ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಪುರಸಭೆಯ ವ್ಯಾಪ್ತಿಯ 23 ವಾರ್ಡುಗಳಿಗೆ ಹೇಮಾವತಿ ನದಿಯಿಂದ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಸಾಧುಗೋನಹಳ್ಳಿ ಬಳಿಯ ಬಾಣಂತಿಗುಡ್ಡದಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ ಶಾಸಕ ಡಾ.ನಾರಾಯಣಗೌಡ ಅವರು ಪುರಸಭೆ ಆಡಳಿತಾಧಿಕಾರಿಗಳಾದ ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ ಅವರೊಂದಿಗೆ ಭೇಟಿ ನೀಡಿದ ಶಾಸಕ ಡಾ.ನಾರಾಯಣಗೌಡ ಸಮಸ್ಯೆಗಳನ್ನು ಅವಲೋಕನ ನಡೆಸಿದರು. ಹೇಮಾವತಿ ನದಿಯಿಂದ ಸರಬರಾಜಾಗುವ ನೀರನ್ನು ನಿಯಮಿತವಾಗಿ ಶುದ್ಧೀಕರಣ ಮಾಡುತ್ತಿಲ್ಲ…ಇದೇ ಪರಿಸ್ಥಿತಿಯು ಮುಂದುವರೆದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದ ಶಾಸಕರು ಮುಖ್ಯಾಧಿಕಾರಿ ಸತೀಶ್ ಹಾಗೂ ಸಿಬ್ಬಂಧಿಗಳನ್ನು ತರಾಟೆಗೆ ತೆಗೆದುಕೊಂಡರು…ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರನ್ನು ನಿಯಮಿತವಾಗಿ ಸರಬರಾಜು ಮಾಡಬೇಕು. ನೀರು ಶುದ್ಧೀಕರಣಕ್ಕೆ ಅಗತ್ಯವಾಗಿ ಬೇಕಾದ ಆಲಂ, ಬ್ಲೀಚಿಂಗ್ ಪೌಡರ್ ಮತ್ತು ಕ್ಲೋರಿನ್ ಅನಿಲವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿ ಸರ್ಕಾರವು ಹೊಸದಾಗಿ 22ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಂಜೂರು ಮಾಡಿರುವ 3ನೇ ಹಂತದ 24*7 ಶುದ್ಧ ನೀರಿನ ಶುದ್ಧೀಕರಣ ಘಟಕದ ಕಾಮಗಾರಿಯನ್ನು ತಕ್ಷಣವೇ ಆರಂಬಿಸುವಂತೆ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಎಇಇ ಉಮೇಶ್ ಚಂದ್ರ ಅವರಿಗೆ ನಿರ್ದೇಶನ ನೀಡಿದರು…ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ, ಮುಖ್ಯಾಧಿಕಾರಿ ಸತೀಶ್ ಕುಮಾರ್, ಪುರಸಭೆಯ ಸದಸ್ಯರಾದ ಹೆಚ್.ಆರ್. ಲೋಕೇಶ್, ಪ್ರಮೋದ್ ಕುಮಾರ್, ಶಾಮಿಯಾನ ತಿಮ್ಮೇಗೌಡ, ಸಂತೋಷ್ ಕುಮಾರ್, ಗಿರೀಶ್, ಮಹಾದೇವಿ, ಶೋಭಾದಿನೇಶ್, ಶುಭಾಗಿರೀಶ್, ಹೆಚ್.ಡಿ.ಅಶೋಕ್, ಮುಖಂಡರಾದ ವಿಶ್ವನಾಥ, ದಯಾನಂದ ಮತ್ತಿತರರು ಉಪಸ್ಥಿತರಿದ್ದರು…..
bigtvnews | Hubli Dharwad News | Kannada News | Karnataka News Hubli News | News In Hubli | Local news





