Breaking News

Breaking News

ಜೆಡಿಎಸ್ ಪ್ರತಿಭಟನೆಯೊಂದಿಗೆ ಕಲಾಪ ಮುಕ್ತಾಯ

ವಿಧಾನಸಭೆ: ಬಿಎಂಎಸ್‌ ಶಿಕ್ಷಣ ಟ್ರಸ್ಟ್‌ನ ಆಜೀವ ಸದಸ್ಯತ್ವವನ್ನು ಖಾಸಗಿ ವ್ಯಕ್ತಿಗೆ ನೀಡಿರುವುದು ಸೇರಿ ಟ್ರಸ್ಟ್‌ನಲ್ಲಿ ನಡೆದಿರುವ ಅವ್ಯವಹಾರವನ್ನು ಸಿಬಿಐ ಅಥವಾ ಸಿಒಡಿ ತನಿಖೆಗೆ ಒಪ್ಪಿಸುವಂತೆ  ಜೆಡಿಎಸ್‌ ಧರಣಿ ಮುಂದುವರಿಸಿತು.ಸರ್ಕಾರ ತನಿಖೆಗೆ ಒಪ್ಪದ ಕಾರಣ ಗದ್ದಲದ ವಾತಾವರಣ ಉಂಟಾಗಿದ್ದರಿಂದ ಸದನ ಅರ್ನಿಷ್ಟಾವಧಿಗೆ ಮುಂದೂಡಲಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದ ಜೆಡಿಎಸ್‌ ಸದಸ್ಯರು, ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಘೋಷಣೆ ಕೂಗಿ, ಪೋಸ್ಟರ್‌ ಪ್ರದರ್ಶಿಸಿದರು. ಈ ವೇಳೆ ಸದಸ್ಯ …

Read More »

ಭಾರತ್ ಜೋಡೊ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷೆ , ಪ್ರಿಯಾಂಕಾ ಗಾಂಧಿ ಭಾಗಿ

ಬೆಂಗಳೂರು: ಕಾಂಗ್ರೆಸ್‌ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಭಾಗವಹಿಸುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ನಡೆಸುತ್ತಿರುವ ಯಾತ್ರೆ ರಾಜ್ಯದಲ್ಲಿ ಸೆ.30ರಂದು ಬೆಳಗ್ಗೆ 9ಕ್ಕೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಿಂದ ಆರಂಭವಾಗಲಿದೆ. ಸೋನಿಯಾ ಗಾಂಧಿ ಭಾಗವಹಿಸುವ ದಿನಾಂಕ ಶೀಘ್ರ ನಿರ್ಧರಿಸಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. …

Read More »

ಬಿಗ್ ಬಾಸ್ ಕನ್ನಡ 9 ಗೆ ಈ ಸ್ಪರ್ಧಿಗಳು ಭಾಗವಹಿಸುವುದು ಬಹುತೇಕ ಖಚಿತ

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಮುಕ್ತಾಯಗೊಂಡಿದ್ದು, ಇದರಲ್ಲಿ ಟಾಪರ್ ಆದ ರೂಪೇಶ್ ಶೆಟ್ಟಿ ಜತೆಗೆ ರಾಕೇಶ್ ಅಡಿಗ, ಆರ್ಯವರ್ಧನ್ ಹಾಗೂ ಸಾನ್ಯಾ ಅಯ್ಯರ್ ಬಿಗ್ ಬಾಸ್ ಒಂಬತ್ತನೇ ಆವೃತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ನಾಲ್ವರ ಜತೆ ಬಿಗ್ ಬಾಸ್ ಒಂಬತ್ತನೇ ಸೀಸನ್‌ಗೆ ಯಾರು ಆಯ್ಕೆಯಾಗಬಹುದು ಎಂಬ ಕುತೂಹಲ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಊಹೆಯ ಲೆಕ್ಕಾಚಾರಗಳು ನಡೆಯುತ್ತಿವೆ. ಇನ್ನು ನಾಳೆಯಿಂದ ( ಸೆಪ್ಟೆಂಬರ್ 23 ) ಬಿಗ್ …

Read More »

ಉದ್ಧವ್ ಠಾಕ್ರೆಗೆ ಸಿಹಿ ಸುದ್ದಿ

ತಮ್ಮ ಪಕ್ಷದ ಸಚಿವ, ಶಾಸಕರ ಬಂಡಾಯದಿಂದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ಉದ್ಧವ್ ಠಾಕ್ರೆ ಮತ್ತವರ ಬಣಕ್ಕೆ ದಸರಾ ಹಬ್ಬದ ಸಂದರ್ಭದಲ್ಲಿ ಶುಭ ಸುದ್ದಿ ಸಿಕ್ಕಿದೆ. ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್ ನಲ್ಲಿ ದಸರಾ ಸಮಾವೇಶ ಆಯೋಜಿಸುವ ಕುರಿತಂತೆ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಠಾಕ್ರೆ ಬಣದ ನಡುವೆ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ.ತಮ್ಮದೇ ನಿಜವಾದ ಶಿವಸೇನೆ ಎಂದು ಉಭಯ ಬಣಗಳು ಪ್ರತಿಪಾದಿಸುತ್ತಿದ್ದು, ದಸರಾ ಸಮಾವೇಶ …

Read More »

ನಗರದ ಸೌಂದರ್ಯ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಕೆಲಸ ಮಹತ್ವದ್ದು

ಹುಬ್ಬಳ್ಳಿ : ನಗರದ ಸೌಂದರ್ಯ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಕೆಲಸ ಮಹತ್ವದ್ದು, ನಾವು ವಾಸ ಮಾಡುವ ಪ್ರದೇಶದ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿ ಇಟ್ಟುಕೊಂಡರೆ ಇಡೀ ನಗರವೇ ಶುಚಿತ್ವದಿಂದ ಇರಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು, ಡಾ. ಶ್ರೀಧರ ಹೊಸಮನಿ, ನಾವು ಸಹ ಸ್ವಚ್ಛತೆ ಕಾಪಾಡಲು ಕೈಕೋಡಿಸಿದರೆ ಪೌರ ಕಾರ್ಮಿಕರ ಕೆಲಸದ ಒತ್ತಡವು ಕಡಿಮೆಯಾಗಲಿದೆ, ಪೌರ ಕಾರ್ಮಿಕರು ಕಾಯಕ ಯೋಗಿಗಳಾಗಿದ್ದು, ಇಡೀ ನಗರವನ್ನು ಸ್ವಚ್ಛ ಮಾಡುತ್ತಾರೆ’ ಎಂದು ಸೇವೆ …

Read More »

ಹುಬ್ಬಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಣೆ

ಹುಬ್ಬಳ್ಳಿ : ಎಲ್ಲಿ ನೋಡಿದರೂ ಜನವೋ ಜನ ಇದೇನೋ ಸರ್ಕಾರಿ ದವಾಖಾನೆಯೋ ಅಥವಾ ಯಾವುದಾದರೂ ಸಂಘಸಂಸ್ಥೆಗಳ ಕಾರ್ಯಕ್ರಮವೋ ಅಂತಿರಾ ಹಾಗಾದರೇ ನಿಮ್ಮ ಅಭಿಪ್ರಾಯ ಸುಳ್ಳು. ಸದ್ಯ ರಾಜ್ಯಾದ್ಯಂತ ಧರ್ಮ ದಂಗಲ್ ಮುಸುಕಿನ ಗುದ್ದಾಟ ದಿನದಿಂದ ದಿನಕ್ಕೆ ಸುದ್ದಿಯಾಗುತ್ತಿದೆ. ಆದರೇ ಸ್ಲಂ ಪ್ರದೇಶದಲ್ಲೊಂದು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರು ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರ ಹಾಗೇ ಪಾಲ್ಗೊಂಡಿದ್ದು ನೋಡಿದರೇ ಅದುವೇ ನಮ್ಮ ಭಾವೈಕ್ಯತೆಯ ಭಾರತ ಎಂಬುದನ್ನು ತೋರಿಸುವ ದೃಶ್ಯ ಕಂಡು ಬಂದಿತು. …

Read More »

ವಚನ ಭ್ರಷ್ಟರಾದ ಮುಖ್ಯಮಂತ್ರಿಗಳ ದಲಿತ ವಿರೋಧಿ ಉಗ್ರ ಪ್ರತಿಭಟನೆ ಮಾಡಲಾಗುವುದು :ವಿಜಯ ಗುಂಟ್ರಾಳ

ಹುಬ್ಬಳ್ಳಿ: ಪೌರಕಾರ್ಮಿಕರನ್ನು ಖಾಯಂಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿಗಳು ಮಾತು ತಪ್ಪಿದ್ದು, ಈ ಹಿನ್ನೆಲೆಯಲ್ಲಿ ವಚನ ಭ್ರಷ್ಟರಾದ ಮುಖ್ಯಮಂತ್ರಿಗಳ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಪೌರಕಾರ್ಮಿಕರು ಗುತ್ತಿಗೆ ಪದ್ದತಿಯಲ್ಲಿ ಅಮಾನವೀಯ …

Read More »

ಗಂಧದ ಗುಡಿ ಸಿನಿಮಾ ಮುಂದಿನ ತಿಂಗಳ ರೀಲಿಜ್ :ಪವರಸ್ಟಾರ್ ಕಟೌಟಗೆ ಹಾಲಿನ ಅಭಿಷೇಕ್

ಹುಬ್ಬಳ್ಳಿ : ಡಾ. ಪುನೀತ್ ರಾಜ್‍ಕುಮಾರ್ ಅವರ ಕನಸಿನ ಚಿತ್ರ ಗಂಧದ ಗುಡಿ ಸಿನಿಮಾಗೆ ಇನ್ನೂ ಒಂದು ತಿಂಗಳು ಬಾಕಿ ಇರುವಂತೆಯೇ ಕ್ರೇಜ್ ಹೆಚ್ಚಾಗಿದ್ದು, ನಗರದ ಚೆನ್ನಮ್ಮ ವೃತ್ತದಲ್ಲಿಂದು ಪುನೀತ್ ರಾಜ್‍ಕುಮಾರ್ ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಅಭಿಮಾನಿಗಳು ಸಂಭ್ರಮಿಸಿದರು. ಡಾ. ಪುನೀತ್ ರಾಜ್‍ಕುಮಾರ್ ಅವರನ್ನು ಕೊನೆಯದಾಗಿ ಬೆಳ್ಳಿ ತೆರೆಯ ಮೇಲೆ ನೋಡುವ ಅವಕಾಶ ಗಂಧದ ಗುಡಿ ಸಿನಿಮಾದಿಂದ ಈಡೇರಲಿದ್ದು, ಅಕ್ಟೋಬರ್ …

Read More »

ದೇವರ ವಿಗ್ರಹವನ್ನು ಸ್ಪರ್ಶಿಸಿದ ದಲಿತ ಕುಟುಂಬಕ್ಕೆ ದಂಡ ವಿಧಿಸಿದ ಪ್ರಕರಣ : 6 ಜನ ಬಂಧನ

ಕೋಲಾರ: ಹಿಂದೂ ದೇವರ ವಿಗ್ರಹವನ್ನು ಸ್ಪರ್ಶಿಸಿದ ದಲಿತ ಬಾಲಕನ ಕುಟುಂಬಕ್ಕೆ 60,000 ರೂ.ಗಳ ದಂಡ ವಿಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ನಾರಾಯಣಸ್ವಾಮಿ, ರಮೇಶ್ ಆರ್., ಚಲಪತಿ, ಮೋಹನ್ ರಾವ್ ಮತ್ತು ಚಿನ್ನಣ್ಣಯ್ಯ ಎಂದು ಗುರುತಿಸಲಾದ ವ್ಯಕ್ತಿಗಳನ್ನು ಮಾಸ್ತಿ ಪೊಲೀಸರು ಕ್ರಮ ಕೈಗೊಂಡು ಬಂಧಿಸಿದ್ದಾರೆ. ಮೆರವಣಿಗೆಯ ಸಮಯದಲ್ಲಿ ಹೊರತೆಗೆಯಬೇಕಿದ್ದ ವಿಗ್ರಹವನ್ನು ಸ್ಪರ್ಶಿಸಿದ್ದಕ್ಕಾಗಿ ದಲಿತ ಹುಡುಗ ಚೇತನ್ ನನ್ನು ಆರೋಪಿಗಳು ಥಳಿಸಿದ್ದರು. ಉಳ್ಳೇರಹಳ್ಳಿ …

Read More »

PSI ನೇಮಕಾತಿ ಅಕ್ರಮದಲ್ಲಿ ರಾಜಕಾರಣಿಗಳಿದ್ದರೂ ತನಿಖೆ ಹಾದಿ ತಪ್ಪಬಾರದು : ಕುಮಾರಸ್ವಾಮಿ

ಬೆಂಗಳೂರು: PSI ನೇಮಕಾತಿ ಅಕ್ರಮದಲ್ಲಿ ರಾಜಕಾರಣಿಗಳಿದ್ದರೂ ತನಿಖೆ ಹಾದಿ ತಪ್ಪಬಾರದು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಅಕ್ರಮ ಮಾಡಿದವರು ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ. ಎಡಿಜಿಪಿ ಮಟ್ಟದ ಅಧಿಕಾರಿಯೊಬ್ಬರು ಸೇರಿದಂತೆ ಕೆಲವಾರು ಪೊಲೀಸ್ ಅಧಿಕಾರಿಗಳು, ತಪ್ಪೆಸಗಿದ ಅಭ್ಯರ್ಥಿಗಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಅನ್ಯಾಯಕ್ಕೆ ತುತ್ತಾಗುತ್ತಿದ್ದಾರೆ ಎಂದರು. ಈ ಹಗರಣದ ತನಿಖೆ ಗಂಭೀರ ಹಂತ …

Read More »