Breaking News

ಆಸ್ತಿಗಾಗಿ ಹೆತ್ತ ಕರುಳನ್ನೇ ಕೊಂದ ಪಾಪಿ ಮಗ

ನವಲಗುಂದ : ಮತಕ್ಷೇತ್ರದ ಅಣ್ಣಿಗೇರಿ ತಾಲ್ಲೂಕಿನ ಬೆನ್ನೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಆಸ್ತಿಗಾಗಿ ಮಗನೇ ತಾಯಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ .

ಶಾಂತವ್ವ ಕಲ್ಲಪ್ಪ ಅಣ್ಣಿಗೇರಿ ( 65 ) ಎಂಬಾಕೆಯೇ ಮೃತ ದುರ್ದೈವಿಯಾಗಿದ್ದಾಳೆ . ಆರೋಪಿ ಮಗ ಬಸವರಾಜ ಕಲ್ಲಪ್ಪ ಅಣ್ಣಿಗೇರಿ ( 45 ) ಆಸ್ತಿ ಕೊಡು ಅಂತ ರಾತ್ರಿ ಬಡಿಗೆಯಿಂದ ತಾಯಿಯನ್ನು ಬಡಿದಿದ್ದಾನೆ ಇದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಗಂಡ ಕಲ್ಲಪ್ಪದೂರು ದಾಖಲಿಸಿದ್ದಾನೆ . ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್ ಠಾಣೆಯ ಎಲ್ . ಕೆ.ಜೂಲಕಟ್ಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ .

Share News

About admin

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *