Breaking News

Breaking News

ಅದ್ದೂರಿ ಬಸವ ಜಯಂತಿಗೆ ಅರವಿಂದ್ ಬೆಲ್ಲದ ಚಾಲನೆ

. ಹುಬ್ಬಳ್ಳಿ : ವೀರಶೈವ ಸಮಾಜ ಸಂಘಟನಾ ಸಮಿತಿ , ಬ್ರಾಹ್ಮಣ ಸೇವಾ ಸಂಘ ನವನಗರ ಮತ್ತು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ತ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಶ್ರೀ ಜಗಜ್ಯೋತಿ ಬಸವೇಶ್ವರರ , ಶ್ರೀ ಆದಿಗುರು ಶಂಕರಾಚಾರ್ಯರ ಮತ್ತು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಭಾವಚಿತ್ರಗಳ ಭವ್ಯ ಮೆರವಣಿಗೆ ಕಾರ್ಯಕ್ರಮಕ್ಕೆ ಶಾಸಕ ಅರವಿಂದ್ ಬೆಲ್ಲದ್ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀಮತಿ …

Read More »

ಶ್ರೀ ಕಲೇಶ್ವರ ದೇವರ ವಿವಿಧ ಕಾರ್ಯಕ್ರಮದಲ್ಲಿ ಶಾಸಕ ಭಾಗಿ

ಧಾರವಾಡ : ತಾಲೂಕಿನ ಉಪ್ಪಿನಬೆಟಗೇರಿಯಲ್ಲಿ ನಡೆದ ಶ್ರೀ ಕಲೇಶ್ವರ ದೇವರ ಶಿಲಾ ದೇವಸ್ಥಾನ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ನಂತರ ಮಾತಾನಡಿ ಆಧುನಿಕ ಬದುಕಿನ ಜಂಜಾಟಗಳಿಂದ ಮುಕ್ತಿಗೆ ಹಾಗೂ ಮಾನಸಿಕ ನೆಮ್ಮದಿ ಶಾಂತಿಗೆ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಅತ್ಯವಶ್ಯವಿದೆ . ನಿತ್ಯಧ್ಯಾನ- ಪ್ರಾರ್ಥನೆಯಿಂದ ಮನಸಿನ ದುಗುಡಗಳು ದೂರಾಗಲಿವೆ ಎಂದರು .

Read More »

ಇಂದು ಕೇಂದ್ರ ಗೃಹ ಸಚಿವ ಕರ್ನಾಟಕಕ್ಕೆ ಭೇಟಿ

ಬೆಂಗಳೂರು: ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಯವರ ಸರ್ಕಾರಿ ನಿವಾಸದಲ್ಲಿ ನಡೆಯಲಿರುವ ಭೋಜನ ಕೂಟದಲ್ಲಿ ಭಾಗಿಯಾಗಲಿದ್ದಾರೆ. ಈ ಭೋಜನ ಕೂಟದ ರಾಜಕೀಯ ತೀವ್ರ ಕುತೂಹಲ ಕೂಡ ಕೆರಳಿಸಿದೆ. ಇಂದು ಮಧ್ಯಾಹ್ನ ಬೊಮ್ಮಾಯಿ ಅವರ ನಿವಾಸದಲ್ಲಿ ಅಮಿತ್ ಶಾ ಅವರ ಗೌರವಾರ್ಥ ಭೋಜನ ಕೂಟವನ್ನು ಆಯೋಜಿಸಲಾಗಿದೆ. ಈ ಭೋಜನ ಕೂಟದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರು, ಪಕ್ಷದ …

Read More »

ಪಿಎಸ್‌ಐ ನೇಮಕಾತಿ : ಮತ್ತೊಮ್ಮೆ ಪರೀಕ್ಷೆ ಅಕ್ರಮದಲ್ಲಿ ಭಾಗಿ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧಿಸಿ ಬಂಧಿತರಾಗಿರುವ ಆರ್‌.ಡಿ. ಪಾಟೀಲ್‌ ಹಾಗೂ ಮಂಜುನಾಥ್‌ ಮೇಳಕುಂದಿ ಅವರು ಈ ಹಿಂದೆ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಹುದ್ದೆ ಪರೀಕ್ಷೆ ಅಕ್ರಮದಲ್ಲೂ ಆರೋಪಿಗಳಾಗಿದ್ದರು. ಭೂಸನೂರು ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಮರ್ಜಾ ಯೋಜನೆ ಅಣೆಕಟ್ಟು ಉಪವಿಭಾಗ ಕೋರಳ್ಳಿ ಕ್ಯಾಂಪ್‌ ಸಹಾಯಕ ಎಂಜಿನಿಯರ್‌ ಆಗಿರುವ ಮಂಜುನಾಥ ಮೇಳಕುಂದಿ ಹಾಗೂ ಮತ್ತೋರ್ವ ಆರೋಪಿ ರುದ್ರಗೌಡ ಪಾಟೀಲ್‌ (ಆರ್‌.ಡಿ.ಪಾಟೀಲ್‌) ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಪರೀಕ್ಷೆ ಅಕ್ರಮದಲ್ಲೂ ಭಾಗಿಯಾದ …

Read More »

ಬೆಂಗಳೂರುಕ್ಕೆ ಕೇಂದ್ರ ಸಚಿವ ಆಗಮನ : ಹೂ ಗುಚ್ಛ ನೀಡಿ ಭರಮಾಡಿಕೊಂಡ ಸಿಎಂ

ಬೆಂಗಳೂರು : ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ -2021ಯುನಿವರ್ಸಿಟಿ ಗೇಮ್ಸ್ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಇಂದು ವಿಶೇಷ ವಿಮಾನದ ಮೂಲಕ ನಗರದ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ರಾಜ್ಯ ಸಚಿವರುಗಳಾದ ಅರಗ ಜ್ಞಾನೇಂದ್ರ, ಗೋವಿಂದ ಎಮ್ ಕಾರಜೋಳ, ನಾರಾಯಣ …

Read More »

ಮಹಾರಾಷ್ಟ್ರಕ್ಕೆ ನಮ್ಮ‌ ಒಂದಿಂಚೂ ಜಾಗವನ್ನೂ ಬಿಟ್ಟು ಕೊಡುವುದಿಲ್ಲ: ಬೊಮ್ಮಾಯಿ

ಬೆಂಗಳೂರು: ಮಹಾರಾಷ್ಟ್ರದ ರಾಜಕಾರಣಿಗಳು ತಮ್ಮ ರಾಜಕೀಯ ಉಳಿವಿಗಾಗಿ ಭಾಷೆ ಅಥವಾ ಗಡಿ ವಿವಾದವನ್ನು ಬಳಸಿಕೊಳ್ಳಬೇಡಿ ಎಂದು ಒತ್ತಾಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನೆರೆಯ ರಾಜ್ಯಕ್ಕೆ ಕರ್ನಾಟಕ ತನ್ನ ಒಂದು ಇಂಚು ಭೂಮಿಯನ್ನು ಸಹ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ಕರ್ನಾಟಕದ ಗಡಿ ವಿಚಾರದ ಬಗ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮ‌ ಒಂದಿಂಚೂ ಜಾಗವನ್ನೂ ಬಿಟ್ಟು ಕೊಡುವುದಿಲ್ಲ. ಮಹಾರಾಷ್ಟ್ರದಲ್ಲಿ …

Read More »

ಎಲ್ಲಡೆಬಸವ ಜಯಂತಿ ಆಚರಣೆ : ಆಂಧ್ರಪ್ರದೇಶ ಸರ್ಕಾರ ಅಧಿಕೃತ ಆದೇಶ

ಅಮರಾವತಿ: ಪ್ರತಿವರ್ಷ ಬಸವ ಜಯಂತಿ ಆಚರಣೆಗೆ ಆಂಧ್ರಪ್ರದೇಶ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಪ್ರತಿವರ್ಷ ಮೇ 3 ರಂದು ಆಂಧ್ರಪ್ರದೇಶ ಸರ್ಕಾರದ ವತಿಯಿಂದ ರಾಜ್ಯಾದ್ಯಂತ ಬಸವೇಶ್ವರ ಜಯಂತಿ ಆಚರಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಎಲ್ಲಾ ಸಚಿವಾಲಯಗಳಲ್ಲಿ ಬಸವೇಶ್ವರರ ಜಯಂತಿ ಆಚರಿಸಬೇಕು ಎಂದು ಸೂಚನೆ ನೀಡಲಾಗಿದೆ. ಈ ಕುರಿತಾಗಿ ಕರ್ನಾಟಕ ವೀರಶೈವ ಲಿಂಗಾಯಿತ ಅಭಿವೃದ್ಧಿ ಮಂಡಳಿ ಆಂಧ್ರಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮೇ 3ರಂದು …

Read More »

ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಗೆ ಇಂದು ಬಸವಶ್ರೀ ಪ್ರಶಸ್ತಿ ಪ್ರಧಾನ

ಚಿತ್ರದುರ್ಗ: ಜಿಲ್ಲೆಯ ಬಸವಕೇಂದ್ರ ಮುರುಘಾಮಠದಿಂದ ಕೊಡ ಮಾಡುವಂತ ಪ್ರತಿಷ್ಠಿತ 2021ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು, ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ, ಬಸವ ಜಯಂತಿಯ ಇಂದು, ಚಿತ್ರದುರ್ಗದ ಅನುಭವ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಈ ಕಾರ್ಯಕ್ರಮವು ಡಾ.ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮಾಜಿ ಸಿಎಂ ಸಿದ್ಧರಾಮಯ್ಯ, ಕೃಷಿ ಸಚಿವ ಬಿ.ಸಿ ಪಾಟೀಲ್, ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ …

Read More »

ಮದುವೆ ಮಂಟಪ ಸೇರ ಬೇಕಾದ ಖಾಕಿ ಪಡೆ ಮಸಣ ಸೇರದ : ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ರಾಮನಗರ : ರಸ್ತೆ ಅಪಘಾತದಲ್ಲಿ ಪೊಲೀಸ್ ಮುಖ್ಯ ಪೇದೆ ಮೃತಪಟ್ಟ ಘಟನೆ ರಾಮನಗರ ಜಿಲ್ಲೆ ಬಿಡದಿಯ ಬೈರಮಂಗಲ ಕ್ರಾಸ್ ಬಳಿ ನಡೆದಿದೆ. ರಾಮನಗರ ತಾಲೂಕಿನ ತಿಮ್ಮೇಗೌಡನ ದೊಡ್ಡಿ ಗ್ರಾಮದ ಚಂದ್ರಶೇಕರ್ ಮೃತಪಟ್ಟಿದ್ದಾರೆ . ಇವರು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು . ಭಾನುವಾರ ಸಂಜೆ ಬೈಕ್ ನಲ್ಲಿ ರಾಮನಗರಕ್ಕೆ ವಾಪಸಾಗುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ . ಇನ್ನು ಎರಡು ದಿನಗಳಲ್ಲಿ ಅವರ …

Read More »

ಆಸ್ತಿಗಾಗಿ ಹೆತ್ತ ಕರುಳನ್ನೇ ಕೊಂದ ಪಾಪಿ ಮಗ

ನವಲಗುಂದ : ಮತಕ್ಷೇತ್ರದ ಅಣ್ಣಿಗೇರಿ ತಾಲ್ಲೂಕಿನ ಬೆನ್ನೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಆಸ್ತಿಗಾಗಿ ಮಗನೇ ತಾಯಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ . ಶಾಂತವ್ವ ಕಲ್ಲಪ್ಪ ಅಣ್ಣಿಗೇರಿ ( 65 ) ಎಂಬಾಕೆಯೇ ಮೃತ ದುರ್ದೈವಿಯಾಗಿದ್ದಾಳೆ . ಆರೋಪಿ ಮಗ ಬಸವರಾಜ ಕಲ್ಲಪ್ಪ ಅಣ್ಣಿಗೇರಿ ( 45 ) ಆಸ್ತಿ ಕೊಡು ಅಂತ ರಾತ್ರಿ ಬಡಿಗೆಯಿಂದ ತಾಯಿಯನ್ನು ಬಡಿದಿದ್ದಾನೆ ಇದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಗಂಡ ಕಲ್ಲಪ್ಪದೂರು ದಾಖಲಿಸಿದ್ದಾನೆ . …

Read More »