Breaking News

Breaking News

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ವಾಮಾಚಾರ

ಧಾರವಾಡ: ಲಿಂಬಿ ಹಣ್ಣು ಹಾಗೂ ಕೋಳಿ ಮೋಟ್ಟೆ ಇಟ್ಟು ವಾಮಾಚಾರ ಮಾಡಿದ ಘಟನೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿದ್ದು. ಯಾವ ವಿಚಾರದಲ್ಲಿ ಈ ಮಾಟ ಮಂತ್ರ ಮಾಡಿದ್ದಾರೆ ಎಂದು ತಿಳಿದಿಲ್ಲ. ಆದರೆ ರಾತ್ರಿ ಹೊತ್ತು ಯಾರೋ ಕಿಡಿಗೇಡಿಗಳು ವಾಮಾಚಾರ ಮಾಡಿರುವ ಘಟನೆ ಭಾನುವಾರ ನಡೆದಿದೆ. ವಾಮಾಚಾರ ಮಾಡಿಸಿದ ಕಿಡಿಗೇಡಿಗಳು, ಲಿಂಬೆಹಣ್ಣು, ತತ್ತಿ ಜೋಡಿ ಇಟ್ಟು ವಾಮಾಚಾರ ಮಾಡಿಸಲಾಗಿದ್ದು ಸಂಪೂರ್ಣ ಲಿಂಬೆಹಣ್ಣಿನ ಮೇಲೆ ತಿಳಿಯದ ಅಕ್ಷರಗಳನ್ನು ಸಹ ನಮೂದಿಸಿ ಈ …

Read More »

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಡಾಕ್ಟರೇಟ್ ಪದವಿ

ಮೈಸೂರು: ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಗೆ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ. ಸ್ವತಹ ಮೈಸೂರು ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು, ಬೆಂಗಳೂರಿನ ಸದಾಶಿವನಗರದಲ್ಲಿನ ಪುನೀತ್ ನಿವಾಸಕ್ಕೆ ತೆರಳಿ, ಪತ್ನಿ ಅಶ್ವಿನಿಗೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ಈ ವೇಳೆ ಅಂದು ಪುನೀತ್ ರಾಜ್ ಕುಮಾರ್ ಹೇಳಿದ್ದ ಮಾತನ್ನು ನೆನಪು ಮಾಡಿಕೊಂಡ ಅವರು, ಈ ಹಿಂದೆ ಹಲವು ಬಾರಿ ಅಪ್ಪುಗೆ ಗೌರವ ಡಾಕ್ಟರೇಟ್ ನೀಡುವ …

Read More »

ಬಿಜೆಪಿ ಜಗತ್ತಿನ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ : ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ :ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅದ್ದೂರಿ ಗೆಲುವು ಸಾಧಿಸಿದೆ. ಜಗತ್ತಿನ ಅತೀದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ದೇಶದ ಜನರು ಪ್ರಧಾನಿ ಮೋದಿ ಮೇಲೆ ಇಟ್ಟ ವಿಶ್ವಾಸ ಕಂಡು ನಾನು ಬೆರಗಾಗಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ‌ಮಾತನಾಡಿದ ಅವರು, ನಾನು ಉತ್ತರಖಾಂಡ್ ಬಗ್ಗೆ ಹೇಳೋದು ಇಷ್ಟೇ. ನಾಲ್ಕು ದಿನ ಪ್ರಧಾನಮಂತ್ರಿಗಳು ಉತ್ತರಾಖಂಡ್ ಭೇಟಿ ಗೆಲುವಿಗೆ ಕಾರಣವಾಯಿತು. ಉತ್ತರಾಖಂಡ ಗೆಲುವಿಗೆ ನಾನೊಬ್ಬನೇ ಕಾರಣ ಅಂತ …

Read More »

ಬಿಜೆಪಿ ಎಂದರೆ ಬ್ರೋಕರ್ ಪಾರ್ಟಿ : ಡಿಕೆಶಿ

ಬೆಂಗಳೂರು: ಉತ್ತರಪ್ರದೇಶದಲ್ಲಿ ಸೀಟುಗಳ ಸಂಖ್ಯೆ ಕಡಿಮೆಯಾದ ಬಗ್ಗೆ, ಪಂಜಾಬ್‌ನಲ್ಲಿ ಅವರು ಎಷ್ಟು ಸ್ಥಾನ ಗೆದ್ದಿದ್ದಾರೆ? ಬಿಜೆಪಿ ಎಂದರೆ ಬ್ರೋಕರ್ ಪಾರ್ಟಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದಾರೆ. ಯುವಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೇ. 40ರಷ್ಟು ಪರ್ಸಂಟೇಜ್‌ ಅಲ್ಲ, ಹೊಟೇಲ್‌ನಲ್ಲಿ ತಿಂಡಿ ದರ ಪಟ್ಟಿ ಇದ್ದಂತೆ ಇಲಾಖೆಗಳಲ್ಲಿ ವರ್ಗಾವಣೆ, ಟೆಂಡರ್‌ ಸೇರಿ ಇತರೆ ಕೆಲಸಗಳಿಗೆ ಪಟ್ಟಿ ನೇತು ಹಾಕಲಾಗಿದೆ ಎಂದರು.ನಾವು ನಾಲ್ಕೂ ರಾಜ್ಯಗಳಲ್ಲಿ ಆಧಿಕಾರದಲ್ಲಿ ಇರಲಿಲ್ಲ. …

Read More »

ಮಾ. 28 ರಂದು ಎಂ.ಬಿ ಪಾಟೀಲ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಪದಗ್ರಹಣ

ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್ ಅವರನ್ನು ಜನವರಿ 25 ರಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಮಾರ್ಚ್ 28ರಂದು ವಿದ್ಯುಕ್ತವಾಗಿ ಕೈ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಪದಗ್ರಹಣ ನಡೆಸಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಸಮಾರಂಭಕ್ಕೆ ರಾಜ್ಯದ ಎಲ್ಲೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

Read More »

ಕಾಂಗ್ರೆಸ್ ಪಾರ್ಟ್ ಟೈಮ್ ಪಕ್ಷ, ರಾಹುಲ್ ಗಾಂಧಿ ಪಾರ್ಟ್ ಟೈಂ ನಾಯಕ : ಶ್ರೀ ರಾಮುಲು ಟೀಕೆ

ಮೈಸೂರು:ಐದು ರಾಜ್ಯಗಳ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ.ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಬಿಜೆಪಿಗೆ ಬರಲು ಸಿದ್ದರಾಗಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಧೂಳೀಪಟವಾಗಿದೆ. ಈ ಅದೊಂದು ಪಾರ್ಟ್ ಟೈಮ್ ಪಕ್ಷವಾಗಿದೆ ಎಂದರು. ರಾಹುಲ್ ಗಾಂಧಿ ಪಾರ್ಟ್ ಟೈಂ ನಾಯಕರಾಗಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾತ್ಮ ಗಾಂಧೀಜಿ ಅವರ ಹೆಸರು ಇಟ್ಟುಕೊಂಡು ಕಾಂಗ್ರೆಸ್ ನಲ್ಲಿ ಹಲವು ನಕಲಿ ಗಾಂಧಿಗಳು ರಾಜಕಾರಣ ಮಾಡಿದರು …

Read More »

ಇಳೆಕೆ ಕಂಡ ಕೊರೋನಾ ಪ್ರಕರಣ

ಬೆಂಗಳೂರು : ಕೊರೋನಾ ಒಟ್ಟು 136 ಕೇಸ್ ದಾಖಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇತ್ತೀಚೆಗೆ ಪಾಸಿಟಿವ್ ಕೇಸ್ಗಳ ಸಂಖ್ಯೆ ಇಳಿಕೆ ಕಂಡರೂ, ಮರಣ ಪ್ರಕರಣ ಕಡಿಮೆಯಾಗಿರಲಿಲ್ಲ. ಇಂದು ಮರಣ ಪ್ರಕರಣ ಕೂಡ ಇಳಿಕೆ ಕಂಡಿದೆ. ಈ ಮೂಲಕ ಕೋವಿಡ್-19 ಮರಣ ಪ್ರಮಾಣ ಶೇ.1.47% ರಷ್ಟಿದೆ. ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೀದರ್, ಚಾಮರಾಜನಗರ, ಗದಗ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ. ಮಂಡ್ಯ, ರಾಯಚೂರು, ಉಡುಪಿ ಹಾಗೂ ವಿಜಯಪುರದಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.

Read More »

ದುಗ್ಗಮ್ಮ ದೇವಿ ಜಾತ್ರೆಗೆ ಸಕಲ ಸಿದ್ಧತೆ

ದಾಮಾ. 13ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ .ಐತಿಹಾಸಿಕ ಪ್ರಸಿದ್ಧ ನಗರದೇವತೆ ಶ್ರೀ ದುಗ್ಗಮ್ಮ ದೇವಿ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದರು. ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಜಾತ್ರೆ ಕುರಿತು ಅವರು ಮಾಹಿತಿ ನೀಡಿದರು. ಮಾ. 13ರಿಂದ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಮೊದಲ ದಿನ ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣೆ ನಂತರ ರಾತ್ರಿ ಸಾರು ಹಾಕುವ ಕಾರ್ಯಕ್ರಮ ನಡೆಯಲಿದೆ ಎಂದರು.

Read More »

ಮೋದಿ ಇಲ್ಲದಿದ್ದರೆ ಉಕ್ರೇನ್ ನಲ್ಲಿ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿದ್ದರು : ತೇಜಸ್ವಿ ಸೂರ್ಯ

ಬೆಂಗಳೂರು : ‘ಪ್ರಧಾನಿ ನರೇಂದ್ರ ಮೋದಿ ಇಲ್ಲದಿದ್ದರೆ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ ನಲ್ಲಿಸಾವನ್ನಪ್ಪುತ್ತಿದ್ದರು’ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದರು. ಯುದ್ಧಪೀಡಿತ ಉಕ್ರೇನ್ʼನಲ್ಲಿ ಭಾರತದ ಸ್ಥಳಾಂತರ ಪ್ರಯತ್ನವಾದ ಆಪರೇಶನ್ ಗಂಗಾ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೂರ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ವೇಳೆ ‘19,000 ವಿದ್ಯಾರ್ಥಿಗಳಲ್ಲಿ ನಾವು ಕೇವಲ ಒಬ್ಬ ನವೀನ್ ಅವರನ್ನ ಕಳೆದುಕೊಂಡಿದ್ದೇವೆ. ಸ್ಥಳಾಂತರ ಸರಿಯಾಗಿ ನಡೆಯದಿದ್ದರೆ, ನಾವು ಹೆಚ್ಚು ನವೀನ್ʼರನ್ನ ಕಳೆದುಕೊಳ್ಳಬೇಕಿತ್ತು. ಮೋದಿ …

Read More »

ಸಿ.ಎಂ.ಇಬ್ರಾಹಿಂ ರಾಜಿನಾಮೆ ಕುರಿತು ಮಾಜಿ ಸಿಎಂ ಪ್ರತಿಕ್ರಿಯೆ

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರ ರಾಜೀನಾಮೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಸಿ.ಎಂ.ಇಬ್ರಾಹಿಂ ಅವರ ರಾಜೀನಾಮೆ ಪತ್ರ ನನಗೆ ತಲುಪಿಲ್ಲ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರ ರಾಜೀನಾಮೆ ಪತ್ರ ನನಗೆ ತಲುಪಿಲ್ಲ. ಪತ್ರ ಬಂದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಶನಿವಾರ …

Read More »