ಕುಂದಗೋಳ : ಮತಕ್ಷೇತ್ರದ ಶೇರೆವಾಡ್ ಗ್ರಾಮದ ಹತ್ತಿರ ಮುಂಜಾನೆ 8:00 ಘಂಟೆಗೆ ಹುಬ್ಬಳ್ಳಿಗೆ ಹೋಗುವ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು,ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸಂಶಿ,ಶಿರೂರ,ಕುಂದಗೋಳ,ಲಕ್ಸ್ಮೇಶ್ವರ ಸೇರಿದಂತೆ ವಿವಿಧ ಗ್ರಾಮಗಳ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾರ್ಮಿಕರು,ಉದ್ಯೋಗಿಗಳು ಗೃಹಸ್ಥರು ಸೇರಿದಂತೆ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರ ಆರೋಗ್ಯವನ್ನು ವಿಚಾರಿಸಲು ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕುಸುಮಾವತಿ ಚ ಶಿವಳ್ಳಿಯವರು ವಿಚಾರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗೋವಿಂದಗೌಡ್ರ ಮುಲ್ಕಿಪಾಟೀಲ,ಸಂಜೀವ ಬಂಡಿವಡ್ಡರ, ಕಿಮ್ಸ್ ಸುಪರಿಡೆಂಟ್ ಡಾ.ಅರುಣ್ ಕುಮಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

