಾಗಿದೆ. ಈಗ ಸಿಬ್ಬಂದಿ ಕೊರತೆಯಿಂದ ಸಿಗದ 108 ಆಯಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗಿದೆ. 108 ಕ್ಕೆ ಕರೆ ಮಾಡಿದ್ರೆ ಯಾರೂ ಕರೆ ಸ್ವೀಕರಿಸುತ್ತಿಲ್ಲ. ಹೀಗಾಗಿ ಅನೇಕ ಜಿಲ್ಲೆಗಳಲ್ಲಿ ರೋಗಿಗಳು ಮತ್ತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ರಾತ್ರಿಯಿಂದ 108 ಆಯಂಬುಲೆನ್ಸ್ ಸೇವೆಯಲ್ಲಿ ಸಮಸ್ಯೆ ಕಂಡುಬಂದಿದೆ. ವೇತನ ನೀಡದಿದ್ದಕ್ಕೆ …

Read More »

ಚರಂಡಿಯಲ್ಲಿ ಗಂಡು ಶಿಶು ಪತ್ತೆ: ಆಶಾ ಕಾರ್ಯಕರ್ತೆಯರಿಂದ ರಕ್ಷಣೆ

ನವಲಗುಂದ : ತಾಲ್ಲೂಕಿನ ಗೊಬ್ಬರಗುಂಪಿ ಗ್ರಾಮದ ಚರಂಡಿಯಲ್ಲಿ ಅನಾಥ ಗಂಡು ಹಸುಗೂಸೊಂದು ಪತ್ತೆಯಾಗಿದ್ದು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾಮದ ಮಹಿಳೆಯರು ಮಗುವನ್ನು ರಕ್ಷಿಸಿದ್ದಾರೆ. ಬೆಳಗಿನ ಸುಮಾರು ಆರು ಗಂಟೆಗೆ ಘಟನೆ ಬೆಳಕಿಗೆ ಬಂದಿದ್ದು, ಮಗುವನ್ನು ಕಂಡ ಮಹಿಳೆಯರು ತಕ್ಷಣ ಸ್ವಚ್ಛಗೊಳಿಸಿ, ಹಾಲುಣಿಸಲು ಬಾನಂತಿಯ ಮನೆಯಲ್ಲಿ ಇರಿಸಲಾಗಿದೆ. ಘಟನೆಯನ್ನು ನವಲಗುಂದ ಪೊಲೀಸ್ ಠಾಣೆಗೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಗೆ ತಿಳಿಸಲಾಗಿದೆ. ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ನವಲಗುಂದ ತಾಲೂಕಾ …

Read More »

ಹುಬ್ಬಳ್ಳಿ-ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲು ಮತ್ತೆ ಪ್ರಾರಂಭ

ಹುಬ್ಬಳ್ಳಿ; ಹುಬ್ಬಳ್ಳಿ-ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲು ಮತ್ತೆ ಪ್ರಾರಂಭವಾಗಲಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅ. 11ರಂದು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಲಿದ್ದು ಇದು ಸಾಪ್ತಾಹಿಕ ರೈಲಾಗಿದೆ. ಇದರೊಂದಿಗೆ ರೈಲ್ವೆ ನಿಲ್ದಾಣದ 3ನೇ ಪ್ರವೇಶ ದ್ವಾರ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಸಚಿವರು ಲೋಕಾರ್ಪಣೆಗೊಳಿಸಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ‘ಸವಾಯಿ ಗಂಧರ್ವರ ಸ್ಮರಣಾರ್ಥ’ ಅಂಚೆಚೀಟಿ ಬಿಡುಗಡೆ ಮಾಡುವರು. ಮಧ್ಯಾಹ್ನ 12.30ಕ್ಕೆ . …

Read More »

ಬಸ್ ಪಲ್ಟಿ : ಆಸ್ಪತ್ರೆಗೆ ದಾಖಲಾದ ಜನರನ್ನು ಆರೋಗ್ಯ ವಿಚಾರಿಸಿದ ಕುಸುಮಾವತಿ ಶಿವಳ್ಳಿ

ಕುಂದಗೋಳ : ಮತಕ್ಷೇತ್ರದ ಶೇರೆವಾಡ್ ಗ್ರಾಮದ ಹತ್ತಿರ ಮುಂಜಾನೆ 8:00 ಘಂಟೆಗೆ ಹುಬ್ಬಳ್ಳಿಗೆ ಹೋಗುವ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು,ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಂಶಿ,ಶಿರೂರ,ಕುಂದಗೋಳ,ಲಕ್ಸ್ಮೇಶ್ವರ ಸೇರಿದಂತೆ ವಿವಿಧ ಗ್ರಾಮಗಳ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾರ್ಮಿಕರು,ಉದ್ಯೋಗಿಗಳು ಗೃಹಸ್ಥರು ಸೇರಿದಂತೆ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರ ಆರೋಗ್ಯವನ್ನು ವಿಚಾರಿಸಲು ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕುಸುಮಾವತಿ ಚ ಶಿವಳ್ಳಿಯವರು ವಿಚಾರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಗೋವಿಂದಗೌಡ್ರ ಮುಲ್ಕಿಪಾಟೀಲ,ಸಂಜೀವ ಬಂಡಿವಡ್ಡರ, ಕಿಮ್ಸ್ …

Read More »

ಅವಳಿ ಗಂಡು ಮಕ್ಕಳಿಗೆ ತಾಯಿಯಾದ ತಮಿಳು ಚಿತ್ರರಂಗದ ಸ್ಟಾರ್ ನಟಿ

ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್ ನಟಿ ನಯನತಾರ ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿದ್ದಾರೆ. ತಾಯಿಯಾಗಿರುವ ಖುಷಿಯ ವಿಚಾರವನ್ನು ನಯನತಾರ ಪತಿ ವಿಘ್ನೇಶ್​ ಶಿವನ್ ಟ್ವಿಟರ್​ ಮೂಲಕ ತಿಳಿಸಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆ ನಯನತಾರ ಅಭಿಮಾನಿಗಳು ಖುಷಿಯಾಗಿದ್ದಾರೆ. ನಯನತಾರ-ವಿಘ್ನೇಶ್ ಶಿವನ್ ದಂಪತಿಗಳಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಬರುತ್ತಿವೆ. ವಿಘ್ನೇಶ್ ಶಿವನ್ ಸಾಮಾಜಿಕ ಜಾಲತಾಣದಲ್ಲಿ ಅವಳಿ ಮಕ್ಕಳ ಫೋಟೋ ಶೇರ್ ತಮ್ಮ ಮನೆಯ ಹೊಸ ಸದಸ್ಯರನ್ನು ಸ್ವಾಗತಿಸಿದ್ದಾರೆ. ಏಳು ವರ್ಷಗಳ ಡೇಟಿಂಗ್​ ನಂತರ …

Read More »

ನಂಜುಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿದ ಅರ್ಜುನ್ ಸರ್ಜಾ

ಮೈಸೂರು: ಬೆಳ್ಳಂಬೆಳಗ್ಗೆ ನಟ ಅರ್ಜುನ್ ಸರ್ಜಾ ಅವರು ಮೈಸೂರಿನ ನಂಜನಗೂಡಿನ ನಂಜುಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಅರ್ಜುನ್​ ಸರ್ಜಾ ಅವರು ನಂಜುಡೇಶ್ವರ, ಪಾರ್ವತಮ್ಮ, ಗಣಪತಿಗೆ ಪೂಜೆ ಸಲ್ಲಿಸಿ, ಕೆಲ ಸಮಯ ನಂಜುಡೇಶ್ವರನ ದೇವಸ್ಥಾನದ ಸನ್ನಿಧಿಯಲ್ಲಿಯೇ ಕಳೆದರು.ಇನ್ನು ತಮ್ಮ ನೆಚ್ಚಿನ ನಟ ದೇವಸ್ಥಾನಕ್ಕೆ ಆಗಮನ ಹಿನ್ನಲೆಯಲ್ಲಿ ಅಭಿಮಾನಗಿಳು ಸೆಲ್ಫಿಗಾಗಿ ಮುಗಿಬಿದ್ದರು. ಕಳೆದ ಕೆಲವು ತಿಂಗಳ ಹಿಂದೆ ತೆಲುಗಿನಲ್ಲೂ ನಿರ್ದೇಶನ ಮಾಡುತ್ತೇನೆ. ಕಥೆಯೂ ಸಿದ್ಧವಾಗಿದೆ. ಮಗಳ ಸಿನಿಮಾ ಮುಗಿದ ನಂತರ …

Read More »

ಇಂದು ಚಿತ್ರದುರ್ಗಕ್ಕೆ ಭಾರತ್‌ ಜೋಡೊ ಯಾತ್ರೆ ಪಾದಾರ್ಪಣೆ

ಚಿತ್ರದುರ್ಗ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸುತ್ತಿರುವ ಭಾರತ್‌ ಜೋಡೊ ಯಾತ್ರೆ ಸೋಮವಾರ ಕೋಟೆನಾಡು ಪ್ರವೇಶಿಸಲಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೂಲಕ ಹಿರಿಯೂರಿಗೆ ಬರಲಿದೆ. ಸೆ.30ರಂದು ಕರ್ನಾಟಕ ಪ್ರವೇಶಿಸಿದ ಯಾತ್ರೆ ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು ಮಾರ್ಗವಾಗಿ ಚಿತ್ರದುರ್ಗಕ್ಕೆ ಬರುತ್ತಿದೆ. ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮುರು ಮಾರ್ಗವಾಗಿ ಅ. 14ರಂದು ಬಳ್ಳಾರಿ ಜಿಲ್ಲೆಗೆ ತೆರಳಲಿದೆ. ಜಿಲ್ಲೆಯಲ್ಲಿ ಐದು ದಿನ ಯಾತ್ರೆ ಸಂಚರಿಸಲಿದೆ.

Read More »

ಬಸ್ ಪಲ್ಟಿ : ಚಾಲಕ ಸಾವು

ಹುಬ್ಬಳ್ಳಿ: ಟೈರ್ ಸ್ಫೋಟಗೊಂಡು ಕೆಎಸ್​​ಆರ್​ಟಿಸಿ ಬಸ್ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲೂಕಿನ ಶೆರೆವಾಡ ಸಮೀಪ ನಡೆದಿದೆ. ಬಸ್ಸಿನಲ್ಲಿದ್ದ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. KA 25 F 3097 ಸಂಖ್ಯೆಯ ಬಸ್ ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾಗ ಶೆರೆವಾಡ ಗ್ರಾಮದ ಬಳಿ ಏಕಾಏಕಿ ಟೈಯರ್ ಬ್ಲಾಸ್ಟ್ ಆಗಿ ಬಸ್ ಪಲ್ಟಿಯಾಗಿದೆ‌. ಬಸ್ ಪಲ್ಟಿಯಾಗುತ್ತಿದಂತೆ ಚಾಲಕ ಬಸ್​ನಡಿ ಸಿಲುಕಿದ್ದಾರೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. …

Read More »