Breaking News

Breaking News

ಯೋಧನಿಂದ ಹಾಡಹಗಲೇ ಗುಂಡು ಹಾರಿಸಿ ಮಹಿಳೆ ಬರ್ಬರ ಕೊಲೆ

ಬಾಗಲಕೋಟೆ: ಹಾಡಹಗಲೇ ಗುಂಡು ಹಾರಿಸಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡದ ನುಗ್ಲಿ ಓಣಿಯಲ್ಲಿ ನಡೆದಿದೆ. ದ್ಯಾಮವ್ವ ಪೂಜಾರಿ (45) ಹತ್ಯೆಯಾದ ಮಹಿಳೆ. ಕಾರಿನಲ್ಲಿ ಬಂದು ಗುಂಡು ಹಾರಿಸಿ ಪರಾರಿ ಆಗಿದ್ದ ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ದ್ಯಾಮವ್ವನನ್ನು ಆಯಂಬುಲೆನ್ಸ್​​ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಆಕೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಎಸ್‌ಪಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೂಟೌಟ್ ಮಾಡಿದವನು ಯೋಧನೆಂದು …

Read More »

ಸಿಡಿಲು ಬಡಿದು ಹಾವೇರಿ ಮಹಿಳೆಗೆ ಗಾಯ

ಹಾವೇರಿ: ಹಾವೇರಿ ಜಿಲ್ಲೆಯ ಹಲವೆಡೆ ಸಿಡಿಲು ಗುಡುಗಿನೊಂದಿಗೆ ಮಳೆರಾಯನ ಆರ್ಭಟ ನಡೆದಿದ್ದು, ಹಾವೇರಿ, ಸವಣೂರು ತಾಲೂಕಿನ ಹಲವೆಡೆ ಮಳೆಯಾಗಿದೆ. ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆಗೆ ಗಾಯವಾಗಿದೆ. ಸಣ್ಣಮ್ಮ ಕರಕಣ್ಣವರ ಎಂಬ ಮಹಿಳೆಗೆ ಗಾಯವಾಗಿದೆ. ಪ್ರಾಣಾಪಾಯದಿಂದ ಪಾರಾಗಿರುವ ಮಹಿಳೆ ಮಳೆ ಬರುತ್ತಿದ್ದ ವೇಳೆ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಗಾಯವಾಗಿತ್ತು. ಗಾಯಾಳುವಿಗೆ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Read More »

ಸಿಡಿಲು ಬಡಿದು ವೃದ್ಧ ಸಾವು

ಕೊಪ್ಪಳ: ಜಮೀನಿನಲ್ಲಿ ಸಿಡಿಲು ಬಡಿದು 65 ವರ್ಷದ ವೃದ್ಧ ಸಾವನ್ನಪ್ಪಿರುವ ದುರ್ಘಟನೆ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಬಳಿ ನಡೆದಿದೆ. ಜಮೀನಿಗೆ ತೆರಳಿದ್ದಾಗ ಜಮೀನಿನಲ್ಲಿ ಸಿಡಿಲು ಬಡಿದು 65 ವರ್ಷದ ಶಿವಪ್ಪ ಸಾವನ್ನಪ್ಪಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮಳೆ ಕುರಿತು ಹವಾಮಾನ ಇಲಾಖೆಯಿಂದ ಮಹತ್ವದ ಮುನ್ಸೂಚನೆ

ಬೆಂಗಳೂರು : ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ 4 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ಮುಂದುವರೆಯವು ಸಾಧ್ಯತೆ ಇದ್ದು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಮೈಸೂರು ಮತ್ತು ಮಂಡ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

Read More »

ಕೆಎಸ್‌ಆರ್ಟಿಸಿ ಬಸ್ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ : 29 ಜನರಿಗೆ ಗಾಯ

ಬೆಂಗಳೂರು: ರಸ್ತೆಗುಂಡಿ ತಪ್ಪಿಸಲು ಹೋಗಿ ಕೆಎಸ್‌ಆರ್ಟಿಸಿ ಬಸ್ ಮೆಟ್ರೋ ಪಿಲ್ಲರ್ ಗೆ ಡಿಕ್ಕಿಯಾಗಿದೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 45 ಜನರ ಪೈಕಿ 29 ಜನ ಗಾಯಗೊಂಡಿದ್ದಾರೆ. ಬೆಂಗಳೂರಿನ ಕೆಂಗೇರಿಯ ಭಾರತ್ ಪೆಟ್ರೋಲ್ ಬಂಕ್ ಸಮೀಪ ಘಟನೆ ನಡೆದಿದೆ. ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್ಟಿಸಿ ಬಸ್ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್ ಗೆ ಬಸ್ ಡಿಕ್ಕಿ ಆಗಿದೆ. 4 ಅಡಿ ತಡೆಗೋಡೆಗೆ ಗುದ್ದಿ ನಂತರ ಮೆಟ್ರೋ ಪಿಲ್ಲರ್ ಗೆ …

Read More »

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಜನರಿಗೆ ಬಂಪರ್ ಕೊಡುಗೆ : ಸಿದ್ದರಾಮಯ್ಯ

ಬೆಳಗಾವಿ : ಮುಂಬರುವ 2023ರ ಚುನಾವಣೆಯಲ್ಲಿ ಜನಾಶೀರ್ವಾದಿಂದ ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿ ಉಚಿ​ತ​ವಾಗಿ ಕೋಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಘೋಷಿ​ಸಿ​ದ​ರು. ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದಲ್ಲಿ ಭಾನು​ವಾ​ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಉದ್ಘಾಟಿಸಿ ಮಾತನಾಡಿ, ಪಿಎಸ್‌ಐ ನೇಮಕಾತಿಯಲ್ಲಿ ಸುಮಾರು .300 ಕೋಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು. ಇಂಥ ಸರ್ಕಾರ ಯಾವುದೇ ಕಾರ​ಣಕ್ಕೂ ಇರ​ಬಾ​ರದು, ಇಂಥ ಸರ್ಕಾ​ರ​ವನ್ನು ಬೇರು ಸಮೇತ ಕಿತ್ತು ಎಸೆದಾಗ ದೇಶ, ನಾವು, …

Read More »

ಮೇ. 20 ರೊಳಗೆ SSLC ಫಲಿತಾಂಶ

ಬೆಂಗಳೂರು : ಎಸ್‌ಎಸ್‌ಎಲ್ ಸಿ ಫಲಿತಾಂಶ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿದ್ದು, ವಿದ್ಯಾರ್ಥಿಗಳ ಅಂಕಗಳನ್ನು ಕ್ರೋಢೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮೇ. 20 ರೊಳಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳದೇ ಫಲಿತಾಂಶ ಪ್ರಕಟ ವಿಳಂಬಕ್ಕೆ ಕಾರಣವಾದ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಪ್ರೌಢ ಶಿಕ್ಷಣ ಮಂಡಳಿ ಸೂಚನೆ ನೀಡಿದೆ.

Read More »

ಹುಬ್ಬಳ್ಳಿಯ ಬೈಪಾಸ ಕಾಮಾಗಾರಿ ವೀಕ್ಷಿಸಿದ ಕೇಂದ್ರ ಸಚಿವ

ಹುಬ್ಬಳ್ಳಿ : ಇತ್ತೀಚೆಗೆ ಲೋಕಾರ್ಪಣೆಗೊಂಡಿರುವ ಹುಬ್ಬಳ್ಳಿಯ ಬೈಪಾಸಿನ ಕಾಮಾಗಾರಿ ನೋಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖುಷಿ ಪಟ್ಟರು.ಶಂಕರಪಾಟೀಲ ಮುನೇನಕೊಪ್ಪರವರ ವಿವಿಧ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿ ಇಂದು ಹುಬ್ಬಳ್ಳಿಯ ವರ್ತುಲ ರಸ್ತೆಯ ಮುಖಾಂತರ ಹುಬ್ಬಳ್ಳಿಗೆ ಆಗಮಿಸುವ ಸಂದರ್ಭದಲ್ಲಿ , ಸಚಿವರು ಅನುಮೋದನೆ ಪಡೆದುಕೊಂಡು ತಂದ ಯೋಜನೆಯಲ್ಲಿ ಸಂಚರಿಸಿ ಸಂತೋಷ ಪಟ್ಟರು .

Read More »

ರಾಜ್ಯ ಹಿರಿಯ ನಾಗರಿಕರ ಸಮಾವೇಶದಲ್ಲಿ ಮಾಜಿ ಸಿಎಂ ಭಾಗಿ

ಹುಬ್ಬಳ್ಳಿ: ನಗರದ ಬೆಂಗೇರಿಯ ನೂತನ ಮಾರುಕಟ್ಟೆ ಆವರಣದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಜ್ಯ ಹಿರಿಯ ನಾಗರಿಕರ ಸಮಾವೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು . ಈ ಕಾರ್ಯಕ್ರಮ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭಾಗವಹಿಸಿ , ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು . ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎ. ಪಾಟೀಲ್ , ಶ್ರೀ ಮಹೇಂದ್ರ ಸಿಂಘ , ಶ್ರೀ ಮಲ್ಲಿಕಾರ್ಜುನ ಸಾವಕಾರ …

Read More »

ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಕಮ್ಮಿ ವಿಲ್ಲ ಎನ್ನುವುದಕ್ಕೆ ಈ ಯುವತಿಯರೇ ಸಾಕ್ಷಿ

ಕುಂದಗೋಳ : ತಾಲೂಕಿನ ರೊಟ್ಟಿಗವಾಡ ಗ್ರಾಮದ ಯಶೋಧಾ ಮುತ್ತಣ್ಣಭೂತರೆಡ್ಡಿ ಹಾಗೂ ಸೈನಾಜಬೇಗಂ ಮಾಬುಸಾಬ್ ಮುಲ್ಲಾ ಬಿಎಸ್ಎಫ್ ಸೈನಿಕರ ತರಬೇತಿ ಮುಗಿಸಿ ಸ್ವ ಗ್ರಾಮಕ್ಕೆ ಮರಳಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅದ್ದೂರಿ ಬರಮಾಡಿಕೊಂಡರು. ಒಂದು ವರ್ಷದ ಬಿಎಸ್ಎಫ್ ಸೈನಿಕರು ತರಬೇತಿಯನ್ನು ಯಶಸ್ವಿಯಾಗಿ ಕೈಗೊಂಡು ರೊಟ್ಟಿಗವಾಡಕ್ಕೆ ಮರಳಿದ ಇಬ್ಬರಿಗೂ ಗ್ರಾಮಸ್ಥರು ಹೂ ಮಳೆ ಸುರಿದು ಸ್ವಾಗತ ಕೋರಿ ಸನ್ಮಾನ ಮಾಡಿದರು . ಈ ವೇಳೆ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಬಿ.ಎಸ್.ಎಫ್ ಯೋಧರಾದ ಕುಮಾರಿ ಯಶೋಧಾ …

Read More »