Breaking News

Breaking News

ಏ .2 ರಂದು ಉಣಕಲ್ ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮಿಗಳ ರಥೋತ್ಸವ

ಹುಬ್ಬಳ್ಳಿ: ಏ .2 ರಂದು ಸಂಜೆ 5-30ಕ್ಕೆ ಉಣಕಲ್ ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮಿಗಳ ಯುಗಾದಿ ಮಹೋತ್ಸವ ಹಾಗೂ ರಥೋತ್ಸವ ಜರುಗಲಿದೆ. ಸದ್ಗುರು ಸಿದ್ದೇಶ್ವರರ 101 ನೇ ವರ್ಷದ ಪುಣ್ಯಾರಾಧನೆಯ ನಿಮಿತ್ತ ದಿ .21 ರಿಂದ ಏ .1 ರ ವರೆಗೆ ಹೊಸಳ್ಳಿ ಬೂದಿಶ್ವರ ಸಂಸ್ಥಾನಮಠದ ಬೂದೀಶ್ವರ ಮಹಾಸ್ವಾಮಿಗಳಿಂದ ದಿನಂಪ್ರತಿ 6-30ಕ್ಕೆ ಪ್ರವಚನ ನಡೆಯಲಿದ್ದು ಉದ್ಘಾಟನೆ ಯನ್ನು ನಾಳೆ ಸಂಜೆ ಮೂರುಸಾವಿರಮಠದ ಜಗದ್ಗುರುಗಳು ನೆರವೇರಿಸುವರು. ಸಾಮೂಹಿಕ ವಿವಾಹ ಅಲ್ಲದೇ ಭಜನಾ …

Read More »

ಕುಟುಂಬರೊಂದಿಗೆ ದಿ ಕಾಶ್ಮೀರಿ ಫೈಲ್ಸ್ ಚಲನಚಿತ್ರ ವಿಕ್ಷೀಸಿದ ಮಾಜಿ ಸಿಎಂ

ಹುಬ್ಬಳ್ಳಿ : ಎಲ್ಲಡೆ ಸದ್ದು ಮಾಡುತ್ತೀರುವ ದಿ ಕಾಶ್ಮೀರಿ ಫೈಲ್ಸ್ ಚಲನಚಿತ್ರವನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಕುಟುಂಬ ಸಮೇತರಾಗಿ ವೀಕ್ಷಿಸಿದರು . ಈ ವೇಳೆಯಲ್ಲಿ ಮಾತನಾಡಿದ ಅವರು , ಪ್ರತಿಯೊಬ್ಬರೂ ಈ ಚಿತ್ರ ನೊಡಿ ಇತಿಹಾಸ ತಿಳಿದುಕೊಳ್ಳುವುದು ಅವಶ್ಯವಾಗಿದೆ.ಕಾಶ್ಮೀರ ಪಂಡಿತರ ನೈಜ ಇತಿಹಾಸ ತೆರೆದಿಡುವ ಚಿತ್ರ ಇದಾಗಿದೆ ಎಂದರು .

Read More »

ಸುಣ್ಣದ ಭಟ್ಟಿ ಲೇಔಟ್ ಗೆ ಪ್ರಸಾದ್ ಅಬ್ಬಯ್ಯ ಭೇಟಿ

ಹುಬ್ಬಳ್ಳಿ: ಶಾಸಕ ಪ್ರಸಾದ್ ಅಬ್ಬಯ್ಯಜನರ ವಾರ್ಡ್ ನಂ .62 ರ ಸುಣ್ಣದ ಭಟ್ಟಿ ಲೇಔಟ್ ಭೇಟಿ ನೀಡಿದ ಕುಂದುಕೊರತೆ ಆಲಿಸಿದರು . ಇನ್ನಿತರೆ ಯೋಜನೆಗಳ ಬಗ್ಗೆಯೂ ಶೀಘ್ರ ಕ್ರಮ ಕೈಗೊಳ್ಳಲಾಗುವುದು.ಈಗಾಗಲೇ ಕಾಲೋನಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಶಾಸಕರು ಭರವಸೆ ನೀಡಿದರು . ಈ ವೇಳೆಯಲ್ಲಿ ಬಡಾವಣೆಯ ನಿವಾಸಿಗಳಿದ್ದರು ಇತರರು ಉಪಸ್ಥಿತಿ ರಿದ್ದರು‌.

Read More »

ಕಾಂಕ್ರೀಟ್ ಕಾಮಗಾರಿಗೆ ಅರವಿಂದ್ ಬೆಲ್ಲದ್ ಭೂಮಿ ಪೂಜೆ ಸಲ್ಲಿಕೆ

ಹುಬ್ಬಳ್ಳಿ : ಹುಬ್ಬಳ್ಳಿ – ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ಸಂಖ್ಯೆ -31 ರ ಗೋಕುಲ ರಸ್ತೆಯ ಗ್ರಾಮದ ಮೈಲಾರಲಿಂಗೇಶ್ವರ ನಗರದ ಒಳ ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೆ ಶಾಸಕ ಅರವಿಂದ್ ಬೆಲ್ಲದ್ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ್ , ಶಂಕರ್ ಹೊಸಮನಿ , ಮುಖಂಡರಾದ ಮಹದೇವಪ್ಪ ಪೂಜಾರ್‌ , ಮಲ್ಲಿಕಾರ್ಜುನ ಗೌಡ , ಸುರೇಶ ಬಾದಾಮಿ , ಬಿ.ವೆಂಕಟೇಶ್ …

Read More »

ಶಿವಳ್ಳಿಯವರ ಸ್ಮರಣಾರ್ಥ : ಟಗರಿನ ಕಾಳಗ ಸ್ಪರ್ಧೆ ಆರಂಭ

ಕುಂದಗೋಳ : ತಮ್ಮಬದುಕಿನ ಅವಧಿಯಲ್ಲಿ ಸದಾ ಒಂದಿಲ್ಲೊಂದು ಗ್ರಾಮೀಣ ಕ್ರೀಡೆ ಬಗ್ಗೆ ಆಸಕ್ತಿ ಹೊಂದಿದ್ದ ಮಾಜಿ ಸಚಿವ ಸಿ.ಎಸ್.ಶಿವಳ್ಳಿಯವರ ಸ್ಮರಣಾರ್ಥವಾಗಿಯರಗುಪ್ಪಿಯಲ್ಲಿ ರಾಜ್ಯಮಟ್ಟದ ಟಗರಿನ ಕಾಳಗ ಸ್ಪರ್ಧೆ ಆರಂಭಗೊಂಡಿದೆ . ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಹಾಗೂ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ , ಟಗರು ಕಾಳಗ ಸ್ಪರ್ಧೆಗೆ ಚಾಲನೆ ನೀಡಲಾಯಿತು . ಕುಂದಗೋಳ ತಾಲೂಕು ಸೇರಿದಂತೆ ವಿವಿಧೆಡೆಯಿಂದ ಕ್ರೀಡಾ ಪ್ರೇಮಿಗಳು ತಮ್ಮ ತಮ್ಮ ಟಗರುಗಳನ್ನು ಸ್ಪರ್ಧೆಗೆ ತಂದಿದ್ದಾರೆ.ಯರಗುಪ್ಪಿಯಲ್ಲಿ ನಡೆಯುತ್ತಿರುವ …

Read More »

ಶ್ರೀ ಸಿದ್ಧಾರೂಢ ಮಹಾಸ್ವಾಮಿ ಅವರಿಗೆ ಇಂದು ವಿಶೇಷ ಪೂಜೆ

ಹುಬ್ಬಳ್ಳಿ : ವಾಣಿಜ್ಯ ನಗರದ ಪ್ರಸಿದ್ಧ ಸ್ಥಳವಾದದ ಶ್ರೀ ಸಿದ್ಧಾರೂಢ ಮಠದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಇಂದು ವಿಶೇಷ ಸೋಮವಾರ ಅಂಗವಾಗಿ ವಿಶೇಷ ಅಲಂಕಾರದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳ ಅಜ್ಜನವರಿಗೆ ವಿಶೇಷ ಹೂವಿನ ಅಲಂಕಾರ ಮೂಲಕ ಪೂಜೆ ಮಾಡಲಾಯಿತು . ಇಂದು ಮುಂಜಾನೆಯಿಂದಲೇ ಬರುವ ಭಕ್ತರ ಸಂಖ್ಯೆ ಹೆಚ್ಚಳ ಇರುವ ಕಾರಣ ಪ್ರತ್ಯೇಕ ದರ್ಶನದ ವ್ಯವಸ್ಥೆ ಮಾಡಲಾಗಿದೆ . ಎಲ್ಲರಿಗೂ ಮಾಸ್ಕ್ ಹಾಗೂ …

Read More »

ಇಂದಿನ ಹವಾಮಾನ ವರದಿ

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಇದು ಚಂಡಮಾರುತವಾಗಿ ಬದಲಾವಣೆಯಾಗುವ ನಿರೀಕ್ಷೆ ಇದ್ದು , ಬಹುತೇಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ . ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು , ಕನಿಷ್ಟ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ . ಸಂಜೆ ವೇಳೆ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ . ಜೊತೆ ದಕ್ಷಿಣ ಒಳನಾಡು ಸೇರಿ ಮಲೆನಾಡು ಭಾಗದಲ್ಲಿ ಮೋಡ ಕವಿದ ವಾತಾವರಣ …

Read More »

ಶಿವಳ್ಳಿ ಪುತ್ಥಳಿ ಪ್ರತಿಷ್ಠಾಪನೆ : ಮುನೇನಕೊಪ್ಪ ಭಾಗಿ

ಕುಂದಗೋಳ : ದಿವಂಗತ ಶ್ರೀ ಸಿ.ಎಸ್.ಶಿವಳ್ಳಿರವರ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಪುತ್ಥಳಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಮಾಜಿ ಸಚಿವರಾದ ಮುನೇನಕೊಪ್ಪ ಭಾಗವಹಿಸಿದರು . ಮಾಜಿ ಸಚಿವರಾದ ದಿವಂಗತ ಸಿ.ಎಸ್ . ಶಿವಳ್ಳಿ ರವರ ಕುಟುಂಬದ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು .

Read More »

ಮಗನ ಪೋಟೋಕ್ಕೆ ಪೂಜೆ ಸಲ್ಲಿಸಿ ಕಣ್ಣೀರ ಇಟ್ಟ ತಾಯಿ

ಹಾವೇರಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಕನ್ನಡಿಗ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ ಬೆಂಗಳೂರಿನಿಂದ ಸ್ವಗ್ರಾಮದತ್ತ ಆಗಮಿಸುತ್ತಿದ್ದು, ಕುಟುಂಬಸ್ಥರು ಅಂತಿಮ ಪೂಜಾ ಕಾರ್ಯಗಳಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇತ್ತ ಪುತ್ರನ ಫೋಟೋಗೆ ಪೂಜೆ ಸಲ್ಲಿಸಿ ಮಗನನ್ನು ನೆನೆದು ತಾಯಿ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದು, ಪಾರ್ಥಿವ ಶರೀರ 9 ಗಂಟೆಗೆ ಚಳಗೇರಿಯನ್ನು ತಲುಪಲಿದೆ ಎಂದು ಮೃತ ನವೀನ್​ ತಂದೆ ತಿಳಿಸಿದ್ದಾರೆ.

Read More »

ನವೀನ್ ಪಾರ್ಥೀವ ಶರೀರಕ್ಕೆ ವೀರಶೈವ ಸಂಪ್ರದಾಯದಂತೆ ಪೂಜೆ ಸಲ್ಲಿಕೆ

ಬೆಂಗಳೂರು : ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಸಾವನ್ನಪ್ಪಿದ್ದ ಭಾರತೀಯ ವಿದ್ಯಾರ್ಥಿ ನವೀನ್ ಪಾರ್ಥಿವ 21 ದಿನಗಳ ನಂತರ ತಾಯ್ನಾಡಿಗೆ ಮರಳಿದೆ. ಪಾರ್ಥಿವ ಶರೀರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬಕ್ಕೆ ಹಸ್ತಾಂತರಿಸಿದರು. ನವೀನ್ ಪಾರ್ಥೀವ ಶರೀರಕ್ಕೆ ವೀರಶೈವ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಗುತ್ತದೆ. ಅಂತಿಮ ವಿಧಿ ವಿಧಾನದ ಬಳಿಕ, ಊರಿನಲ್ಲಿ ಪಾರ್ಥೀವ ಶರೀರದ ಮೆರವಣಿಗೆ ನಡೆಯಲಿದೆ. ಈ ಬಳಿಕ ಅವರ ದೇಹವನ್ನು ಎಸ್ ಎಸ್ ಆಸ್ಪತ್ರೆಗೆ ದಾನವಾಗಿ ನೀಡಲಾಗುತ್ತದೆ ಎಂದು …

Read More »